For Quick Alerts
ALLOW NOTIFICATIONS  
For Daily Alerts

ಯುಲಿಪ್ ನಲ್ಲಿ ಹೂಡಿಕೆಯಿಂದ ಲಾಭ ಹಲವಾರು

By Mahesh
|

ಯುಲಿಪ್ ನಲ್ಲಿ ಹೂಡಿಕೆಯಿಂದ ಲಾಭ ಹಲವಾರು
ಲೈಫ್ ಇನ್ಸೂರೆನ್ಸ್ ಕ್ಷೇತ್ರದ ಅತ್ಯಂತ ವಿಶಿಷ್ಟ ಯೋಜನೆ ಎನಿಸಿರುವ ಯುಲಿಪ್ ಸ್ವಲ್ಪ ರಿಸ್ಕಿ ಎಂದೇ ಹಲವರು ಭಾವಿಸಿದ್ದಾರೆ. ಮಾರುಕಟ್ಟೆ ಆಧಾರಿತ ವಿಮಾ ಪಾಲಿಸಿ ಯುನಿಟ್ ಲಿಂಕ್ಡ್ ವಿಮಾ ಯೋಜನೆ (ಯುಲಿಪ್) ಯೋಜನೆಯಡಿ ಹೆಚ್ಚಿನ ಲಾಭ ಪಡೆದುಕೊಳ್ಳಲು ಹೇಗೆ ಸಾಧ್ಯ. ರಿಸ್ಕ್ ಜತೆಗೂ ಹೂಡಿಕೆ ಜತೆಗೆ ಆರ್ಥಿಕ ಪ್ರಗತಿ ಹೊಂದಿರುವುದು ಹೇಗೆ ಎಂಬುದರ ಬಗ್ಗೆ ಮುಂದೆ ತಿಳಿಯೋಣ...

ULIP ಹೂಡಿಕೆ ಮಾಡುವುದರಿಂದ ಒಂದು ಲಕ್ಷದ ವರೆಗೂ ಐಟಿ ಕಾಯ್ದೆ 80ಸಿ ಅಡಿಯಲ್ಲಿ ತೆರಿಗೆ ವಿನಾಯತಿ ಸಿಗುತ್ತದೆ. ಒಂದು ನಿಧಿ ಯೋಜನೆಯಿಂದ ಮತ್ತೊಂದಕ್ಕೆ ವರ್ಗಾವಣೆಯೂ ಸಾಧ್ಯವಿರುವುದರಿಂದ ಗ್ರಾಹಕ ಸ್ನೇಹಿ ಯೋಜನೆ ಎನಿಸಿದೆ.

 

ಜೀವನದ ವಿವಿಧ ಹಂತಗಳಲ್ಲಿ ವಿವಿಧ ರೀತಿ ಹೂಡಿಕೆಗೆ ಯುಲಿಪ್ ಅವಕಾಶ ನೀಡುತ್ತದೆ. ಉದಾ:
* ಒಬ್ಬರೇ ಇದ್ದು, ಈಗಷ್ಟೇ ದುಡಿಮೆ ಮಾಡುತ್ತಿದ್ದರೆ: ಹಣ ಗಳಿಕೆ ಉದ್ದೇಶದಿಂದ ಯುಲಿಪ್ ನಲ್ಲಿ ನಿಯಮಿತ ಹೂಡಿಕೆ ವಿಧಾನದಲ್ಲಿ ಹಣ ತೊಡಗಿಸಬಹುದು.
* ಮದುವೆಯಾಗಿ ಪೋಷಕರ ಸಹಿತ ಇದ್ದಾಗ: ಮಕ್ಕಳು ಹಾಗೂ ಹಿರಿಯ ಆರ್ಥಿಕ ನೆರವಿಗಾಗಿ ಸಮತೋಲನದಿಂದ ಕೂಡಿದ ಆಸ್ತಿ
* ನಿವೃತ್ತಿ ಬದುಕಿನ ಸಮಯದಲ್ಲಿ : ಹೂಡಿಕೆ ಹಣ, ಉಳಿತ ಜೀವಿತಾವಧಿಗೆ ವಿನಿಯೋಗಿಸಲು ಸಂರಕ್ಷಿತ ಆಸ್ತಿ ಸದ್ಬಳಕೆ

 

ಯುಲಿಪ್ ಗಳ ಮುಖ್ಯ ಉಪಯೋಗವೆಂದರೆ ಮುಖ್ಯ ಇನ್ಸೂರೆನ್ಸ್ ಯೋಜನೆ ಜತೆಗೆ ಇತರೆ ಸಪ್ಲಿಮೆಂಟರಿ ಬೆನಿಫಿಟ್ ಗಳನ್ನೂ ಇಲ್ಲಿ ಸೇರಿಸಿಕೊಳ್ಳಬಹುದು. ಉದಾ: ಗಂಭೀರ ಅನಾರೋಗ್ಯ, ವೈಯಕ್ತಿಕ ಅಪಘಾತ, ಹಾಸ್ಪಿಟಲ್ ಬೆನಿಫಿಟ್, ಅಂಗವೈಕಲ್ಯ ಇನ್ನಿತರ ಘಟನೆಗಳ ಸಂದರ್ಭದಲ್ಲಿ ಆರ್ಥಿಕ ನೆರವು ಪಡೆಯಬಹುದಾಗಿದೆ.

ಹೈ ರಿಸ್ಕ್ ಹೊಂದಿರುವ ಕಂಪನಿಯ ಫಂಡ್ ಗಳಲ್ಲಿ ಹೂಡಿಕೆ ಮಾಡಲಾಗುವ ಈಕ್ವಿಟಿ ಫಂಡ್ ಗಳು, ಸರ್ಕಾರಿ ಸೆಕ್ಯುರಿಟಿ ನಿಧಿ, ನಿಶ್ಚಿತ ಆದಾಯ ನೀಡುವ ನಿಧಿ, ಕಾರ್ಪೊರೇಟ್ ಫಂಡ್ ಗಳಲ್ಲಿ ಹೂಡಿಕೆ ಮಾಡುವ ಇನ್ ಕಮ್ ಫಂಡ್ ಗಳು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ, ಬ್ಯಾಂಕ್ ಗಳಲ್ಲಿನ ನಗದು ಫಂಡ್, ನಿಶ್ಚಿತ ಠೇವಣಿ ಎಲ್ಲವೂ ಯುಲಿಪ್ ಹೊಂದಿರುತ್ತದೆ.

ಯಾವುದೇ ಸಂದರ್ಭದಲ್ಲೂ ಫಂಡ್ ರಚನೆಯನ್ನು ಬದಲಾಯಿಸಬಹುದು. ಇದಕ್ಕಾಗಿ ತಗಲುವ ವೆಚ್ಚ ತೀರಾ ಕಡಿಮೆ. ಅಲ್ಲದೆ, ಇದರಿಂದ ಅಲ್ಪಾವಧಿ ಹಾಗೂ ದೀರ್ಘವಾಧಿ ಎರಡೂ ಗುರಿಗಳನ್ನು ಮುಟ್ಟಲು ಯುಲಿಪ್ ಗಳು ಅವಕಾಶ ಮಾಡಿಕೊಡುತ್ತವೆ. ಯುಲಿಪ್ ನಲ್ಲಿ ನಿಮ್ಮ ಇಷ್ಟಕ್ಕೆ ತಕ್ಕಂತೆ ಫಂಡ್ ಗಳನ್ನು ಆಯ್ಕೆ ಮಾಡಬಹುದಾಗಿದೆ. ಆರ್ಥಿಕ ತಜ್ಞರ ನೆರವು ಸಿಗುವುದರಿಂದ ಯೋಜನೆಯ ರಿಸ್ಕ್ ಅಂಶಗಳನ್ನು ಚರ್ಚಿಸಿ ಹೂಡಿಕೆ ಉದ್ದೇಶ, ಇನ್ಸೂರೆನ್ ಪ್ರೀಮಿಯಂ ಎಷ್ಟು ರಿಸ್ಕ್ ತೆಗೆದುಕೊಳ್ಳಬಹುದು ಎಂಬುದರ ಬಗ್ಗೆ ಅರಿವು ಪಡೆದು ನಂತರ ಯುಲಿಪ್ ಬಳಸಬಹುದು.

Disclaimer
Unit-linked life insurance products are different from the traditional insurance products and are subject to risk factors. Premiums paid in unit-linked life insurance policies are subject to investment risks associated with capital markets and NAVs of the units may go up or down, based on the performance of fund and factors influencing the capital market and the insured is responsible for his/her decisions. Please know the associated risks and the applicable charges from your Insurance Agent or the Intermediary. Read the product brochure carefully before buying the plan.

Insurance is the subject matter of the solicitation. Registered and Corporate Office Address: IndiaFirst Life Insurance Company Ltd., 301, ‘B' Wing, The Qube, Infinity Park, Dindoshi-Flimcity Road, Malad (E), Mumbai - 400097. Website: indiafirstlife.com. Registration No: 143. Toll Free No. 1800 209 8700. SMS to 5667735, SMS charges apply. Advt. Ref. No.: __________.

English summary

ULIP - Something for Everyone

ULIPs offer alternatives to you whether you are keen to take on some investment risks in order to see your money grow or you are more comfortable investing in secure avenues which preserve your wealth
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X