For Quick Alerts
ALLOW NOTIFICATIONS  
For Daily Alerts

ಹಣ ಬಾರದಿದ್ದರೆ, ಕಾರ್ಡ್ ಸಿಕ್ಕಿಕೊಂಡರೆ ಯಾರು ಹೊಣೆ?

|

ನಮ್ಮ ತಪ್ಪಿದ್ದು, ತಪ್ಪಿಲ್ಲದೆಯೂ ಕೆಲವೊಮ್ಮೆ ಬ್ಯಾಂಕಿಂಗ್ ಗೆ ಸಂಬಂಧಿಸಿದ ಶುಲ್ಕ ಪಾವತಿ ಮಾಡುವ ಅನಿವಾರ್ಯಕ್ಕೆ ಸಿಕ್ಕಿಹಾಕಿಕೊಳ್ಳುತ್ತೇವೆ. ಎಟಿಎಮ್ ಯಂತ್ರವೊಂದರಲ್ಲಿ ಸಾಕಷ್ಟು ಹಣ ಇಲ್ಲದಿರುವ ಸಂದರ್ಭ ಇಂಥ ಸಮಸ್ಯೆ ಎದುರಾಗಬಹುದು.

ನೀವು ಬೇರೆ ಬ್ಯಾಂಕ್ ನ ಎಟಿಎಮ್ ಯಂತ್ರವೊಂದರಲ್ಲಿ ಹಣ ಡ್ರಾ ಮಾಡಲು ಬಯಸಿರುತ್ತೀರಿ. ಆದರೆ ನೀವು ನೋಂದಣಿ ಮಾಡಿದಷ್ಟು ಹಣ ಅಲ್ಲಿರುವುದಿಲ್ಲ. ಆದರೆ ನೀವು ಟ್ರಾನ್ಸಾಕ್ಷನ್ ಶುಲ್ಕವನ್ನು ಅನಿವಾರ್ಯವಾಗಿ ಪಾವತಿ ಮಾಡಬೇಕಾಗುತ್ತದೆ. ಅಥವಾ ತನ್ನಿಂದ ತಾನೆ ಶುಲ್ಕ ಪಾವತಿ ಮಾಡಿಕೊಂಡಿರಲಾಗುತ್ತದೆ. ನಿಮಗೆ ಅಗತ್ಯ ಹಣ ಕೈ ಸೇರಿರುವುದಿಲ್ಲ ಆದರೂ ಶುಲ್ಕ ನೀಡಬೇಕಾಗುತ್ತದೆ. ಇದಕ್ಕೆ ಯಾರು ಹೊಣೆ? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ.[ಡೆಬಿಟ್ ಕಾರ್ಡ್ ಬಳಸಿ ಆದಾಯ ತೆರಿಗೆ ತುಂಬುವುದು ಹೇಗೆ?]

ಹಣ ಬಾರದಿದ್ದರೆ, ಕಾರ್ಡ್ ಸಿಕ್ಕಿಕೊಂಡರೆ ಯಾರು ಹೊಣೆ?

ಕೇವಲ 20 ಅಥವಾ 30 ರೂ. ಶುಲ್ಕ ಪಾವತಿಯಾಗಿರುವುದಕ್ಕೆ ಬ್ಯಾಂಕ್ ನೊಂದಿಗೆ ನೀವು ನಿರಂತರ ಹೋರಾಟ ನಡೆಸಬೇಕಾಗುತ್ತದೆ. ಒಂದು ವೇಳೆ ಈ ಹಣವನ್ನು ಮರಳಿ ಪಡೆಯಲು ಇನ್ನು ಹೆಚ್ಚಿನ ಹಣ ವ್ಯಯಿಸಿದರೂ ಆಶ್ಚರ್ಯವಿಲ್ಲ! ಇದೊಂದು ವಿಳಂಬದ ಪ್ರಕ್ರಿಯೆ ಎಂಬುದನ್ನು ಮರೆಯಬಾರದು.

ಕೆಲವೊಮ್ಮೆ ತಾಂತ್ರಿಕ ದೋಷಗಳು ನಿಮ್ಮ ಎಟಿಎಂ ಕಾರ್ಡ್ ಗೆ ಮಾರಕವಾಗಿ ಪರಿಣಮಿಸಬಹುದು. ಹಣ ವಿಥ್ ಡ್ರಾ ಮಾಡಿದ ನಂತರ ಕಾರ್ಡ್ ಒಳಗಡೆಯೇ ಸಿಕ್ಕಿಹಾಕಿಕೊಳ್ಳಬಹುದು. ಇಲ್ಲಿ ಸಹ ನಿಮ್ಮಿಂದ ಯಾವುದೇ ತಪ್ಪಾಗಿರುವುದಿಲ್ಲ.[ಭಾರತದಲ್ಲಿ ಇ-ಇನ್ಶೂರೆನ್ಸ್ ಖಾತೆ ತೆರೆಯುವುದು ಹೇಗೆ?]

ಕಾರ್ಡ್ ಸಿಕ್ಕಿಹಾಕಿಕೊಂಡರೆ ಸಾಮಾನ್ಯವಾಗಿ ಎಲ್ಲ ಬ್ಯಾಂಕ್ ಗಳು ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಸುವಂತೆ ತಿಳಿಸುತ್ತವೆ. ಅಲ್ಲದೇ ಎಟಿಎಂ ಕಾರ್ಡ್ ಗೆ ಸಂಬಂಧಿಸಿದ ಶುಲ್ಕವನ್ನು ನಿಮ್ಮಿಂದಲೇ ಪಡೆದುಕೊಳ್ಳುತ್ತವೆ.

ನಮ್ಮದಲ್ಲದ ತಪ್ಪಿಗೂ ಶುಲ್ಕ ನೀಡಬೇಕಾಗಿರುವ ಎರಡು ಸಂದರ್ಭಗಳನ್ನಷ್ಟೇ ಇಲ್ಲಿ ವಿವರಿಸಲಾಗಿದೆ. ಬ್ಯಾಂಕ್ ಖಾತೆ ಹೊಂದಿರುವವರು ಅನೇಕ ಪರಿಸ್ಥಿತಿಗಳಲ್ಲಿ ಇಂಥ ಶುಲ್ಕ ಪಾವತಿ ಮಾಡುವ ಗೊಂದಲಕ್ಕೆ ಸಿಕ್ಕಿಬೀಳುತ್ತಾರೆ.

ಇಲ್ಲಿ ತಪ್ಪು ಬ್ಯಾಂಕ್ ನವರದ್ದೇ ಅಥವಾ ಎಟಿಎಂ ಮಷಿನ್ ನಿಂದ ಆಗಿದ್ದೇ ಆದರೂ ಗ್ರಾಹಕರು ಹಣ ತೆರಬೇಕಾಗುತ್ತದೆ. ಇಂಥ ಲೋಪಗಳನ್ನು ತಿದ್ದಲು ಆರ್ ಬಿಐ ಸೂಕ್ತ ನಿರ್ದೇಶನವನ್ನು ಎಲ್ಲ ಬ್ಯಾಂಕ್ ಗಳಿಗೆ ನೀಡಬೇಕಾಗುತ್ತದೆ. ಆಗ ಮಾತ್ರ ಸಮಸ್ಯೆಗೆ ಪರಿಹಾರ ಸಾಧ್ಯ. (ಗುಡ್ ರಿಟರ್ನ್ಸ್. ಇನ್)

English summary

Why Do Banks Charge for New ATM Card?

There are many banking charges that we pay without any reason and fault of ours. Take the case of insufficient money in an ATM machine. When you use another bank's ATM and there are insufficient notes in that machine it would decline your transaction.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X