For Quick Alerts
ALLOW NOTIFICATIONS  
For Daily Alerts

ಪಿಪಿಎಫ್ ಖಾತೆಗೆ ಆನ್ ಲೈನ್ ಹಣ ರವಾನೆ ಹೇಗೆ?

|

ಆಧುನಿಕ ಜಗತ್ತಿನಲ್ಲಿ ಗ್ರಾಹಕರಿಗೆ ಆನ್ ಲೈನ್ ಮೂಲಕ ಎಲ್ಲ ಬ್ಯಾಂಕಿಂಗ್ ವ್ಯವಹಾರಗಳು ಸಾಧ್ಯವಾಗುತ್ತಿದೆ. ಇದೀಗ ನಿಮ್ಮ ಬ್ಯಾಂಕ್ ಖಾತೆಯ ಹಣವನ್ನುಪಿಪಿಎಫ್ ಖಾತೆಗೆ ಆನ್ ಲೈನ್ ಮೂಲಕವೇ ಸುಲಭವಾಗಿ ರವಾನಿಸಿಬಹುದು.

ತೆರಿಗೆ ವಿನಾಯಿತಿಗೆ ಸಂಬಂಧಿಸಿ ಪಿಪಿಎಫ್ ಜನಪ್ರಿಯ ಹೂಡಿಕೆ ತಾಣವಾಗಿ ಬೆಳೆದು ಬಂದಿದೆ. 80C ಅನ್ವಯ ಹೂಡಿಕೆಯ ಮೇಲೆ ತೆರಿಗೆ ವಿನಾಯಿತಿಯನ್ನೂ ನೀಡಲಾಗುತ್ತಿದೆ.[ಅಂಚೆ ಕಚೇರಿಯಿಂದ PPF ವರ್ಗಾವಣೆ ಹೇಗೆ?]

ಪಿಪಿಎಫ್ ಖಾತೆಗೆ ಆನ್ ಲೈನ್ ಹಣ ರವಾನೆ ಹೇಗೆ?

ನಿಮ್ಮ ಬ್ಯಾಂಕ್ ಖಾತೆ ಅಥವಾ ಪೋಸ್ಟ್ ಖಾತೆಯ ಮೂಲಕ ಕುಳಿತಲ್ಲಿಯೇ ಹಣ ಟ್ರಾನ್ಸ್ ಫರ್ ಮಾಡಲು ಸಾಧ್ಯವಿದೆ. ಆದರೆ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯ ಹೊಂದಿರುವುದು ಅಗತ್ಯವಾಗಿರುತ್ತದೆ.

ಪಿಪಿಎಫ್ ಖಾತೆಗೆ ಆನ್ ಲೈನ್ ಮೂಲಕ ಹಣ ಟ್ರಾನ್ಸ್ ಫರ್ ಹೇಗೆ?
1. ಮೊದಲು ನಿಮ್ಮ ನೆಟ್ ಬ್ಯಾಂಕಿಂಗ್ ಖಾತೆಗೆ ಲಾಗ್ ಇನ್ ಆಗಿ(ಉದಾ: ಎಸ್ ಬಿಐ, ಐಸಿಐಸಿಐ, ಎಚ್ ಡಿಎಫ್ ಸಿ)
2. ಥರ್ಡ್ ಪಾರ್ಟಿ ಐಕಾನ್ ಗೆ ತೆರಳಿ ನಿಮ್ಮ ಪಿಪಿಎಫ್ ಖಾತೆ ನಂಬರ್ ನೋಂದಣಿ ಮಾಡಿ
3. ಪಿಪಿಎಫ್ ಖಾತೆಯಲ್ಲಿರುವಂತೆ ಹೆಸರು ದಾಖಲಿಸಿ
4. ಯಾವ ಶಾಖೆಯಲ್ಲಿ ನಿಮ್ಮ ಪಿಪಿಎಫ್ ಖಾತೆಯಿದೆ ಎಂಬುದನ್ನು ನಮೂದಿಸಿ[ಆದಾಯ ತೆರಿಗೆ ಪಾವತಿಸಲು ಆನ್ ಲೈನ್ ನೋಂದಣಿ ಹೇಗೆ?]

ಎಸ್ ಬಿಐ ಪಿಪಿಎಫ್ ಖಾತೆ
ಒಮ್ಮೆ ಈ ಎಲ್ಲ ಮಾಹಿತಿಗಳನ್ನು ದಾಖಲಿಸಿದರೆ ನಂತರ ಸುಲಭವಾಗಿ ಬ್ಯಾಂಕ್ ಖಾತೆಯಿಂದ ಪಿಪಿಎಫ್ ಖಾತೆಗೆ ಹಣ ರವಾನೆ ಮಾಡಬಹುದು.
ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆ ಮತ್ತು ಪಿಪಿಎಫ್ ಖಾತೆ ಎಸ್ ಬಿಐನ ಒಂದೇ ಶಾಖೆಯಲ್ಲಿದ್ದರೆ ನೀವು ಮೊತ್ತವನ್ನು ದಾಖಲಿಸಿ ಸೆಂಡ್ ಮಾಡಿದರೆ ಸಾಕಾಗುತ್ತದೆ. ನಂತರ ನಿಮ್ಮ ಬ್ಯಾಂಕ್ ಖಾತೆ ಮತ್ತು ಎಸ್ ಬಿಐ ಖಾತೆ ಒಂದಕ್ಕೊಂದು ಲಿಂಕ್ ಆಗುತ್ತದೆ.

ಬೇರೆ ಬೇರೆ ಶಾಖೆಗಳಲ್ಲಿದರೆ ಕಸ್ಟಮರ್ ಕೇರ್ ಗೆ ಕರೆಮಾಡಿ ಮಾಹಿತಿ ನೀಡಿದರೆ ಸಾಕು, ಅವರು ಒಂದಕ್ಕೊಂದು ಲಿಂಕ್ ಆಗುವಂತೆ ಮಾಡಿಕೊಡುತ್ತಾರೆ. ಅಲ್ಲದೇ ಈ ಬಗ್ಗೆ ವೆಬ್ ತಾಣವೂ ಸಾಕಷ್ಟು ತಿಳಿವಳಿಕೆಯನ್ನು ನೀಡುತ್ತದೆ. ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಖಾತೆಯಿದ್ದರೆ ಇಸಿಎಸ್ ಕಡ್ಡಾಯವಾಗುತ್ತದೆ.

ಪಿಪಿಎಫ್ ಖಾತೆ ತೆರೆಯಲು ಯಾವ ದಾಖಲೆಗಳು ಬೇಕು?

1. ಖಾತೆ ತೆರೆಯುವ ಅರ್ಜಿ
2. ನಾಮಿನೇಶನ್ ಅರ್ಜಿಯೂ ಅಗತ್ಯ
3. ಪ್ಯಾನ್ ಕಾರ್ಡ್ ನಕಲು ಪ್ರತಿ
4. ಕೆವೈಸಿ ನಿರ್ದೇಶನದ ಅನ್ವಯ ಫೋಟೋ ಮತ್ತು ವಿಳಾಸ ದೃಢೀಕರಣ ಪತ್ರ ಹಾಜರುಪಡಿಸಬೇಕು

ಕೊನೆ ಮಾತು: ಪಿಪಿಎಫ್ ಖಾತೆ ಹೊಂದಿದ್ದು ಬ್ಯಾಂಕ್ ಖಾತೆಗೆ ನೆಟ್ ಬ್ಯಾಂಕಿಂಗ್ ಸೌಲಭ್ಯವಿದ್ದರೆ ಕುಳಿತಲ್ಲೇ ಹಣ ರವಾನಿಸುವುದು ಉತ್ತಮ. ಇದು ಶಾಖೆಯಿಂದ ಶಾಖೆಗೆ ಅಲೆದಾಡುವುದನ್ನು ತಪ್ಪಿಸಿ ಸಮಯ ಮತ್ತು ಶ್ರಮದ ಉಳಿತಾಯ ಮಾಡುತ್ತದೆ.(ಗುಡ್ ರಿಟರ್ನ್ಸ್.ಇನ್)

English summary

How To Transfer Money From Bank Account To PPF Account Online?

With individuals getting more and more tech friendly, they prefer visiting banks to a lesser extent and using the internet more to their convenience. While we can transfer money online for a host of investment related products it can also be done for the Public Provident Fund or PPF. Click to know how to transfer PPF Account.
 
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X