For Quick Alerts
ALLOW NOTIFICATIONS  
For Daily Alerts

ಮೈನರ್ ಹೆಸರಿನಲ್ಲಿ ಬ್ಯಾಂಕ್ ಖಾತೆ, ಏನು? ಎತ್ತ?

|

ನಿಮ್ಮ ಮಕ್ಕಳ ಹೆಸರಿನಲ್ಲಿ ಹಣ ಇಡುವುದದನ್ನು ರೂಢಿಸಿಕೊಂಡರೆ ಅವರ ಭವಿಷ್ಯ ಉಜ್ವಲವಾಗುವುದರಲ್ಲಿ ಅನುಮಾನವಿಲ್ಲ. ಸರಿಯಾದ ಮಾಹಿತಿ ಕಲೆ ಹಾಕಿ ಹೆಚ್ಚಿನ ಮರುಪಾವತಿ ನೀಡುವ ಹೂಡಿಕೆ ಮಾಡಿಕೊಂಡರೆ ಅಗತ್ಯದ ಸಮಯದಲ್ಲಿ ಬೇರೆಯವರ ಬಳಿ ಸಾಲಕ್ಕಾಗಿ ಕೈ ಚಾಚುವ ಸ್ಥಿತಿ ಎದುರಾಗಲ್ಲ.

ನಿಮ್ಮ ಕೈ ಯಲ್ಲಿ ಹಣ ಉಳಿತಾಯ ಸಾದ್ಯವಾಗದ ಪಕ್ಷದಲ್ಲಿ ಮಕ್ಕಳ ಹೆಸರಿನಲ್ಲಿಯೇ ಖಾತೆ ತೆರೆಯುವುದು ಒಳ್ಳೆಯದು. ಹಾಗಾದರೆ ಮೈನರ್ ಹೆಸರಿನಲ್ಲಿ ಉಳಿತಾಯ ಖಾತೆ ತೆರೆಯುವಾಗ ಯಾವ ದಾಖಲೆಗಳನ್ನು ನೀಡಬೇಕು? ಯಾವ ವಯಸ್ಸಿನಲ್ಲಿ ಖಾತೆ ತೆರೆದರೆ ಉತ್ತಮ? ಎಂಬ ಹಲವಾರು ಸಂಗತಿಗಳನ್ನು ತಿಳಿದುಕೊಂಡಿದ್ದರೆ ಚೆನ್ನ.[ಆನ್ ಲೈನ್ ನಲ್ಲಿ ಆದಾಯ ತೆರಿಗೆ ತುಂಬಲು ಸರಳ ವಿಧಾನ]

ಮೈನರ್ ಹೆಸರಿನಲ್ಲಿ ಬ್ಯಾಂಕ್ ಖಾತೆ, ಏನು? ಎತ್ತ?

* ಮೈನರ್ ಹೆಸರಿನಲ್ಲಿ ಫಿಕ್ಸೆಡ್ ಮತ್ತು ಉಳಿತಾಯ ಖಾತೆ ತೆರೆಯಲು ಬ್ಯಾಂಕ್ ಗಳು ಅವಕಾಶ ಮಾಡಿಕೊಟ್ಟಿವೆ. ಪಾಲಕರ ಮಾರ್ಗದರ್ಶನದಲ್ಲಿ ಖಾತೆ ತೆರೆಯಬಹುದು. ಒಮ್ಮೆ ಖಾತೆ ತೆರೆದ ನಂತರ ಪಾಲಕರು ಅಷ್ಟೂ ಹಣವನ್ನು ವಿಥ್ ಡ್ರಾ ಮಾಡಲು ಸಾಧ್ಯವಿಲ್ಲ.[ವಿಳಂಬವಾಗಿದ್ದಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಪಾವತಿ ಹೇಗೆ? ]

* 10 ವರ್ಷಕ್ಕೆ ಮೇಲ್ಪಟ್ಟ ಮಕ್ಕಳು ಸ್ವತಂತ್ರವಾಗಿ ಖಾತೆ ನಿರ್ವಹಿಸಬಹುದು. ಬ್ಯಾಂಕ್ ಇದಕ್ಕೆ ಎಲ್ಲ ಅವಕಾಶ ಮಾಡಿಕೊಡುತ್ತದೆ. ಖಾತೆಯಲ್ಲಿರುವ ಮೊತ್ತದ ಮೇಲೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.
* ಬ್ಯಾಂಕ್ ನ ಆಧುನಿಕ ಸೌಲಭ್ಯಗಳಾದ ಇಂಟರ್ ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಚೆಕ್ ಬುಕ್ ಎಲ್ಲವನ್ನು ಮೈನರ್ ಹೆಸರಿನಲ್ಲಿ ಬ್ಯಾಂಕ್ ಪಾಲಕರಿಗೆ ಒದಗಿಸುತ್ತದೆ.
* ಮೈನರ್ ಮೆಜಾರಿಟಿಗೆ ಬಂದ ತಕ್ಷಣದಲ್ಲಿ ಖಾತೆ ನಿರ್ವಹಿಸುತ್ತಿದ್ದವರೂ ಎಲ್ಲ ಮಾಹಿತಿಯನ್ನು ಖಾತೆದಾರನಿಗೆ ನೀಡಿ ಅಕೌಂಟ್ ಮೇಲಿನ ಹಿಡಿತವನ್ನು ಕೈ ಬಿಡಬೇಕಾಗುತ್ತದೆ.[ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆಯೋದು ಹೇಗೆ?]
* ಪ್ರತಿಯೊಂದು ಸಂದರ್ಭದಲ್ಲಿಯೂ ಮಾರ್ಗರ್ಶಕನ ರುಜು ಪಡೆದುಕೊಳ್ಳಲಾಗಿತ್ತದೆ.ಯಾವ ದಾಖಲೆಗಳನ್ನು ನೀಡಬೇಕು?
ಮೈನರ್ ಗೆ
* ಹುಟ್ಟಿದ ದಿನಾಂಕ ದೃಢೀಕರಣ
* ಬರ್ತ್ ಸರ್ಟಿಫಿಕೇಟ್
* ಹುಟ್ಟಿದ ದಿನಾಂಕ ನಮೂದಿಸಿರುವ ಶಾಲಾ ಗುರುತಿನ ಪತ್ರ

ಪಾಲಕರಿಗೆ
* ರುಜು ಮಾಡಿದ ಅರ್ಜಿ
* ಭಾವಚಿತ್ರ
* ಖಾತೆ ತೆರೆಯುವ ಅರ್ಜಿ ನಮೂನೆ
* ತಂದೆ ಅಥವಾ ತಾಯಿಯಾಗಿರದಿದ್ದರೆ ನ್ಯಾಯಾಲಯದ ಅನುಮತಿ ಮೂಲಕ ನೇಮಕ ಮಾಡಿಕೊಂಡಿರುವ ಪೋಷಕರಾಗಿರಬೇಕು.

ತೆರಿಗೆ ನೀತಿ
ಮೈನರ್ ಖಾತೆಗೆ ಬರುವ ಬಡ್ಡಿ ಪಾಲಕರ ಆದಾಯಕ್ಕೆ ಸೇರ್ಪಡೆಯಾಗುವುದು. ಅಲ್ಲದೇ ಇದಕ್ಕೂ ತೆರಿಗೆ ನೀಡಬೇಕಾಗುತ್ತದೆ.

ಕೊನೆ ಮಾತು
ಮಕ್ಕಳ ಹೆಸರಿನಲ್ಲಿ ಖಾತೆ ತೆರೆದು ಹಣ ಉಳಿತಾಯ ಮಾಡುವುದು ಈ ಖಾತೆಯ ಒಂದು ಮುಖ. ಆದರೆ ಇಂಥ ಖಾತೆಯನ್ನು ನಿಮ್ಮ ಮಕ್ಕಳ ಹೆಸರಿನಲ್ಲಿ ಮಾಡಿಸುವುದರಿಂದ ಅವರ ವಾಣಿಜ್ಯ ಜ್ಞಾನ ಬೆಳವಣಿಗೆಯಾಗುತ್ತದೆ. ಕೆಲ ಬ್ಯಾಂಕ್ ಗಳು ಸ್ಟೂಡೆಂಟ್ ಅಕೌಂಟ್ ಎಂದು ನೀಡುತ್ತಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. (ಗುಡ್ ರಿಟರ್ನ್ಸ್.ಇನ್)

English summary

Minor Bank Account: 5 Smart Things to Know

It is always better to start saving and investing in your kids name when the child is quite young. One can start with saving a small amount on regular basis. To make any investment, disciplined saving habits is very necessary.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X