For Quick Alerts
ALLOW NOTIFICATIONS  
For Daily Alerts

ನೌಕರರ ಭವಿಷ್ಯ ನಿಧಿ ಬಡ್ಡಿದರ ಯಥಾಸ್ಥಿತಿ

By Mahesh
|

ನವದೆಹಲಿ, ಆ.27: 2014-15ನೆ ಹಣಕಾಸು ವರ್ಷದಲ್ಲಿ ನೌಕರರ ಭವಿಷ್ಯನಿಧಿಯ (ಇಪಿಎಫ್‌ಒ) ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಇಪಿಎಫ್‌ಒ ಸಂಸ್ಥೆ ನಿರ್ಧರಿಸಿದೆ. ಶೇಕಡ 8.75ರಲ್ಲೇ ಉಳಿಸಿಕೊಳ್ಳಲು ಸಂಸ್ಥೆಯ ಟ್ರಸ್ಟಿಗಳು ಮಂಗಳವಾರ ನಿರ್ಧರಿಸಿದ್ದಾರೆ.

 

‘ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡ 8.75ರಷ್ಟು ಬಡ್ಡಿ ದರವನ್ನು ಪಾವತಿಸಲು ನಿರ್ಧಾರ ಕೈಗೊಳ್ಳಲಾಗಿದೆ' ಎಂದು ಕೇಂದ್ರೀಯ ಭವಿಷ್ಯನಿಧಿ(ಸಿಪಿಎಫ್ ಸಿ) ಆಯುಕ್ತ ಕೆ.ಕೆ.ಜಾಲನ್ ಪಿಟಿಐಗೆ ತಿಳಿಸಿದ್ದಾರೆ. ಕೇಂದ್ರೀಯ ಟ್ರಸ್ಟಿಗಳ ಮಂಡಳಿಯ ಸಭೆಯ ನಂತರ ಅವರು ಈ ವಿಷಯವನ್ನು ಹೇಳಿದರು.

 
ನೌಕರರ ಭವಿಷ್ಯ ನಿಧಿ ಬಡ್ಡಿದರ ಯಥಾಸ್ಥಿತಿ

ಇಪಿಎಫ್‌ಒನಲ್ಲಿ ಸುಮಾರು ಐದು ಕೋಟಿ ನೌಕರರು ಸದಸ್ಯರಾಗಿದ್ದಾರೆ. ಮಂಡಳಿಯ ಈ ನಿರ್ಧಾರವು ಅವರ ನಿವೃತ್ತಿ ನಿಧಿಯ ಮೇಲೆ ಪರಿಣಾಮ ಬೀರಲಿದೆ. 2013-14ನೆ ಹಣಕಾಸು ವರ್ಷದಲ್ಲೂ ಇದೇ ಬಡ್ಡಿ ದರವನ್ನು ಒದಗಿಸಲಾಗಿತ್ತು. ಹತ್ತು ಹಲವು ಕಾರ್ಮಿಕ ಒಕ್ಕೂಟಗಳು ಈ ನಿರ್ಧಾರದ ವಿರುದ್ಧ ಪ್ರತಿಭಟನೆ ಮಾಡಿದ್ದವು. ಇದಕ್ಕೂ ಮುನ್ನ ಶೇ 8.5 ಬಡ್ಡಿ ದರವನ್ನು ಉಳಿಸಿಕೊಳ್ಳಲಾಗಿತ್ತು.

English summary

EPFO to pay 8.75 per cent interest on PF deposits in 2014-15

Retirement fund body EPFO's trustees on Tuesday decided to retain interest payment on provident fund deposits for 2014-15 at 8.75 per cent.
Story first published: Wednesday, August 27, 2014, 15:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X