For Quick Alerts
ALLOW NOTIFICATIONS  
For Daily Alerts

ಮಧ್ಯಮ ವರ್ಗಕ್ಕೆ ಜೇಟ್ಲಿ ನೀಡಿದ ತೆರಿಗೆ ವಿನಾಯಿತಿ ಪಟ್ಟಿ

|

ಹಣಕಾಸು ಸಚಿವ ಅರುಣ್ ಜೇಟ್ಲಿ ಬಜೆಟ್ ಮಂಡಿಸಿದ್ದು ತೆರಿಗೆ ವಿನಾಯುತಿ ಮತ್ತು ಲಾಭದ ಕುರಿತು ಅನೇಕ ಸಂಗತಿಗಳನ್ನು ತಿಳಿಸಿದ್ದಾರೆ. ಮಧ್ಯಮ ವರ್ಗದ ಜನರಿಗೆ ಯಾವ ರೀತಿಯಲ್ಲಿ ತೆರುಗೆ ಲಾಭಗಳು ಸಿಗುತ್ತವೆ ಎಂಬುದನ್ನು ಜೇಟ್ಲಿ ತಿಳಿಸಿದ್ದು ಇವು ಏಪ್ರಿಲ್ 1 ರಿಂದ ಅನ್ವಯವಾಗಲಿದೆ.

ವಿಮಾ ಸೌಲಭ್ಯಗಳು, ವಿಶೇಷ ರಿಯಾಯಿತಿ, ಸೇವಾ ಶುಲ್ಕ. ಅಬಕಾರಿ ಸುಂಕ ಮತ್ತು ತೆರಿಗೆ ಈ ರೀತಿಯ ಹತ್ತು ಹಲವು ವಿಚಾರಗಳನ್ನು ಜೇಟ್ಲಿ ತಿಳಿಸಿದ್ದು ಮಧ್ಯಮ ವರ್ಗದವರಿಗೆ ಅನುಕೂಲವಾಗುವಂಥ ಕೆಲ ಸೌಲಭ್ಯಗಳ ಮೇಲೆ ಒಂದು ನೋಟ ಇಲ್ಲಿದೆ.[ಆದಾಯ ತೆರಿಗೆ ಪಾವತಿಸಲು ಆನ್ ಲೈನ್ ನೋಂದಣಿ ಹೇಗೆ?]

ಮಧ್ಯಮ ವರ್ಗಕ್ಕೆ ಜೇಟ್ಲಿ ನೀಡಿದ ತೆರಿಗೆ ವಿನಾಯಿತಿ ಪಟ್ಟಿ

* ಆರೋಗ್ಯ ವಿಮೆಯ ಮೊತ್ತವನ್ನು 15 ಸಾವಿರು ರೂ. ನಿಂದ 25 ಸಾವಿರಕ್ಕೆ ಏರಿಸಲಾಗಿದೆ. ಹಿರಿಯ ನಾಗರಿಕರಿಗೆ ಈ ಮೊತ್ತವನ್ನು 20 ಸಾವಿರದಿಂದ 30 ಸಾವಿರ ರೂ. ಗೆ ಏರಿಸಲಾಗಿದೆ.
* ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಆರೋಗ್ಯ ವಿಮೆಗೆ ಸಂಬಂಧಿಸಿ ನೀಡುತ್ತಿದ್ದ 60 ಸಾವಿರ ರೂಪಾಯಿ ಮೊತ್ತವನ್ನು 80 ಸಾವಿರಕ್ಕೆ ಏರಿಸಲಾಗಿದೆ.
* ಅಂಗವಿಕಲರಿಗೆ ಆರೋಗ್ಯ ವಿಮೆ ಅಡಿ ನೀಡುವ ಮೊತ್ತಕ್ಕೆ ಹೆಚ್ಚುವರಿ 25 ಸಾವಿರ ರೂ. ನೀಡಲಾಗುವುದು.
* ಹೊಸ ಪೆನ್ಶನ್ ಯೋಜನೆಯ ಅನ್ವಯ ಮೊತ್ತವನ್ನು 1 ಲಕ್ಷದಿಂದ 1.5 ಲಕ್ಷ ರೂ ಗೆ ಏರಿಸಲಾಗಿದೆ. [ಕೇಂದ್ರ ಬಜೆಟ್: ಯಾವುದು ಏರಿಕೆ? ಯಾವುದು ಇಳಿಕೆ]
* ಹೊಸ ಪೆನ್ಶನ್ ಯೋಜನೆಗೆ ಸಂಬಂಧಿಸಿದ ಹೆಚ್ಚುವರಿ 50 ಸಾವಿರ ರೂ. ಸಂಗ್ರಹಣೆಗೆ u/s 80CCD ಅಡಿಯಲ್ಲೇ ಅವಕಾಶ ಕಲ್ಪಿಸಿಕೊಡಲಾಗಿದೆ.
* ಬಡ್ಡಿ ನೀಡುವ ವಿಧಾನವನ್ನು ಮತ್ತಷ್ಟು ಸರಳಗೊಳಿಸಲಾಗಿದ್ದು ಸುಕನ್ಯಾ ಸಮೃದ್ಧಿ ಯೋಜನೆಗೆ ದೇಣಿಗೆ ನೀಡಿದರೆ ತೆರಿಗೆ ವಿನಾಯಿತಿ ದೊರೆಯಲಿದೆ.
* ವರ್ಷಿತ ಭೀಮಾ ಯೋಜನೆಗೆ ಸೇವಾ ಶುಲ್ಕ ವಿನಾಯಿತಿ.
* ಹಣ್ಣು ಮತ್ತು ತರಕಾರಿ ಸಂಗ್ರಹಣ ಕೇಂದ್ರಗಳಿಗೂ ಸೇವಾ ಶುಲ್ಕ ವಿನಾಯಿತಿ ನೀಡಲಾಗಿದೆ.
* ಯೋಗಕ್ಕೆ ಸಂಬಂಧಿಸಿದ ಕಾರ್ಯಚಟುವಟಿಕೆಗಳಿಗೂ ತೆರಿಗೆ ವಿನಾಯಿತಿ ಲಭ್ಯವಿದೆ.

ಕೊನೆ ಮಾತು: ವಿವಿಧ ಯೋಜನೆಗಳಿಗೆ ದೇಣಿಗೆ ನೀಡಿದರೂ ತೆರಿಗೆ ವಿನಾಯಿತಿ ಪಡೆಯಲು ಸಾಧ್ಯವಿದೆ. ಗಂಗಾಕಲ್ಯಾಣ, ಸುಕನ್ಯಾ ಯೋಜನೆಗಳಿಗೆ ದೇಣಿಗೆ ನೀಡಿದರೆ ಲಾಭ ಪಡೆದುಕೊಳ್ಳಬಹುದು(ಗುಡ್ ರಿಟರ್ನ್ಸ್.ಇನ್)

English summary

List of Benefits Offered to Middle Class Tax-Payers

Finance Minister, Arun Jaitley presented Union Budget 2015 on Feb 28. Here are few benefits offered to middle class for the fiscal year that begins on April 1.
 
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X