For Quick Alerts
ALLOW NOTIFICATIONS  
For Daily Alerts

ಎಲ್ಲರೂ ಅರಿತಿರಬೇಕಾದ ಕೇಂದ್ರ ಬಜೆಟ್ ನ 8 ಅಂಶಗಳು

|

ಕೇಂದ್ರ ಹಣಕಾಸು ಬಜೆಟ್ ಮಂಡನೆಯಾಗಿದ್ದು ಆರ್ಥಿಕ ವ್ಯವಸ್ಥೆಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ದೇಶದ ಅಭಿವೃದ್ಧಿ ಕುರಿತಾದ ಹತ್ತು ಹಲವು ಕ್ರಮಗಳು ಬಜೆಟ್ ನಲ್ಲಿ ಮಂಡನೆಯಾಗಿವೆ.

ನೀವೊಬ್ಬ ತೆರಿಗೆ ಪಾವತಿದಾರ, ಹೂಡಿಕೆದಾರ ಅಥವಾ ಸಾಮಾನ್ಯ ನಾಗರಿಕರಾಗಿದ್ದರೂ ಬಜೆಟ್ ಕುರಿತ ಕೆಲವೊಂದು ಅಂಶಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಬಜೆಟ್ ನಿಮ್ಮ ದೈನಂದಿನ ವ್ಯವಹಾರದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಅರಿತುಕೊಳ್ಳಬೇಕಾಗುತ್ತದೆ.[ಆದಾಯ ತೆರಿಗೆ ಪಾವತಿಸಲು ಆನ್ ಲೈನ್ ನೋಂದಣಿ ಹೇಗೆ?]

ಎಲ್ಲರೂ ಅರಿತಿರಬೇಕಾದ ಕೇಂದ್ರ ಬಜೆಟ್ ನ 8 ಅಂಶಗಳು

1. ವೈಯಕ್ತಿಕ ತೆರಿಗೆ ಪಾವತಿ ಮೊತ್ತದಲ್ಲಿ ಯಾವ ಬದಲಾವಣೆಯಿಲ್ಲ
ವಾರ್ಷಿಕವಾಗಿ ವ್ಯಕ್ತಿ ಪಾವತಿ ಮಾಡುವ ತೆರಿಗೆ ಮೊತ್ತದಲ್ಲಿ ಯಾವ ಬದಲಾವಣೆ ಮಾಡಲಾಗಿಲ್ಲ. ಆದರೆ ಒಂದು ಕೋಟಿಗೂ ಅಧಿಕ ತಲಾ ಆದಾಯ ಹೊಂದಿರುವವರ ಮೇಲೆ ಜೇಟ್ಲಿ ಶೇ. 2 ಹೆಚ್ಚುವರು ತೆರಿಗೆ ವಿಧಿಸುವ ಕ್ರಮ ತೆಗೆದುಕೊಂಡಿದ್ದಾರೆ.

2. ಆರೋಗ್ಯ ವಿಮೆ ಪ್ರಿಮಿಯಂ ಮಿತಿ ಹೆಚ್ಚಳ
ಆರೋಗ್ಯ ವಿಮೆ ಪ್ರಿಮಿಯಂ ಮಿತಿಯನ್ನು ಹೆಚ್ಚಳ ಮಾಡಲಾಗಿದ್ದು 15 ಸಾವಿರದಿಂದ 25 ಸಾವಿರಕ್ಕೆ ಏರಿಸಲಾಗಿದೆ. ಹಿರಿಯ ನಾಗರಿಕರಿಗಿದ್ದ 20 ಸಾವಿರ ಮಿತಿಯನ್ನು 30 ಸಾವಿರಕ್ಕೆ ಏರಿಸಲಾಗಿದೆ. ಆದರೆ 80 ವರ್ಷಕ್ಕೆ ಮೇಲ್ಪಟ್ಟವರನ್ನು ಆರೋಗ್ಯ ವಿಮೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

3. ರಾಷ್ಟ್ರೀಯ ಪೆನ್ಶನ್ ಯೋಜನೆಯ ಮಿತಿ ಹೆಚ್ಚಳ
ಹೊಸ ಪೆನ್ಶನ್ ಯೋಜನೆಯ ಮಿತಿಯನ್ನು 1 ಲಕ್ಷ ರೂ. ನಿಂದ 1.5 ಲಕ್ಷ ರೂ. ಏರಿಸಲಾಗಿದೆ. ಅಲ್ಲದೇ u/s 80CC ಅಡಿಯಲ್ಲಿ ಮತ್ತೆ 50 ಸಾವಿರ ರೂ. ಹೆಚ್ಚಳಕ್ಕೆ ಅವಕಾಶ ಒದಗಿಸಲಾಗಿದೆ.[ನಿಮಗೆ ಗೊತ್ತಿರದ ತೆರಿಗೆ ವಿನಾಯಿತಿ ತಂತ್ರಗಳು]

4. ಚಿನ್ನದ ಪತ್ರಗಳು
ಚಿನ್ನದ ಪತ್ರಗಳ ಆಧಾರದಲ್ಲಿ ಸಂಪತ್ತನ್ನು ಸಂರಕ್ಷಿಸಿಡುವ ಹೊಸ ಯೋಜನೆಯನ್ನು ಬಜೆಟ್ ನಲ್ಲಿ ಪರಿಚಯಿಸಲಾಗಿದೆ. ಬಾಂಡ್ ಪೇಪರ್ ಗಳ ನೆರವಿನಲ್ಲಿ ಚಿನ್ನದ ಮೊತ್ತದ ಹಣವನ್ನು ಸಂಗ್ರಹಿಸಿ ಇಡಬಹುದು.

5. ಎರಡು ಹೊಸ ವಿಮಾ ಯೋಜನೆಗಳು

ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯನ್ನು ಹೊಸದಾಗಿ ಪರಿಚಯಿಸಲಾಗಿದೆ.

6. ಕಾರ್ಮಿಕರ ಭವಿಷ್ಯ (ಇಪಿಎಫ್)ನಿಧಿಗೆ ಎರಡು ಆಯ್ಕೆ
ಕಾರ್ಮಿಕರ ಭವಿಷ್ಯ (ಇಪಿಎಫ್)ನಿಧಿಗುದ್ದ ಆಯ್ಕೆಯ ಹರಿವು ವಿಸ್ತಾರವಾಗಿದೆ. ಉದ್ಯೋಗಿ ತನಗೆ ಬೇಕಾದ ಆಯ್ಕೆಯನ್ನು ಪಡೆದುಕೊಳ್ಳಬಹುದು. ಕಾರ್ಮಿಕರ ಭವಿಷ್ಯ ನಿಧಿ ಬೇಕೋ? ಅಥವಾ ಹೊಸ ಪೆನ್ಶನ್ ಯೋಜನೆ ಬೇಕೋ? ಎಂಬುದನ್ನು ಆತನೇ ತೀರ್ಮಾನಿಸಬಹುದಾಗಿದೆ.

ಈ ಹಿಂದೆ ವೇತನದಲ್ಲಿ ಕಾರ್ಮಿಕರ ಭವಿಷ್ಯ ನಿಧಿಯಯನ್ನು ತನ್ನಿಂದ ತಾನೇ ಮುರಿದುಕೊಳ್ಳಲಾಗುತ್ತಿತ್ತು. ಆದರೆ ಬಜೆಟ್ ನ ಹೊಸ ಕಾನೂನು ಅನ್ವಯ ಭವಿಷ್ಯ ನಿಧಿ ಐಚ್ಛಿಕವಾಗಿದೆ.

7. ಒಂದು ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ಹಣದ ಚಲಾವಣೆಗೆ ಪ್ಯಾನ್ ಕಾರ್ಡ್ ಕಡ್ಡಾಯ

ಕಪ್ಪು ಹಣದ ಚಲಾವಣೆಯನ್ನು ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಒಂದು ವೇಳೆ ಅಕ್ರಮ ಹಣ ಚಲಾವಣೆ ಕಂಡುಬಂದರೆ 7 ವರ್ಷ ಕಾಲ ಜೈಲು ಶಿಕ್ಷೆಯನ್ನು ವಿಧಿಸಬಹುದು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

8. ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಕ್ರಮ
ನೀರಾವರಿ, ರಸ್ತೆ ನಿರ್ಮಾಣ, ರೈಲ್ವೆ ಮುಂತಾದ ವಿಭಾಗಗಳಿಗೆ ಸಂಬಂಧಿಸಿ ಬಜೆಟ್ ನಲ್ಲಿ ವಿಶೇಷ ಕಾಳಜಿ ವಹಿಸಲಾಗಿದೆ. ರಾಷ್ಟ್ರೀಯ ಮೂಲ ಸೌಕರ್ಯ ಅಭಿವೃದ್ಧಿ ಫಂಡ್ ಹೆಸರಿನಲ್ಲಿ 20 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ.

ಕೊನೆ ಮಾತು: ಕೇಂದ್ರ ಬಜೆಟ್ ಹೊಸ ಯೋಜನೆಗಳನ್ನು ಘೋಷಿಸದಿದ್ದರೂ ಬಂಡವಾಳ ಕ್ರೋಢಿಕರಣಕ್ಕೆ ವಿಶೇಷ ಒತ್ತು ನೀಡಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.(ಗುಡ್ ರಿಟರ್ನ್ಸ್.ಇನ್)

English summary

8 Must Know Things for Common Man After Union Budget 2015

In the Union Budget 2015-16, Finance Minister, Arun Jaitley announced some key changes in major sectors. If you are tax payer, investor or a responsible citizen here are some must know facts on how your finances would be affected after Union Budget 2015.
 
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X