For Quick Alerts
ALLOW NOTIFICATIONS  
For Daily Alerts

ಯಾವ ಬ್ಯಾಂಕಿನಲ್ಲಿ ಬಡ್ಡಿದರ ಹೆಚ್ಚು? ಯಾವ್ದು ಬೆಸ್ಟ್?

By Mahesh
|

ಬೆಂಗಳೂರು, ಸೆ.19: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಹೊಸ ಹಣಕಾಸು ನೀತಿ ಪ್ರಕಟಿಸುತ್ತಿದ್ದಂತೆ ಬ್ಯಾಂಕುಗಳು ಕೂಡಾ ತನ್ನ ಬಡ್ಡಿದರದಲ್ಲಿ ಏರು ಪೇರು ಮಾಡುವುದು ಮಾಮೂಲಿ.

 

ಬ್ಯಾಂಕುಗಳಲ್ಲಿನ ಠೇವಣಿಯ ಬಡ್ಡಿದರ ಇಳಿಮುಖವಾಗುತ್ತಿದ್ದು, ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡಾ ತನ್ನ ಬಡ್ಡಿದರವನ್ನು ಕಡಿತಗೊಳಿಸಿದೆ.

ಬ್ಯಾಂಕುಗಳ ಗೃಹ ಹಾಗೂ ಕಾರು ಸಾಲ ಬಡ್ಡಿ ದರ ಏರಿಕೆ ಇಳಿಕೆ ನಡುವೆ ಸಾಲ ಸೋಲ ಮಾಡಿಯಾದರೂ ತುಪ್ಪ ತಿನ್ನುವ ಕನಸು ಹೊತ್ತವರು ಉತ್ತಮ ಬಡ್ಡಿ ನೀಡುವ ಬ್ಯಾಂಕುಗಳಲ್ಲಿ ತಮ್ಮ ಸಂಬಳವನ್ನು ಹಾಕಿಕೊಳ್ಳುವುದು ಜಾಣತನ, ಸದ್ಯದ ಪರಿಸ್ಥಿತಿಯಲ್ಲಿ ಉತ್ತಮ ಬಡ್ಡಿದರ ನೀಡುತ್ತಿರುವ ಪ್ರಮುಖ ಸಾರ್ವಜನಿಕ ವಲಯ ಹಾಗೂ ಜನಪ್ರಿಯ ಖಾಸಗಿ ವಲಯ ಬ್ಯಾಂಕುಗಳ ವಿವರ ಇಲ್ಲಿದೆ.

1 ಅಥವಾ 2 ವರ್ಷಕ್ಕಿಂತ ಕೆಳಗಿನ ಅವಧಿ ಹಾಗೂ 15 ಲಕ್ಷಕ್ಕಿಂತ ಕಡಿಮೆ ಮೊತ್ತ ಠೇವಣಿ ಜೊತೆಗೆ ಶೇ 9.05 ರಿಂದ 10ಕ್ಕೂ ಅಧಿಕ ಬಡ್ಡಿದರ ನೀಡುವ ಬ್ಯಾಂಕುಗಳನ್ನು ಮಾತ್ರ ಪರಿಗಣಿಸಲಾಗಿದೆ ವಿವರ ಮುಂದೆ ನೋಡಿ...

ಶ್ಯಾಮರಾವ್ ವಿಠಲ್ ಬ್ಯಾಂಕ್

ಶ್ಯಾಮರಾವ್ ವಿಠಲ್ ಬ್ಯಾಂಕ್

ಶ್ಯಾಮರಾವ್ ವಿಠಲ್ ಕೋ ಆಪರೇಟಿವ್ ಬ್ಯಾಂಕ್ 500 ದಿನಗಳ ಅವಧಿಗೆ 1 ಕೋಟಿ ರು ಗಿಂತ ಕಡಿಮೆ ಮೊತ್ತದ ಹೂಡಿಕೆಗೆ ಶೇ 9.50ರಷ್ಟು ಬಡ್ಡಿದರ ನೀಡುತ್ತಿದೆ.

ರತ್ನಾಕರ್ ಬ್ಯಾಂಕ್ ಖಾಸಗಿ ವಲಯ

ರತ್ನಾಕರ್ ಬ್ಯಾಂಕ್ ಖಾಸಗಿ ವಲಯ

ಖಾಸಗಿ ವಲಯದ ರತ್ನಾಕರ್ ಬ್ಯಾಂಕ್ 12 ತಿಂಗಳಿನಿಂದ 24 ತಿಂಗಳೊಳಗಿನ ಅವಧಿಗೆ 1 ಲಕ್ಷ ರು ನಿಂದ 1 ಕೋಟಿ ರು ಗಿಂತ ಕಡಿಮೆ ಮೊತ್ತದ ಹೂಡಿಕೆಗೆ ಶೇ 9.50ರಷ್ಟು ಬಡ್ಡಿದರ ನೀಡುತ್ತಿದೆ.

ಡೆವಲಪ್ಮೆಂಟ್ ಕ್ರೆಡಿಟ್ ಬ್ಯಾಂಕ್
 

ಡೆವಲಪ್ಮೆಂಟ್ ಕ್ರೆಡಿಟ್ ಬ್ಯಾಂಕ್

ಖಾಸಗಿ ವಲಯದ ಡೆವಲಪ್ಮೆಂಟ್ ಕ್ರೆಡಿಟ್ ಬ್ಯಾಂಕ್ 13 ತಿಂಗಳಿನಿಂದ 24 ತಿಂಗಳೊಳಗಿನ ಅವಧಿಗೆ 1 ಕೋಟಿ ರು ಗಿಂತ ಕಡಿಮೆ ಮೊತ್ತದ ಹೂಡಿಕೆಗೆ ಶೇ 9.40ರಷ್ಟು ಬಡ್ಡಿದರ ನೀಡುತ್ತಿದೆ.

ಐಡಿಬಿಐ ಬ್ಯಾಂಕ್

ಐಡಿಬಿಐ ಬ್ಯಾಂಕ್

ಸಾರ್ವಜನಿಕ ವಲಯದ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಐಡಿಬಿಐ, 500ದಿನಗಳ ಅವಧಿಗೆ 1 ಕೋಟಿ ರು ಗಿಂತ ಕಡಿಮೆ ಮೊತ್ತದ ಹೂಡಿಕೆಗೆ ಶೇ 9.30ರಷ್ಟು ಬಡ್ಡಿದರ ನೀಡುತ್ತಿದೆ.

ಶೇ 9.25 ಬಡ್ಡಿದರ ನೀಡುವ ಬ್ಯಾಂಕ್ ಗಳು

ಶೇ 9.25 ಬಡ್ಡಿದರ ನೀಡುವ ಬ್ಯಾಂಕ್ ಗಳು

* ಖಾಸಗಿ ವಲಯದ ನೈನಿತಾಲ್ ಬ್ಯಾಂಕ್ 400 ದಿನಗಳ ಅವಧಿಗೆ 15 ಲಕ್ಷ ರು ಗಿಂತ ಕಡಿಮೆ ಮೊತ್ತದ ಹೂಡಿಕೆಗೆ
* ಖಾಸಗಿ ವಲಯದ ಸೌಥ್ ಇಂಡಿಯನ್ ಬ್ಯಾಂಕ್ 15 ತಿಂಗಳುಗಳ ಅವಧಿಗೆ 1 ಕೋಟಿ ರು ಗಿಂತ ಕಡಿಮೆ ಮೊತ್ತದ ಹೂಡಿಕೆಗೆ
* ಸಾರ್ವಜನಿಕ ವಲಯದ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, 555 ದಿನಗಳ ಅವಧಿಗೆ 1 ಕೋಟಿ ರು ಗಿಂತ ಕಡಿಮೆ ಮೊತ್ತದ ಹೂಡಿಕೆಗೆ
* ಖಾಸಗಿ ವಲಯದ ತಮಿಳುನಾಡು ಮರ್ಸಂಟೈಲ್ ಬ್ಯಾಂಕ್ 1 ವರ್ಷದ ಅವಧಿಗೆ 1 ಕೋಟಿ ರು ಗಿಂತ ಕಡಿಮೆ ಮೊತ್ತದ ಹೂಡಿಕೆಗೆ

ಶೇ 9.15 ಬಡ್ಡಿದರ ನೀಡುವ ಬ್ಯಾಂಕ್ ಗಳು

ಶೇ 9.15 ಬಡ್ಡಿದರ ನೀಡುವ ಬ್ಯಾಂಕ್ ಗಳು

* ಸಾರ್ವಜನಿಕ ವಲಯದ ಪಂಜಾಬ್ ಸಿಂದ್ ಬ್ಯಾಂಕ್, 444 ದಿನಗಳ ಅವಧಿಗೆ 1 ಕೋಟಿ ರು ಗಿಂತ ಕಡಿಮೆ ಮೊತ್ತದ ಹೂಡಿಕೆಗೆ
* ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ, 555 ದಿನಗಳ ಅವಧಿಗೆ 15 ಲಕ್ಷ ರು ಗಿಂತ ಕಡಿಮೆ ಮೊತ್ತದ ಹೂಡಿಕೆಗೆ
* ಖಾಸಗಿ ವಲಯದ ಧನಲಕ್ಷ್ಮಿ ಬ್ಯಾಂಕ್ 375 ದಿನಗಳ ಅವಧಿಗೆ 1 ಕೋಟಿ ರು ಗಿಂತ ಕಡಿಮೆ ಮೊತ್ತದ ಹೂಡಿಕೆಗೆ
* ಸಾರ್ವಜನಿಕ ವಲಯದ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸಿಂಡಿಕೇಟ್ ಬ್ಯಾಂಕ್, 444 ದಿನಗಳ ಅವಧಿಗೆ 1 ಕೋಟಿ ರು ಗಿಂತ ಕಡಿಮೆ ಮೊತ್ತದ ಹೂಡಿಕೆಗೆ

ಶೇ 9.10 ಬಡ್ಡಿದರ ನೀಡುವ ಬ್ಯಾಂಕ್ ಗಳು

ಶೇ 9.10 ಬಡ್ಡಿದರ ನೀಡುವ ಬ್ಯಾಂಕ್ ಗಳು

* ಫೆಡೆರಲ್ ಬ್ಯಾಂಕ್ (ಖಾಸಗಿ)- 15 ತಿಂಗಳು - 1 ಕೋಟಿ ರು ಗಿಂತ ಕಡಿಮೆ ಮೊತ್ತ
* ಕೋಟಕ್ ಬ್ಯಾಂಕ್ (ಖಾಸಗಿ)- 390 ದಿನಗಳು - 1 ಕೋಟಿ ರು ಗಿಂತ ಕಡಿಮೆ ಮೊತ್ತ
* ಯುಕೋ ಬ್ಯಾಂಕ್ (ಪಬ್ಲಿಕ್)- 12 ತಿಂಗಳು - 1 ಕೋಟಿ ರು ಗಿಂತ ಕಡಿಮೆ ಮೊತ್ತ
* ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್, ಜೈಪುರ (ಪಬ್ಲಿಕ್)- 12 ತಿಂಗಳು - 1 ಕೋಟಿ ರು ಗಿಂತ ಕಡಿಮೆ ಮೊತ್ತ
* ಯೆಸ್ ಬ್ಯಾಂಕ್ (ಖಾಸಗಿ)- 18 ತಿಂಗಳು - 1 ಕೋಟಿ ರು ಗಿಂತ ಕಡಿಮೆ ಮೊತ್ತ

ಶೇ 9.05 ಬಡ್ಡಿದರ ನೀಡುವ ಬ್ಯಾಂಕ್ ಗಳು

ಶೇ 9.05 ಬಡ್ಡಿದರ ನೀಡುವ ಬ್ಯಾಂಕ್ ಗಳು

* ಅಲಹಾಬಾದ್ ಬ್ಯಾಂಕ್ (ಪಬ್ಲಿಕ್)- 1-2 ವರ್ಷ - 1 ಕೋಟಿ ರು ಗಿಂತ ಕಡಿಮೆ ಮೊತ್ತ
* ಕೆನರಾ ಬ್ಯಾಂಕ್ (ಪಬ್ಲಿಕ್)- 12 ತಿಂಗಳು - 1 ಕೋಟಿ ರು ಗಿಂತ ಕಡಿಮೆ ಮೊತ್ತ
* ವಿಜಯ ಬ್ಯಾಂಕ್ (ಪಬ್ಲಿಕ್)- 12 ತಿಂಗಳು - 1 ಕೋಟಿ ರು ಗಿಂತ ಕಡಿಮೆ ಮೊತ್ತ
* ಆಂಧ್ರ ಬ್ಯಾಂಕ್ (ಪಬ್ಲಿಕ್)- 444 ದಿನಗಳು - 1 ಕೋಟಿ ರು ಗಿಂತ ಕಡಿಮೆ ಮೊತ್ತ

English summary

A look at 9 bank deposits that offer you the highest interest rates in India

Interest rates on bank deposits are falling. Most of the banks including the likes of State Bank of India have recently cut interest rates. Take a look at 9 bank deposits that are still offering the highest interest. We have taken only the popular private and public sector banks.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X