For Quick Alerts
ALLOW NOTIFICATIONS  
For Daily Alerts

ನಿಮ್ಮ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

|

ಯಾವುದೇ ಒಂದು ಕಂಪನಿಯಲ್ಲಿ ಕೆಲಸ ಮಾಡುವವರು ಸಾಮಾನ್ಯವಾಗಿ ಕಾರ್ಮಿಕ ಭವಿಷ್ಯ(ಪಿಎಫ್) ನಿಧಿ ಖಾತೆಯನ್ನು ಹೊಂದಿರುತ್ತಾರೆ. ಈ ಬಗ್ಗೆ ಕಾನೂನು ಸಹ ಇದೆ. ಖಾತೆ ಹೊಂದಿರುವವರಿಗೆ ಕಂಪನಿಗಳೂ ಯುನಿವರ್ಸಲ್ ಅಕೌಂಟ್ ನಂಬರ್(ಯುಎಎನ್) ನೀಡಿರುತ್ತವೆ.

ಈ ವರ್ಷದ ಆರಂಭದಲ್ಲಿ ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆ ದೇಶದ ಕಂಪನಿಗಳಿಗೂ ತನ್ನ ಸಿಬ್ಬಂದಿಗೆ ಯುಎಎನ್ ನೀಡುವಂತೆ ಹೇಳಿತ್ತು.
ಅದರಂತೆ ಪ್ರತಿಯೊಂದು ಪಿಎಫ್ ಖಾತೆಗೂ ಯುಎಎನ್ ನಂಬರ್ ನೀಡಿರಲಾಗುತ್ತದೆ. ಇದು ನಿಮ್ಮ ಪಿಎಫ್ ಖಾತೆಯಲ್ಲಿ ಎಷ್ಟು ಹಣವಿದೆ, ಸ್ಥಿತಿಗತಿಯೇನು? ಎಂಬುದನ್ನು ಅರಿತುಕೊಳ್ಳಲು ನೆರವಾಗುತ್ತದೆ. ಅಲ್ಲದೇ ಕಂಪನಿ ಮತ್ತು ಸಿಬ್ಬಂದಿ ನಡುವಿನ ಬಾಂಧವ್ಯ ವೃದ್ಧಿಗೂ ಇದು ಕಾರಣವಾಗುತ್ತದೆ.[ಫಿಕ್ಸೆಡ್ ಡೆಪಾಸಿಟ್ ಹಣ ಯಾರಿಗೆ ಸೇರಬೇಕು?]

ನಿಮ್ಮ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ನಿಮ್ಮ ಪಿಎಫ್ ಅಕೌಂಟ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ನಿಮ್ಮ ಪಿಎಫ್ ಅಕೌಂಟ್ ಬ್ಯಾಲೆನ್ಸ್ ನ್ನು ಸುಲಭವಾಗಿ ಚೆಕ ಮಾಡಬಹುದು. ಮೊದಲಿಗೆ http://uanmembers.epfoservices.in/ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ. ಕಂಪ್ಯೂಟರ್ ಪರದೆಯ ಬಲ ಬದಿಯಲ್ಲಿ ಲಾಗ್ ಇನ್ ಆಯ್ಕೆ ಬರುತ್ತದೆ. ಕೆಳಗಡೆ 'ಆಕ್ಟಿವ್ ಲಾಗ್ ಇನ್' ಆಯ್ಕೆ ಇರುತ್ತದೆ. ಆಕ್ಟಿವ್ ಲಾಗ್ ಇನ್' ಮೇಲೆ ಕ್ಲಿಕ್ ಮಾಡಿ. ಇದಾದ ನಂತರ ಮತ್ತೊಂದು ಚಿಕ್ಕ ವಿಂಡೋ ಎದುರಾಗುತ್ತದೆ. ಎಲ್ಲಾ ನಿಯಮಗಳಿಗೆ ಬದ್ಧನಾಗಿದ್ದೇನೆ ಎಂದಿರುವ ಆಯ್ಕೆಗೆ ಒಕೆ ನೀಡಿದರೆ ಮುಂದಕ್ಕೆ ಸಾಗಬಹುದು.

ಇದಾದ ಮೇಲೆ ಕೆಲವೊಂದು ಸೂಚನೆಗಳನ್ನು ನೀವು ಪಾಲಿಸಬೇಕಾಗುತ್ತದೆ.
1. ಯುನಿವರ್ಸಲ್ ಅಕೌಂಟ್ ನಂಬರ್(ಯುಎಎನ್)ನ್ನು ಸಲ್ಲಿಸಬೇಕು
2. ಮೊಬೈಲ್ ನಂಬರ್ ಸಲ್ಲಿಕೆ ಕಡ್ಡಾಯ
3. ರಾಜ್ಯ ಮತ್ತು ನಿಮ್ಮ ಕಚೇರಿ ಇರುವ ಸ್ಥಳವನ್ನು ಗುರುತು ಮಾಡಿ
4. ವಿಂಡೋ ಹೇಳಿದ ಅಕ್ಷರಗಳನ್ನು ತಪ್ಪದೇ ಟೈಪ್ ಮಾಡಿ

ಇದಾದ ನಂತರ ನಿಮ್ಮ ಮೊಬೈಲ್ ಗೆ ಪಿನ್ ನಂಬರ್ ವೊಂದನ್ನು ಕಳಿಸಲಾಗುತ್ತದೆ. ನಂತರ ಎಲ್ಲಾ ಮಾಹಿತಿಯನ್ನು ನೀಡಿ ನಿಮ್ಮ ಪಿಎಫ್ ಅಕೌಂಟ್ ಮಾಹಿತಿ ಪಡೆದುಕೊಳ್ಳಬಹುದು.

ಇದು ಬಹಳ ಮುಖ್ಯವಾದ ಸಂಗತಿಯಾಗುತ್ತದೆ. ಯುಎಎನ್ ನಂಬರ್ ಮತ್ತು ಪಿಎಫ್ ವಿವರಗಳು ಸಿಬ್ಬಂದಿಯೊಬ್ಬನ ಹಿತ ಕಾಪಾಡುತ್ತವೆ. ನಿಮ್ಮ ಅಕೌಂಟ್ ಬ್ಯಾಲೆನ್ಸ್ ಚೆಕ್ ಮಾಡುವ ಮುನ್ನ ಮೇಲಿನ ಎಲ್ಲ ಮಾಃಇತಿಗಳನ್ನು ಇಟ್ಟುಕೊಳ್ಳಿ. ನಿಮ್ಮ ಸಹೋದ್ಯೋಗಿಗಳಿಗೂ ಈ ಬಗ್ಗೆ ತಿಳಿವಳಿಕೆ ನೀಡಿ.

English summary

How to Check EPF or Provident Fund Balance With UAN Number?

By now most of us subscribing to the Employees Provident Fund must be familiar with the Universal Account Number being allotted by the authorities, through your companies.
Story first published: Friday, November 7, 2014, 17:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X