For Quick Alerts
ALLOW NOTIFICATIONS  
For Daily Alerts

ಕ್ರೆಡಿಟ್ ಕಾರ್ಡ್ ಕೊಳ್ಳುವ ಮುನ್ನ 9 ಅಂಶ ತಲೆಯಲ್ಲಿರಲಿ

|

ಬಹಳಷ್ಟು ಜನ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುವ ಗೋಜಿಗೆ ಹೋಗಲ್ಲ. ಯಾಕೆಂದರೆ ಅವರಿಗೆ ಅದು ಹೇಗೆ ಕೆಲಸ ಮಾಡುತ್ತದೆ ಎಂದು ಗೊತ್ತಿರಲ್ಲ. ಹಾಗಾಗಿ ಕ್ರೆಡಿಟ್ ಕಾರ್ಡ್ ಯಾವ ರೀತಿ ನಮಗೆ ಪ್ರಯೋಜನಕ್ಕೆ ಬರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅತಿ ಮುಖ್ಯ.ನೀವು ಸಂಬಂಧಿಸಿದ ಕಂಪನಿ ಅಥವಾ ಬ್ಯಾಂಕ್ ನಿಂದ ಕ್ರೆಡಿಟ್ ಕಾರ್ಡ್ ಪಡೆದುಕೊಂಡ ನಂತರ ಅದರ ಉಪಯೋಗ ಯಾವ ರೀತಿ? ಹಣವಿಲ್ಲದೆ ಖರೀದಿ ಮಾಡಲು ಹೇಗೆ ಅವಕಾಶ ನೀಡುತ್ತದೆ? ಆಮೇಲೆ ಹಣ ಹಿಂದಿರುಗಿಸುವ ಪರಿ ಎಂಥದ್ದು? ಎಂಬ ಎಲ್ಲ ಸಂಗತಿ ತಿಳಿದುಕೊಳ್ಳೊಣ.

 

ಕ್ರೆಡಿಟ್ ಕಾರ್ಡ್ ಹೇಗೆ ಕೆಲಸ ಮಾಡುತ್ತದೆ?
ಅಂಗಡಿಯಲ್ಲಿ ನೀವು ಕ್ರೆಡಿಟ್ ಕಾರ್ಡ್ ನೀಡಿದಾಗ ಅದನ್ನು ಸ್ವೈಪ್ ಮಾಡಲಾಗುತ್ತದೆ. ಕಾರ್ಡ್ ಹಿಂಬದಿಯ ಮ್ಯಾಗ್ನೆಟಿಕ್ ಟೇಪ್ ವ್ಯವಹಾರಕ್ಕೆ ನೆರವಾಗುತ್ತದೆ. ನೀವು ಪಿನ್ ದಾಖಲು ಮಾಡಿದ ನಂತರವೇ ಖರೀದಿ ಮೊತ್ತವನ್ನು ವ್ಯಾಪಾರಿ ನಮೂದಿಸಬಹುದು. ದೂರವಾಣಿ ಸಂಪರ್ಕದ ಆಧಾರದಲ್ಲಿ ನಿಮ್ಮ ಬ್ಯಾಂಕ್ ನಿಂದ ಹಣ ಸಂದಾಯವಾಗುತ್ತದೆ.[ಕ್ರೆಡಿಟ್ ಕಾರ್ಡ್ ಕಳಕೊಂಡ್ರಾ? ತಕ್ಷಣವೇ ಸುದ್ದಿ ಓದಿ]

 
ಕ್ರೆಡಿಟ್ ಕಾರ್ಡ್ ಕೊಳ್ಳುವ ಮುನ್ನ 9 ಅಂಶ ತಲೆಯಲ್ಲಿರಲಿ

ಇಲ್ಲಿ ಒಂದು ಪರಿಶೀಲನೆ ಸಂದೇಶವನ್ನು ಗಮನಿಸಬೇಕಾಗುತ್ತದೆ. ನಿಮ್ಮ ಖರೀದಿ ಲಿಮಿಟ್ ನ್ನು ಯಾವ ಕಾರಣಕ್ಕೂ ಮೀರುವಂತಿಲ್ಲ. ಪರಿಶೀಲನೆ ಮುಗಿದು ಹಣ ಸಂದಾಯವಾದ ನಂತರ ಎರಡು ಟ್ರಾನ್ಸಾಕ್ಷನ್ ರಸೀದಿಗಳು ದೊರೆಯುತ್ತವೆ. ನಿಮ್ಮ ರುಜು ಹಾಕಿದ ಒಂದನ್ನು ವ್ಯಾಪಾರಿಗೆ ನೀಡಬೇಕು. ಮತ್ತೊಂದನ್ನು ನೀವು ಇಟ್ಟುಕೊಳ್ಳತಕ್ಕದ್ದು.

ಕ್ರೆಡಿಟ್ ಕಾರ್ಡ್ ನ್ನು ವ್ಯಕ್ತಿಗತವಾಗಿ ನೀಡಲಾಗುತ್ತದೆ. ಇಲ್ಲಿ ನಿಮ್ಮ ವಯಸ್ಸು ಮತ್ತು ತಿಂಗಳ ಆದಾಯವನ್ನು ಲೆಕ್ಕ ಹಾಕಿ ಖರೀದಿ ಲಿಮಿಟ್ ತಿಳಿಸಲಾಗುತ್ತದೆ. ಕ್ರೆಡಿಟ್ ಕಾರ್ಡ್ ಆಧಾರದಲ್ಲಿ ಶಾಪಿಂಗ್ ಮಾಡುವ ಮುನ್ನ ಬಡ್ಡಿ ಯಾವ ಪ್ರಮಾಣದಲ್ಲಿ ತಗಲುತ್ತದೆ ಎಂಬುದರ ಮೇಲೆಯೂ ಗಮನ ಹರಿಸಬೇಕಾದ್ದು ಅಗತ್ಯ. ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಮೇಲೆ ಶೇ. 3.35 - 3.49 ರವರೆಗೆ ಬಡ್ಡಿ ವಿಧಿಸಲಾಗುತ್ತದೆ. ಬ್ಯಾಂಕ್ ನಿಂದ ಬ್ಯಾಂಕ್ ಗೆ ಇದು ಬದಲಾಗಬಹುದು.

ಕ್ರೆಡಿಟ್ ಕಾರ್ಡ್ ಕೊಳ್ಳುವ ಮುನ್ನ ಈ 9 ಅಂಶಗಳು ತಲೆಯಲ್ಲಿರಲಿ
* ಕ್ರೆಡಿಟ್ ಕಾರ್ಡ್ ನ್ನು ನಗದು ಹಣದ ಬದಲಾಗಿ ಬಳಸಬಹುದು
* ಪ್ರತಿಯೊಂದು ಕ್ರೆಡಿಟ್ ಕಾರ್ಡ್ ಲಿಮಿಟ್ ಬೇರೆ ಬೇರೆಯಾಗಿರುತ್ತದೆ. ನಿಮ್ಮ ಆದಾಯವೇ ಲಿಮಿಟ್ ನ ಆಧಾರ
* ನಿಮ್ಮ ಎಲ್ಲ ಖರೀದಿ ವ್ಯವಹಾರಗಳ ದಾಖಲಾತಿಗೆ ಇದು ಉತ್ತಮ ವಿಧಾನ
* ಬ್ಯಾಂಕ್ ಕ್ರೆಡಿಟ್ ಕಾರ್ಡ್ ನೀಡಲು ನಿರ್ದಿಷ್ಟ ಶುಲ್ಕ ಪಡೆದುಕೊಳ್ಳುತ್ತದೆ.
* ಬ್ಯಾಂಕ್ ನೀಡುವ ಆಫರ್ ಗಳ ಅನ್ವಯ ಗ್ರೇಸ್ ಅವಧಿಯನ್ನು ಬಳಸಿಕೊಳ್ಳಬಹುದು
* ಹಣ ಮರುಪಾವತಿ ವಿಳಂಬವಾದರೆ ಅದು ಮುಂದಿನ ಕಂತಿಗೆ ಹೋಗುತ್ತದೆ. ಅಲ್ಲದೇ ಹೆಚ್ಚಿನ ಬಡ್ಡಿಯನ್ನು ತೆರಬೇಕಾಗುತ್ತದೆ.
* ಕೆಲವೊಂದು ಸಂದರ್ಭ ಹೆಚ್ಚಿನ ಶುಲ್ಕ ಭರಿಸಬೇಕಾಗಿಯೂ ಬರಬಹುದು
* ವಿವಿಧ ಆಫರ್ ಗಳು, ಪಾಯಿಂಟ್ಸ್ ಗಳು, ಡಿಸ್ಕೌಂಟ್ ಗಳನ್ನು ಕ್ರೆಡಿಟ್ ಕಾರ್ಡ್ ಒಳಗೊಂಡರುತ್ತದೆ.
* ಸೇವಾ ಶುಲ್ಕವೂ ಇದಕ್ಕೆ ತಗಲುತ್ತದೆ.(ಗುಡ್ ರಿಟರ್ನ್ಸ್.ಇನ್)

English summary

Credit Card: 9 Points to Consider Before Buying

Most people don't buy credit card simply because they are unaware of how it works. Understanding how it works enable to come out of your inhibitions. Here is what happens when you give your card to merchant.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X