For Quick Alerts
ALLOW NOTIFICATIONS  
For Daily Alerts

ಅಟಲ್ ಪಿಂಚಣಿ ಯೋಜನೆ ಮಾಡಿಸುವುದು ಹೇಗೆ?

|

ಅಟಲ್ ಪೆನ್ಶನ್ ಯೋಜನೆಯನ್ನು ಕೇಂದ್ರ ಸರ್ಕಾರ ಜನತೆಗೆ ನೀಡಿದ್ದು ನಿವೃತ್ತಿ ಭದ್ರತೆಯನ್ನು ಮೊದಲ ಆದ್ಯತೆಯನ್ನಾಗಿರಿಸಿದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಪಿಎಫ್ ಆರ್ ಡಿಎ) ಅಡಿಯಲ್ಲಿ ಯೋಜನೆಗೆ ಸಂಪೂರ್ಣ ಭದ್ರತೆ ಒದಗಿಸಲಾಗಿದೆ.

ಅಸಂಘಟಿತ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರನ್ನು ಗುರಿಯಾಗಿರಿಸಿಕೊಂಡು ಯೋಜನೆಯನ್ನು ಸಿದ್ಧಮಾಡಲಾಗಿದೆ. ಸಾಮಾಜಿಕ ಭದ್ರತೆ ಯೋಜನೆಗಳು ಲಭ್ಯವಿಲ್ಲದರೂ ಇದರ ಲಾಭ ಪಡೆದುಕೊಳ್ಳಬಹುದು ಎಂದು ತಿಳಿವಳಿಕೆ ನೀಡಲಾಗಿದೆ.[ನ್ಯಾಶನಲ್ ಪೆನ್ಶನ್ ಸ್ಕೀಮ್ ಖಾತೆ ತೆರೆಯುವುದು ಹೇಗೆ?]

ಅಟಲ್ ಪಿಂಚಣಿ ಯೋಜನೆ ಮಾಡಿಸುವುದು ಹೇಗೆ?

ಯೋಜನೆ ಅನ್ವಯ ತಿಂಗಳಿಗೆ ಒಂದು ಸಾವಿರ, ಎರಡು ಸಾವಿರ ಮತ್ತು ಮೂರು ಸಾವಿರ, 5 ಸಾವಿರ , 6 ಸಾವಿರ ರು. ಪಡೆದುಕೊಳ್ಳಲು ಸಾಧ್ಯವಿದೆ. 60 ವರ್ಷದ ನಂತರ ಪೆನ್ಶನ್ ದೊರೆಯಲಿದ್ದು ನೀವು ಕಟ್ಟುವ ಹಣದ ಆಧಾರದ ಮೇಲೆ ಪೆನ್ಶನ್ ಹಣ ನಿರ್ಧರಿತವಾಗಿರುತ್ತದೆ.

ನೀವು ಸಲ್ಲಿಕೆ ಮಾಡುವ ಹಣದಷ್ಟೇ ಪ್ರಮಾಣದ ಹಣವನ್ನು ಸರ್ಕಾರ ಹಾಕುತ್ತದೆ. ಯೋಜನೆಗೆ ಸೇರುವ ವಯಸ್ಸು ಅನುಸರಿಸಿ ಮಾಸಿಕ ದೇಣಿಗೆ ನಿರ್ಧರಿತವಾಗುತ್ತದೆ. ತಮ್ಮ ವಯಸ್ಸು ಮತ್ತು ನಿಮ್ಮ ಪಿಂಚಣಿಯ ಆಯ್ಕೆಯ ಪ್ರಕಾರ ಮಾಸಿಕ ಪ್ರೀಮಿಯಂ ಕಟ್ಟಬೇಕು.[ಪಾನ್ ಕಾರ್ಡ್ ಕಳೆದುಕೊಂಡರೆ ಏನು ಮಾಡಬೇಕು?]

ಅಟಲ್ ಪಿಂಚಣಿ ಯೋಜನೆ ಮಾಡಿಸಲು ಯಾವ ಕ್ರಮ ಅನುಸರಿಸಬೇಕು?
ಉಳಿತಾಯ ಖಾತೆ

ಯೋಜನೆಯನ್ನು ಮಾಡಿಸಬೇಕಾದರೆ ಉಳಿತಾಯ ಖಾತೆ ಹೊಂದಿರಬೇಕಾದದ್ದು ಕಡ್ಡಾಯ. ಹಣ ಉಳಿತಾಯ ಖಾತೆಗೆ ತನ್ನಿಂದ ತಾನೇ ವರ್ಗಾವಣೆಯಾಗುತ್ತದೆ.

ನೋಂದಣಿ ಅರ್ಜಿ
ಉಳಿತಾಯ ಖಾತೆ ಹೊಂದಿರುವ ಬ್ಯಾಂಕ್ ನಲ್ಲಿ ಯೋಜನೆ ಬಗ್ಗೆ ವಿಚಾರಿಸಿ ಅರ್ಜಿ ಪಡೆದುಕೊಳ್ಳಬೇಕು. ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ ಬ್ಯಾಂಕ್ ಗೆ ಸಲ್ಲಿಕೆ ಮಾಡಬೇಕು. ಆನ್ ಲೈನ್ ಮೂಲಕವೂ ಅರ್ಜಿ ಸಲ್ಲಿಕೆ ಮಾಡಬಹುದು.

ಮೊಬೈಲ್ ಮತ್ತು ಆಧಾರ್ ಸಂಖ್ಯೆ ನೀಡಿ
ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ನೀಡಿದರೆ ಯೋಜನೆಯ ಮಾಹಿತಿಯನ್ನು ಎಸ್ ಎಂಎಸ್ ಗಳ ಮೂಲಕ ಪಡೆದುಕೊಳ್ಳಬಹುದು. ಆಧಾರ್ ಸಂಖ್ಯೆಯನ್ನು ಇಲ್ಲಿ ಕಡ್ಡಾಯ ಮಾಡಿಲ್ಲ, ನೀಡಿದರೆ ಒಳಿತು.

ಕನಿಷ್ಠ ಮೊತ್ತ
ಹಣದ ರವಾನೆ ನಡೆಯಬೇಕಿದ್ದರೆ ನಿಮ್ಮ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇರಲೇಬೇಕು. ಎಲ್ಲ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳು ಅಟಲ್ ಪಿಂಚಣಿ ಯೋಜನೆ ಸೌಲಭ್ಯವನ್ನು ಹೊಂದಿವೆ.

ಅವಧಿ ಮುಗಿದರೆ ಏನಾಗುತ್ತದೆ?
ನಿಗದಿತ ಅವಧಿಯಲ್ಲಿ ಹಣ ಸಂದಾಯವಾಗದಿದ್ದರೆ ಅದನ್ನು ದಂಡ ರೂಪದಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅತಿ ಕನಿಷ್ಠ ಪ್ರಮಾಣದ ಅಂದರೆ 1 ರು ನಿಂದ 10 ರು. ವರೆಗೆ ದಂಡ ವಿಧಿಸಬಹುದು.

ಇತರ ಮಾಹಿತಿ
ಯೋಜನೆ ಮಾಡಿಸಿಕೊಂಡವರು 60 ವರ್ಷ ತುಂಬಿದ ನಂತರದಲ್ಲಿ ಪಿಂಚಣಿಗೆ ಅರ್ಜಿ ಸಲ್ಲಿಕೆ ಮಾಡಬಹುದು. 60 ವರ್ಷಕ್ಕೂ ಮುನ್ನ ಯಾವ ಕಾರಣಕ್ಕೂ ಹಣ ನೀಡಲಾಗುವುದುಲ್ಲ. ಸಾವು ಮತ್ತಿತರ ಅಪಘಾತ ಸಂದರ್ಭದಲ್ಲಿ ಕೆಲ ವಿನಾಯಿತಿ ಕಲ್ಪಿಸಲಾಗಿದೆ.

ಕೊನೆ ಮಾತು:
ಯೋಜನೆ ದಾರ ತನ್ನ ಪಿಂಚಣಿ ಮೊತ್ತ ಹೆಚ್ಚು ಅಥವಾ ಕಡಿಮೆ ಮಾಡಿಕೊಳ್ಳಲು ಅವಕಾಶವಿಲ್ಲ. ಅರ್ಜಿ ತುಂಬುವ ವೇಳೆಯೇ ನಿರ್ದಿಷ್ಟ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. (ಗುಡ್ ರಿಟರ್ನ್ಸ.ಇನ್)

English summary

Atal Pension Yojana: Opening Procedure

Atal Pension Yojana is a scheme launched by the government in the union budget 2014-15. This is a guaranteed pension scheme and is administered by the Pension Fund Regulatory and Development Authority (PFRDA). The APY will be focused on all citizens in the unorganized sector, who join the National Pension System (NPS) administered by the Pension Fund Regulatory and Development Authority (PFRDA) and who are not members of any statutory social security scheme
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X