For Quick Alerts
ALLOW NOTIFICATIONS  
For Daily Alerts

ಹಣದುಬ್ಬರವನ್ನು ಮೀರಿ ನಡೆವ ಮೂರು ಹೂಡಿಕೆಗಳು

|

ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿಗಳು ಜೂನ್ 2 ರಂದು ಸಭೆ ಸೇರಲಿದ್ದು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. ಬಡ್ಡಿ ಏರಿಕೆ ಕಡಿತ ಸಂಬಂಧ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

 

ಹಾಗಾದರೆ ಬಡ್ಡಿ ದರ ಕಡಿತ ಮಾಡುವ ಮುನ್ನವೇ ಹೆಚ್ಚಿನ ಲಾಭ ಮತ್ತು ರಿಟರ್ನ್ಸ್ ತರುವ ಯೋಜನೆ ಅಥವಾ ಫಿಕ್ಸೆಡ್ ಡಿಪಾಸಿಟ್ ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ಆರ್ ಬಿಐ ಸಭೆಗೂ ಮುನ್ನ ನಿಮ್ಮ ಹೂಡಿಕೆಗೆ ಯೋಗ್ಯವಾದ ಕೆಲ ಯೋಜನೆಗಳ ಪಟ್ಟಿ ಇಲ್ಲಿದೆ. [ಆರ್ ಬಿಐ ಬಡ್ಡಿ ಕಡಿತ ಮಾಡೋ ಮುನ್ನ ಹಣ ಹೂಡಿಕೆ ಮಾಡಿ]

 
ಹಣದುಬ್ಬರವನ್ನು ಮೀರಿ ನಡೆವ ಮೂರು ಹೂಡಿಕೆಗಳು

ಮಹಿಂದ್ರಾ ಫೈನಾನ್ಸ್ ಫಿಕ್ಸೆಡ್ ಡಿಪಾಸಿಟ್
2014 ರ ನನೆಂಬರ್ ಅಂತ್ಯದ ವರೆಗೂ ಮಹಿಂದ್ರಾ ಫೈನಾನ್ಸ್ ತನ್ನ ಫಿಕ್ಸೆಡ್ ಡಿಪಾಸಿಟ್ ಮೇಲೆ (36 ತಿಂಗಳ ಅವಧಿಗೆ) ಶೇ. 10 ಬಡ್ಡಿ ನೀಡುತ್ತಿತ್ತು.

ಈಗ ಇದನ್ನು ಶೇ. 9.25 ಕ್ಕೆ ಇಳಿಸಲಾಗಿದ್ದು 18-60 ತಿಂಗಳ ಕಾಲದಲ್ಲಿ ಹೂಡಿಕೆ ಮಾಡಬಹುದು. ಇಲ್ಲಿ ಬಡ್ಡಿ ಸಹ ಸೇರಿಸಿ ಲೆಕ್ಕ ಹಾಕಲಾಗುತ್ತದೆ. ಹಾಗಾಗಿ ನಿಮಗೆ ಅಂತಿಮವಾಗಿ ಶೇ. 11.13 ಪ್ರಮಾಣದ ಬಡ್ಡಿ ಸಿಕ್ಕಂತೆ ಆಗುತ್ತದೆ. ಅಲ್ಲದೇ ಇದನ್ನು ಬಹಳ ಸುರಕ್ಷಿತ ಹೂಡಿಕೆ ತಾಣ ಎಂದು ಗುರುತು ಮಾಡಲಾಗಿದೆ.[ಸುರಕ್ಷಿತ ಆನ್ ಲೈನ್ ಬ್ಯಾಂಕಿಂಗ್ ಗೆ ಸಪ್ತ ಸೂತ್ರ]

ಕೆಟಿಡಿಎಫ್ ಸಿ
ಕೇರಳ ರಸ್ತೆ ಸಾರಿಗೆ ಹಣಕಾಸು ನಿಗಮವು ಕೇರಳ ರಾಜ್ಯ ಸರ್ಕಾರದ ಅಧೀನ ಸಂಸ್ಥೆಯಾಗಿದೆ. ಹಾಗಾಗಿ ನಿಮ್ಮ ಹಣಕ್ಕೆ ಕೇರಳ ಸರ್ಕಾರವೇ ಖಾತ್ರಿ ನೀಡುತ್ತದೆ.
* ಕೆಟಿಡಿಎಫ್ ಸಿ ನೀಡುವ ಬಡ್ಡಿ ಪ್ರಮಾಣ
1 ವರ್ಷಕ್ಕೆ ಶೇ. 10
2 ವರ್ಷಕ್ಕೆ ಶೇ. 10
3 ವರ್ಷಕ್ಕೆ ಶೆ.10
ನಾಲ್ಕು ವರ್ಷಕ್ಕೆ ಶೇ. 9.75
5 ವರ್ಷಕ್ಕೆ ಶೇ. 9.75
ಉಳಿದ ಕಡೆಗೆ ಹೋಲಿಸಿದರೆ ಇಲ್ಲಿ ಹಿರಿಯ ನಾಗರೀಕರು 0.25 ಬಡ್ಡಿ ಹೆಚ್ಚುವರಿಯಾಗಿ ಪಡೆದುಕೊಳ್ಳುತ್ತಾರೆ. 25 ಲಕ್ಷಕ್ಕೂ ಅಧಿಕ ಹೂಡಿಕೆ ಮಾಡಿದರೆ ಶೇ. 50 ಬಡ್ಡಿ ಪಡೆದುಕೊಳ್ಳಲು ಸಾಧ್ಯವಿದೆ. ಅಲ್ಲದೇ ಇಲ್ಲಿ ನಿಮ್ಮ ಹಣಕ್ಕೆ ಪ್ರತಿ ಮೂರು ತಿಂಗಳಿಗೊಮ್ಮೆ ಮೊತ್ತ ಮತ್ತು ಸಿಕ್ಕಿದ ಬಡ್ಡಿಯನ್ನು ಕೂಡಿಸಿ ಅದಕ್ಕೆ ಬಡ್ಡಿ ನೀಡಲಾಗುತ್ತದೆ.[ಭಾರತದ ಚಿನ್ನದ ದರ ಬದಲಾವಣೆ ಹಿಂದಿನ ರಹಸ್ಯವೇನು?]

ಶ್ರೀರಾಮ್ ಟ್ರಾನ್ಸ್ ಫೋರ್ಟ್ ಫೈನಾನ್ಸ್ ಫಿಕ್ಸೆಡ್ ಡಿಪಾಸಿಟ್
ಇಲ್ಲಿ ಕೂಡಾ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಲು ಸಾಧ್ಯ. 24 ರಿಂದ 36 ತಿಂಗಳ ಅವಧಿ ಹೂಡಿಕೆಗೆ ಶೇ. 11.48 ಬಡ್ಡಿ ನಿಮಗೆ ದೊರೆಯುತ್ತದೆ. ಇದು ಒಂದು ಸುರಕ್ಷಾ ಹೂಡಿಕೆ ಎಂದೇ ಹೆಸರು ಪಡೆದುಕೊಂಡಿದೆ.

ಕೊನೆ ಮಾತು
ಆರ್ ಬಿಐ ಬಡ್ಡಿ ದರವನ್ನು ಇಳಿಸುವ ಸಾಧ್ಯತೆ ನಿಚ್ಚಳವಾಗಿದೆ. ಕೆಲ ಬ್ಯಾಂಕ್ ಗಳು ಈಗಾಗಲೇ ಶೇ. 9.25 ರಿಂದ ಶೇ. 8.50 ಕ್ಕೆ ಬಡ್ಡಿ ದರ ಇಳಿಕೆ ಮಾಡಿವೆ. ಹಾಗಾಗಿ ದಿರ್ಘಾವಧಿ ಹೂಡಿಕೆ ಮಾಡಲು ಮುಂದಾಗಿದ್ದರೆ ಉತ್ತಮ ಯೋಜನೆಗಳತ್ತ ಗಮನ ನೀಡುವುದು ಒಳಿತು.(ಗುಡ್ ರಿಟರ್ನ್ಸ್.ಇನ್)

English summary

3 Attractive Fixed Deposits To Beat Inflation

The Reserve Bank of India (RBI) officials are slated to meet on June 2 for the Monetary policy meet wherein it is widely expected that there will be an interest rate cut.If that happens interest rates on fixed deposits would fall as they have been since early this year. It is therefore best to lock money in high yielding deposits before interest rates drop. Here are some attractive fixed deposit ideas for individuals.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X