For Quick Alerts
ALLOW NOTIFICATIONS  
For Daily Alerts

ಹೆಚ್ಚು ರಿಟರ್ನ್ಸ್ ನೀಡುವ 7 ಹೂಡಿಕೆ ಟಿಪ್ಸ್

By Mahesh
|

ಬೆಂಗಳೂರು, ಮಾ.31: ಆರ್ಥಿಕ ವರ್ಷದ ಕೊನೆ ಇನ್ನೇನು ಬಂದಿದೆ. ಹೊಸ ವರ್ಷಕ್ಕೆ ವೈಯಕ್ತಿಕ ಬಜೆಟ್ ತಯಾರಿ ನಡೆಸುವವರು ವಿರಳ. ಅಂದು ದುಡಿದ ದುಡ್ಡು ಅಂದಿಗೆ ಸಿಕ್ಕರೆ ಸಾಕು ಎನ್ನುವ ಜಾಯಮಾನ ಭಾರತೀಯರಲ್ಲಿ ಇನ್ನೂ ಹೋಗಿಲ್ಲ.

 

ಅದರೂ ನಿಗದಿತವಾಗಿ ತಿಂಗಳ ವರಮಾನ ಕೈಗೆ ಸಿಗುವಂತೆ ಹೂಡಿಕೆ ಮಾಡುವ ಜಾಣತನ ಮುಖ್ಯ. ಅದರಲ್ಲೂ ನಿವೃತ್ತಿ ಅಂಚಿನಲ್ಲಿರುವವರು ಹಾಗೂ ನಿಶ್ಚಿತ ಬಡ್ಡಿದರ ಆದಾಯ ಪಡೆಯಲು ಇಚ್ಛಿಸುವವರು ಈ ಸುದ್ದಿಯತ್ತ ಗಮನ ಹರಿಸುವುದು ಒಳಿತು.

ಬಂಡವಾಳ ಹೂಡಿಕೆಗೂ ಮುನ್ನ ಎಷ್ಟು ಹೂಡಬೇಕು? ಎಷ್ಟು ಉಳಿಸಬೇಕು? ರಿಟರ್ನ್ ಎಷ್ಟು ನಿರೀಕ್ಷೆ ಇಟ್ಟುಕೊಳ್ಳಬೇಕು? ಎಲ್ಲಿ ಹೂಡಿಕೆ ಮಾಡಿದರೆ ಸುರಕ್ಷಿತ ಎಂಬ ಕನಿಷ್ಠ ಜ್ಞಾನ ಹೊಂದಿದ್ದರೆ ಸಾಕು. ಎಲ್ಲಾ ಕಾಲಕ್ಕೂ ತಿಂಗಳಿಗೆ ತಕ್ಕ ರಿಟರ್ನ್ಸ್ ನೀಡುವ ಏಳು ಹೂಡಿಕೆ ವಿಧಾನಗಳು ಇಲ್ಲಿವೆ..

ಅಂಚೆ ಕಚೇರಿ ತಿಂಗಳ ಆದಾಯ ಯೋಜನೆ

ಅಂಚೆ ಕಚೇರಿ ತಿಂಗಳ ಆದಾಯ ಯೋಜನೆ

ಹೆಚ್ಚು ರಿಸ್ಕ್ ಇಲ್ಲದೆ ಹೂಡಿಕೆಗೆ ತಕ್ಕಂತೆ ತಿಂಗಳಿಗೆ ಒಂದಿಷ್ಟು ಹಣ ರಿಟರ್ನ್ಸ್ ಪಡೆಯಲು ಅಂಚೆ ಕಚೇರಿ ಯೋಜನೆ ಒಳ್ಳೆ ವಿಧಾನ.

ವಾರ್ಷಿಕವಾಗಿ ಶೇ 8.4ರಷ್ಟು ಬಡ್ಡಿದರ ನೀಡುವ ಅಂಚೆ ಕಚೇರಿ ಪ್ರತಿ ತಿಂಗಳಿಗೂ ಅಷ್ಟೇ ದರವನ್ನು ನೀಡುತ್ತಾ ಬಂದಿದೆ. ಹಣದುಬ್ಬರ, ದೇಶದ ಆರ್ಥಿಕ ವ್ಯವಸ್ಥೆ ಏರಿಳಿತವಾದಾಗ ಮಾತ್ರ ಬಡ್ಡಿದರ ವ್ಯತ್ಯಾಸ ಕಾಣಬಹುದು.

 

ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ (FD)

ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ (FD)

ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ಇಡುವುದು ಬಹು ಜನಪ್ರಿಯ ಹೂಡಿಕೆ ವಿಧಾನವಾಗಿದೆ.

ಬಡ್ಡಿದರ ಪೇಮೆಂಟ್ ನಮ್ಮ ಅಗತ್ಯಕ್ಕೆ ಬದಲಾಯಿಸುವ ಸೌಲಭ್ಯವೂ ಲಭ್ಯವಿರುತ್ತದೆ. ಪ್ರತಿ ತಿಂಗಳು, ಅರ್ಧ ವಾರ್ಷಿಕ ಅಥವಾ ಪುನಃ ಬಡ್ಡಿದರ ಸಂಪೂರ್ಣ ಹೂಡಿಕೆಗೆ ಬ್ಯಾಂಕ್ ಗಳು ಅವಕಾಶ ನೀಡುತ್ತದೆ.

 

ಹಿರಿಯ ನಾಗರೀಕರ ಹೂಡಿಕೆ ಸ್ಕೀಮ್
 

ಹಿರಿಯ ನಾಗರೀಕರ ಹೂಡಿಕೆ ಸ್ಕೀಮ್

ಹಿರಿಯ ನಾಗರೀಕರ ಹೂಡಿಕೆ ಸ್ಕೀಮ್ ಗಳು ಬ್ಯಾಂಕ್ ಅಥವಾ ಅಂಚೆ ಕಚೇರಿಗಳಲ್ಲಿ ಲಭ್ಯವಿರುತ್ತದೆ. ಇತರರಿಗೆ ಹೋಲಿಸಿದರೆ ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿದರ ಸಿಗುತ್ತದೆ.

60 ವರ್ಷ ಮೇಲ್ಪಟ್ಟವರು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಕರು ಅಕೌಂಟ್ ಓಪನ್ ಮಾಡಬಹುದು. ಸ್ವಯಂ ನಿವೃತ್ತಿ ಹೊಂದಿದವರಿಗೆ 55 ವರ್ಷ ವಯೋಮಿತಿ ಸೌಲಭ್ಯವೂ ಸಿಗಲಿದೆ.

 

ದೀರ್ಘ ಕಾಲದ ಹೂಡಿಕೆ ಬಾಂಡ್ ಗಳು

ದೀರ್ಘ ಕಾಲದ ಹೂಡಿಕೆ ಬಾಂಡ್ ಗಳು

ಸುಮಾರು 25-30ವರ್ಷಗಳ ಅವಧಿಗೆ ದೀರ್ಘ ಕಾಲದ ಹೂಡಿಕೆ ಬಾಂಡ್ ಗಳ ಮೇಲೆ ಹೂಡಿಕೆ ಮಾಡಬಹುದು. ಹಲವಾರು ಐಪಿಒಗಳು ಹಾಗೂ ಸರ್ಕಾರಿ ಬಾಂಡ್ ಗಳ ಮೇಲೆ ಗಮನವಿರಿಸಬಹುದು.

ವ್ಯವಸ್ಥಿತ ವಿಥ್ ಡ್ರಾ ಯೋಜನೆ

ವ್ಯವಸ್ಥಿತ ವಿಥ್ ಡ್ರಾ ಯೋಜನೆ

ಮ್ಯೂಚುವಲ್ ಫಂಡ್ ಅಥವಾ ಸಾಲ ಆಧಾರಿತ ಮ್ಯೂಚು ವಲ್ ಫಂಡ್ ನಲ್ಲಿ ಹೂಡಿಕೆ ಮಾಡಿದಾಗ Systematic Withdrawal Plan ಆಯ್ಕೆ ಮಾಡಿಕೊಂಡು ನಿಗದಿತ ರಿಟರ್ನ್ಸ್ ಪಡೆಯಬಹುದು. ಇದರಲ್ಲಿ ಸ್ವಲ್ಪ ರಿಸ್ಕ್ ಇದ್ದರೂ ಹೂಡಿಕೆಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬಹುದು.

 

ಮ್ಯೂಚುವಲ್ ಫಂಡ್ ನಲ್ಲಿ ಮಂಥ್ಲಿ ಪ್ಲ್ಯಾನ್

ಮ್ಯೂಚುವಲ್ ಫಂಡ್ ನಲ್ಲಿ ಮಂಥ್ಲಿ ಪ್ಲ್ಯಾನ್

ಮ್ಯೂಚುವಲ್ ಫಂಡ್ ನಲ್ಲಿ ಪ್ರತಿ ತಿಂಗಳು ರಿಟರ್ನ್ಸ್ ನೀಡುವ ಎಂಐಪಿ ಆಯ್ಕೆ ಮಾಡಿಕೊಳ್ಳಬಹುದು. ಇತರೆ ಯೋಜನೆಗೆ ಹೋಲಿಸಿದರೆ ರಿಟರ್ನ್ಸ್ ಕಡಿಮೆ ಇದ್ದರೂ ನಿಗದಿತವಾಗಿ ತಿಂಗಳ ವರಮಾನ ಬಯಸುವವರು ಈ ಆಯ್ಕೆ ಮಾಡಿಕೊಳ್ಳಬಹುದು.

ರಿಯಲ್ ಎಸ್ಟೇಟ್ ಹೂಡಿಕೆ ಬಾಡಿಗೆ

ರಿಯಲ್ ಎಸ್ಟೇಟ್ ಹೂಡಿಕೆ ಬಾಡಿಗೆ

ನಿಮ್ಮ ಬಳಿ ನಿವೇಶನ, ಮನೆ ಇದ್ದರೆ ಬಾಡಿಗೆ ನೀಡುವ ಮೂಲಕ ತಿಂಗಳಿಗೆ ಒಂದಿಷ್ಟು ಹಣ ಪಡೆದುಕೊಳ್ಳಬಹುದು. ಅಡ್ವಾನ್ಸ್ ಪಡೆದ ಮೊತ್ತವನ್ನು ಬ್ಯಾಂಕಿನಲ್ಲಿ ಹೂಡಿಕೆ ಮಾಡಿ ಬಡ್ಡಿದರ ಪಡೆದುಕೊಳ್ಳಬಹುದು.

English summary

7 Investments For Those Looking At Regular Monthly Income

At some point we all look for regular monthly income with investments made, especially if we are retired or living on fixed interest income.Let us look at some of the regular investment products that can generate safe monthly returns.
Story first published: Tuesday, March 31, 2015, 13:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X