For Quick Alerts
ALLOW NOTIFICATIONS  
For Daily Alerts

ಬೆರಳ ತುದಿಯಲ್ಲಿ ನಿಮ್ಮ ಬಜೆಟ್ ನೀವೇ ನಿಭಾಯಿಸಿ

|

ಆಧುನಿಕ ಸಮಾಜದ ಪ್ರತಿಯೊಬ್ಬರ ಕೈ ನಲ್ಲೂ ಸ್ಮಾರ್ಟ್ ಫೋನ್ ಗಳು ಸಾಮಾನ್ಯವಾಗಿದೆ. ಮೊಬೈಲ್ ಪೋನ್ ಗಳ ಮೂಲಕವೇ ಎಲ್ಲ ಹಣಕಾಸು ವ್ಯವಹಾರಗಳು ಸಾಧ್ಯವಾಗಿರುವುದು ತಂತ್ರಜ್ಞಾನದ ಕೊಡುಗೆ.

 

ಬಿಡುವಿರದ ಕೆಲಸದ ನಡುವೆ ಬ್ಯಾಕಿಂಗ್ ವ್ಯವಹಾರಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸಬೇಕಾದ ಅನಿವಾರ್ಯ ಎದುರಾಗುತ್ತದೆ. ನಮ್ಮ ಆದಾಯ ಮತ್ತು ಖರ್ಚುನ ವಿವರವನ್ನು ಬರ ಎದಿಟ್ಟುಕೊಳ್ಳಲು ಸಮಯಾವಕಾಶ ಇರುವುದಿಲ್ಲ. ಇಂಥ ಸಂಸರ್ಭದಲ್ಲಿ ಅನೇಕ ಅಪ್ಲಿಕೇಶನ್ ಗಳು ನಮ್ಮ ನೆರವಿಗೆ ಬರುತ್ತವೆ. ಇಲ್ಲಿ ಅಂಥ ಕೆಲ ಪರ್ಸನಲ್ ಫೈನಾನ್ಸ್ ನಿರ್ವಹಣೆ ಮಾಡುವ ಉಪಯುಕ್ತ ಅಪ್ಲಿಕೇಶನ್ ಗಳನ್ನು ನೀಡಲಾಗಿದೆ.[ಅತ್ಯುತ್ತಮ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಗಳು ಯಾವವು?]

 
ಬೆರಳ ತುದಿಯಲ್ಲಿ ನಿಮ್ಮ ಬಜೆಟ್ ನೀವೇ ನಿಭಾಯಿಸಿ

1. Bishinews ಎಕ್ಸ್ ಪೆನ್ಸ್ ಮ್ಯಾನೇಜರ್
ಇದು ವಾರದ ಖರ್ಚು ಮತ್ತು ವೆಚ್ಚಗಳನ್ನು ನಿಭಾಯಿಸಲು ಅನುಕೂಲಕಾರಿಯಾಗಿದೆ. ತಿಂಗಳು ಮತ್ತು ವರ್ಷದ ಲೆಕ್ಕ ತೆಗೆಯಲು ನೆರವಾಗುತ್ತದೆ. ವಿವಿಧ ಬಗೆಯ ಕರೆನ್ಸಿ ಗಳ ಮಾರ್ಪಾಟು ಸಾಧ್ಯವಿದೆ.

ವಿದೇಶಗಳಿಗೆ ತೆರಳುವಾಗ ತುಂಬಾ ಅನುಕೂಲಕಾರಿಯಾಗಿದ್ದು ಆಟೋ ಬ್ಯಾಕ್ ಅಪ್ ಸಾಧ್ಯವಿದೆ. ಡ್ರಾಪ್ ಬಾಕ್ಸ್, ಗೂಗಲ್ ಡ್ರೈವ್ ಅಥವಾ ಎಸ್ ಡಿ ಕಾರ್ಡ್ ನಲ್ಲಿ ಸುಲಭವಾಗಿ ಸಂಗ್ರಹಿಸಿಟ್ಟುಕೊಳ್ಳಬಹುದು. ಕ್ಯಾಲ್ಕುಲೇಟರ್, ಕರೆನ್ಸಿ ಕನ್ ವರ್ಟರ್, ಟಿಪ್ ಕ್ಯಾಲ್ಕುಲೇಟರ್, ಸೆಲ್ಸ್ ಮತ್ತು ಟ್ಯಾಕ್ಸ್ ಕ್ಯಾಲ್ಕುಲೇಟರ್ ಮತ್ತು ಕ್ರೆಡಿಟ್ ಕಾರ್ಡ್ ಕ್ಯಾಲ್ಕುಲೇಟರ್ ಸೌಲಭ್ಯಗಳು ಲಭ್ಯವಿದೆ.

2. ToshI ಫೈನಾನ್ಸ್ ಬಜೆಟ್ ಮತ್ತು ಎಕ್ಸ್ ಪೆನ್ಸ್
ನೀವು ಒಂದಕ್ಕಿಂತ ಹೆಚ್ಚನ ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಿದ್ದರೆ ಈ ಅಪ್ಲಿಕೇಶನ್ ಖಂಡಿತ ಇಷ್ಟವಾಗುತ್ತದೆ. ಖರ್ಚು ವೆಚ್ಚದ ವಿವರ ದಾಖಲೆ, ಬಜೆಟ್ ಸಮತೋಲನ, ಬಿಲ್ ನಿರೂಪಣೆ, ಪ್ರವಾಸ ಮತ್ತು ಪ್ರಯಾಣ ಸಂಬಂಧಿ ವಿಚಾರಗಳನ್ನು ಸುಲಭವಾಗಿ ದಾಖಲಿಸಿಟ್ಟುಕೊಳ್ಳಬಹುದು. ಇದರ ಬಹುಮುಖ್ಯ ಗುಣಲಕ್ಷಣವೆಂದರೆ ಬೇರೇ ಬೇರೆ ಡಿವೈಸ್ ಗಳಲ್ಲಿ ಉಪಯೋಗಿಸಬಹುದು. ಸದ್ಯ ಇದು ಉಚಿತ ಅಪ್ಲಿಕೇಶನ್ ಆಗಿದ್ದು ಹೆಚ್ಚಿನ ಫೀಚರ್ ಬೇಕಾದಲ್ಲಿ ಖರೀದಿ ಮಾಡಬೇಕಾಗುತ್ತದೆ.

3. ಬಿಲ್ ಗಾರ್ಡ್
ಇದು ನಿಮ್ಮ ಕ್ರೆಡಿಟ್ ಕಾರ್ಡ್ ಗೆ ರಕ್ಷಾ ಕವಚದಂತೆ ವರ್ತಿಸುತ್ತದೆ. ನಿಮ್ಮ ಎಲ್ಲ ವ್ಯವಹಾರದ ದಾಖಲಾತಿಗಳು ಒಂದು ಇನ್ ಬಾಕ್ಸ್ ನಲ್ಲಿ ದಾಖಲಾಗುತ್ತವೆ. ಮೋಸ ಮತ್ತು ವಂಚನೆಯಿಂದ ಬಚಾವಾಗಲು ಇದು ಅತ್ಯುತ್ತಮ ಆಯ್ಕೆಯಾಗಿದೆ.

4. Mint.com
ನಿಮ್ಮ ಹಣದ ಸಮತೋಲಿತ ಬಳಕೆಯನ್ನು ಮಿಂಟ್. ಕಾಮ್ ಸೂಚಿಸುತ್ತದೆ. ಬಜೆಟ್ ಮತ್ತು ಖರ್ಚು ವೆಚ್ಚದ ಕುರಿತಾಗಿ ನಿಮಗೆ ನಿರ್ದೇಶನ ನೀಡುತ್ತದೆ. ಗ್ರಾಫ್ ಗಳ ಮೂಲಕ ನಿಮ್ಮ ಹಣಕಾಸು ಹರಿವಿನ ಲೆಕ್ಕಾಚಾರ ತಿಳಿಸುತ್ತದೆ.

5. ಸ್ಪೆಂಡಿಂಗ್ ಟ್ರ್ಯಾಕರ್
ಟ್ಯಾಬ್ಲೆಟ್ ಗಳಿಗೆಂದೇ ಇದನ್ನು ವಿಶೇಷವಾಗಿ ಡಿಸೈನ್ ಮಾಡಲಾಗಿದೆ. ದೊಡ್ಡ ಸ್ಕ್ರೀನ್ ಮೂಲಕ ನಿಮ್ಮ ಎಲ್ಲ ಹಣಕಾಸು ವ್ಯವಹಾರಗಳನ್ನು ಸುಲಭವಾಗಿ ದಾಖಲಿಸಬಹುದು.

ಕೊನೆ ಮಾತು: ಪ್ರತಿದಿನ ಮೊಬೈಲ್ ಪ್ರಪಂಚ್ ಅಪ್ ಡೇಟ್ ಆಗುತ್ತಿರುತ್ತದೆ. ಅದಕ್ಕೆ ಅನುಗುಣವಾಗಿ ಹೊಸ ಹೊಸ ಅಪ್ಲಿಕೇಶನಗ ಗಳು ಸಿದ್ಧವಾಗುತ್ತವೆ. ಇವುಗಳಲ್ಲಿ ಯಾವುದು ಉತ್ತಮ? ಎಂಬ ಆಯ್ಕೆ ನಮಗೆ ಬಿಟ್ಟಿರುತ್ತದೆ. (ಗುಡ್ ರಿಟರ್ನ್ಸ್.ಇನ್)

English summary

5 Great Personal Finance Mobile Apps

We all spend most of our time using mobile in one way or the other. In this era, mobiles are just more than mere communication. Having busy schedules and jobs involving traveling may lead to you missing out keeping track of expenditure.
 
 
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X