For Quick Alerts
ALLOW NOTIFICATIONS  
For Daily Alerts

ನಿಮ್ಮ ಮನೆಗೆ ಭೂಕಂಪ, ಸುನಾಮಿ ವಿಮೆ ಇದೆಯೇ?

By Mahesh
|

ನೈಸರ್ಗಿಕ ವಿಕೋಪದಿಂದ ಮನೆ ಕಳೆದುಕೊಂಡವರ ಪಾಡು ಹೇಳ ತೀರದು. ನೇಪಾಳದಲ್ಲಿ ಸಂಭವಿಸಿರುವ ಭೂಕಂಪ ಹಾಗೂ ಅದರ ಪರಿಣಾಮ ಭಾರತದ ವಿವಿಧೆಡೆ ಹಬ್ಬಿದೆ. ಈ ರೀತಿಯ ವಿಕೋಪದಿಂದ ಪ್ರಾಣ ಉಳಿಸಿಕೊಳ್ಳುವುದೇ ಕಷ್ಟವಾಗಿರುವಾಗ ಇನ್ನು ಮನೆ ಸ್ಥಿರಾಸ್ತಿ ಹೇಗೆ ಯೋಚಿಸುವುದು ಎಂದು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳಬೇಡಿ.

ಈಗ ಮನೆ ಮೇಲೆ ವಿಮೆ ಮಾಡಿಸುವ ವಿಧಾನ ಹಾಗೂ ಯೋಜನೆಗಳು ಬದಲಾಗಿವೆ. ಅನೇಕ ಕಂಪನಿಗಳು ನೈಸರ್ಗಿಕ ವಿಕೋಪದಿಂದ ನಿಮ್ಮ ಮನೆಗೆ ಹಾನಿಯಾದರೆ ಅದಕ್ಕೆ ಪರಿಹಾರ ನೀಡುತ್ತಿವೆ. [ಅತಿ ಹೆಚ್ಚು ಗೃಹ ಸಾಲ ಪಡೆಯಲು ಏನು ಮಾಡಬೇಕು?]

ಪೈಸಾ ಪೈಸಾ ದುಡ್ಡು ಸೇರಿಸಿ ಕಷ್ಟಪಟ್ಟು ಮನೆ ಕಟ್ಟಿ ಅದನ್ನು ಸಿಂಗರಿಸಿ ನೆಲೆಸಿ ಆನಂದದಿಂದ ಕಾಲ ಕಳೆಯುವ ಮುನ್ನ ಮನೆಗೆ ವಿಮೆ ಮಾಡಿಸಿ. ಅನಾಹುತಕ್ಕೂ ಮುನ್ನ ಸುರಕ್ಷತಾ ವಿಧಾನಗಳನ್ನು ಅನುಸರಿಸಿ ಭದ್ರತೆಯ ನೆಲೆ ಕಂಡುಕೊಳ್ಳುವಂತೆ ಮನೆ ವಿಮೆ ಮಾಡಿಸಿಕೊಂಡು ನೈಸರ್ಗಿಕ ವಿಕೋಪದಿಂದ ಹಾನಿಗೊಳಗಾದ ಮನೆಯಿಂದ ಉಂಟಾದ ನಷ್ಟವನ್ನು ತುಂಬಿಕೊಳ್ಳಬಹುದು.

ಮನೆ ರಿಪೇರಿಗಾಗಿ ಗೃಹ ಸಾಲ ಕೂಡಾ ದೊರೆಯುತ್ತದೆ. ಮನೆ ವಿಮೆ ಬದಲಾವಣೆಗಳು, ನೈಸರ್ಗಿಕ ವಿಕೋಪಕ್ಕೆ ಪರಿಹಾರ ನೀಡುವ ಸಂಸ್ಥೆಗಳ ವಿವರ ಇಲ್ಲಿದೆ...

ಗೃಹಸಾಲ ಪಡೆಯುವ ಮುನ್ನ ಗಮನಿಸಿ

ಗೃಹಸಾಲ ಪಡೆಯುವ ಮುನ್ನ ಗಮನಿಸಿ

ಗೃಹಸಾಲ ಪಡೆಯುವ ಮುನ್ನ ಬ್ಯಾಂಕುಗಳು ನಿಮ್ಮ ಮನೆಗೆ ವಿಮೆ ಒದಗಿಸುವುದಿಲ್ಲ. ನೀವೆ ಈ ಬಗ್ಗೆ ವಿಚಾರಣೆ ಪಡೆಯಬೇಕಾಗುತ್ತದೆ. ಅಗತ್ಯ ಬಿದ್ದರೆ ಪ್ರತ್ಯೇಕ ಪಾಲಿಸಿ ಮಾಡಿಸುವುದು ಒಳ್ಳೆಯದು. ಗೃಹ ವಿಮೆ ಪಡೆಯುವಾಗಲೂ ನೈಸರ್ಗಿಕ ವಿಕೋಪ ಪರಿಹಾರ ನೀಡಲಾಗುತ್ತದೆಯೇ? ಎಂಬುದನ್ನು ಕೇಳಿ ತಿಳಿದುಕೊಂಡು ಮುಂದುವರೆಯಿರಿ.

ಯಾವ ಯಾವ ನೈಸರ್ಗಿಕ ವಿಕೋಪಗಳಿವೆ

ಯಾವ ಯಾವ ನೈಸರ್ಗಿಕ ವಿಕೋಪಗಳಿವೆ

ಭೂಕಂಪ ಅಲ್ಲದೆ ಸುನಾಮಿ, ಪ್ರವಾಹ, ಭೂಕುಸಿತ, ಅಗ್ನಿ ಆಕಸ್ಮಿಕ ಸೇರಿದಂತೆ ನೈಸರ್ಗಿಕ ವಿಕೋಪಗಳಿಂದ ನಿಮ್ಮ ಸ್ಥಿರಾಸ್ತಿಗೆ ಹಾನಿ ಉಂಟಾದರೆ ಅದಕ್ಕೆ ಪರಿಹಾರ ನೀಡಲು ಆರ್ಥಿಕ ಸಂಸ್ಥೆಗಳಿವೆ. ಈ ಬಗ್ಗೆ ಗೃಹ ವಿಮೆ ಮಾಡಿಸುವಾಗ ಸರಿಯಾದ ಮಾಹಿತಿ ಪಡೆಯುವುದು ಮುಖ್ಯ. ವಿಮೆ ನೀಡುವ ಸಂಸ್ಥೆಗಳ ವಿವರ ಮುಂದೆ ಓದಿ

ಐಸಿಐಸಿಸಿ ಲೊಬಾರ್ಡ್ ಗೃಹ ವಿಮೆ

ಐಸಿಐಸಿಸಿ ಲೊಬಾರ್ಡ್ ಗೃಹ ವಿಮೆ

* ಮನೆ ಒಳ ಹೊರಗಿನ ಕಟ್ಟಡ ವಿನ್ಯಾಸ ಒಳಗೊಂಡಿದೆ.
* ಬೆಂಕಿ ಅನಾಹುತ, ಕಳ್ಳತನ, ದರೋಡೆ ಆಕಸ್ಮಿಕ ದುರಂತಗಳಿಗೂ ವಿಮೆ ಕವರ್.
* ಭಯೋತ್ಪಾದನಾ ಕೃತ್ಯದಿಂದ ಹಾನಿಗೂ ಪರಿಹಾರ.
* ಯುದ್ಧ, ಅಣ್ವಾಸ್ತ್ರದಿಂದ ಧ್ವಂಸ, ಉದ್ದೇಶಪೂರ್ವಕ ಹಾನಿ, ಸಾಮಾನ್ಯ ಮಳೆ, ಗಾಳಿಯಿಂದ ಹಾನಿ, ಮರದ ಸಾಮಾಗ್ರಿಗಳಿಗೆ ಗೆದ್ದಲು ಹಿಡಿದರೆ ವಿಮೆ ಹಣ ಸಿಗುವುದಿಲ್ಲ.
* ಬಟ್ಟೆ ಬರೆ, ಅಡುಗೆ ಸಾಮಾಗ್ರಿ, ಎಲೆಕ್ಟ್ರಾನಿಕ್ ವಸ್ತು, ಮೇಜು ಕುರ್ಚಿ, ಆಭರಣ, ಕಲಾಕೃತಿ.ಇತ್ಯಾದಿ ವಿಮೆ ಆರಂಭದಲ್ಲೇ ಸೇರಿಸಿಕೊಂಡಿದ್ದರೆ ಪರಿಹಾರ.

ಎಚ್ ಡಿಎಫ್ ಸಿ ಎರ್ಗೋಸ್ ಗೃಹ ವಿಮೆ

ಎಚ್ ಡಿಎಫ್ ಸಿ ಎರ್ಗೋಸ್ ಗೃಹ ವಿಮೆ

* ಬೆಂಕಿ ಅನಾಹುತ, ಸಿಡಿಲು ಹೊಡೆತ, ಸ್ಫೋಟ, ಆಂತರಿಕ ಸ್ಫೋಟ, ಪ್ರವಾಹ, ಬಿರುಗಾಳಿ, ಭೂಕಂಪ, ಅಗ್ನಿಪರ್ವತ ಸ್ಫೋಟ ಇನ್ನಿತರ ನೈಸರ್ಗಿಕ ವಿಕೋಪ.
* ಗಲಭೆ, ಪ್ರತಿಭಟನೆ, ಭಯೋತ್ಪಾದನೆ, ಕಳ್ಳತನ, ದರೋಡೆ ಮುಂತಾದವುಗಳಿಂದ ಹಾನಿಗೊಳಗಾದರೆ ಎಫ್ ಐಆರ್ ಕಾಪಿ ನೀಡುವುದು ಕಡ್ಡಾಯ.

ಟಾಟಾ ಎಐಜಿ Standard Fire and Special Perils

ಟಾಟಾ ಎಐಜಿ Standard Fire and Special Perils

* ಬೆಂಕಿ ಅನಾಹುತ, ಸಿಡಿಲು ಹೊಡೆತ, ಸ್ಫೋಟ, ಆಂತರಿಕ ಸ್ಫೋಟ, ಪ್ರವಾಹ, ಬಿರುಗಾಳಿ, ಭೂಕಂಪ, ಅಗ್ನಿಪರ್ವತ ಸ್ಫೋಟ ಇನ್ನಿತರ ನೈಸರ್ಗಿಕ ವಿಕೋಪ.
* ಏರ್ ಕ್ರಾಫ್ಟ್ ಹೊಡೆತ, ನೀರಿನ ಟ್ಯಾಂಕ್ ಕುಸಿತ, ಭೂ ಕುಸಿತ, ಗಲಭೆ, ಪ್ರತಿಭಟನೆ, ಕ್ಷಿಪಣಿ ಪರೀಕ್ಷೆಯಿಂದ ಉಂಟಾದ ಹಾನಿ.
* ಭೂಕಂಪ ಹಾಗೂ ಭಯೋತ್ಪಾದನಾ ದಾಳಿಯಿಂದ ಉಂಟಾದ ಹಾನಿ ಬಗ್ಗೆ ಪ್ರತ್ಯೇಕ ತಿಳಿಸಬೇಕು.

ಭಾರ್ತಿ ಆಕ್ಸಾ ಸ್ಟ್ಯಾಂಡರ್ಡ್ ಫೈರ್ ಅಂಡ್ ಪೆರಿಲ್ಸ್

ಭಾರ್ತಿ ಆಕ್ಸಾ ಸ್ಟ್ಯಾಂಡರ್ಡ್ ಫೈರ್ ಅಂಡ್ ಪೆರಿಲ್ಸ್

* ಬೆಂಕಿ ಅನಾಹುತ, ಸಿಡಿಲು ಹೊಡೆತ, ಸ್ಫೋಟ, ಆಂತರಿಕ ಸ್ಫೋಟ, ಪ್ರವಾಹ, ಬಿರುಗಾಳಿ, ಭೂಕಂಪ ಇದರಲ್ಲಿ ಕವರ್ ಆಗಲಿದೆ.
* ಯುದ್ಧ, ಅತಿಕ್ರಮ ಪ್ರವೇಶ, ವಿದೇಶಿ ಶತ್ರುಗಳಿಂದ ದಾಳಿ, ನಾಗರಿಕ ಯುದ್ಧ, ದಂಗೆ ಮುಂತಾದವುಗಳಿಂದ ಉಂಟಾದ ಹಾನಿ ಇದರಲ್ಲಿ ಕವರ್ ಆಗುವುದಿಲ್ಲ.

English summary

Does your Home Insurance Cover Natural Calamities Like Earthquake and Tsunami?

Individuals take so much pain in building their dream home and decorating with expensive items, but fail to take insurance for the same. With the recent Nepal earthquake which has shocked the entire world, one needs to be prepared to face such calamities and its aftermath.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X