For Quick Alerts
ALLOW NOTIFICATIONS  
For Daily Alerts

ಅತಿ ಹೆಚ್ಚು ಗೃಹ ಸಾಲ ಪಡೆಯಲು ಏನು ಮಾಡಬೇಕು?

|

ಗೃಹ ಸಾಲ ಪಡೆಯುವುದು ಆಧುನಿಕ ಸಮಾಜದಲ್ಲಿ ಸಾಮಾನ್ಯ ಪ್ರಕ್ರಿಯೆಯಾಗಿ ಹೋಗಿದೆ. ಕೆಲವೊಂದು ಸಂದರ್ಭದಲ್ಲಿ ನಿಮಗೆ ಅತಿ ಹೆಚ್ಚಿನ ಗೃಹ ಸಾಲದ ಅಗತ್ಯ ಬಿದ್ದಿರುತ್ತದೆ. ನಿಮ್ಮ ಆಸ್ತಿಗೆ ಲೆಕ್ಕ ಹಾಕಿದ್ದಕ್ಕಿಂತ ಅಧಿಕ ಸಾಲ ಬೇಕಾಗಿರುತ್ತದೆ.

ಇಂಥ ಸಂದರ್ಭದಲ್ಲಿ ಯಾವ ರೀತಿ ಮಾಡಿದರೆ ಅಧಿಕ ಸಾಲ ಪಡೆಯಬಹುದು ಎಂಬುದನ್ನು ಗಮನಿಸಬೇಕಾಗುತ್ತದೆ. ನಮ್ಮ ಆದಾಯವನ್ನು ಅಥವಾ ಹಣದ ಮೂಲವನ್ನು ಹೆಚ್ಚಿಗೆ ನಿರೂಪಿಸಿದಾಗ ಮಾತ್ರ ಅಧಿಕ ಸಾಲ ಪಡೆಯಲು ಸಾಧ್ಯವಾಗುತ್ತದೆ.

ಎಲ್ಲರ ಆದಾಯ ಒಗ್ಗೂಡಿಸಿ

ಎಲ್ಲರ ಆದಾಯ ಒಗ್ಗೂಡಿಸಿ

ಮೊದಲನೆಯದಾಗಿ ನಿಮ್ಮ ಕುಟುಂಬದ ಎಲ್ಲರ ಆದಾಯವನ್ನು ಒಗ್ಗೂಡಿಸಬೇಕಾಗಿತ್ತದೆ. ನಿಮ್ಮ ವೇತನದ ಅನ್ವಯ ನಿಮಗೆ ಬ್ಯಾಂಕ್ 10 ಲಕ್ಷ ರೂ. ಸಾಲ ಸಿಗುತ್ತಿತ್ತು ಎಂದಾದರೆ, ನಿಮ್ಮ ಪಾಲಕರ ಮತ್ತು ಹೆಂಡತಿಯ ಆದಾಯ ಒಗ್ಗೂಡಿಸಿ ಲೆಕ್ಕ ಹಾಕಿದರೆ ಇದಕ್ಕಿಂತ ಹೆಚ್ಚಿನ ಸಾಲ ಸಿಗಬಹುದು.

ಇತರ ಸಾಲ ತೀರಿಸಿ

ಇತರ ಸಾಲ ತೀರಿಸಿ

ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಇತರ ಸಾಲಗಳನ್ನು ಮರುಪಾವತಿ ಮಾಡುವುದು ಉತ್ತಮ. ಒಂದು ವೇಳೆ ನೀವು ಪರ್ಸನಲ್ ಲೋನ್ ಅಥವಾ ಇತರ ಸಾಲಗಳನ್ನು ಇಟ್ಟುಕೊಂಡಿದ್ದರೆ ಅದನ್ನು ಗಣನೆಗೆ ತೆಗೆದುಕೊಳ್ಳುವುದರಿಂದ ನಿಮಗೆ ದೊರೆಯುವ ಸಾಲದ ಮೊತ್ತ ಕಡಿಮೆಯಾಗಬಹುದು. ಹಾಗಾಗಿ ನಿಮ್ಮ ಇತರ ಸಾಲ ಮರುಪಾವತಿ ಮಾಡಿಕೊಳ್ಳುವುದು ಮುಖ್ಯ.

ಇನ್ ಸೆಂಟಿವ್ ಸೇರಿಸಿ ಲೆಕ್ಕ ಹಾಕಿ

ಇನ್ ಸೆಂಟಿವ್ ಸೇರಿಸಿ ಲೆಕ್ಕ ಹಾಕಿ

ನಾವು ಅನೇಕ ಸಂದರ್ಭಗಳಲ್ಲಿ ನಮ್ಮ ವೇತನವನ್ನು ಮಾತ್ರ ದಾಖಲು ಮಾಡುತ್ತೇವೆ. ದೊರೆಯುತ್ತಿರುವ ಇನ್ ಸೆಂಟಿವ್ ಮತ್ತು ಇತರ ಅಂಶಗಳನ್ನು ಪ್ರಸ್ತಾಪಿಸಿದರೆ ನಿಮಗೆ ಹೆಚ್ಚಿನ ಸಾಲ ದೊರೆಯಬಹುದು.

ಸಾಲ ಮರುಪಾವತಿ ಅವಧಿ ಹೆಚ್ಚಳ

ಸಾಲ ಮರುಪಾವತಿ ಅವಧಿ ಹೆಚ್ಚಳ

ನೀವು 10 ವರ್ಷದ ಅವಧಿಗೆ ಸಾಲ ಪಡೆದರೆ ಇಎಂಐ ಪ್ರಮಾಣ ಅತಿ ಹೆಚ್ಚಾಗಿರುವುದು. ಯಾವಾಗಲೂ ಇಂಥ ಸಂದರ್ಭದಲ್ಲಿ ಸಾಲದ ಮರುಪಾವತಿ ಅವಧಿಯನ್ನು ಹೆಚ್ಚಿನ ಅವಧಿಗೆ ವಿಸ್ತರಣೆ ಮಾಡಿಕೊಳ್ಳಲು ಯತ್ನಿಸುವುದು ಅಗತ್ಯ. ನಿಮ್ಮ ಆರ್ಥಿಕ ವ್ಯವಸ್ಥೆ ಸುಧಾರಿಸಿದರೆ ಒಮ್ಮೆಲೆ ಎಲ್ಲ ಸಾಲ ಮರುಪಾವತಿ ಮಾಡಲು ಸಾಧ್ಯವಿರುತ್ತದೆ.

ಸಂಸ್ಥೆ ಆಯ್ಕೆ ಬಗ್ಗೆ ಎಚ್ಚರದಿಂದಿರಿ

ಸಂಸ್ಥೆ ಆಯ್ಕೆ ಬಗ್ಗೆ ಎಚ್ಚರದಿಂದಿರಿ

ಕೆಲ ಬ್ಯಾಂಕ್ ಅಥವಾ ಸಂಸ್ಥೆಗಳು ನಿರ್ದಿಷ್ಟ ಕಟ್ಟುಪಾಡಿಗೆ ಒಳಗಾಗಿ ವ್ಯವಹಾರ ನಡೆಸುತ್ತಿರುತ್ತವೆ. ಸಾಲದ ನೀಡಿಕೆ ಪ್ರಮಾಣವನ್ನು ಕಡಿಮೆ ಮಾಡಬಹುದು. ಹಾಗಾಗಿ ಯಾವ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬುದು ಅಷ್ಟೇ ಮುಖ್ಯವಾಗುತ್ತದೆ.

English summary

5 Smart Ways To Get a Higher Home Loan Amount From Banks and Institutions

Sometimes you may need a greater amount of home loan that is more than your eligibility. This may simply cast a shadow over the likely property that you have liked and planning to purchase. If you have not tried these steps to increase your home loan eligibility try them.
Story first published: Friday, March 20, 2015, 13:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X