For Quick Alerts
ALLOW NOTIFICATIONS  
For Daily Alerts

ತೆರಿಗೆ ಮುಕ್ತ ಆದಾಯ ಗಳಿಕೆಗೆ 7 ವಿಧಾನಗಳು

By Mahesh
|

ಭಾರತದಲ್ಲಿ ಬಹುತೇಕ ಎಲ್ಲಾ ರೀತಿಯ ಆದಾಯ ಗಳಿಕೆಯೂ ತೆರಿಗೆಗೆ ಒಳಪಡುತ್ತದೆ. ಕೆಲ ಸಂದರ್ಭಗಳಲ್ಲಿ ಮಾತ್ರ ಗಳಿಸುವ ಆದಾಯಕ್ಕೆ ತೆರಿಗೆ ಕಟ್ಟಬೇಕಾಗುವುದಿಲ್ಲ.

ಆದಾಯ ತೆರಿಗೆ ಕಟ್ಟಲು ಅನೇಕ ಸುಲಭ ವಿಧಾನಗಳಿವೆ. ವಾರ್ಷಿಕವಾಗಿ 5 ಲಕ್ಷ ರೂ.ಗಳಿಗಿಂತ ಹೆಚ್ಚಿನ ವರಮಾನವಿರುವ ತೆರಿಗೆ ಪಾವತಿದಾರರು ತಮ್ಮ ಆದಾಯ ವಿವರಗಳನ್ನು ವಿದ್ಯುನ್ಮಾನ ರೂಪದಲ್ಲಿ ಸಲ್ಲಿಸುವ ಆವಶ್ಯಕತೆಯಿರುವುದರಿಂದ ಆನ್ ಲೈನ್ ಮೂಲಕ ತೆರಿಗೆ ಕಟ್ಟುವವರ ಸಂಖ್ಯೆ ಹೆಚ್ಚಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಲವು ಬ್ಯಾಂಕುಗಳಿಗೆ ಇ ಪಾವತಿ ಸೌಲಭ್ಯ ಒದಗಿಸಲು ಮಾನ್ಯತೆ ನೀಡಿದೆ.

ಆದರೆ, ಐಟಿ ರಿಟರ್ನ್ಸ್ ಮಾಡುವಾಗ ಸರಿಯಾದ ದಾಖಲೆಗಳನ್ನು ಕೊಂಡೊಯ್ಯದಿದ್ದರೆ ಕಷ್ಟ ಕಷ್ಟ. ಆನ್ ಲೈನ್ ಮೂಲಕ ಇರಲಿ, ಅಥವಾ ಕಚೇರಿಗೆ ನೇರ ಹೋಗಿ ತೆರಿಗೆ ಕಟ್ಟುವುದಿರಲಿ ಕೆಲವು ಕಡ್ಡಾಯವಾದ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಆನ್ ಲೈನ್ ನಲ್ಲಿ ಆದಾಯ ತೆರಿಗೆ ಪಾವತಿ ಮಾಡುವವರಿಗೆ ಮಾರ್ಗದರ್ಶಿ ಇಲ್ಲಿದೆ.

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಎಲ್ಲಾ ರೀತಿಯ ಗಳಿಕೆಯ ವಿವರಗಳನ್ನು ನಮೂದಿಸಬೇಕಾಗುತ್ತದೆ. ಅದರೆ, ಕೆಲವು ಆದಾಯ ಗಳಿಕೆ ತೆರಿಗೆ ಮುಕ್ತವಾಗಿರುತ್ತದೆ. ಇಂಥ ಕೆಲವು ಅನುಕೂಲಗಳ ಬಗ್ಗೆ ಇಲ್ಲಿ ವಿವರ ನೀಡಲಾಗಿದೆ...

ನಿವೃತ್ತಿ ಹಾಗೂ ಗ್ರಾಚುಟಿ ಗಳಿಕೆ

ನಿವೃತ್ತಿ ಹಾಗೂ ಗ್ರಾಚುಟಿ ಗಳಿಕೆ

* ನಿವೃತ್ತಿ ಹಾಗೂ ಗ್ರಾಚುಟಿ ಗಳಿಕೆ ತೆರಿಗೆ ರಹಿತವಾಗಿದೆ.
* ಮೃತರ ಗ್ರಾಚುಟಿ ಮೊತ್ತ ಪತ್ನಿ, ಮಕ್ಕಳಿಗೆ ವರ್ಗವಾಗಲಿದೆ.
* ಎಲ್ ಐಸಿಯಿಂದ ಬರುವ ಬೋನಸ್ ಅಥವಾ ಯಾವುದೇ ಆದಾಯಕ್ಕೆ ತೆರಿಗೆ ವಿಧಿಸಲಾಗುವುದಿಲ್ಲ.

ವಿಆರ್ ಎಸ್ ನಿಂದ ಬರುವ ಗಳಿಕೆ

ವಿಆರ್ ಎಸ್ ನಿಂದ ಬರುವ ಗಳಿಕೆ

ಸರ್ಕಾರದ ಅಧಿನಿಯಮಕ್ಕೆ ಒಳಪಟ್ಟಂತೆ ಸ್ವಯಂ ನಿವೃತ್ತಿ ಮೊತ್ತ ಪಡೆದರೆ ವಿಆರ್ ಎಸ್ ಹಣದ ಮೇಲೆ ತೆರಿಗೆ ಕಟ್ಟಬೇಕಾಗಿಲ್ಲ. 5,00,000 ರು ತನಕದ ಮೊತ್ತಕ್ಕೆ ಈ ಸೌಲಭ್ಯ ಅನ್ವಯವಾಗಲಿದೆ.

ಕಂಪನಿ ಮುಚ್ಚಿದಾಗ ಸಿಗುವ ಮೊತ್ತ

ಕಂಪನಿ ಮುಚ್ಚಿದಾಗ ಸಿಗುವ ಮೊತ್ತ

ಕಂಪನಿ ಮುಚ್ಚಿದಾಗ ಅಥವಾ ಮ್ಯಾನೇಜ್ಮೆಂಟ್ ಬದಲಾಯಿಸಿದಾಗ ನಿಮಗೆ ಸಿಗುತ್ತಿದ್ದ ಮೊತ್ತಕ್ಕಿಂತ ಕಡಿಮೆ ಮೊತ್ತ ಸಿಕ್ಕರೆ ಈ ಹಣಕ್ಕೆ ತೆರಿಗೆ ಕಟ್ಟ ಬೇಕಾಗಿಲ್ಲ.

ಕೃಷಿ ಚಟುವಟಿಕೆಯಿಂದ ಬಂದ ಮೊತ್ತಕ್ಕೂ ತೆರಿಗೆ ಇಲ್ಲ. ಮೂಲ ಉತ್ಪನ್ನ ಬದಲಾವಣೆ ಅಥವಾ ಉತ್ಪನ್ನ ಮಾರಾಟ ಸಂದರ್ಭದಲ್ಲಿ ತೆರಿಗೆ ಅನ್ವಯವಾಗುತ್ತದೆ.
ಪ್ರಯಾಣ ಭತ್ಯೆ

ಪ್ರಯಾಣ ಭತ್ಯೆ

ಭಾರತದಲ್ಲಿ ಪ್ರಯಾಣಿಸಲು ನಿಮಗೆ ಸಂಸ್ಥೆಯಿಂದ ಸಿಗುವ ಪ್ರಯಾಣ ಭತ್ಯೆ (TA ಅಲ್ಲ) ಉದಾ. ಸರ್ಕಾರಿ ಸಂಸ್ಥೆಗಳಿಂದ ಸಿಗುವ ಎಲ್ ಟಿಎ ಸೌಲಭ್ಯ ನಾಲ್ಕುವರ್ಷಗಳಲ್ಲಿ ಎರಡು ಬಾರಿ ಪಡೆದುಕೊಳ್ಳಬಹುದಾಗಿದೆ.

ರಜಾ ಆದಾಯ

ರಜಾ ಆದಾಯ

Earned Leave ವ್ಯವಸ್ಥೆಯನ್ನು 10 ತಿಂಗಳ ತನಕ ಬಳಸಬಹುದು. ಪ್ರತಿ ವರ್ಷಕ್ಕೆ 30 ದಿನಗಳ ಗರಿಷ್ಠ ಮಿತಿ ನಿಯಮ ಪಾಲಿಸಿರಬೇಕು.

ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರು ಈ ಸೌಲಭ್ಯದ ಮೊತ್ತವನ್ನು ನಿವೃತ್ತಿ ಸಮಯದಲ್ಲಿ ನಗದು ರೂಪದಲ್ಲಿ ಪಡೆಯಬಹುದು.

 

ಭವಿಷ್ಯ ನಿಧಿ

ಭವಿಷ್ಯ ನಿಧಿ

ಭವಿಷ್ಯ ನಿಧಿ ಕಾಯ್ದೆ ಅನ್ವಯ ಉದ್ಯೋಗಿಗೆ ಸಿಗುವ ಪಿಎಫ್ ಮೊತ್ತ ಹಾಗೂ ಅದರ ಬಡ್ಡಿದರ ಎಲ್ಲವೂ ತೆರಿಗೆ ರಹಿತವಾಗಿದೆ. ಇದೇ ರೀತಿ ನಿವೃತ್ತಿ ವೇತನ ನಿಧಿಗೆ ಹಾಕುವ ಅಥವಾ ಪಡೆಯುವ ಮೊತ್ತ ಕೂಡಾ ತೆರಿಗೆಯಿಂದ ಮುಕ್ತವಾಗಿದೆ.

ಸ್ಕಾಲರ್ ಶಿಪ್

ಸ್ಕಾಲರ್ ಶಿಪ್

ಆದಾಯ ತೆರಿಗೆ ಕಾಯ್ದೆ ಅನ್ವಯ ಶಿಕ್ಷಣಕ್ಕಾಗಿ ಪಡೆದ ವಿದ್ಯಾರ್ಥಿವೇತನ ತೆರಿಗೆ ಮುಕ್ತವಾಗಿದೆ.

ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಪಡೆಯುವ ನಗದು ರೂಪದ ಪ್ರಶಸ್ತಿ ಮೊತ್ತ ಕೂಡಾ ತೆರಿಗೆ ರಹಿತವಾಗಿರುತ್ತದೆ.

 

English summary

A Quick Look at Various Non Taxable Income In India

In India, income you earn is taxable unless specified by the law in certain instances. Some heads of Income earned should be mentioned while filing tax returns, but, they are exempted from Income Tax in India.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X