For Quick Alerts
ALLOW NOTIFICATIONS  
For Daily Alerts

ಆನ್ ಲೈನ್ 'ಫಿಶಿಂಗ್' ಸಮಸ್ಯೆಗೆ ಇಲ್ಲಿದೆ ಪರಿಹಾರ

By Mahesh
|

ಆನ್ ಲೈನ್ ಬ್ಯಾಂಕಿಂಗ್ ಸುರಕ್ಷತೆಯಿಂದ ಕೂಡಿದ್ದರೂ ಪಾಸ್ ವರ್ಡ್ ಫಿಶಿಂಗ್, ಹ್ಯಾಕಿಂಗ್ ಸಮಸ್ಯೆ ಇದ್ದೇ ಇರುತ್ತದೆ. ಅದರೆ, ಕನಿಷ್ಠ ಪ್ರಮಾಣದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿದರೆ ಆನ್ ಲೈನ್ ಬ್ಯಾಂಕಿಂಗ್ ಸರಳ, ಸುಲಭ ವಿಧಾನವಾಗಿದೆ.

 

ಫಿಶಿಂಗ್ ವೆಬ್‌ಸೈಟ್ ಅಥವಾ ಸಂದೇಶವು ಬ್ಯಾಂಕ್, ಸಾಮಾಜಿಕ ನೆಟ್‌ವರ್ಕ್ ಜೊತೆಗೆ ಗೂಗಲ್ ನಂತಹ ಅಸಲಿ ಮೂಲದ್ದು ಎಂಬಂತೆ ಕಂಡುಬಂದು ನಿಮಗೆ ವೈಯಕ್ತಿಕ ಮಾಹಿತಿಯನ್ನು ನೀಡುವಂತೆ ಮರುಳು ಮಾಡಲು ಪ್ರಯತ್ನಿಸುತ್ತವೆ. ಈ ರೀತಿ ನಕಲಿ ಇಮೇಲ್ ಹಾಗೂ ವೆಸ್ ಸೈಟ್ ಮೂಲಕ ನಿಮ್ಮ ಖಾತೆಗೆ ಕನ್ನ ಹಾಕುವ ವಿಧಾನವನ್ನು ಫಿಶಿಂಗ್ ಎಂದು ಕರೆಯಲಾಗುತ್ತದೆ.[ಸುರಕ್ಷಿತ ಆನ್ ಲೈನ್ ಬ್ಯಾಂಕಿಂಗ್ ಗೆ 7 ಸೂತ್ರ ]

 

ಆನ್ ಲೈನ್ ಬ್ಯಾಂಕಿಂಗ್ ನಡೆಸುವ ಗ್ರಾಹಕರು ತಮಗೆ ಅರಿವಿಲ್ಲದಂತೆ ತಮ್ಮ ವೈಯಕ್ತಿಕ ಮಾಹಿತಿ, ಲಾಗ್ ಇನ್ ವಿವರಗಳನ್ನು ಹಂಚಿಕೊಳ್ಳುವಂತೆ ಮಾಡುವ ಬಲೆಯನ್ನು ಫಿಶಿಂಗ್ ಸೈಟ್ ಹೆಣೆಯುತ್ತದೆ. ಫಿಶಿಂಗ್ ಸೈಟ್ ಬಗ್ಗೆ ಮಾಹಿತಿ ಸಿಕ್ಕರೆ ತಕ್ಷಣವೇ (http;//www.antiphishing.org) ವರದಿ ಮಾಡಬಹುದು. ಗೂಗಲ್ ನಲ್ಲಿ ಇದು ಫಿಶಿಂಗ್ ಸೈಟ್ ಎಂದು ಗುರುತಿಸುವ ಹಾಗೂ ವರದಿ ಮಾಡುವ ವಿಧಾನಗಳನ್ನು ನೀಡಿದೆ. ಹೆಚ್ಚಿನ ಮಾಹಿತಿಗೆ ಲಿಂಕ್ ನೋಡಿ

ಆನ್ ಲೈನ್ 'ಫಿಶಿಂಗ್' ಸಮಸ್ಯೆಗೆ ಇಲ್ಲಿದೆ ಪರಿಹಾರ

ಸದ್ಯಕ್ಕೆ ಆನ್ ಲೈನ್ ಬ್ಯಾಂಕಿಂಗ್ ಸುರಕ್ಷತೆ ಬಗ್ಗೆ ಸುದ್ದಿ ಓದಿದ ನಂತರ ಈ ಕೆಳಗಿನ ಕೆಲವು ವಿಧಾನಗಳನ್ನು ಅನುಸರಿಸುವುದು ಒಳ್ಳೆಯದು. ಎಲ್ಲಾ ಸುರಕ್ಷಿತ ನಿಯಮ ಅನುಸರಿಸಿದರೂ ಲಾಗ್ ಇನ್ ಐಡಿ, ಪಾಸ್ ವರ್ಡ್ ಸೇವ್ ಆಗುತ್ತಿದೆ ಎಂಬ ಸಮಸ್ಯೆಗೆ ಇಲ್ಲಿದೆ ಪರಿಹಾರ

ಸುರಕ್ಷಿತ ಆನ್ ಲೈನ್ ಬ್ಯಾಂಕಿಂಗ್ ಗೆ ಸರಳ ವಿಧಾನಗಳ ಸಪ್ತ ಸೂತ್ರ ಬಳಕೆ ಮಾಡಿದರೂ ಕೂಡಾ ತೊಂದರೆ ಅನುಭವಿಸಿದವರಿದ್ದಾರೆ. ಹೀಗಾಗಿ ಇನ್ನಷ್ಟು ಸುರಕ್ಷಿತ ಸಲಹೆಗಳು, ಫಿಶಿಂಗ್, ಆಟೋ ಕಂಪ್ಲೀಟ್ ಸೌಲಭ್ಯ ಸಮಸ್ಯೆ ನಿವಾರಣೆ ಸುಲಭ ಸೂಚನೆಗಳು ಇಲ್ಲಿವೆ:

Auto Complete ಸೌಲಭ್ಯ ತೆಗೆಯುವ ವಿಧಾನ:
* ಇಂಟರ್ನೆಟ್ ಎಕ್ಸ್ ಪ್ಲೋರರ್ ಓಪನ್ ಮಾಡಿ, Tools>> "Internet Options" >"Content" ಗೆ ಹೋಗಿ
* Personal Information ಅಡಿಯಲ್ಲಿ Auto Complete ಕ್ಲಿಕ್ ಮಾಡಿ
* User names and passwords on forms ಅನ್ ಚೆಕ್ ಮಾಡಿ ಹಾಗೂ Clear Passwords ಕ್ಲಿಕ್ ಮಾಡಿ
* ಎಲ್ಲಾ ಬದಲಾವಣೆಗಳಿಗೆ ಓಕೆ ಒತ್ತಿ.

ಇದೇ ವಿಧಾನದಲ್ಲಿ ಮೋಝಿಲ್ಲಾ ಫೈರ್ ಫಾಕ್ಸ್ ನಲ್ಲೂ ಕೂಡಾ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಬಹುದಾಗಿದೆ.
* Edit>>Firefox Preferences>>ಮೊದಲ ಮೂರು ಆಯ್ಕೆಗಳನ್ನು ಚೆಕ್ ಮಾಡಿ
* ಪಾಸ್ ವರ್ಡ್ ಸೇವ್ ಮಾಡುವುದನ್ನು ಅನ್ ಚೆಕ್ ಮಾಡಿ
* Privacy ಅಡಿಯಲ್ಲಿ History ಕ್ಲಿಯರ್ ಮಾಡಿ

English summary

Online banking: Tips to save you from phishing

Many people are scared to use internet based financial transaction as they are scared of hacking and phishing. Phishing is an attempt by fraudsters to 'fish' for your banking details.
Story first published: Friday, November 28, 2014, 14:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X