For Quick Alerts
ALLOW NOTIFICATIONS  
For Daily Alerts

ಡೆಬಿಟ್ ಕಾರ್ಡ್ ಕಳೆದುಕೊಂಡರೆ ಏನು ಮಾಡಬೇಕು?

|

ಕೆಲವೊಮ್ಮೆ ಹೀಗೂ ಆಗುತ್ತದೆ. ಮರೆವಿನಿಂದಲೋ ಅಥವಾ ಕಳ್ಳತನಕ್ಕೆ ಸಿಲುಕಿಯೋ ನಿಮ್ಮ ಡೆಬಿಟ್ ಕಾರ್ಡ್ ಕಳೆದುಕೊಂಡಿರುತ್ತೀರಿ. ಆಗ ಒಂದು ಕ್ಷಣ ಏನು ಮಾಡಬೇಕು ಎಂದು ತಿಳಿಯುವುದೇ ಇಲ್ಲ.

ಬ್ಯಾಂಕ್ ರಜೆ ಇದ್ದರೆಂತೂ ಚಡಪಡಿಕೆ ನಿಲ್ಲುವುದೇ ಇಲ್ಲ. ಬ್ಯಾಂಕ್ ಶಾಖೆಗೆ ಫೋನ್ ಮಾಡಿ ಸಕಲ ವಿವರ ನೀಡಿ ಕಾರ್ಡ್ ಬ್ಲಾಕ್ ಮಾಡುವವರೆಗೆ ಸಾಕು ಸಾಕಾಗಿ ಹೋಗುತ್ತದೆ. [ಆನ್ ಲೈನ್ ನಲ್ಲಿ ಆದಾಯ ತೆರಿಗೆ ತುಂಬಲು ಸರಳ ವಿಧಾನ]

ಡೆಬಿಟ್ ಕಾರ್ಡ್ ಕಳೆದುಕೊಂಡರೆ ಏನು ಮಾಡಬೇಕು?

ಆದರೆ ನಿಮಗೆ ಅಂತರ್ಜಾಲದ ಮಾಹಿತಿಯಿದ್ದರೆ ತಕ್ಷಣವೇ ಬೇರೆಯವರು ಕಾರ್ಡ್ ದುರುಪಯೋಗ ಮಾಡಿಕೊಳ್ಳದಂತೆ ತಡೆ ಹಾಕಬಹುದು. ನಿಮ್ಮ ಕಾರ್ಡ್ ಬ್ಲಾಕ್ ಮಾಡಬಹುದು.

ಎಚ್ ಡಿಎಫ್ ಸಿಯನ್ನು ಉದಾಹರಣೆ ಎಂದು ತೆಗೆದುಕೊಂಡರೆ ಕಾರ್ಡ್ ಬ್ಲಾಕ್ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ನೋಡೋಣ. ನೆಟ್ ಬ್ಯಾಂಕಿಂಗ್ ಸೌಲಭ್ಯ ನಿಮ್ಮ ಬಳಿ ಇದ್ದರೆ ಕಾರ್ಡ್ ಕಳೆದುಕೊಂಡ ಕೆಲವೇ ನಿಮಿಷದಲ್ಲಿ ಅದನ್ನು ಬ್ಲಾಕ್ ಮಾಡಲು ಸಾಧ್ಯವಾಗುತ್ತದೆ.[ಕ್ರೆಡಿಟ್ ಕಾರ್ಡ್ ಕಳಕೊಂಡ್ರಾ?]

ಕಾರ್ಡ್ ಬ್ಲಾಕ್ ಮಾಡುವುದನ್ನು ಹಂತ ಹಂತವಾಗಿ ನೋಡೋಣ

* ಮೊದಲು ನಿಮ್ಮ ಐಡಿ ಮತ್ತು ಪಾಸ್ ವರ್ಡ್ ಬಳಸಿ ನೆಟ್ ಬ್ಯಾಂಕಿಗ್ ಗೆ ಲಾಗ್ ಇನ್ ಆಗಿ* ನಂತರ ಕಾರ್ಡ್ಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
* ನಂತರ ಎಡಬದಿಯಲ್ಲಿ Under Enquire -Debit Card Hotlisting ಆಯ್ಕೆ ಕಾಣಸಿಗುತ್ತದೆ.ನಿಮ್ಮ ಖಾತೆಯೊಂದಿಗೆ ಸಂಬಂಧಹೊಂದಿರುವ ಕಾರ್ಡ್ ಗಳ ಪಟ್ಟಿಯನ್ನು ತೆರೆದಿಡುತ್ತದೆ. [ಕ್ರೆಡಿಟ್ ಕಾರ್ಡ್ ಬೇಕೆ? ಆನ್ ಲೈನ್ ನಲ್ಲೇ ಅಪ್ಲೈ ಮಾಡಿ]
* ನಿಮ್ಮ ಖಾತೆಯೊಂದಿಗೆ ಒಂದಕ್ಕಿಂತ ಅಧಿಕ ಡೆಬಿಟ್ ಕಾರ್ಡ್ ಗಳಿದ್ದರೆ ನೀವು ಅದರ ಪಟ್ಟಿಯನ್ನು ನೋಡಬಹುದು.
* ನೀವು ಯಾವ ಕಾರ್ಡ್ ಕಳೆದುಕೊಂಡು ಬ್ಲಾಕ್ ಮಾಡಬೇಕು ಎಂದುಕೊಂಡಿದ್ದಿರೋ ಅದರ ಮೇಲೆ ಕ್ಲಿಕ್ ಮಾಡಿ.
* ಯಾವ ಕಾರಣಕ್ಕೆ ಕಾರ್ಡ್ ಬ್ಲಾಕ್ ಮಾಡುತ್ತಿದ್ದೇನೆ ಎಂಬ ಕಾರಣವನ್ನು ನಮೂದಿಸಿ.
* ನಂತರ ನಿಮ್ಮ ಕಾರ್ಡ್ ರದ್ದಾದ ಬಗ್ಗೆ ಒಂದು ಪುನರ್ ಮಾಹಿತಿ ಪಡೆಸಿಕೊಳ್ಳುವಿರಿ.(ಗುಡ್ ರಿಟರ್ನ್ಸ್.ಇನ್)

English summary

How To Block Your HDFC Debit Card Online?

It may so happen that when you lose your debit card, you hardly can think of possible ways of blocking your card. If you are tech friendly and use internet for most of the time then the procedure is rather simple. Here is the simple way to block your card online through HDFC net banking.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X