For Quick Alerts
ALLOW NOTIFICATIONS  
For Daily Alerts

ಏಪ್ರಿಲ್ 1 ರಿಂದ ಯಾವುದು ಹೆಚ್ಚು? ಯಾವುದು ಕಡಿಮೆ?

|

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬಜೆಟ್ ಮಂಡಿಸಿ ತಿಂಗಳು ಕಳೆದಿದೆ. ಆದರೆ ಬಜೆಟ್ ನಲ್ಲಿ ಹೇಳಿರುವ ಅಂಶಗಳು ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ. ದಿನನಿತ್ಯ ಬಳಕೆ ಮಾಡುವ ಯಾವ ವಸ್ತುಗಳಿಗೆ ಹೆಚ್ಚಿನ ಬೆಲೆ ನೀಡಬೇಕು? ಯಾವುದು ಕಡಿಮೆಯಾಗುತ್ತದೆ? ಎಂಬ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತದೆ.

ಬಜೆಟ್ ನಲ್ಲಿ ಯಾವ ಯಾವ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ? ಆದಾಯವನ್ನು ಎಲ್ಲಿಂದ ಸಂಗ್ರಹಿಸಲಾಗುತ್ತದೆ?ರೂಪಾಯಿ ಬಂದಿದ್ದು ಎಲ್ಲಿಂದ? ಹೋದದ್ದು ಎಲ್ಲಿಗೆ? ಈ ಬಗೆಯ ಅನೇಕ ವಿಚಾರಗಳನ್ನು ಮಾಧ್ಯಮಗಳು ವರದಿ ಮಾಡಿರುತ್ತವೆ. ಆದರೆ ಸರಳವಾಗಿ ಯಾವುದರ ಬೆಲೆ ಏರುತ್ತದೆ? ಯಾವುದು ಇಳಿಯುತ್ತದೆ? ಎಂಬುದನ್ನು ಇಲ್ಲಿ ಹೇಳಲಾಗಿದೆ.

ಹೊಸ ಹಣಕಾಸು ವರ್ಷ ಆರಂಭವಾಗಿದ್ದು ಬಜೆಟ್ ಎಲ್ಲ ಸಂಗತಿಗಳು ಕಾರ್ಯಗತವಾಗಲಿವೆ. ಬಜೆಟ್ ನಲ್ಲಿ ಹೇಳಿರುವಂತೆ ಯಾವ ಪದಾರ್ಥಗಳು ಏಪ್ರಿಲ್ 1 ರಿಂದ ಕಡಿಮೆಯಾಲಿವೆ? ಯಾವಕ್ಕೆ ಹೆಚ್ಚು ಹಣ ತೆರಬೇಕು? ಎಂಬುದರ ಸಂಕ್ಷಿಪ್ತ ಪಟ್ಟಿ ಇಲ್ಲಿದೆ.(ಗುಡ್ ರಿಟರ್ನ್ಸ್.ಇನ್)

ಹೊರಗೆ ತಿಂದರೆ ಜೇಬು ಖಾಲಿ

ಹೊರಗೆ ತಿಂದರೆ ಜೇಬು ಖಾಲಿ

ಕೇಂದ್ರ ಬಜೆಟ್ ನಲ್ಲಿ ಸೇವಾ ತೆರಿಯೆಯನ್ನು ಶೇ. 14 ಕ್ಕೆ ಏರಿಸಲಾಗಿದೆ. ಪರಿಣಾಮ ರೆಸ್ಟೋರೆಂಟ್ ಗಳಲ್ಲಿ ಕಾಲ ಕಳೆಯುವುದನ್ನು ಕಡಿಮೆ ಮಾಡಿ. ಇಲ್ಲವಾದರೆ ಜೇಬು ಬಹುಬೇಗ ಖಾಲಿಯಾಗುವುದು ಖಚಿತ.

 ನಿರ್ಮಾಣ ಹಂತದ ಆಸ್ತಿ ಖರೀದಿ

ನಿರ್ಮಾಣ ಹಂತದ ಆಸ್ತಿ ಖರೀದಿ

ಸೇವಾ ತೆರಿಗೆ ಏರಿಕೆ ಮಾಡಿರುವುದರಿಂದ ಇದು ಸಹ ದುಬಾರಿಯಾಗಲಿದೆ. ಆದರೆ ನೀವು ಪಡೆದುಕೊಂಡ ಸೇವೆ ಅಥವಾ ಕಟ್ಟಡ ನಿರ್ಮಾಣಕ್ಕೆ ಬಳಸಿಕೊಂಡ ಕೂಲಿಗೆ ಹಣ ಹೆಚ್ಚಿಗೆ ನೀಡಬೇಕೆ ವಿನಃ ಇಡೀ ಆಸ್ತಿಗಲ್ಲ.

ಮೊಬೈಲ್ ಬಿಲ್ ಗಳು

ಮೊಬೈಲ್ ಬಿಲ್ ಗಳು

ಮೊಬೈಲ್ ಬಿಲ್ ಗಳು ಹೆಚ್ಚಾಗಲಿವೆ. ತರಂಗಾಂತರ ಹಂಚಿಕೆ ಪ್ರಕ್ರಿಯೆಯೂ ಅಂತ್ಯವಾಗಿರುವುದು ಮತ್ತು ಸೇವಾ ತೆರಿಗೆ ಏರಿಕೆ ನಮ್ಮ ಮೊಬೈಲ್ ಬಳಕೆ ಮೇಲೆ ಪರಿಣಾಮ ಬೀರಲಿದೆ.

ಧೂಮಪಾನ ಜೇಬನ್ನೂ ಸುಡುತ್ತದೆ

ಧೂಮಪಾನ ಜೇಬನ್ನೂ ಸುಡುತ್ತದೆ

ಸಿಗರೇಟು ದೇಹದ ಜತೆ ಜೇಬನ್ನು ಸುಡಲಿದೆ. ಪ್ರತಿ ಪ್ಯಾಕ್ ಮೇಲೆ 10 ರೂ. ಹೆಚ್ಚಾದರೂ ಆಶ್ಚರ್ಯವಿಲ್ಲ. ಧುಮಪಾನಿಗಳು ಇಂದೇ ಚಟವನ್ನು ತ್ಯಜಿಸುವುದು ಒಳಿತು.

ಕಟ್ಟಡ ನಿರ್ಮಾಣ ಕಷ್ಟ ಕಷ್ಟ

ಕಟ್ಟಡ ನಿರ್ಮಾಣ ಕಷ್ಟ ಕಷ್ಟ

ಮನೆ ಕಟ್ಟುವುದು ಇನ್ನು ಸುಲಭವಲ್ಲ. ಸಿಮೆಂಟ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಗೆ ಮಾಡಿರುವುದರಿಂದ ಕಟ್ಟಡ ನಿರ್ಮಾಣ ಕಷ್ಟ ಸಾಧ್ಯವಾಗಲಿದೆ. ಸಿಮೆಂಟ್ ಕಂಪನಿಗಳು ಏಪ್ರಿಲ್ 1 ರಿಂದಲೇ ಹೊಸ ದರ ಜಾರಿ ಮಾಡುವ ಸಂಭವವಿದೆ.

ವಿದೇಶಿ ವಾಹನಗಳು

ವಿದೇಶಿ ವಾಹನಗಳು

ಇದು ವ್ಯಕ್ತಿಗೆ ಸಂಬಂಧಿಸಿದ ಸಂಗತಿಯಲ್ಲ. ಯಾವುದೇ ಸಂಸ್ಥೆ ವಾಣಿಜ್ಯ ಉದ್ದೇಶವನ್ನು ಇಟ್ಟುಕೊಂಡು ವಿದೇಶದಿಂದ ವಾಹನಗಳನ್ನು ಆಮದು ಮಾಡಿಕೊಂಡರೆ ದುಬಾರಿ ಮೊತ್ತ ನೀಡಬೇಕಾಗುತ್ತದೆ.

ಬಿಸಿನಸ್ ಕ್ಲಾಸ್ ವಿಮಾನ ಪ್ರಯಾಣ

ಬಿಸಿನಸ್ ಕ್ಲಾಸ್ ವಿಮಾನ ಪ್ರಯಾಣ

ಇಲ್ಲಿ ಸಹ ಸೇವಾ ತೆರಿಗೆ ಅಡ್ಡಗಾಲಾಗುತ್ತದೆ. ವಿವಿಧ ಕಂಪನಿಗಳಿ ಪೈಪೋಟಿಗೆ ಬಿದ್ದು ಕಡಿಮೆ ದರದಲ್ಲಿ ವಿಮಾನ ಪ್ರಯಾಣ ನೀಡಲು ಮುಂದಾಗಿದ್ದರೂ ಬಿಸಿನಸದ ಕ್ಲಾಸ್ ಗೆ ಹೆಚ್ಚಿನ ಹಣ ನೀಡಲೇಬೇಕು. ರೈಲ್ವೆ ಫ್ಲಾಟ್ ಫಾರ್ಮ್ ಟಿಕೆಟ್, ಥರ್ಡ್ ಪಾರ್ಟಿ ಇನ್ಶೂರೆನ್ಸ್ ಸಹ ದುಬಾರಿಯಾಗಲಿದೆ.

ಚರ್ಮದ ಚಪ್ಪಲಿಗಳು

ಚರ್ಮದ ಚಪ್ಪಲಿಗಳು

ಸಾವಿರ ರೂಪಾಯಿ ಮೇಲಿನ ಚರ್ಮದ ಚಪ್ಪಲಿಗಳ ಬೆಲೆಯಲ್ಲಿ ಇಳಿಕೆಯಾಗಲಿದೆ. ಚರ್ಮದ ವಸ್ತುಗಳ ಮೇಲಿನ ತಯಾರಿಕೆ ಕರವನ್ನು ಕಡಿಮೆ ಮಾಡಲಾಗಿದೆ. ಇದು ದೇಶದ ಗೃಹ ಮತ್ತು ಗುಡಿ ಕೈಗಾರಿಕೆ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ ಎಂದು ನಂಬಲಾಗಿದೆ.

ಎಲ್ ಇಡಿ, ಎಲ್ ಸಿಡಿ ಬಲ್ಬ್

ಎಲ್ ಇಡಿ, ಎಲ್ ಸಿಡಿ ಬಲ್ಬ್

ದೇಶದೊಳಗಡೆ ತಯಾರಾದ ಮೊಬೈಲ್ ಪೋನ್ ಗಳು, ಎಲ್ ಇಡಿ, ಎಲ್ ಸಿಡಿ ಪ್ಯಾನಲ್ ಗಳು, ಎಲ್ ಇಡಿ ಲೈಟ್ಸ್ ಮತ್ತು ಲ್ಯಾಂಪ್ ಗಳ ದರ ಕಡಿಮೆಯಾಗಲಿದೆ. ಇಂಧನ ಉಳಿತಾಯ ಹಿನ್ನೆಲೆಯಲ್ಲಿ ಇದು ಸಾಧ್ಯವಾಗಿತ್ತಿದೆ. ಉಕ್ಕಿನ ವಸ್ತುಗಳು ಕಡಿಮೆ ದರದಲ್ಲಿ ಲಭ್ಯವಾಗಲಿವೆ.

ಇವು ಕಡಿಮೆಯಲ್ಲಿ ಸಿಗಲಿವೆ

ಇವು ಕಡಿಮೆಯಲ್ಲಿ ಸಿಗಲಿವೆ

ಆಂಬುಲೆನ್ಸ್ ಸೇವೆ, ಕಂಪ್ಯೂಟರ್, ಟ್ಯಾಬ್ಲೆಟ್, ಅಗರಬತ್ತಿ, ಮೈಕ್ರೋವೇವ್ ಒಲೆಗಳು, ಪ್ಯಾಕ್ ಮಾಡಿದ ನತರಕಾರಿ ಮತ್ತು ಹಣ್ಣುಗಳು ಕಡಿಮೆ ದರದಲ್ಲಿ ಲಭ್ಯವಾಗಲಿವೆ.

English summary

List of Items Getting Costlier and Cheaper from April 1, 2015

Finance Minister Arun Jaitley presented the Union Budget 2015 on February 28, 2015 and the recommendations take place from April 1, 2015. Here we have listed a few items which can get costlier and cheaper from April 1, 2015.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X