For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ಡಿಪಾಸಿಟ್ ಬಿಟ್ಟು ಹೂಡಿಕೆ ಮಾಡಲು ಜಾಗವಿದೆ

|

ನಾವು ಹಣ ಹೂಡಿಕೆ ಮಾಡಿದ ನಂತರ ಅದು ಅಪರಿಮಿತ ರಿಟರ್ನ್ಸ್ ನೀಡಲಿ ಎಂದು ಭಾವಿಸುವುದು ಸಹಜ. ಬ್ಯಾಂಕ್ ನಲ್ಲಿ ಫಿಕ್ಸೆಡ್ ಡಿಪಾಸಿಟ್ ಇಟ್ಟಾಗಲೂ ನಮ್ಮ ಕೋರಿಕೆ ಇದೆ ಆಗಿರುತ್ತದೆ. ಆದರೆ ಬ್ಯಾಂಕ್ ಡಿಪಾಸಿಟ್ ಕೆಲವೊಂದು ಸಂದರ್ಭದಲ್ಲಿ ಅಪಾಯ ಎದುರಿಸಬಹುದು.

 

ಏಕಾಏಕಿ ಬಡ್ಡಿ ದರ ಕುಸಿದರೆ ನೀವು ನಿರೀಕ್ಷೆ ಮಾಡಿದಷ್ಟು ಹಣ ಹಿಂದಕ್ಕೆ ಸಿಗುವ ಸಾಧ್ಯತೆ ಕಡಿಮೆಯಾಗಬಹುದು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಡಿಪಾಸಿಟ್ ನ್ನು ಹೊರತುಪಡಿಸಿ ಅತಿಹೆಚ್ಚು ರಿಟರ್ನ್ಸ್ ನೀಡುವ ಆದರೆ ಅಷ್ಟೇ ಸುರಕ್ಷಿತವಾದ ಕೆಲ ಯೋಜನೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.[ಫಿಕ್ಸೆಡ್ ಡಿಪಾಸಿಟ್ ಕಾಲಾವಧಿ ಬಗ್ಗೆ ನಿಮಗೆಷ್ಟು ಗೊತ್ತು?]

 
ಬ್ಯಾಂಕ್ ಡಿಪಾಸಿಟ್ ಬಿಟ್ಟು ಹೂಡಿಕೆ ಮಾಡಲು ಜಾಗವಿದೆ

1. ತೆರಿಗೆ ಮುಕ್ತ ಬಾಂಡ್ ಗಳು
ತೆರಿಗೆ ಮುಕ್ತ ಬಾಂಡ್ ಗಳನ್ನು ಕೆಲ ಸಂಘ ಸಂಸ್ಥೆಗಳು ಹೊರಡಿಸುತ್ತವೆ. ಸಾಮಾನ್ಯವಾಗಿ ಶೇ. 7 ರಿಂದ 9.5 ರವರೆಗೆ ಬಡ್ಡಿ ಪಡೆಯಲು ಇಲ್ಲಿ ಸಾಧ್ಯವಿದೆ. ಸರ್ಕಾರದಿಂದ ಸಹಾಯ ಪಡೆಯುತ್ತಿರುವ ಅಥವಾ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಇಂಥ ಬಾಂಡ್ ವಿತರಣೆ ಮಾಡುತ್ತವೆ.

2. ಮ್ಯೂಚುವಲ್ ಫಂಡ್ಸ್
ಡೆಟ್ ಮ್ಯೂಚುವಲ್ ಫಂಡ್ ಸಹ ಉತ್ತಮ ಹೂಡಿಕೆ ತಂತ್ರವಾಗಿದೆ. ಇಲ್ಲಿಯೂ ಸರ್ಕಾರದ ರಕ್ಷಣೆ ಇರಲಿದ್ದು ಬ್ಯಾಂಕ್ ಡಿಪಾಸಿಟ್ ಗಳಿಗಿಂತ ಹೆಚ್ಚಿನ ಮರುಪಾವತಿ ನೀಡಬಲ್ಲದು. ಅಲ್ಲದೇ ಇಲ್ಲಿ ನಿಮಗೆ ಬದಲಾವಣೆ ಆಯ್ಕೆ ಸ್ವಾತಂತ್ರ್ಯವೂ ಹೆಚ್ಚಿನದ್ದಾಗಿರುತ್ತದೆ.[ಎಟಿಎಂ ಮೂಲಕ ಹಣ ಡಿಪಾಸಿಟ್ ಮಾಡೋದು ಹೇಗೆ?]

3. ತಿಂಗಳ ಆದಾಯ ಯೋಜನೆ
ಎಂಐಪಿ ಎಂದು ಕರೆಯುವ ಯೋಜನೆ ಡೆಟ್ ಆಧಾರಿತವಾಗಿದ್ದು ಮ್ಯೂಚುವಲ್ ಫಂಡ್ ಹೆಸರಿನಲ್ಲಿಯೇ ನಡೆಯುತ್ತದೆ. ಬಹುತೇಕ ಪಾಲು ಡೆಟ್ ಹೆಸರಿನಲ್ಲಿಯೇ ಹೂಡಿಕೆಯಾಗಿರುತ್ತದೆ. ಸುಮಾರು 75 ರಿಂದ 80ರಷ್ಟು ಹಣ ಡೆಟ್ ರೀತಿಯಲ್ಲಿಯೇ ಹೂಡಿಕೆಯಾಗಿದ್ದರೆ ಉಳಿದ ಹಣ ಈಕ್ವಿಟಿ ಮತ್ತು ಹಣದ ರೀತಿಯಲ್ಲಿ ಇರುತ್ತದೆ.

4. ಕಾರ್ಪೋರೇಟ್ ಎನ್ ಸಿಡಿ
ಕಾರ್ಪೋರೇಟ್ ಕಂಪನಿಗಳ ಎನ್ ಸಿಡಿ ಮೇಲೆ ಹೂಡಿಕೆ ಮಾಡಿದರೂ ಹಣ ಗಳಿಸಬಹುದು. ದೀರ್ಘಾವಧಿ ಹೂಡಿಕೆ ಮಾಡಲಿಚ್ಛಿಸುವವರಿಗೆ ಇದು ಉತ್ತಮ ತಂತ್ರ. ನಿಮ್ಮ ಹಣಕ್ಕೆ ಸಂಬಂಧಿಸಿದ ಕಾರ್ಪೋರೇಟ್ ಕಂಪನಿಯ ಆಧಾರ ಅಥವಾ ಹೆಸರು ಇರುವುದರಿಂದ ಹಣ ಕಳೆದುಕೊಳ್ಳುವ ಆತಂಕ ಕಡಿಮೆ.[ಎಸ್ ಬಿಐ ಗೋಲ್ಡ್ ಡಿಪಾಸಿಟ್ ಯೋಜನೆಯ 6 ಲಾಭ]

5. ಪಿಪಿಎಫ್, ಎಸ್ ಎಸ್ ಸಿ, ಮತ್ತು ಎನ್ ಎಸ್ ಸಿ
ದೀರ್ಘ ಕಾಲದ ಹೂಡಿಕೆಗೆ ಇವು ಹೇಳಿ ಮಾಡಿಸಿದ ತಂತ್ರಗಳು. ಆದರೆ ಇಲ್ಲಿ ನೀವು ಹೂಡಿದ ಹಣದ ಮೇಲೆ ನಿಮಗೆ ಅಧಿಕಾರ ಬರಲು ಕೆಲ ದಿನ ಕಾಯಬೇಕಾಗಬಹುದು. ಬ್ಯಾಂಕ್ ನ ಫಿಕ್ಸೆಡ್ ಡಿಪಾಸಿಟ್ ಗೆ ಹೋಲಿಸಿದರೆ ಇವು ಉತ್ತಮ ಮಾರ್ಗ ಎಂದೇ ಹೇಳಬಹುದು.

ಕೊನೆ ಮಾತು
ಯಾವುದೇ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವ ಮುನ್ನ ತೆರಿಗೆ ನೀತಿ, ಹಣದ ರಿಟರ್ನ್ಸ್ ಮತ್ತು ಸರ್ಕಾರದ ನೀತಿ ನಿಯಮಗಳನ್ನು ಅರಿತು ಮುಂದಕ್ಕೆ ಹೆಜ್ಜೆ ಇಡಬೇಕಾಗುವುದು. ಇಲ್ಲವಾದಲ್ಲಿ ಮಾಹಿತಿ ಕೊರತೆ ಅಥವಾ ಕೆಟ್ಟ ಮಾರ್ಗದರ್ಶನದಿಂದ ತಪ್ಪು ಹಾದಿ ತುಳಿದಿರುತ್ತೇವೆ.(ಗುಡ್ ರಿಟರ್ನ್ಸ್.ಇನ್)

English summary

5 Safe Investment Options Other Than Bank Deposits

Individuals who are risk averse always look to invest in safe instruments as the returns are fixed and will get back the principal on time. Other than bank fixed deposits there are few other risk free and safe investment options for risk averse individuals. However, in recent times, there has been fall in interest rates in bank deposits, so one can consider these options for better returns.
 
 
Story first published: Monday, April 27, 2015, 12:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X