For Quick Alerts
ALLOW NOTIFICATIONS  
For Daily Alerts

ಆಸ್ತಿ ಮೇಲೆ ಸಾಲ ಪಡೆಯುವಾಗ ಇವೆಲ್ಲ ಲೆಕ್ಕಕ್ಕೆ ಬರುತ್ತವೆ

|

ಹಣದ ಅಗತ್ಯ ಬಿದ್ದಾಗ ನಮ್ಮ ಬಳಿ ಇರುವ ದಾಖಲೆಗಳನ್ನು ನೀಡಿ ಸಾಲ ಪಡೆದುಕೊಳ್ಳುವುದು ಮೊದಲಿನಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಷೇರುಗಳು, ಚಿನ್ನ, ಭೂಮಿ ಮುಂತಾದವುಗಳ ಮೇಲೆ ಸಾಲ ಪಡೆದುಕೊಳ್ಳಲಾಗುತ್ತದೆ.

 

ಆದರೆ ಸಾಲ ಪಡೆದುಕೊಳ್ಳುವಾಗ ಯಾವ ಯಾವ ತಂತ್ರಗಳನ್ನು ಅನುಸರಿಸಬೇಕು? ತೆಗೆದುಕೊಳ್ಳಬಹುದಾದ ಮನ್ನೆಚ್ಚರಿಕೆಗಳು ಯಾವವು ಎಂಬುದನ್ನು ಅಗತ್ಯವಾಗಿ ನೋಡಬೇಕಿದೆ.[ಅತಿ ಹೆಚ್ಚು ಗೃಹ ಸಾಲ ಪಡೆಯಲು ಏನು ಮಾಡಬೇಕು?]

ಆಸ್ತಿಯ ಅಥವಾ ಮನೆ ಹಕ್ಕು ಪತ್ರದ ಮೇಲೆ ಸಾಲ ಪಡೆಯುವುದು ಒಂದು ಸರಳ ವಿಧಾನವೇ. ಆದರೆ ಸಾಲ ಪಡೆಯುವ ಮುನ್ನ ಕೆಳಗಿನ ಕೆಲ ಅಂಶಗಳನ್ನು ಸದಾ ತಲೆಯಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ಅಲ್ಲದೇ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬೇಕಾಗುತ್ತದೆ.[ಗುಡ್ ರಿಟರ್ನ್ಸ್ .ಇನ್]

ತೀರಿಸಲು ಸಾಧ್ಯವಿದೆ ಎಂದರೆ ಮಾತ್ರ ಹೆಜ್ಜೆ ಇಡಿ

ತೀರಿಸಲು ಸಾಧ್ಯವಿದೆ ಎಂದರೆ ಮಾತ್ರ ಹೆಜ್ಜೆ ಇಡಿ

ನಿಮ್ಮ ಬಳಿ ಸಾಲ ತೀರಿಸಲು ಶಕ್ತಿಯಿದೆ ಅಥವಾ ನಿರ್ದಿಷ್ಟ ಹಣದ ಮೂಲವಿದೆ ಎಂದಾದರೇ ಮಾತ್ರ ಸಾಲ ಪಡೆದುಕೊಳ್ಳಲು ಮುಂದಾಗಬೇಕು. ಯಾಕೆಂದರೆ ಇಲ್ಲಿ ನೀವು ನಿಮ್ಮ ಮನೆಯ ಹಕ್ಕು ಪತ್ರವನ್ನೇ ದಾಖಲೆಯನ್ನಾಗಿ ನೀಡಬೇಕಾಗುತ್ತದೆ. ಮುಂದೆ ಸಮಸ್ಯೆಯಾದರೆ ನಿಮ್ಮ ಕನಸಿನ ಮನೆ ಬ್ಯಾಂಕ್ ಪಾಲಾಗುವುದು ಎಚ್ಚರ.

ಎಲ್ ಟಿವಿ ಲೆಕ್ಕ ಹಾಕಿ

ಎಲ್ ಟಿವಿ ಲೆಕ್ಕ ಹಾಕಿ

ವಿವಿಧ ಬ್ಯಾಂಕ್ ಗಳು ನಿಮ್ಮ ಆಸ್ತಿಗೆ ಯಾವ ಮೊತ್ತದ ಹಣ ನೀಡುತ್ತವೆ? ಎಂಬುದನ್ನು ಮೊದಲು ಲೆಕ್ಕ ಹಾಕಿಕೊಳ್ಳಿ. ಬೇರೆ ಬೇರೆ ಬ್ಯಾಂಕ್ ಗಳು ಆಸ್ತಿ ಮೌಲ್ಯವನ್ನು ಅವರದ್ದೇ ಆದ ವಿಧಾನದಲ್ಲಿ ಲೆಕ್ಕ ಹಾಕುತ್ತವೆ. ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ವೊಂದು ಆಸ್ತಿಯ ಶೇ. 65 ರಷ್ಟು ಹಣವನ್ನು ಸಾಲವಾಗಿ ನೀಡಬಲ್ಲದು.

ಬಡ್ಡಿ ದರದಲ್ಲೂ ವ್ಯತ್ಯಾವಿರುತ್ತದೆ.
 

ಬಡ್ಡಿ ದರದಲ್ಲೂ ವ್ಯತ್ಯಾವಿರುತ್ತದೆ.

ಬಡ್ಡಿ ದರ ಸಹ ಬ್ಯಾಂಕ್ ನಿಂದ ಬ್ಯಾಂಕ್ ಗೆ ವ್ಯತ್ಯಾಸವಾಗುತ್ತಿರುತ್ತದೆ. ಎಲ್ಲಿ ಕಡಿಮೆ ಬಡ್ಡಿದರ ಮತ್ತು ಸುರಕ್ಷತೆ ಇರುತ್ತದೆಯೋ ಅಲ್ಲಿ ಸಾಲ ಪಡೆದುಕೊಳ್ಳುವುದು ಉತ್ತಮ. ಸಾಮಾನ್ಯವಾಗಿ 12-14 ಶೇ. ಬಡ್ಡಿ ದರ ವಿಧಿಸಲಾಗುತ್ತದೆ.

ವಾಣಿಜ್ಯ ಉದ್ದೇಶದ ಆಸ್ತಿಗೆ ಕಡಿಮೆ ಸಾಲ

ವಾಣಿಜ್ಯ ಉದ್ದೇಶದ ಆಸ್ತಿಗೆ ಕಡಿಮೆ ಸಾಲ

ವಾಣಿಜ್ಯ ಉದ್ದೇಶದ ಆಸ್ತಿಗೆ ಕಡಿಮೆ ಮೌಲ್ಯ ಲೆಕ್ಕ ಹಾಕುವ ಸಂಪ್ರದಾಯವೂ ಇದೆ. ಅಪಾರ್ಟ ಮೆಂಟ್ ಅಥವಾ ಸ್ವಂತ ಮನೆಗೆ ಹೋಲಿಕೆ ಮಾಡಿದರೆ ಇಲ್ಲಿ ಕಡಿಮೆ ಹಣ ಸಿಗುವುದು. ನಿಮ್ಮ ವಾಣಿಜ್ಯ ಉದ್ದೇಶದ ಮಳಿಗೆಯಿಂದ ಬಾಡಿಗೆ ಬರುತ್ತಿದೆಯೋ ಇಲ್ಲವೋ ಎಂಬುದು ಮುಖ್ಯವಾಗುತ್ತದೆ.

ಕೊನೆ ಮಾತು ಗಮನದಲ್ಲಿರಲಿ

ಕೊನೆ ಮಾತು ಗಮನದಲ್ಲಿರಲಿ

ಹೆಚ್ಚಿನ ಸಾಲ ಪಡೆಯಲು ಕೇವಲ ದಾಖಲೆ ಪತ್ರಗಳೊಂದೆ ಸಾಕಾಗುವುದಿಲ್ಲ. ನಿಮ್ಮ ಹಿಂದಿನ ಹಣಕಾಸು ವ್ಯವಹಾರದ ರೀತಿ-ನೀತಿ, ಕ್ರೆಡಿಟ್ ಹಿಸ್ಟರಿ ಮುಂತಾದವುಗಳನ್ನು ಸಹ ಇಲ್ಲಿ ಲೆಕ್ಕ ಹಾಕಲಾಗುತ್ತದೆ.

English summary

Loan Against Property: 4 Important Things To Note

In times of financial need, there are various loans that one can take against financial assets or real estate. Loan against shares, gold and real estate are the more popular ones, where your loan is backed against a collateral to the bank or the lending institution.
 
 
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X