For Quick Alerts
ALLOW NOTIFICATIONS  
For Daily Alerts

ತೆರಿಗೆ ವಿನಾಯಿತಿ ನೀಡುವ ಆನ್ ಲೈನ್ ಯೋಜನೆಗಳು

|

ಹಣಕಾಸು ವರ್ಷ ಕೊನೆಗೊಳ್ಳುತ್ತಿದೆ. ಇನ್ನು ನಿಮ್ಮ ಆದಾಯ ತೆರುಗೆ ರಿಯಾಯಿತಿ ಪಡೆಯಲು ಸೂಕ್ತ ಯೋಚನೆ ಮಾಡಿಲ್ಲವೇ? ಎಲ್ಲೋ ಎಡವುತ್ತಿದ್ದೀರಿ ಎಂದೆನಿಸಿದರೆ ಈ ವರದಿಯನ್ನು ಓದಲೇಬೇಕು.

 

ಅಷ್ಟು ಹಣವನ್ನು ಒಂದೇ ಇನ್ ವೆಸ್ಟ್ ಮೆಂಟ್ ಮೇಲೆ ಹಾಕಬೇಕು ಎಂದು ಯಾರೂ ಹೇಳುತ್ತಿಲ್ಲ. ತೆರಿಗೆ ವಿನಾಯಿತಿ ಸಿಗುತ್ತದೆ ಎಂಬ ಮಾತ್ರಕ್ಕೆ ದಿಢೀರ್ ಎಂದು ಹಣ ಹೂಡಿ ಆಮೇಲೆ ಕೈ ಕೈ ಹಿಸುಕಿಕೊಳ್ಳುವುದರಲ್ಲೂ ಅರ್ಥವಿಲ್ಲ.[ತೆರಿಗೆದಾರ ಮಾರ್ಚ್ 31ರೊಳಗೆ ಮಾಡಬೇಕಾದ್ದೇನು?]

 
ತೆರಿಗೆ ವಿನಾಯಿತಿ ನೀಡುವ ಆನ್ ಲೈನ್ ಯೋಜನೆಗಳು

* ELSS ನಲ್ಲಿ ಹಣ ಹೂಡಿ
ಇಕ್ವಿಟಿಗೆ ಸಂಬಂಧಿಸಿದ ಉಳಿತಾಯ ಯೋಜನೆ ಇಎಲ್ ಎಸ್ ಎಸ್ ನಲ್ಲಿ ಹಣ ಹೂಡಿಕೆ ಮಾಡುವುದು ಒಳಿತು. ಕೆವೈಸಿ ಅನುಕೂಲ ಹೊಂದಿದ್ದರೆ ಆನ್ ಲೈನ್ ಮೂಲಕವು ಹಣ ತುಂಬಬಹುದು.

ನೀವು ಹಣ ಹೂಡಿಕೆ ಮಾಡುವ ಮುನ್ನ ಯೋಜನೆಯ ರೇಟಿಂಗ್ ಗಳನ್ನು ನೋಡುವುದು ಉತ್ತಮ. ಆನ್ ಲೈನ್ ಮೂಲಕ ಹಣ ತುಂಬಿದರೆ ದೊರೆಯುವ ಮರುಪಾವತಿಯ ದಾಖಲೆಯನ್ನು ತೆರಿಗೆ ವಿನಾಯಿತಿಗಾಗಿ ಬಳಕೆ ಮಾಡಬಹುದು.

* ತೆರಿಗೆ ವಿನಾಯಿತಿ ನೀಡುವ ಎಫ್ ಡಿ
ಇದು ಸಹ ಉತ್ತಮ ಯೋಜನೆಯಾಗಿದ್ದು ನೀವು ನೆಟ್ ಬ್ಯಾಂಕಿಂಗ್ ಸೌಲಭ್ಯ ಹೊಂದಿದ್ದರೆ ಸುಲಭವಾಗಿ ಹಣ ರವಾನಿಸುವ ಮೂಲಕ ಎಫ್ ಡಿಯಲ್ಲಿ ಹಣ ಹೂಡಬಹುದು. ಇಲ್ಲಿಯೂ ಸಹ ಮರುಪಾವತಿ ಬಳಸಿ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು.

* ಟರ್ಮ್ ಪಾಲಿಸಿಗಳು
ಆನ್ ಲೈನ್ ಟರ್ಮ್ ಪಾಲಿಸಿಗಳಲ್ಲಿ ತಕ್ಷಣಕ್ಕೆ ಹಣ ಹೂಡಿಕೆ ಮಾಡಬಹುದು. ನೀವು ಪ್ರೀಮಿಯಂ ತುಂಬಿದ ಕಂತನ್ನು ಆಧರಿಸಿ ತೆರಿಗೆ ವಿನಾಯಿತಿ ಸಾಧ್ಯವಾಗುತ್ತದೆ.[ಆದಾಯ ತೆರಿಗೆ ಪಾವತಿಸಲು ಆನ್ ಲೈನ್ ನೋಂದಣಿ ಹೇಗೆ?]

* ಆರೋಗ್ಯ ವಿಮಾ ಪಾಲಿಸಿಗಳು
ವಿವಿಧ ಕಂಪನಿಗಳು ಆನ್ ಲೈನ್ ವಿಮಾ ಸೌಲಭ್ಯವನ್ನು ಕೊಡಮಾಡುತ್ತಿವೆ. 45 ವರ್ಷ ಒಳಗಿನ ವ್ಯಕ್ತಿಗಳು ತಕ್ಷಣವೇ ಆನ್ ಲೈನ್ ಆರೋಗ್ಯ ವಿಮೆಯಲ್ಲಿ ಹಣ ಹೂಡಿಕೆ ಮಾಡಬಹುದು. ಬಜೆಟ್ ಅನ್ವಯ ನಾಗರಿಕರಿಗೆ 15 ಸಾವಿರದ ವರೆಗೆ ಮತ್ತು ಹಿರಿಯ ನಾಗರಿಕರಿಗೆ 25 ಸಾವಿರ ರೂ. ವರೆಗೆ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ.

* ಪಿಪಿಎಫ್ ನಲ್ಲಿ ಹಣ ಹೂಡಿಕೆ ಮಾಡಿ
ಬ್ಯಾಂಕ್ ಖಾತೆಯ ಕೆವೈಸಿ ಹೊಂದಿದ್ದರೆ ಕೆಲವು ಕಡೆ ಆನ್ ಲೈನ್ ಮೂಲಕವೇ ಪಿಪಿಎಫ್ ಖಾತೆಯನ್ನು ತೆರೆಯಬಹುದು . ಶೇ. 8.8 ರಷ್ಟು ಬಡ್ಡಿ ದರವನ್ನು ನೀಡುವ ಪಿಪಿಎಫ್ ನಿಮಗೆ ತರಿಗೆ ವಿನಾಯಿತಿಯನ್ನು ಕಲ್ಪಿಸಿಕೊಡುತ್ತದೆ.

ಕೊನೆ ಮಾತು
ಈ ಬಗೆಯ ಅನೇಕ ಯೋಜನೆಗಳನ್ನು ವಿವಿಧ ಕಂಪನಿಗಳು ಕೊಡಮಾಡಿವೆ. ನೀವು ಕೊಂಚ ಎಚ್ಚರಿಕೆಯಿಂದ ಹೆಜ್ಜೆ ಇಟ್ಟರೆ ತೆರಿಗೆ ರಿಟರ್ನ್ಸ್ ಗೊಂದಲಗಳಿಂದ ಮುಕ್ತಿ ಕಾಣುವುದರ ಜತೆಗೆ ಆನ್ ಲೈನ್ ಮೂಲಕವೇ ಹೊಸ ಯೋಜನೆಯಲ್ಲಿ ಹಣ ಹೂಡಿಕೆ ಮಾಡಬಹುದು.(ಗುಡ್ ರಿಟರ್ನ್ಸ್.ಇನ್)

English summary

Last Minute Tax Planning: 5 Online Investments for Instant Tax Saving

The Financial year end is nearing completion and most of us would have done tax planning. If you are not one of those and still planning your taxes, here are few best tax savings avenues at your last moment.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X