For Quick Alerts
ALLOW NOTIFICATIONS  
For Daily Alerts

ಕೆವಿಪಿಗಿಂತ ಬ್ಯಾಂಕ್ ಗಳಲ್ಲಿ ಹೂಡಿಕೆಯೇ ಬೆಸ್ಟ್ ಹೇಗೆ?

By Mahesh
|

ಕಿಸಾನ್ ವಿಕಾಸ್ ಪತ್ರ ಒಂದು ತೊಡಕುಗಳಿಲ್ಲದ, ಎಚ್ಚರಿಕೆಯ ಹೂಡಿಕೆದಾರರಿಗೆ ಹೇಳಿ ಮಾಡಿಸಿದ ಹೂಡಿಕೆ ವಿಧಾನವಾಗಿದೆ. ಈ ಯೋಜನೆಯಡಿಯಲ್ಲಿ 100 ತಿಂಗಳಲ್ಲಿ ಹೂಡಿಕೆ ಮಾಡಿದ ಹಣ ದ್ವಿಗುಣಗೊಳ್ಳಲಿದೆ. ವಾರ್ಷಿಕ ಚಕ್ರಬಡ್ಡಿದರ ಶೇ 8.4ರಷ್ಟು ಕಾಯ್ದುಕೊಳ್ಳಲಾಗುತ್ತದೆ. ಕಿಸಾನ್ ವಿಕಾಸ್ ಪತ್ರ ಪುನರ್ ಲೋಕಾರ್ಪಣೆಗೊಂಡ ಬಳಿಕ ಜನರನ್ನು ಆಕರ್ಷಿಸಿದ್ದು ನಿಜ. ಅದರೆ, ಹೂಡಿಕೆ ತಜ್ಞರ ಅಭಿಪ್ರಾಯದಂತೆ ಕೆವಿಪಿಗಿಂತ ಬ್ಯಾಂಕ್ ಗಳಲ್ಲೇ ಹೂಡಿಕೆ ಇನ್ನಷ್ಟು ಉತ್ತಮ ರಿಟರ್ನ್ಸ್ ನೀಡಬಲ್ಲದಾಗಿದೆ.

ಅದರಲ್ಲೂ ನಿಶ್ಚಿತ ಠೇವಣಿಯಲ್ಲಿ ಹಣ ತೊಡಗಿಸಲು ಬಯಸುವ ಗ್ರಾಹಕರು ಕಿಸಾನ್ ವಿಕಾಸ್ ಪತ್ರದ ಬಗ್ಗೆ ತಲೆಕೆಡಿಸಿಕೊಳ್ಳಲಿದ್ದರೆ ಒಳ್ಳೆಯದು. ಬಡ್ಡಿದರ, ರಿಟರ್ನ್ಸ್, ತೆರಿಗೆ ವಿನಾಯತಿ ಬಗ್ಗೆ ಗಮನ ಹರಿಸಿದರೆ ಕಿಸಾನ್ ವಿಕಾಸ್ ಪತ್ರ ಯೋಜನೆಗಿಂತ ಬ್ಯಾಂಕ್ ಗಳಲ್ಲಿ ಹೂಡಿಕೆಯೇ ಒಳ್ಳೆಯದು ಎನಿಸುತ್ತದೆ. ಕೆವಿಪಿಗಿಂತ ಬ್ಯಾಂಕ್ ಹೂಡಿಕೆ ಹೇಗೆ ಬೆಸ್ಟ್ ಎಂಬುದರ ಬಗ್ಗೆ ಕೆಳಗೆ ವಿವರಿಸಲಾಗಿದೆ. [ಕಿಸಾನ್ ವಿಕಾಸ್ ಪತ್ರ ಅಂದರೇನು? ಏನು ಲಾಭ?]

2011ರಲ್ಲಿ ರದ್ದಾಗಬೇಕಿದ್ದ ಯೋಜನೆ ಮತ್ತೆ ಪುನಶ್ಚೇತನ ಕಂಡರೂ ಯೋಜನೆಯಿಂದ ತೆರಿಗೆ ವಿನಾಯತಿ ಬಯಸುವವರಿಗೆ ಯಾವುದೇ ಸೌಲಭ್ಯವಿಲ್ಲ. ಸಣ್ಣ ಪ್ರಮಾಣದ ಹೂಡಿಕೆದಾರರಿಗೆ ಯೋಜನೆ ಸುರಕ್ಷಿತ ಎನ್ನುವುದನ್ನು ಬಿಟ್ಟರೆ ಕೆವಿಪಿಗಿಂತ ಬ್ಯಾಂಕ್ ಗಳಲ್ಲಿ ಹೂಡಿಕೆಯೇ ಬೆಸ್ಟ್? ಹೇಗೆ ಮುಂದೆ ಓದಿ...

1. ಬ್ಯಾಂಕಿಗೆ ಹೋಲಿಸಿದರೆ ಬಡ್ಡಿದರ ಇಳಿಕೆ

1. ಬ್ಯಾಂಕಿಗೆ ಹೋಲಿಸಿದರೆ ಬಡ್ಡಿದರ ಇಳಿಕೆ

ಕಿಸಾನ್ ವಿಕಾಸ್ ಪತ್ರದ ಮೆಚ್ಯುರಿಟಿ ಅವಧಿ 8 ವರ್ಷ 4 ತಿಂಗಳಾಗಿದೆ. ಹೂಡಿಕೆ ಮಾಡಿದ ಮೊತ್ತ ಈ ಅವಧಿ ಮುಗಿಯುತ್ತಿದ್ದಂತೆ ದ್ವಿಗುಣಗೊಂಡಿರುತ್ತದೆ. ವಾರ್ಷಿಕವಾಗಿ ಬಡ್ಡಿದರ ಶೇ 8.68 ರಷ್ಟು ಸಿಗಲಿದೆ.

ಅದರೆ, ಇದೇ ಹೂಡಿಕೆ ಮೊತ್ತವನ್ನು ನಿಶ್ಚಿತ ಠೇವಣಿ(Fixed Deposit) ನಲ್ಲಿ ತೊಡಗಿಸಿದರೆ ನಿಮಗೆ ಶೇ 8.9ರಷ್ಟು ಬಡ್ಡಿದರ ಹಾಗೂ ಹಿರಿಯ ನಾಗರಿಕರಿಗೆ ಪ್ಲಸ್ 0.50 % ಹೆಚ್ಚಿನ ಬಡ್ಡಿದರ ನಿರೀಕ್ಷಿಸಬಹುದು. ಬ್ಯಾಂಕುಗಳ ಚಕ್ರಬಡ್ಡಿದರ ಪ್ರತಿ ತ್ರೈಮಾಸಿಕ ಅವಧಿಗೂ ಬದಲಾಗುವುದರಿಂದ ಉತ್ತಮ ರಿಟರ್ನ್ಸ್ ಬೇಕಾದರೆ ಬ್ಯಾಂಕ್ ಗಳಿಂದ ಮಾತ್ರ ಸಾಧ್ಯ.

 

2. ಲಿಕ್ವಿಡಿಟಿ

2. ಲಿಕ್ವಿಡಿಟಿ

ಬ್ಯಾಂಕ್ ಗಳಲ್ಲಿನ ಹೂಡಿಕೆಗೆ ಹೋಲಿಸಿದರೆ ಕಿಸಾನ್ ವಿಕಾಸ್ ಪತ್ರ ಯೋಜನೆಯ ಲಿಕ್ವಿಡಿಟಿ ಸರಳ ಹಾಗೂ ಸಮಪರ್ಕವಾಗಿಲ್ಲ. ಮೆಚ್ಯುರಿಟಿ ಅವಧಿಗೆ ಮುನ್ನ ವಿಥ್ ಡ್ರಾ ಬೇಕಾದರೆ ಸಾಧ್ಯವಿಲ್ಲ.

2 ವರ್ಷ ಹಾಗೂ 6 ತಿಂಗಳ ಅವಧಿ ಅಥವಾ ಹೂಡಿಕೆದಾರರ ಮರಣವಾದರೆ ಲಿಕ್ವಿಡಿಟಿ ಸಾಧ್ಯ. ಅದರೆ, ಬ್ಯಾಂಕ್ ಗಳಲ್ಲಿ ಇದೆಲ್ಲವೂ ಸರಳವಾಗಿದ್ದು, ಪೆನಾಲ್ಟಿ ರಹಿತ ಲಿಕ್ವಿಡಿಟಿ, ಅವಧಿಗೆ ಮುನ್ನ ನಿಶ್ಚಿತ ಠೇವಣಿಯಿಂದ ಹಣ ಪಡೆಯಲು ಸಾಧ್ಯವಿದೆ. ಹೀಗಾಗಿ ಲಿಕ್ವಿಡಿಟಿ ವಿಷಯದಲ್ಲೂ ಕೆವಿಪಿ ಸೂಕ್ತವಲ್ಲ.
3. ಹಿರಿಯ ನಾಗರಿಕರಿಗೆ ಸೂಕ್ತವಲ್ಲ

3. ಹಿರಿಯ ನಾಗರಿಕರಿಗೆ ಸೂಕ್ತವಲ್ಲ

ಕೆವಿಪಿ ಹಿರಿಯ ನಾಗರಿಕರಿಗೆ ಸೂಕ್ತವಲ್ಲ. ಸಣ್ಣ ಹೂಡಿಕೆದಾರರಿಗೆ ಹೇಳಿ ಮಾಡಿಸಿದ ಯೋಜನೆ ಎನ್ನಬಹುದಾದ ಕೆವಿಪಿ ರೀ ಲಾಂಚ್ ಆದಮೇಲೂ ಹಿರಿಯ ನಾಗರಿಕರಿಗೆ ಯಾವುದೇ ಸೌಲಭ್ಯ ಕೊಡುಗೆ ನೀಡಿಲ್ಲ. ಬಡ್ಡಿದರದಲ್ಲಿ ವಿನಾಯತಿ, ಇನ್ನಿತರ ಸೌಲಭ್ಯ ನಿರೀಕ್ಷೆಯಿದ್ದರೆ ಕೆವಿಪಿಗಿಂತ ಬ್ಯಾಂಕ್ ಬೆಸ್ಟ್.

4. ಬ್ಯಾಂಕ್ ಹೂಡಿಕೆ 80 ಸಿ ಬೆಂಬಲ

4. ಬ್ಯಾಂಕ್ ಹೂಡಿಕೆ 80 ಸಿ ಬೆಂಬಲ

ವೃತ್ತಿಪರರು ಹೂಡಿಕೆ ಮಾಡುವಾಗ ಗಮನಿಸುವ ಪ್ರಮುಖ ಅಂಶವೆಂದರೆ ತೆರಿಗೆ ಎಷ್ಟು ಉಳಿಸಬಹುದು ಎಂಬುದಾಗಿದೆ. ಅದರೆ, ಬ್ಯಾಂಕ್ ಹೂಡಿಕೆ ಮೂಲಕ 80ಸಿ ಅನ್ವಯ ತೆರಿಗೆ ಉಳಿಸಬಹುದಾಗಿದೆ. 1.5 ಲಕ್ಷ ರು ತನಕ ವಿನಾಯತಿ ಇದೆ. ಆದರೆ, ಕಿಸಾನ್ ವಿಕಾಸ್ ಪತ್ರದಲ್ಲಿ ಈ ಸೌಲಭ್ಯವಿಲ್ಲ. ಕೆವಿಪಿಯಿಂದ ತೆರಿಗೆ ಉಳಿತಾಯ ಸಾಧ್ಯವಿಲ್ಲ.

5. ಪಿಪಿಎಫ್ vs ಕೆವಿಪಿ ಹೋಲಿಕೆ

5. ಪಿಪಿಎಫ್ vs ಕೆವಿಪಿ ಹೋಲಿಕೆ

ಬ್ಯಾಂಕ್ ಹೂಡಿಕೆಯಿಂದ ತೆರಿಗೆ ಉಳಿಸಬಹುದಾದರೆ, ಪಿಪಿಎಫ್ ನಲ್ಲಿರುವ ಸೌಲಭ್ಯವನ್ನೂ ಕೆವಿಪಿಯಲ್ಲಿ ನೀಡಿಲ್ಲ್. ಪಿಪಿಎಫ್ ನಲ್ಲಿನ ಬಡ್ಡಿದರಕ್ಕೆ ತೆರಿಗೆ ವಿನಾಯಿತಿ ಸಿಗಲಿದೆ. ಅದರೆ, ಈ ಸೌಲಭ್ಯ ಕೆವಿಪಿಯಲ್ಲಿಲ್ಲ.

English summary

5 Reasons Why Bank Deposits are Better Than the New Kissan Vikas Patra

The Kissan Vikas Patra has been relaunched amidst a lot of worries that it could lead to money laundering into the scheme, one reason which is why it was discontinued earlier.Take a look at why bank deposits are a better proposition then the newly launched Kissan Vikas Patra as an investment.
Story first published: Friday, November 21, 2014, 16:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X