For Quick Alerts
ALLOW NOTIFICATIONS  
For Daily Alerts

ತುರ್ತು ನಿಧಿ ಪಡೆದುಕೊಳ್ಳುವ 5 ತಂತ್ರಗಳು

|

ಹಣದ ಮೌಲ್ಯವೇ ಹಾಗೆ. ಯಾವ ಸಮಯದಲ್ಲಿ ನಮಗೆ ಅಗತ್ಯ ಬೀಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಣಕಾಸು ತಜ್ಞರು ಸಹ ಇದನ್ನು ಒಪ್ಪುತ್ತಾರೆ. ಅಲ್ಲದೇ ತುರ್ತು ನಿಧಿ ಎಂದು ಸ್ವಲ್ಪ ಹಣ ತೆಗೆದಿರಸಲು ಹೇಳುತ್ತಾರೆ.

 

ನಿಮ್ಮ ಭವಿಷ್ಯದ ಉಳಿತಾಯ ಯೋಜನೆಗೆ ಒಂದು ನಿರ್ದಿಷ್ಟ ರೂಪ ನೀಡಬೇಕು ಎಂಥಾದರೆ ವಾಸ್ತವದ ಹಣಕಾಸು ಪರಿಸ್ಥಿತಿ ಸರಿಯಾಗಿರಬೇಕು. ಆರೋಗ್ಯ ಸಮಸ್ಯೆ, ಅಪಘಾತ, ಶಿಕ್ಷಣ ಪ್ರವೇಶ ಮುಂತಾದ ಸಂದರ್ಭಗಳಲ್ಲಿ ಹಣದ ತುರ್ತ ಅಗತ್ಯ ಬಿದ್ದರೆ ಅದಕ್ಕೆ ಯಾವ ಬಗೆಯ ಪರಿಹಾರ ಕಂಡುಕೊಳ್ಳಬಹುದು? ಅಥವಾ ಎಲ್ಲಿ ಹೂಡಿಕೆ ಮಾಡಿ ಇಟ್ಟುಕೊಂಡರೆ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಿಕೊಳ್ಳಬಹುದು ಎಂಬುದನ್ನು ನೋಡುವುದು ಅಗತ್ಯವಾಗುತ್ತದೆ.[ಎಲ್ಲೋ ಚೆಕ್ ಬುಕ್ ಇಟ್ಟು ಕೈ ಸುಟ್ಟುಕೊಳ್ಳಬೇಡಿ]

 
ತುರ್ತು ನಿಧಿ ಪಡೆದುಕೊಳ್ಳುವ 5 ತಂತ್ರಗಳು

1. ಪ್ರತ್ಯೇಕ ಖಾತೆ ಮಾಡಿಟ್ಟಿಕೊಳ್ಳಿ
ತುರ್ತು ನಿಧಿ ಎಂದು ಪ್ರತ್ಯೇಕ ಖಾತೆ ಮಾಡಿಟ್ಟುಕೊಳ್ಳುವುದು ಉತ್ತಮ. ಒಂದು ನಿರ್ದಿಷ್ಟ ಮೊತ್ತ ಸಂಗ್ರಹವಾಯಿತು ಎಂದೆನಿಸಿದರೆ ಅದನ್ನು ಫಿಕ್ಸಡ್ ಡಿಪಾಸಿಟ್ ಅಥವಾ ಮ್ಯೂಚುವಲ್ ಫಂಡ್ ಅಥವಾ ಬಾಂಡ್ ಗಳಲ್ಲಿ ಹೂಡಿಕೆ ಮಾಡಬಹುದು.

2. ತೆರಿಗೆ ಯೋಜನೆ
ನೀವು ಹೆಚ್ಚಿನ ತೆರಿಗೆ ತುಂಬುವವರಾಗಿದ್ದರೆ ವಿನಾಯಿತಿ ತಂತ್ರಗಳನ್ನು ಮೊದಲು ತಿಳಿದುಕೊಳ್ಳಿ. ಅದರಂತೆ ತೆರಿಗೆ ರಿಟರ್ನ್ಸ್ ಪಾವತಿ ಮಾಡಿ. ಹಣಕಾಸು ವರ್ಷದ ನಂತರ ಹಿಂದಕ್ಕೆ ಬರುವ ಟ್ಯಾಕ್ಸ್ ರಿಟರ್ನ್ಸ್ ನ್ನು ತುರ್ತು ನಿಧಿಯಾಗಿ ಬಳಕೆ ಮಾಡಿಕೊಳ್ಳಬಹುದು.[ಅಕೌಂಟ್ ಕ್ಲೋಸ್ ಮಾಡುವ ಮುನ್ನ 6 ಅಂಶ ತಲೆಯಲ್ಲಿರಲಿ]

3. ಕ್ರೆಡಿಟ್ ಕಾರ್ಡ್
ಕ್ರೆಡಿಟ್ ಕಾರ್ಡ್ ಕೈಗೆ ಸಿಕ್ಕರೂ ನಿಮ್ಮ ಖರ್ಚು ವೆಚ್ಚದ ಮೇಲೆ ನಿಗಾ ಇರಲಿ. ಹೆಚ್ಚಿನ ಬಡ್ಡಿ ತೆರುವುದನ್ನು ಕಡಿಮೆ ಮಾಡಿಕೊಳ್ಳಿ. ಇಲ್ಲಿ ವಾಸ್ತವಿಕತೆಯ ಅರಿವನ್ನು ಹೊಂದಿದ್ದರೆ ಕ್ರೆಡಟ್ ಕಾರ್ಡ್ ಸಹ ನಿಮಗೆ ಆಪತ್ತಿನ ಧನ ಸಹಾಯ ನೀಡಬಲ್ಲದು.

4. ವೇತನ ಹೆಚ್ಚಳ
ನಿಮ್ಮ ವೇತನದಲ್ಲಿ ಹೆಚ್ಚಳ ಕಂಡುಬಂದರೆ ಖರ್ಚು ವೆಚ್ಚವನ್ನು ಹೆಚ್ಚಿಗೆ ಮಾಡಿಕೊಳ್ಳಲು ಹೋಗಬೇಡಿ. ನಿರ್ದಿಷ್ಟ ಹಣವನ್ನು ಒಂದೆಡೆಗೆ ತೆಗೆದಿರುಸುವುದನ್ನು ಕಲಿತುಕೊಳ್ಳಿ. ಪ್ರತಿ ತಿಂಗಳು 2 ರಿಂದ 3 ಸಾವಿರ ರೂ. ಉಳಿತಾಯ ಮಾಡುವುದನ್ನು ಕಲಿತುಕೊಂಡರೆ ಆಪತ್ತು ಎದುರಾದಾಗ ಎದೆಗುಂದುವ ಸಂದರ್ಭ ಬರುವುದಿಲ್ಲ.[ಆದಾಯ ತೆರಿಗೆ ರಿಫಂಡ್ ಚೆಕ್ ಹಿಂದಕ್ಕೆ ಪಡೆಯುವುದು ಹೇಗೆ?]

5. ಶೀಘ್ರ ಕಾಲದ ಹೂಡಿಕೆಗಳು
ಕೆಲ ತಿಂಗಳು ಕಾಲದ ಉಳಿತಾಯ ಯೋಜನೆಯಲ್ಲಿ ಹಣ ಹೂಡುವುದು ಲಾಭದಾಯಕವಾಗಿ ಪರಿಣಮಿಸುತ್ತದೆ. ಹೆಚ್ಚಿನ ಬಡ್ಡಿ ದರ ನೀಡುವ ಆದರೆ ಸುರಕ್ಷಿತ ಹೂಡಿಕೆ ತಾಣಗಳಲ್ಲಿ ಹಣ ಹಾಕುವುದು ಉತ್ತಮ.

ಕೊನೆ ಮಾತು : ಎಮರ್ಜೆನ್ಸಿ ಫಂಡ್ ಅಥವಾ ತುರ್ತು ನಿಧಿಯನ್ನು ಎಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂಬ ಸ್ಪಷ್ಟ ಅರಿವು ನಮಗಿರಬೇಕು. ಆರೋಗ್ಯ ಸಮಸ್ಯೆ, ಕೆಲಸ ಕಳೆದುಕೊಂಡ ಸಂದರ್ಭದಲ್ಲಿ ಮಾತ್ರ ಈ ಹಣಕ್ಕೆ ಕೈ ಹಾಕಬೇಕು. ಬದಲಾಗಿ ಇದನ್ನು ಬಟ್ಟೆ ಕೊಳ್ಳಲು, ಶಾಪಿಂಗ್ ಗೆ ಬಳಸಿದರೆ ಏನೂ ವ್ಯತ್ಯಾಸ ಆಗುವುದಿಲ್ಲ.(ಗುಡ್ ರಿಟರ್ನ್ಸ್.ಇನ್)

English summary

5 Smart Ways to Build Emergency Fund

Most of the financial advisers suggest to build a emergency fund which can be used on a rainy day. The main advantage of setting an amount aside is at the time of need, one need not break the long term investments made. It will help you maintain you future financial commitments by taking care of the present financial situation.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X