For Quick Alerts
ALLOW NOTIFICATIONS  
For Daily Alerts

ಪಾನ್ ಕಾರ್ಡ್ ಹೇಗೆ ಪಡೆಯಬೇಕು? ಏತಕ್ಕೆ ಬೇಕು?

|

ಭಾರತದ ನಾಗರಿಕರಾಗಿರಲಿ ಅಥವಾ ಎನ್ ಆರ್ ಐಗೇ ಆಗಿರಲಿ ಆದಾಯ ತೆರಿಗೆ ಪಾವತಿ ಮಾಡಲು ಅಥವಾ ಹಣಕಾಸು ವ್ಯವಹಾರವನ್ನು ಸಮಗ್ರವಾಗಿ ನಿರ್ವಹಿಸಲು ಪಾನ್ ಕಾರ್ಡ್ ಅತ್ಯಗತ್ಯ.

ಇಂದು ಅನೇಕ ಸಂದರ್ಭಗಳಲ್ಲಿ ಪಾನ್ ಕಾರ್ಡ್ ಅಗತ್ಯ ಬೀಳುತ್ತದೆ. ಕೇವಲ ಆದಾಯ ತೆರಿಗೆ ಪಾವತಿ ಒಂದೇ ಅಲ್ಲದೇ ಅನೇಕ ಉಪಯೋಗಗಳನ್ನು ಇದು ಹೊಂದಿದೆ. ಪಾನ್ ಕಾರ್ಡ್ ನ ಮೂಲಭೂತ ಅಂಶಗಳನ್ನು ಅರಿತುಕೊಳ್ಳಬೇಕಾದದ್ದು ಅಗತ್ಯ.

ಪಾನ್ ಕಾರ್ಡ್ ಹೇಗೆ ಪಡೆಯಬೇಕು? ಏತಕ್ಕೆ ಬೇಕು?

ಪಾನ್ ಕಾರ್ಡ್ ಎಂದರೇನು?
ಭಾರತದ ಆದಾಯ ತೆರಿಗೆ ಇಲಾಖೆ ಕೊಡಮಾಡುವ 10 ಅಂಕೆಗಳ ಕಾರ್ಡ್ ಇದಾಗಿದ್ದು ಶಾಶ್ವತ ಖಾತೆ ನಂಬರ್ ಎಂದು ಕರೆಸಿಕೊಳ್ಳುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಬೇರೆ ಬೇರೆ ಅಂಕೆಗಳನ್ನು ನೀಡಲಾಗಿರುತ್ತದೆ.

ಇದೊಂದು ಶಾಶ್ವತ ನಂಬರ್ ಆಗಿದ್ದು ನಿಮ್ಮ ವಿಳಾಸ ಬದಲಾವಣೆ ಯಾವ ಪರಿಣಾಮ ಉಂಟುಮಾಡುವುದಿಲ್ಲ. ಅಲ್ಲದೇ ಇದನ್ನು ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಯುನಿವರ್ಸ್ ಲ್ ಗುರುತಿನ ಚೀಟಿ ತರಹದಲ್ಲಿ ಕೆಲಸ ಮಾಡುತ್ತದೆ. ಆದಾಯ ತೆರಿಗೆ, ಹಣಕಾಸು ವ್ಯವಹಾರಗಳು ಈ ಖಾತೆ ಆಧಾರದಲ್ಲಿಯೇ ನಡೆಯುತ್ತದೆ. ಸಾಲ, ಬಂಡವಾಳ ಹೂಡಿಕೆ, ಆಸ್ತಿ ಖರೀದಿ ಮತ್ತು ಮಾರಾಟ ಎಲ್ಲದಕ್ಕೂ ಪಾನ್ ಕಾರ್ಡ್ ಮುಖ್ಯ ಆಧಾರವಾಗಿರುತ್ತದೆ.

ಸುಳ್ಳು ನಂಬಿಕೆಗಳು
ಪಾನ್ ಕಾರ್ಡ್ ನ್ನು ಕೇವಲ ತೆರಿಗೆ ತುಂಬಲು ಬಳಸಲಾಗುತ್ತದೆ ಎಂದು ಹಲವರು ನಂಬಿಕೊಂಡಿದ್ದಾರೆ. ಇದನ್ನು ಹೊರತಾಗಿಯೂ ಪಾನ್ ಕಾರ್ಡ್ ನ್ನು ಹಲವು ಕಡೆ ಬಳಕೆ ಮಾಡಬಹುದು. ಬ್ಯಾಂಕ್ ಖಾತೆ ತೆರೆಯಲು, ಆಸ್ತಿ ಮತ್ತು ವಾಹನ ಮಾರಾಟ ಮತ್ತು ಖರೀದಿ ವೇಳೆ, ಷೇರು ಮತ್ತು ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡಿಕೆ ಮಾಡುವ ವೇಳೆ ಗುರುತಿನ ಪತ್ರವಾಗಿ ಬಳಕೆ ಮಾಡಬಹುದು.

ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ?
ಯಾರೂ ಬೇಕಾದರೂ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಇಲ್ಲಿ ವಯಸ್ಸು ಮತ್ತು ರಾಷ್ಟ್ರೀಯತೆಯ ಪ್ರಶ್ನೆ ಎದುರಾಗುವುದಿಲ್ಲ. ಮೈನರ್ ಅಥವಾ ಮಗುವಿನ ಹೆಸರಲ್ಲಿ ಪಾನ್ ಕಾರ್ಡ್ ಮಾಡಿಸುವುದಾದರೆ ಪಾಲಕರ ರುಜು ಕಡ್ಡಾಯ.

ಆದಾಯ ತೆರಿಗೆ ಇಲಾಖೆ ತಾಣಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ಕೆಳಗಿನ ತಾಣಗಳು ಸಹ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ನೆರವಾಗುತ್ತವೆ.
o UTI PAN Card Application
o NSDL Application for PAN

ಹೊಸ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕಾದರೆ ಕನಿಷ್ಠ ಎರಡು ಗುರುತಿನ ಚೀಟಿ ಮತ್ತು ವಿಳಾಸ ದೃಢಿಕರಣ ವನ್ನು ನೀಡಬೇಕಾಗುತ್ತದೆ.

ಯಾವ ಗುರುತಿನ ದಾಖಲೆ ನೀಡಬಹುದು?
* ಎಸ್ ಎಸ್ ಎಲ್ ಸಿ ಪ್ರಮಾಣ ಪತ್ರ
* ನೋಂದಾಯಿತ ಶಿಕ್ಷಣ ಸಂಸ್ಥೆಯಿಂದ ಪದವಿ ಪ್ರಮಾಣ ಪತ್ರ
* ಕ್ರೆಡಿಟ್ ಕಾರ್ಡ್
* ಬ್ಯಾಂಕ್ ಸ್ಟೇಟ್ ಮೆಂಟ್
* ರೇಶನ್ ಕಾರ್ಡ್
* ಚಾಲನಾ ಪರವಾನಗಿ
* ಮತದಾನ ಗುರುತಿನ ಚೀಟಿ
* ಪಾಸ್ ಪೋರ್ಟ್

ಪಾನ್ ಕಾರ್ಡ್ ರಿಪ್ರಿಂಟ್
ನಿಮಗೆ ಪಾನ್ ಕಾರ್ಡ್ ಸಂಖ್ಯೆ ನೀಡಲಾಗಿದ್ದರೆ ಮಾತ್ರ ಈ ಸೌಲಭ್ಯ ಬಳಸಿಕೊಳ್ಳಲು ಸಾಧ್ಯವಿದೆ. ಎನ್ ಎಸ್ ಡಿಎಲ್ ವೆಬ್ ಸೈಟ್ ಮೂಲಕ ಇದನ್ನು ಪರಿಶೀಲಿಸಬಹುದು.

ಪಾನ್ ಕಾರ್ಡ್ ನ ಗುಣಲಕ್ಷಣಗಳೇನು?
ಪೊನೆಟಿಕ್ಸ್ ಸೌಂಡ್ ಆಧಾರದಲ್ಲಿ ಹೊಸ ಪಾನ್ ಕಾರ್ಡ್ ಗಳಮನ್ನು ನೀಡಲಾಗುತ್ತಿದೆ ಮತ್ತು ಅನೇಕ ಅಂಶಗಳ ದಾಖಲೆ ಇರುತ್ತದೆ.
ಪೂರ್ಣ ಹೆಸರು, ಹುಟ್ಟಿದ ದಿನಾಂಕ, ಲಿಂಗ ಮತ್ತು ತಂದೆಯ ಹೆಸರನ್ನು ಒಳಗೊಂಡಿರುತ್ತದೆ. ಕಾರ್ಡ್ ನ ಬಲಬದಿಯಲ್ಲಿ ಪಾನ್ ಕಾರ್ಡ್ ನೀಡಿರುವ ದಿನಾಂಕವನ್ನು ತಿಳಿಸಲಾಗಿರುತ್ತದೆ.

10 ಇಂಗ್ಲಿಷ್ ಅಕ್ಷರಗಳು ಏನನ್ನು ಸೂಚಿಸುತ್ತವೆ?
1. ಮೊದಲ ಇಂಗ್ಲಿಷ್ 5 ಅಕ್ಷರಗಳನ್ನು ಕೋರ್ ಗುಂಪು ಎಂದು ಕರೆಯಬಹುದು.
2. ಕಾರ್ಡ್ ನ ಮೊದಲ ಮೂರು ಅಕ್ಷರಗಳು A ದಿಂದ Z ವರೆಗಿನ ಅಕ್ಷರಗಳಲ್ಲಿ ಯಾವುದು ಇರಬಹುದು.
3. ಕಾರ್ಡ್ ನ ನಾಲ್ಕನೇ ಅಕ್ಷರ ವಿವಿಧ ಸಂಗತಿಯನ್ನು ಸೂಚನೆ ಮಾಡುತ್ತದೆ.

C - ಕಂಪನಿ
P - ವ್ಯಕ್ತಿ
H - ಹಿಂದು ಅವಿಭಕ್ತ ಕುಟುಂಬ
F - ವಿಭಾಗ
A - ವ್ಯಕ್ತಿಗಳ ಗುಂಪು
T - ಟ್ರಸ್ಟ್
B - ವ್ಯಕ್ತಿಯ ಗುರುತು
L - ಸ್ಥಳೀಯ ಸಂಸ್ಥೆ
J - ಕಾನೂನು ಪ್ರಕಾರ ವ್ಯಕ್ತಿ ಎಂದು ಪರಿಗಣಿಸ್ಪಡುವುದು.
G - ಸರ್ಕಾರ

AAACA- ಕಂಪನಿ, AAAHA-ಹಿಂದು ಅವಿಭಕ್ತ ಕುಟುಂಬ
4. ಐದನೇ ಅಕ್ಷರವು ಒಂದನೇ ಅಕ್ಷರದ ತದ್ರೂಪಾಗಿರುತ್ತದೆ.

ಕೊನೆ ಮಾತು: ಆಧುನಿಕ ಸಮಾಜದ ರೀತಿ ನೀತಿಗಳಿಗೆ ಅನುಸಾರವಾಗಿ ನಡೆದುಕೊಳ್ಳಬೇಕಾದರೆ ಪಾನ್ ಕಾರ್ಡ್ ಅತ್ಯಗತ್ಯ. ನಿಮ್ಮ ಬಳಿ ಪಾನ್ ಕಾರ್ಡ್ ಇಲ್ಲದಿದ್ದರೆ ಕೂಡಲೆ ಅರ್ಜಿ ಹಾಕುವುದು ಉತ್ತಮ. ಸ್ವಲ್ಪ ಸಮಯವನ್ನು ಮೀಸಲಿಟ್ಟು ಕಾರ್ಡ್ ಮಾಡಿಕೊಂಡರೆ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ. (ಗುಡ್ ರಿಟರ್ನ್ಸ್.ಇನ್)

Read in English: Understand Your PAN Card
English summary

Understand Your PAN Card

Whether you are an Indian citizen or an NRI, if you are filing taxes or have financial transactions in India you will almost always need a PAN card. A Permanent Account Number (PAN) is a ten-digit alphanumeric number, issued in the form of a laminated card, by the Income Tax Department of India.
Story first published: Friday, February 6, 2015, 15:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X