For Quick Alerts
ALLOW NOTIFICATIONS  
For Daily Alerts

ಪಿಪಿಎಫ್ ನಲ್ಲಿ ಹಣ ಹೂಡಿಕೆ ಬೇಡವೆನ್ನಲು 5 ಕಾರಣ

|

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ ಭಾರತದ ವಾಣಿಜ್ಯ ವ್ಯವಹಾರದಲ್ಲಿ ಚಾಲ್ತಿಯಲ್ಲಿರುವ ಪ್ರಸಿದ್ಧ ಪದ್ಧತಿ. ತೆರಿಗೆ ಉಳಿತಾಯದ ಉದ್ದೇಶಕ್ಕೂ ಪರಿಣಾಮಕಾರಿ ಯೋಜನೆ ಎಂದೇ ಭಾವಿಸಲಾಗಿದೆ.

ವಾಣಿಜ್ಯ ಕಾನೂನಿನ ಸೆಕ್ಷನ್ 80 ಸಿ ಪ್ರಕಾರ ಇದು ನಿಮಗೆ ಆದಾಯ ತೆರಿಗೆ ಲಾಭವನ್ನು ನೀಡುತ್ತದೆ. ಆದರೆ ಪಿಪಿಎಫ್ ಅನೇಕ ಅವಗುಣಗಳನ್ನು ಹೊಂದಿದೆ. ಇಲ್ಲಿ ಕೆಲವೊಂದು ಅವಗುಣಗಳನ್ನು ಪಟ್ಟಿ ಮಾಡಲಾಗಿದೆ.

ಹಣ ಹಿಂತೆಗೆಯುವಂತಿಲ್ಲ

ಹಣ ಹಿಂತೆಗೆಯುವಂತಿಲ್ಲ

ನೀವು ಪಿಪಿಎಫ್ ನಲ್ಲಿ ಒಮ್ಮೆ ಹಣ ತೊಡಗಿಸಿದರೆ ಮುಗಿಯಿತು. ಏಳು ವರ್ಷದ ಅವಧಿ ಮುಗಿಯುವವರೆಗೆ ಅದನ್ನು ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ. ಏಳು ವರ್ಷದ ನಂತರ ನೀವು ಶೇ.50 ರಷ್ಟು ಹಣವನ್ನು ಮಾತ್ರ ವಾಪಸ್ ಪಡೆಯಬಹುದು. ಅಲ್ಲದೇ ಹಣ ತೊಡಗಿಸಿ ಮೂರು ವರ್ಷ ಕಳೆದ ಮೇಲೆಯೇ ನೀವು ಸಾಲ ಸೌಲಭ್ಯಕ್ಕೆ ಅರ್ಹರಾಗುತ್ತಿರಿ. ಒಟ್ಟಿನಲ್ಲಿ ಇಲ್ಲಿ ಎಷ್ಟೇ ಹಣ ಹೂಡಿಕೆ ಮಾಡಿದರೂ ಮರುಪಾವತಿ ಮತ್ತು ಸವಲತ್ತು ಕಡಿಮೆ ಎಂದೇ ಹೇಳಬಹುದು.

ಮರೆಯಾದ ಅವಿಭಕ್ತ ಕುಟುಂಬಗಳು

ಮರೆಯಾದ ಅವಿಭಕ್ತ ಕುಟುಂಬಗಳು

ಅದೊಂದು ಕಾಲವಿತ್ತು. ಹಿಂದು ಅವಿಭಕ್ತ ಕುಟುಂಬಗಳು ಮತ್ತು ಟ್ರಸ್ಟ್ ಗಳು ಪಿಪಿಎಫ್ ನಲ್ಲಿ ಹಣ ಹೂಡಿಕೆ ಮಾಡುವುದನ್ನೇ ಸಂಪ್ರದಾಯ ಮಾಡಿಕೊಂಡಿದ್ದವು. ಆದರೆ ಇಂದು ಪರಿಸ್ಥಿತಿ ಬದಲಾಗಿ ಪಿಪಿಎಫ್ ಜನಪ್ರಿಯತೆ ಕಳೆದುಕೊಳ್ಳುತ್ತಿದ್ದು ಜನ ಬೇರೆ ರೀತಿಯಲ್ಲಿ ಹಣ ತೊಡಗಿಸಲು ಯೋಚಿಸುತ್ತಿದ್ದಾರೆ.

ಜಾಯಿಂಟ್ ಅಕೌಂಟ್ ಇಲ್ಲ

ಜಾಯಿಂಟ್ ಅಕೌಂಟ್ ಇಲ್ಲ

ಪಿಪಿಎಫ್ ನಲ್ಲಿ ಜಾಯಿಂಟ್ ಅಕೌಂಟ್ ತೆರೆಯಲು ಅವಕಾಶವಿಲ್ಲ. ಮೈನರ್ ಹೆಸರಿಗೆ ಹಣ ಇಡುವುದಾರೆ ನಾಮಿನೇಶನ್ ಮಾಡಬೇಕಾಗುತ್ತದೆ. ಅವರು ಮೇಜರ್ ಆಗುವವರೆಗೆ ಬೇರೆ ಯಾವುದೋ ಬದಲಾವಣೆಗಳಾಗಿದ್ದರೆ ಇದು ಕಾನೂನು ಸಮಸ್ಯೆ ಹುಟ್ಟಿಕೊಳ್ಳಲು ಕಾರಣವವಾಗಬಹುದು

ಎನ್ನಾರೈಗಳಿಗಿಲ್ಲ ಅವಕಾಶ

ಎನ್ನಾರೈಗಳಿಗಿಲ್ಲ ಅವಕಾಶ

ಅನಿವಾಸಿ ಭಾರತೀಯರು ಹೊಸ ಪಿಪಿಎಫ್ ಅಕೌಂಟ್ ತೆರೆಯಲು ಸಾಧ್ಯವಿಲ್ಲ. ಆದರೆ ನೀವು ಭಾರತದಲ್ಲಿದ್ದಾಗಲೇ ಖಾತೆ ತೆರೆದಿದ್ದು ನಂತರ ವಿದೇಶಕ್ಕೆ ತೆರಳಿದರೆ ವ್ಯವಹಾರ ಮುಂದುವರಿಸಬಹುದು. ಅಲ್ಲದೇ ಆದಾಯ ತೆರಿಗೆ ಲಾಭವನ್ನು ಪಡೆಯಬಹುದು.

ಹಣ ಹೂಡಿಕೆಗೆ ಮಿತಿಯಿದೆ

ಹಣ ಹೂಡಿಕೆಗೆ ಮಿತಿಯಿದೆ

ನೀವು ವರ್ಷಕ್ಕೆ 1.5 ಲಕ್ಷ ರೂ.ಗಿಂತ ಅಧಿಕ ಹಣವನ್ನುಮ ಪಿಪಿಎಫ್ನಲ್ಲಿ ಹೂಡಿಕೆ ಮಾಡುವಂತಿಲ್ಲ. ಅಲ್ಲದೇ ಕಳೆದ ಬಜೆಟ್ ನಲ್ಲಿ ಇದನ್ನು ಹೆಚ್ಚಿಗೆ ಮಾಡಲಾಗಿದೆ. ಮೊದಲು ಇದರ ಮಿತಿ ಕೇವಲ 1 ಲಕ್ಷ ರೂ. ಇತ್ತು.

English summary

5 disadvantages of the PPF you must consider before investing

The Public Provident Fund or PPF is one of the most popular instruments in India. It's a highly efficient tax saving instrument, giving you tax benefits under SEC 80C as well as interest income being tax free. Here are a few disadvantages of the PPF.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X