For Quick Alerts
ALLOW NOTIFICATIONS  
For Daily Alerts

ಆನುವಂಶಿಕ ಆಸ್ತಿ ಪಡೆವ ಮುನ್ನ ಏಳು ಹೆಜ್ಜೆಗಳು

|

ಆನುವಂಶಿಕವಾಗಿ ಪಡೆದ ಆಸ್ತಿಗಳನ್ನು ಹಂಚಿಕೆ ಮಾಡುವಾಗ ಅಥವಾ ಹಣವನ್ನು ಹೂಡಿಕೆ ಮಾಡುವಾಗ ಹಲವಾರು ಅಂಶಗಳನ್ನು ಗಮನಿಸಬೇಕಾಗುತ್ತದೆ. ನಗದು, ಫಿಕ್ಸೆಡ್ ಡಿಫಾಸಿಟ್, ಪಿಪಿಎಫ್ ಮುಂತಾದವುಗಳಲ್ಲಿಯೂ ಹೂಡಿಕೆ ಮಾಡಬಹುದು.

ಹಣದ ಸರಿಯಾದ ಉಪಯೋಗ ಅಥವಾ ಬಳಕೆ ನಿಮಗೆ ಉತ್ತಮ ಭವಿಷ್ಯ ಕಟ್ಟಿಕೊಡಬಹುದು. ನಿಮ್ಮ ಗುರಿ ಸಾಧನೆಗೂ ನೆರವಾಗಬಹುದು. ನೆನಪಿನಲ್ಲಿ ಸದಾ ಉಳಿಯುವಂಥ ಕೆಲಸವೂ ಸಾಧ್ಯವಾಗಬಹುದು. ಎಲ್ಲದಕ್ಕಿಂತ ಮುಖ್ಯವಾಗಿ ಇಲ್ಲಿ ನಿಮ್ಮ ಆಯ್ಕೆ ಸ್ವಾತಂತ್ರ್ಯದ ಸದುಪಯೋಗ ಮಾಡಿಕೊಳ್ಳಬೇಕಾಗುತ್ತದೆ. ಯಾವ ಯೋಜನೆಯ ಮೇಲೆ ಎಷ್ಟು ಹಣ ಹೂಡಿಕೆ ಮಾಡಬೇಕು ಎಂಬ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.[ಜನಧನ ಯೋಜನೆಯಡಿ ಯಾಕೆ ಖಾತೆ ತೆರೆಯಬೇಕು?]

ಆನುವಂಶಿಕ ಆಸ್ತಿ ಪಡೆವ ಮುನ್ನ ಏಳು ಹೆಜ್ಜೆಗಳು

ದಿಢೀರ್ ಎಂದು ತೀರ್ಮಾನ ತೆಗೆದುಕೊಳ್ಳಲು ಹೋಗಬೇಡಿ, ಬೇಕಾದಷ್ಟು ಸಮಯ ತೆಗೆದುಕೊಳ್ಳಿ, ನಿಮ್ಮ ಸ್ನೇಹಿತರಿಂದ ಈ ಬಗ್ಗೆ ಸಲಹೆ ಬೇಕಾದರೆ ಪಡೆದುಕೊಳ್ಳಿ. ಒಟ್ಟಿನಲ್ಲಿ ಹಲವಾರು ಸಾರಿ ಚಿಂತನೆ ನಡೆಸಿ ಹೆಜ್ಜೆ ಮುಂದಿಡುವುದು ಉತ್ತಮ.

1) ಸಾಲ ಮರುಪಾವತಿ ಮಾಡಿ
ನೀವು ಸಾಲ ಮರುಪಾವತಿಗೆ ಮೊದಲ ಪ್ರಾತಿನಿಧ್ಯ ನೀಡಬೇಕು. ಕಾರು ಸಾಲ, ಪರ್ಸ್ ನಲ್ ಲೋನ್ ನಂಥ ಹೆಚ್ಚಿನ ಬಡ್ಡಿ ದರದ ಸಾಲಗಳಿದ್ದರೆ ಮೊದಲು ಮರುಪಾವತಿ ಮಾಡುವುದು ಉತ್ತಮ. ಗೃಹ ಸಾಲವಿದ್ದರೆ ಕೊಂಚ ಯೋಚಿಸುವುದು ಒಳಿತು ಯಾಕೆಂದರೆ ಇವು ತೆರಿಗೆ ವಿನಾಯಿತಿ ನೀಡುತ್ತವೆ ಎಂಬುದನ್ನು ಅರಿತಿರಬೇಕು.

2) ತುರ್ತು ಪರಿಹಾರ ನಿಧಿ ಸಿದ್ಧಮಾಡಿಟ್ಟುಕೊಳ್ಳಿ
ನಿಮ್ಮ ಬಳಿ ಯಾವುದೇ ತುರ್ತು ನಿಧಿ ಇಲ್ಲ ಎಂದಾದರೇ, ಒಂದು ನಿರ್ದಿಷ್ಟ ಮೊತ್ತವನ್ನು ಎತ್ತಿಟ್ಟುಕೊಳ್ಳುವುದು ಉತ್ತಮ.[ಸುರಕ್ಷಿತ ಆನ್ ಲೈನ್ ಬ್ಯಾಂಕಿಂಗ್ ಗೆ 7 ಸೂತ್ರ]

3) ಸೆವಿಂಗ್ಸ್ ಗೆ ಆದ್ಯತೆ ನೀಡಿ
ರಿಸ್ಕ ತೆಗೆದುಕೊಳ್ಳಲು ಸಿದ್ಧರಿದ್ದರೆ ಸ್ವಲ್ಪ ಮೊತ್ತವನ್ನು ರಿಟರ್ನ್ಸ ಬರುವ ಕಡೆ ಹೂಡಿಕೆ ಮಾಡಬಹುದು. ಪ್ರತಿದಿನದ ಉಳಿತಾಯವೂ ಉತ್ತಮವಾಗಿದ್ದು ವಯಸ್ಸಾದ ಮೇಲೆ ನಮ್ಮ ನೆರವಿಗೆ ಬರುತ್ತದೆ.

4) ಆಸ್ತಿ ಅಥವಾ ಹಣದ ಹಂಚಿಕೆ
ಆಸ್ತಿ ಅಥವಾ ಹಣದ ಹಂಚಿಕೆದಹ ಅಷ್ಟೇ ಮುಖ್ಯವಾಗುತ್ತದೆ. ಯಾವುದೇ ಒಂದು ಯೋಜನೆಯ ಮೇಲೆ ಎಲ್ಲಾ ಹಣ ಹೂಡಿಕೆ ಮಾಡುವ ಬದಲು ಸಮಾನ ಹಂಚಿಕೆ ಮಾಡಿಕೊಳ್ಳುವುದು ಉತ್ತಮ.

5) ಆಸ್ತಿ ಖರೀದಿಸಿ
ಆನುವಂಶಿಕವಾಗಿ ಸಿಕ್ಕ ಹಣದ ಮೊತ್ತ ಬಹಳಷ್ಟಿದ್ದರೆ ಉತ್ತಮ ಆಸ್ತಿ ಖರೀದಿಸಿದರೂ ತಪ್ಪಿಲ್ಲ.

6) ಉನ್ನತ ಶಿಕ್ಷಣ
ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವಲ್ಲಿ ಹಣ ತೊಡಗಿಸಿದರೂ ನಷ್ಟವೇನೂ ಆಗುವುದಿಲ್ಲ.

7) ಬ್ಯಾಂಕ್ ಖಾತೆಯಲ್ಲೇ ಹಣ ಇಡಿ
ನಿಮ್ಮ ಎಲ್ಲ ಹಣವನ್ನು ಬ್ಯಾಂಕ್ ಖಾತೆಯಲ್ಲಿಡುವುದೇ ಒಳ್ಳೆಯದು. ಸುರಕ್ಷತೆ ಮತ್ತು ಭದ್ರತೆಗೆ ಯಾವ ಆತಂಕ ಇರುವುದಿಲ್ಲ.

ಕೊನೆ ಮಾತು: ಭಾರತದಲ್ಲಿ ಅನುವಂಶಿಕವಾಗಿ ಪಡೆದುಕೊಳ್ಳುವ ಆಸ್ತಿಗೆ ಯಾವುದೇ ತೆರಿಗೆ ಇರುವುದಿಲ್ಲ. ನಿಮ್ಮ ಹಣಕಾಸಿನ ಸ್ಥಿತಿಗತಿಗೆ ಅನುಗುಣವಾಗಿ ಹಣ ಹೂಡಿಕೆ ಮಾಡುವುದು ಒಳ್ಳೆಯದು. (ಗುಡ್ ರಿಟರ್ನ್ಸ್. ಇನ್)

English summary

7 Things to do When You Receive an Inheritance Amount

Managing and investing inherited liquid assets like cash, fixed deposits, PPF amounts etc., could be challenging for many as they have to deal with emotional loss and manage inherited amount.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X