For Quick Alerts
ALLOW NOTIFICATIONS  
For Daily Alerts

ಕ್ರೆಡಿಟ್ ಕಾರ್ಡ್ ಬೇಕಾಬಿಟ್ಟಿ ಬಳಕೆಗೆ ಮುನ್ನ ಇದನ್ನು ಓದಿ

|

ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಎಲ್ಲಿ ಬಳಕೆ ಮಾಡಬೇಕು? ಎಂಬುದರ ಬಗ್ಗೆ ಸ್ಪಷ್ಟವಾದ ಚಿತ್ರಣ ಮತ್ತು ಯೋಚನೆ ನಿಮಗೆ ಇರಲೇಬೇಕು. ಹಾಗಾಗಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಕೆಗೆ ಸಂಬಂಧಿಸಿ ಅನೇಕ ಸಂಗತಿಗಳನ್ನು ತಿಳಿದುಕೊಂಡಿರಬೇಕಾಗುತ್ತದೆ.

 

ಡೆಬಿಟ್ ಕಾರ್ಡ್ ಮೂಲಕ ಪಾವತಿ ಮಾಡಿದರೆ ತಕ್ಷಣ ಹಣ ನಿಮ್ಮ ಅಕೌಂಟ್ ನಿಂನ ಕಡಿತವಾಗಿರುತ್ತದೆ. ಕ್ರೆಡಿಟ್ ಕಾರ್ಡ್ ಬಳಸಿದರೆ ಅದನ್ನು ನೀವು ನಿರ್ದಿಷ್ಟ ದಿನಾಂಕದ ಒಳಗೆ ತುಂಬಬೇಕಾಗುತ್ತದೆ. ಇದು ಸಾಮಾನ್ಯವಾಗಿ ತಿಳಿದಿರುವ ಸಂಗತಿ.[ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ನಡುವಿನ ವ್ಯತ್ಯಾಸವೇನು?]

 
ಕ್ರೆಡಿಟ್ ಕಾರ್ಡ್ ಬೇಕಾಬಿಟ್ಟಿ ಬಳಕೆಗೆ ಮುನ್ನ ಇದನ್ನು ಓದಿ

ಯಾವ ಕಾರ್ಡ್ ಮೂಲಕ ಪಾವತಿ ಮಾಡುವುದು ಉತ್ತಮ?
ಗ್ರೆಸ್ ಫಿರಿಯಡ್ ಲಭ್ಯವಿದ್ದರೆ ಕ್ರೆಡಿಟ್‌ ಕಾರ್ಡ್ ಬಳಸಿ ಹಣ ಪಾವತಿ ಮಾಡುವುದು ಒಳ್ಳೆಯದು. ಅಂದರೆ ಬಡ್ಡಿ ಇಲ್ಲದೇ ಹಣ ಪಡೆದಂಥಾಗುತ್ತದೆ. ಒಂದು ವೇಳೆ ಗ್ರೇಸ್ ಅವಧಿ ಮುಗಿದಿದ್ದರೆ ಡೆಬಿಟ್ ಕಾರ್ಡ್ ಮೂಲಕ ಪಾವತಿ ಮಾಡಿ.[ಕ್ರೆಡಿಟ್ ಕಾರ್ಡ್ ಕೊಳ್ಳುವ ಮುನ್ನ 9 ಅಂಶ ತಲೆಯಲ್ಲಿರಲಿ]

ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿದರೆ ನಿಮಗೆ ರಿವಾರ್ಡ್ ಪಾಂಯಿಟ್ಸ್ ಸಿಗುತ್ತದೆ. ಅಂದ ಮಾತ್ರಕ್ಕೆ ನೀವು ಹೆಚ್ಚಿನ ಬಡ್ಡಿ ತೆರುವುದು ಸಲ್ಲ. ಕ್ರೆಡಿಟ್ ಕಾರ್ಡ್ ಬಳಕೆ ಮಾಡುವಾಗ ಒಂದು ಶಿಸ್ತು ಮೈ ಗೂಡಿಸಿಕೊಂಡು ಇರಬೇಕಾಗುತ್ತದೆ. ಸಿಕ್ಕ ಸಿಕ್ಕ ಕಡೆ ಶಾಪಿಂಗ್ ಮಾಡಿದರೆ ಹೆಚ್ಚಿನ ಬಡ್ಡಿ ತೆರುತ್ತ ಹಳ್ಳಕ್ಕೆ ಬೀಳಬೇಕಾಗುತ್ತದೆ.[ಏನಿದು ಕಾಂಟ್ಯಾಕ್ಟ್ ಲೆಸ್ ಡೆಬಿಟ್ ಕಾರ್ಡ್? ಬಳಕೆ ಹೇಗೆ?]

ಇನ್ನು ಆನ್ ಲೈನ್ ಶಾಪಿಂಗ್ ವೇಳೆ ಕ್ರೆಡಿಟ್ ಕಾರ್ಡ್ ಬಳಸುವಾಗ ಕೊಂಚ ಎಚ್ಚರಿಕೆಯಿಂದ ಇದ್ದರೆ ಒಳಿತು. ವಿಮಾನ ಪ್ರಯಾಣದ ಟಿಕೆಟ್ ಬುಕ್ ಮಾಡುವಂತ ಸಂದರ್ಭ ಎದುರಾದರೆ ಆಗ ಕ್ರೆಡಿಟ್ ಕಾರ್ಡ್ ಬಳಕೆಯೇ ಒಳ್ಳೆಯದು. ತುರ್ತು ಸಂದರ್ಭಗಳಲ್ಲಿ, ಬ್ಯಾಂಕ್ ನಲ್ಲಿ ನಿಮಗೆ ಬೇಕಾದಷ್ಟು ಹಣ ಲಭ್ಯವಿರದಿದ್ದಾಗ ಕ್ರೆಡಿಟ್ ಕಾರ್ಡ್ ಬಳಕೆಯೇ ಉತ್ತಮವಾಗುತ್ತದೆ.[ನಿಮ್ಮ ಕ್ರೆಡಿಟ್ ಕಾರ್ಡ್ ಬಳಕೆ ಮಾಡುವ 6 ಕೆಟ್ಟ ವಿಧಾನ]

ಕೊನೆ ಮಾತು:
ಕ್ರೆಡಿಟ್ ಕಾರ್ಡ್ ಆಗಲಿ ಡೆಬಿಟ್ ಕಾರ್ಡ್ ಆಗಲಿ ಎಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂಬ ಸಂಗತಿಯ ಸ್ಪಷ್ಟ ಜ್ಞಾನ ನಿಮಗೆ ಇರಬೇಕು, ಹೆಚ್ಚಿನ ಹಣ ಪಾವತಿ ಮಾಡುವಾಗ ಎಚ್ಚರಿಕೆ ಸೂತ್ರಗಳನ್ನು ಅನುಸರಿಸುವುದು ಮತ್ತು ಯಂತ್ರವನ್ನು ಒಮ್ಮೆ ಪರಿಶೀಲನೆ ಮಾಡಿದರೂ ತಪ್ಪಿಲ್ಲ.(ಗುಡ್ ರಿಟರ್ನ್ಸ್.ಇನ್)

English summary

Should You Use A Debit Card Or A Credit Card When Making Payments?

To first decide on whether to use a credit or a debit card one has to understand the functions of both the cards. In a debit card the amount is debited immediately from your account. On the other hand in a credit card, the amount is made payable on the stipulated date.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X