For Quick Alerts
ALLOW NOTIFICATIONS  
For Daily Alerts

ಮೊಬೈಲ್ ಬ್ಯಾಂಕಿಂಗ್ ಲಾಭನಷ್ಟಗಳೇನು?

|

ಮೊಬೈಲ್ ಬ್ಯಾಂಕಿಂಗ್ ಸೇವೆಗೆ ಉತ್ತೇಜನ ನೀಡುವಂತೆ ರಿಸರ್ವ್ ಬ್ಯಾಂಕ್ ಎಲ್ಲಾ ಬ್ಯಾಂಕ್ ಗಳಿಗೆ ಮೊದಲಿನಿಂದಲೂ ನಿರ್ದೇಶನ ನೀಡುತ್ತಲೇ ಬಂದಿದೆ. ಮುಂಬರುವ ದಿನದಲ್ಲಿ ಬಹುತೇಕ ಜನರು ಸಂಪೂರ್ಣವಾಗಿ ಮೊಬೈಲ್ ಬ್ಯಾಂಕಿಂಗ್ ಸೇವೆಗೆ ಅಂಟಿಕೊಳ್ಳಬಹುದು ಎಂದು ಸಮೀಕ್ಷೆಗಳು ಹೇಳುತ್ತಿವೆ.

 

ಅಂತರ್ಜಾಲದ ಯುಗದಲ್ಲಿ ಮೊಬೈಲ್ ಬ್ಯಾಂಕಿಂಗ್ ವ್ಯವಹಾರದ ಮೂಲ ತತ್ವವಾಗಿ ಬದಲಾಗಿದೆ. ಆದರೂ ಕೆಲ ಜನರು ಮೊಬೈಲ್ ಬ್ಯಾಂಕಿಂಗ್ ನಿಂದ ದೂರ ಉಳಿದಿದ್ದಾರೆ. ಇದೊಂದು ರಿಸ್ಕ್ ಎಂದು ತಿಳಿದುಕೊಂಡಿದ್ದಾರೆ. ಇಲ್ಲಿ ಮೊಬೈಲ್ ಬ್ಯಾಂಕಿಂಗ್ ಸಂದರ್ಭ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು, ಪ್ರಯೋಜನಗಳೂ ಮತ್ತು ಅಪಾಯಗಳನ್ನು ಪಟ್ಟಿ ಮಾಡಿ ನೀಡಲಾಗಿದೆ.[ಕೈಗೆ ಸಿಗದ ಚೆಕ್ ನ ಮೊತ್ತ ವಾಪಸ್ ಪಡೆಯೋದು ಹೇಗೆ?]

 
ಮೊಬೈಲ್ ಬ್ಯಾಂಕಿಂಗ್ ಲಾಭನಷ್ಟಗಳೇನು?

ಮೊಬೈಲ್ ಬ್ಯಾಂಕಿಂಗ್ ಲಾಭಗಳು
ಎನಿ ಟೈಮ್ ಬ್ಯಾಂಕಿಂಗ್: ಯಾವ ಜಾಗದಿಂದ, ಯಾವ ಸಮಯದಲ್ಲಾದರೂ ಬ್ಯಾಂಕಿಂಗ್ ಮಾಡಲು ಸಾಧ್ಯವಾಗುತ್ತದೆ, ಬ್ಯಾಂಕಿಗೆ ತೆರಳುವ ತಾಪತ್ರಯವಿಲ್ಲ ಜತೆಗೆ ಅಂತರ್ಜಾಲ ಸಂಪರ್ಕಕ್ಕೆ ಹುಡುಕಾಟ ನಡೆಸಬೇಕಾಗಿಲ್ಲ. ಬಸ್, ಆಟೊ ಎಲ್ಲಿ ಬೇಕಾದರೂ ಕುಳಿತು ಹಣಕಾಸು ವ್ಯವಹಾರ ನಿಭಾಯಿಸಬಹುದು.

ಉಚಿತ ಸೇವೆ: ಮೊಬೈಲ್ ಬ್ಯಾಂಕಿಂಗ್ ಉಚಿತ ಸೇವೆಯಾಗಿದ್ದು ಯಾವುದೇ ಶುಲ್ಕ ಒಳಗೊಂಡಿರುವುದಿಲ್ಲ. ಅಲ್ಲದೇ ಎಷ್ಟು ಸಾರಿ ಬೇಕಾದರೂ ಅಕೌಂಟ್ ಮಾಹಿತಿ ಪಡೆಯಲು ಯಾವುದೇ ನಿರ್ಬಂಧಗಳಿರುವುದಿಲ್ಲ.

ಅನೇಕ ಬ್ಯಾಂಕ್ ಗಳು ಬ್ಯಾಲೆನ್ಸ್ ಪರಿಶೀಲನೆ, ಕ್ರೆಡಿಟ್ ಮತ್ತು ಡೆಬಿಟ್ ಅಲರ್ಟ್ಸ್, ಬಿಲ್ ಪೇಮೆಂಟ್ ಅಲರ್ಟ್ಸ್, ಹಣ ರವಾನಿಸಿದ ದಾಖಲೆಗಳು, ಕನಿಷ್ಠ ಬ್ಯಾಲೆನ್ಸ್ ಮಾಹಿತಿ ಎಲ್ಲವನ್ನು ಮೊಬೈಲ್ ಬ್ಯಾಂಕಿಂಗ್ ಮೂಲಕ ನೀಡಿವೆ. ಅಲ್ಲದೇ ನಿಮ್ಮ ಖಾತೆಯಿಂದ ಹಣ ರವಾನಿಸಲು(ಒಂದೇ ಬ್ಯಾಂಕ್ ಖಾತೆಯಾಗಿರಬೇಕು) ಸಾಧ್ಯವಿದೆ.[ಡೆಬಿಟ್ ಕಾರ್ಡ್ ಬಳಸಿ ಆದಾಯ ತೆರಿಗೆ ತುಂಬುವುದು ಹೇಗೆ?]

ಸುರಕ್ಷಿತ ಬ್ಯಾಂಕಿಂಗ್: ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳುವಾಗ ಭದ್ರತಾ ಕ್ರಮ ಅನುಸರಿಸಲಾಗುತ್ತದೆ. ಮಾಹಿತಿಗಳು ನಿಮ್ಮ ಮೊಬೈಲ್ ಮಾತ್ರವಲ್ಲದೇ ಸಿಮ್ ಕಾರ್ಡ್ ನಲ್ಲೂ ಸಂಗ್ರಹವಾಗುತ್ತದೆ.

ಮೊಬೈಲ್ ಬ್ಯಾಂಕಿಂಗ್ ಅಪಾಯಗಳು
ಕೆಲವೊಂದು ಬ್ಯಾಂಕ್ ಗಳು ನಿರ್ದಿಷ್ಟ ಮೊಬೈಲ್ ಗಳಿಗೆ ಮಾತ್ರ ಅನ್ವಯವಾಗುವಂತೆ ಅಪ್ಲಿಕೇಶನ್ ಬಿಡುಗಡೆ ಮಾಡಿರುತ್ತವೆ. ಉದಾಹರಣೆಗೆ ನೀವು ಖಾತೆ ಹೊಂದಿರುವ ಬ್ಯಾಂಕ್ ಅಪ್ಲಿಕೇಶನ್ ನ್ನು ಐಫೋನ್ ಮತ್ತು ಬ್ಲ್ಯಾಕ್ ಬೆರಿ ಗೆ ಹಾಕಿಸಿಕೊಳ್ಳಬಹುದು . ಆದರೆ ನಿಮ್ಮ ಬಳಿ ಬೇರೆ ಕಂಪನಿಯ ಮೊಬೈಲ್ ಇದ್ದರೆ ಇದು ಉಪಯೋಗಕ್ಕೆ ಬರುವುದಿಲ್ಲ.

ಇಂಟರ್ ನೆಟ್ ಬ್ಯಾಂಕಿಂಗ್ ಗಿಂತಲೂ ಮೊಬೈಲ್ ಬ್ಯಾಂಕಿಂಗ್ ಸುರಕ್ಷಿತ ಎಂದು ತಜ್ಞರು ಹೇಳುತ್ತಾರೆ. ಆದರೂ ಕೆಲವೊಂದು 'ವೈರಸ್' ಗಳು ದಾಳಿ ಮಾಡುವ ಸಾಧ್ಯತೆ ಇದ್ದೇ ಇದೆ.

ಹ್ಯಾಕರ್ ವೊಬ್ಬ ಕಳಿಸುವ ನಕಲಿ ಮೆಸೇಜ್ ಗೆ ಮರುಳಾಗುವ ಗ್ರಾಹಕ ತನ್ನ ಖಾತೆಯ ಎಲ್ಲಾ ವಿವರಗಳನ್ನು ನೀಡುವ ಸಾಧ್ಯತೆಯಿರುತ್ತದೆ. ಜನರು ಲ್ಯಾಪ್ ಟಾಪ್ ನಲ್ಲಿ ಬಳಸುವಷ್ಟು ಸುರಕ್ಷತಾ ಕ್ರಮಗಳನ್ನು ಮೊಬೈಲ್ ನಲ್ಲಿ ಸಾಮಾನ್ಯವಾಗಿ ಬಳಸಲ್ಲ. ಎಂಟಿ ವೈರಸ್ ಅಪ್ಲಿಕೇಶನ್ ಹಾಕಿಕೊಂಡರೂ ಕೆಲ ಸಂದರ್ಭ ನಿಮ್ಮ ಖಾತೆಯ ಮಾಹಿತಿ ಸೋರಿಕೆಯಾಗುವ ಸಂಭವವಿರುತ್ತದೆ.

ಕೊನೆ ಮಾತು: ಮೊಬೈಲ್ ಬ್ಯಾಂಕಿಂಗ್ ಎಷ್ಟು ಸರಳವೋ ಅದನ್ನು ಉಪಯೋಗಿಸುವಾಗ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಯಾವುದೇ ಸೌಲಭ್ಯದ ಸುರಕ್ಷಿತ ಬಳಕೆ ನಮ್ಮದೇ ಜವಾಬ್ದಾರಿಯಾಗಿರುತ್ತದೆ.(ಗುಡ್ ರಿಟರ್ಸ್ಸ್. ಇನ್)

English summary

Mobile Banking: What are the Advantages and Disadvantages?

The Reserve Bank of India recently informed banks to encourage mobile banking. In coming days we will see more number of people getting addicted to the ease of mobile banking. In the internet era, mobile banking can be considered as boon as well as bane.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X