For Quick Alerts
ALLOW NOTIFICATIONS  
For Daily Alerts

ನಾಲ್ಕು ಅತ್ಯುತ್ತಮ ಚಿನ್ನ ಉಳಿತಾಯ ಯೋಜನೆಗಳು

|

ಚಿನ್ನದ ಯೋಜನೆ ಅಥವಾ ಚಿನ್ನದ ಮೇಲೆ ಹಣ ಹೂಡುವ ಮುನ್ನ ನೂರಾರು ಬಾರಿ ಯೋಚಿಸಬೇಕಾಗುತ್ತದೆ. ನಮ್ಮ ಅಗತ್ಯಗಳು ಮತ್ತು ಎಲ್ಲ ಎಚ್ಚರಿಕೆ ಸಂದೇಶಗಳನ್ನು ಮನಗಂಡು ಇಂಥ ಯೋಜನೆಯಲ್ಲಿ ಹಣ ಹೂಡಬೇಕಾಗುತ್ತದೆ.

 

ಒಂದು ವೇಳೆ ಆಭರಣ ಅಥವಾ ಚಿನ್ನದ ಮೇಲೆ ಹೂಡಿಕೆ ಮಾಡಿ ಎಡವಿಬಿದ್ದರೆ ಅದು ನಮ್ಮ ತಪ್ಪಾಗಿರುತ್ತದೆಯೇ ವಿನಃ ಆಭರಣ ಅಂಗಡಿ ಮಾಲೀಕನದ್ದಲ್ಲ.
ಹಾಗಾದರೆ ಭಾರತದಲ್ಲಿ ಸದ್ಯ ಚಾಲ್ತಿಯಲ್ಲಿರುವ ಕೆಲ ಅತ್ಯುತ್ತಮ ಚಿನ್ನದ ಯೋಜನೆಗಳನ್ನು ನೋಡೋಣ...[ಚಿನ್ನದ ದರ]

 

ನಾಲ್ಕು ಅತ್ಯುತ್ತಮ ಚಿನ್ನ ಉಳಿತಾಯ ಯೋಜನೆಗಳು


* ತನಿಷ್ಕ್ ಗೋಲ್ಡನ್ ಹಾರ್ವೆಸ್ಟ್

ಈ ಯೋಜನೆ ಅನ್ವಯ ನಿಗದಿತ ಮೊತ್ತದ ಹಣವನ್ನು ನೀವು 10 ತಿಂಗಳ ಕಾಲ ನೀವು ತನಿಷ್ಕ್ ಗೆ ಕಟ್ಟಬೇಕಾಗುತ್ತದೆ. ಅವಧಿ ಮುಗಿದ ನಂತರ ಅಂದರೆ 10 ತಿಂಗಳ ನಂತರ ನಿಮಗೆ ಮಳಿಗೆ ವಿಶೇಷ ರಿಯಾಯಿತಿಯನ್ನು ಕೊಡಮಾಡುತ್ತದೆ. ನಿಮ್ಮ ಡಿಪಾಸಿಟ್ ಗೆ ಹೋಲಿಸಿದಲ್ಲಿ ಇದು ಶೆ. 55 ರಿಂದ ಶೇ 75ರ ವರೆಗೂ ಆಗಬಹುದು.

ಈ ಯೋಜನೆಯ ಕನಿಷ್ಠ ಕಂತು 2 ಸಾವಿರ ರೂ. ಆಗಿರುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಇನ್ನು ಹೆಚ್ಚಿನ ಹಣವನ್ನು ತುಂಬಬೇಕಾಗಿ ಬರುವುದು.[ಅನುಮಾನವಿಲ್ಲ..ನಿಮ್ಮ ಆಭರಣ ಖರೀದಿ ಇಲ್ಲೇ ಕೊನೆ]

* ಜಿಆರ್ ಟಿ-ಗೋಲ್ಡನ್ ಇಲೆವೆಲ್ ಪ್ಲಾನ್
ಇದು ನಿಮ್ಮ ಆಯ್ಕೆಗೆ ಬಿಟ್ಟ ಯೋಜನೆಯಾಗಿರುತ್ತದೆ. ಒಂದು ಮೊತ್ತದ ಹಣವನ್ನು ನೀವು 11 ತಿಂಗಳು ಕಾಲ ತುಂಬಬೇಕಾಗುತ್ತದೆ. 500 ರೂ. ನಿಂದ ಆರಂಭಿಸಿದರೆ 500 ರೂ. ನಂತೆ ಹೆಚ್ಚಳ ಮಾಡಿಕೊಂಡು ಹೋಗಬೇಕಾಗುತ್ತದೆ. ನಿಮಗೆ ಒಂದು ಪಾಸ್ ಬುಕ್ ಸಹ ನೀಡಲಾಗುತ್ತದೆ. 12 ನೇ ತಿಂಗಳಿನಲ್ಲಿ ಈ ಹಣದ ಒಟ್ಟು ಮೊತ್ತದ ಆಭರಣ ಖರೀದಿಸಬಹುದು. ಅಲ್ಲದೇ ಇಲ್ಲಿ ನಿಮಗೆ ನೋ ವೆಸ್ಟೆಜ್ ಆಭರಣ ಲಭ್ಯವಾಗುತ್ತದೆ.

* ಮಲಬಾರ್ ಗೋಲ್ಡ್

ಇದು ಸಹ ಒಂದು ಅತ್ಯುತ್ತಮ ಯೋಜನೆಯಾಗಿದ್ದು ಪ್ರತಿ ತಿಂಗಳು ನಿರ್ದಿಷ್ಟ ಹಣವನ್ನು ಕಟ್ಟಬೇಕಾಗುತ್ತದೆ. ನಿಮ್ಮ ಹಣಕ್ಕೆ ಶೇ. 6 ರಷ್ಟು ಬೋನಸ್ ಸಹ ನೀಡಲಾಗುತ್ತದೆ. ಅಲ್ಲದೇ ನಂತರ ಇದೇ ಹಣದಲ್ಲಿ ಆಭರಣ ಖರೀದಿಗೆ ಮುಂದಾದರೆ ವಿಶೇಷ ರಿಯಾಯಿತಿಯನ್ನು ನೀಡಲಾಗುತ್ತದೆ.

* ಟಿಬಿಝಡ್-ಕಲ್ಪವೃಕ್ಷ ಯೋಜನೆ
12, 15 ಅಥವಾ 18 ತಿಂಗಳ ಯೋಜನೆಗಳಿಗೆ ಹಣ ಕಟ್ಟಿದರೆ ನೀವು ಉಡುಗೊರೆಗಳನ್ನು ಗೆಲ್ಲಲು ಸಾಧ್ಯವಿದೆ. 22 ಕ್ಯಾರಟ್ ಚಿನ್ನ ಅಥವಾ ಪ್ಲಾಟಿನಂ ಆಭರಣಗಳನ್ನು ನಿಮ್ಮದಾಗಿಸಿಕೊಳ್ಳಲು ಕಲ್ಪವೃಕ್ಷ ಯೋಜನೆ ಕಾರಣವಾಗಬಲ್ಲದು.[ಭಾರತದಲ್ಲಿ ಚಿನ್ನಾಭರಣ ಪರಿಶುದ್ಧತೆ ಅಳೆಯುವುದು ಹೇಗೆ?]

ಕೊನೆ ಮಾತು
ಚಿನ್ನದ ಮೇಲೆ ಹಣ ಹೂಡಲು ಅಥವಾ ಗೋಲ್ಡ್ ಯೋಜನೆಗಳಲ್ಲಿ ಬಂಡವಾಳ ಹಾಕಲು ತೀರ್ಮಾನ ಮಾಡಿದ್ದರೆ ಒಮ್ಮೆ ಇತರ ಸಾಧ್ಯತೆಗಳ ಕುರಿತಾಗಿಯೂ ಯೋಚಿಸಬೇಕಾಗುತ್ತದೆ. ಗೋಲ್ಡ್ ಡಿಪಾಸಿಟ್, ಗೋಲ್ಡ್ ಇಟಿಎಫ್ ಬಗ್ಗೆಯೂ ಮಾಹಿತಿ ಕಲೆ ಹಾಕಬೇಕಾಗುತ್ತದೆ. ಆದರೆ ಜೀವನದಲ್ಲಿ ಸರಿಯಾದ ಹಣಕಾಸು ಮಾರ್ಗದರ್ಶನಗಳನ್ನು ಇಟ್ಟುಕೊಳ್ಳದವರಿಗೆ ಇಂಥ ಯೋಜನೆಗಳು ನಿಜಕ್ಕೂ ಲಾಭದಾಯಕವಾಗಿವೆ.(ಗುಡ್ ರಿಟರ್ನ್ಸ್.ಇನ್)

English summary

4 Best Gold Savings Schemes in India

Last year, some of the gold schemes were shut due to RBI interference to curb the investors getting cheated by jewellers. Before investing in such schemes one should understand the process and self needs and make decision based on that.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X