For Quick Alerts
ALLOW NOTIFICATIONS  
For Daily Alerts

ಆದಾಯ ತೆರಿಗೆ ವಿನಾಯಿತಿ ಇದ್ದರೂ ದಾಖಲು ಮಾಡಿ

|

ತೆರಿಗೆ ವಿನಾಯಿತಿ ಲಾಭ ಹೇಗಿದ್ದರೂ ಸಿಗುತ್ತದೆ. ಇದರಲ್ಲಿ ಯಾವ ಅನುಮಾನಗಳಿಲ್ಲ. ಆದರೆ ತೆರಿಗೆ ರಿಟರ್ನ್ಸ್ ತುಂಬುವ ವೇಳೆ ತೆರಿಗೆ ವಿನಾಯಿತಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ನೀವು ಸಲ್ಲಿಕೆ ಮಾಡಬೇಕಾಗುತ್ತದೆ.

 

ಕೆಲವರು ರಿಟರ್ನ್ಸ್ ಸಲ್ಲಿಕೆ ವೇಳೆ ಇವುಗಳನ್ನು ದಾಖಲು ಮಾಡುವ ಅಗತ್ಯ ಇಲ್ಲವೆಂದೇ ಭಾವಿಸಿರುತ್ತಾರೆ. ಆದರೆ ಕೆಳಗೆ ನೀಡುರುವ ಪಟ್ಟಿಯಲ್ಲಿನ ಉಳಿತಾಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಲ್ಲಿಸಲೇಬೇಕು.[ಆನ್ ಲೈನ್ ನಲ್ಲಿ ಆದಾಯ ತೆರಿಗೆ ತುಂಬಲು ಸರಳ ವಿಧಾನ]

 
ಆದಾಯ ತೆರಿಗೆ ವಿನಾಯಿತಿ ಇದ್ದರೂ ದಾಖಲು ಮಾಡಿ

1. ಉಳಿತಾಯ ಖಾತೆ ಮೇಲಿನ ಬಡ್ಡಿ
10 ಸಾವಿರ ರು. ವರೆಗಿನ ಉಳಿತಾಯ ಖಾತೆ ಮೇಲಿನ ಬಡ್ಡಿಗೆ ತೆರಿಗೆ ವಿನಾಯಿತಿ ಲಭ್ಯವಿದೆ. ನೀವು ಉಳಿತಾಯ ಖಾತೆಯಿಂದ 8 ಸಾವಿರ ರು. ಬಡ್ಡಿ ಪಡೆದಿದದ್ದೀರಿ ಎಂದಾದರೆ ಅದಯ ತೆರಿಗೆ ವಿನಾಯಿತಿ ಅಡಿಯಲ್ಲೇ ಬರುತ್ತದೆ. ಆದಾಯ ತೆರಿಗೆ ರಿಟರ್ನ್ಸ್ ಪಾವತಿ ಮಾಡುವಾಗ ಈ ಮಾಹಿತಿಯನ್ನು ನಮೂದಿಸಬೇಕು.

2. ತೆರಿಗೆ ಮುಕ್ತ ಬಾಂಡ್ ಗಳು
ಈ ಬಗೆಯ ಬಾಂಡ್ ಗಳು ಭಾರತದ ನಾಗರಿಕರಿಗೆ ಪರಿಚಯವಾಗಿ ಹಲವು ವರ್ಷಗಳೇ ಸಂದಿವೆ. ಭಾರತೀಯ ರೈಲ್ವೆ ಹಣಕಾಸು ಕಾರ್ಪೋರೇಶನ್, ಹುಡ್ಕೋ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂತಾದ ಸಂಸ್ಥೆಗಳ ಬಾಂಡ್ ಗಳಲ್ಲಿ ಹೂಡಿಕೆ ಮಾಡಿದ್ದನ್ನು ನಮೂದಿಸಬೇಕು. [ತೆರಿಗೆ ಮುಕ್ತ ಆದಾಯ ಗಳಿಕೆಗೆ 7 ವಿಧಾನಗಳು]

3. ಪಿಪಿಎಫ್ ನಿಂದ ಸಿಕ್ಕ ಬಡ್ಡಿ
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಲ್ಲಿ ಹೂಡಿಕೆ ಮಾಡಿದ ಲೆಕ್ಕವನ್ನು ಒಪ್ಪಿಸಬೇಕಾಗುತ್ತದೆ. ತೆರಿಗೆ ವಿನಾಯಿತಿ ಲಭ್ಯವಿದ್ದರೂ ಲೆಕ್ಕ ಪತ್ರಗಳನ್ನು ಒದಗಿಸಲೇಬೇಕು.

4. ಷೇರು ಮಾರಾಟದಿಂದ ಬಂದ ಲಾಭ
ನೀವು ಮಾರುಕಟ್ಟೆಯಲ್ಲಿ ಎಷ್ಟು ಹೂಡಿಕೆ ಮಾಡಿದ್ದೀರಿ, ಅಥವಾ ವ್ಯವಹಾರ ನಡೆಸುತ್ತಿದ್ದೀರಿ ಎಂಬುದು ಇಲ್ಲಿ ಮುಖ್ಯವಾಗಲ್ಲ. ಆದರೆ ದೊಡ್ಡ ಪ್ರಮಾಣದಲ್ಲಿ ಷೇರು ಮಾರಾಟ ಮಾಡಿದರೆ ಅದರ ಲೆಕ್ಕವನ್ನು ನೀಡಬೇಕಾಗುತ್ತದೆ.

5. ಡಿವಿಡೆಂಡ್ ನಿಂದ ಬಂದ ಆದಾಯ
ನೀವು ಯಾವುದೇ ಪ್ರಮುಖ ಕಂಪನಿ ಅಥವಾ ಲಾಭದಾಯಕ ಸಂಸ್ಥೆಯಲ್ಲಿ ಷೇರು ಹೊಂದಿದ್ದರೆ ಸಂಸ್ಥೆ ತನ್ನ ವಾರ್ಷಿಕ ಲಾಭದಲ್ಲಿ ನಿಮಗೆ ಡಿವಿಡೆಂಡ್ ನೀಡುತ್ತದೆ. ಇದು ಸಹ ತೆರಿಗೆ ವಿನಾಯಿತಿ ವ್ಯಾಪ್ತಿಗೆ ಒಳಪಡುತ್ತಿದ್ದರೂ ಮಾಹಿತಿಯನ್ನು ನೀವು ನೀಡಬೇಕಾಗುತ್ತದೆ.

ಕೊನೆ ಮಾತು:
ನಿಮ್ಮ ಆದಾಯ ತೆರಿಗೆ ಮರುಪಾತಿ ಸಲ್ಲಿಕೆ ಮಾಡಲು ಆಗಸ್ಟ್ 31 ಕೊನೆ ದಿನ. ಮೇಲಿನ ಸಂಗತಿಗಳೊಂದಿಗೆ ಫಿಕ್ಸೆಡ್ ಡಿಪಾಸಿಟ್, ಆರ್ ಡಿ, ಅಂಚೆ ಇಲಾಖೆಯಲ್ಲಿ ಹೊಂದಿರುವ ಯೋಜನೆಗಳ ಮಾಹಿತಿಯನ್ನು ನೀಡಬೇಕಾಗುತ್ತದೆ. ಹಲವಾರು ಜನ ತಮ್ಮ ಉಳಿತಾಯ ಖಾತೆ ಮಾಹಿತಿಯನ್ನು ಸಲ್ಲಿಕೆ ಮಾಡದೇ ನಂತರ ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ.(ಗುಡ್ ರಿಟರ್ನ್ಸ್. ಇನ್)

English summary

5 Tax Free Incomes That You must Disclose When Filing Your Tax Returns

Tax free income is no doubt tax free, but, it must be declared when filing your tax returns. Many individuals consider this as tax free and hence decide not to mention the same in the income tax returns or ITR. That is not the best thing to do and one must declare tax free income. It becomes important to declare the same and let me give you most examples, where you need to declare the same.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X