For Quick Alerts
ALLOW NOTIFICATIONS  
For Daily Alerts

ಎಲ್ಲರೂ ನೋಡಲೇಬೇಕಾದ ಉಳಿತಾಯ ಯೋಜನೆಗಳ ಪಟ್ಟಿ

|

ನೀವು ಹಣವನ್ನು ಯಾವುದೇ ಒಂದು ಯೋಜನೆ ಮೇಲೆ ಹೂಡಿಕೆ ಮಾಡುವಾಗಲು ರಿಟರ್ನ್ಸ್ ಬಗ್ಗೆ ಯೋಚನೆ ಮಾಡಿಯೇ ಇರುತ್ತೀರಿ. ಯಾವ ಯೋಜನೆ ಅತಿ ಹೆಚ್ಚಿನ ಲಾಭ ತಂದು ಕೊಡಲಿದೆ ಎಂಬುದನ್ನು ಒಮ್ಮೆಯಾದರೂ ಲೆಕ್ಕ ಹಾಕಿರುತ್ತೀರಿ.

ರಿಸ್ಕ್ ಜಾಸ್ತಿ ಇದ್ದಲ್ಲಿ ಮರು ಪಾವತಿಯೂ ಹೆಚ್ಚು, ರಿಸ್ಕ್ ಕಡಿಮೆ ಇದ್ದಲ್ಲಿ ಹಣದ ಹಿಂದಿರುಗುವ ಪ್ರಮಾಣವೂ ಕಡಿಮೆ ಎಂಬುದು ಮಾರುಕಟ್ಟೆಯ ಸಾಮಾನ್ಯ ಲೆಕ್ಕಾಚಾರ. ಮತ್ತೊಂದು ಬಗೆಯಲ್ಲಿ ಹೇಳುವುದಾದರೆ ಅಲ್ಪಾವಧಿಯ ಹೂಡಿಕೆ ಅಪಾಯ ಎದುರಿಸಿದರೆ, ದೀರ್ಘಕಾಲದ ಹೂಡಿಕೆ ಸುರಕ್ಷಿತ.[ಲಾಭ ತರುವ ಮ್ಯೂಚುವಲ್ ಫಂಡ್ ಮೇಲೆ ಹೂಡಿಕೆ ಮಾಡ್ತಿರಾ?]

ನೀವು ಪ್ರತಿ ತಿಂಗಳು 1000 ರು. ನಿಂದ 5000 ರು ವಿನಿಯೋಗಿಸಲು ಅಥವಾ ಹೂಡಿಕೆ ಮಾಡಲು ಸಿದ್ಧರಿದ್ದರೆ ಯಾವ ಯೋಜನೆ ಉತ್ತಮ ಎಂಬುದನ್ನು ಲೆಕ್ಕ ಹಾಕಿಕೊಳ್ಳಬೇಕಾಗುತ್ತದೆ.

ಎಲ್ಲರೂ ನೋಡಲೇಬೇಕಾದ ಉಳಿತಾಯ ಯೋಜನೆಗಳ ಪಟ್ಟಿ

ರಿಕರಿಂಗ್ ಡಿಫಾಸಿಟ್(ಆರ್ ಡಿ)
ಚಿಕ್ಕ ಪ್ರಮಾಣದ ಹಣ ಹೂಡಿಕೆಗೆ ಆರರ್ ಡಿ ಹೇಳಿ ಮಾಡಿಸಿದ ಯೋಜನೆ. ಯಾರಿಗೆ ವೃತ್ತಿ ನಿರತರ ಮಾರ್ಗದರ್ಶನ ಸಿಗುವುದಿಲ್ಲವೋ ಅಥವಾ ಮಾರುಕಟ್ಟೆ ಬಗ್ಗೆ ಸಮರ್ಪಕ ತಿಳಿವಳಿಕೆ ಇಲ್ಲವೋ ಅವರಿಗೆ ಈ ಯೋಜನೆ ಹೇಳಿ ಮಾಡಿಸಿದ್ದಾಗಿದೆ.

ತಿಂಗಳ ಆದಾಯ ಯೋಜನೆ(ಎಂಐಪಿ)
ತಿಂಗಳ ಆದಾಯ ಯೋಜನೆಗೆ ಸಂಬಂಧಿಸಿ ಇಂದು ಅನೇಕ ಆಯ್ಕೆಗಳಿವೆ. ಮ್ಯೂಚುವಲ್ ಫಂಡ್ಸ್ ಮತ್ತು ಅದಕ್ಕೆ ಸಂಬಂಧಿಸಿದ ಇತರ ಪ್ರಕಾರಗಳಲ್ಲಿ ಹಣ ಹೂಡಿಕೆ ಮಾಡಬಹುದು. ಇದು ಸುರಕ್ಷಿತ ಮಾರ್ಗ ಕೂಡಾ.[ಕಡಿಮೆ ಅವಧಿಗೆ ಹೆಚ್ಚಿನ ರಿಟರ್ನ್ಸ್ ತರುವ 6 ಯೋಜನೆಗಳು]

ವ್ಯವಸ್ಥಿತ ಹೂಡಿಕೆ ಯೋಜನೆ(ಎಸ್ ಐಪಿ)
ಸಾವಿರ ರು. ದಿಂದಲೂ ಇಲ್ಲಿ ಹೂಡಿಕೆ ಮಾಡಲು ಸಾಧ್ಯವಿದೆ. ತಿಂಗಳ ಲೆಕ್ಕದಲ್ಲಿ ನಿಖರ ಆದಾಯ ಪಡೆಯಲು ಯಾವ ಅಡೆತಡೆಗಳಿಲ್ಲ. ಎಸ್ ಬಿಐ, ಎಚ್ ಡಿಎಫ್ ಸಿ ಸೇರಿದಂತೆ ಸರ್ಕಾರಿ ಮತ್ತು ಖಾಸಗಿ ಸ್ವಾಮ್ಯದ ಬ್ಯಾಂಕ್ ಗಳು ಇದರಡಿ ವಿವಿಧ ಯೋಜನೆಗಳನ್ನು ನೀಡಿವೆ.

ಷೇರು ಮಾರುಕಟ್ಟೆ
ಮಾರುಕಟ್ಟೆಯ ಬಗ್ಗೆ ಒಂದಷ್ಟು ಜ್ಞಾನ ಪಡೆದುಕೊಂಡು ವೈಯಕ್ತಿಕವಾಗಿ ಮಾರುಕಟ್ಟೆಗೆ ಪ್ರವೇಶ ಮಾಡಬಹುದು. ನೂರಾರು ಏಜೆನ್ಸಿಗಳು ಸಲಹೆ ನೀಡಲಿದ್ದು ಉತ್ತಮವಾದ್ದನ್ನು ಆಯ್ಕೆ ಮಾಡಿಕೊಳ್ಳಬೇಕು.

ತಿಂಗಳ ಆದಾಯ ಆಯ್ಕೆ(ಎಂಐಎಸ್)
ಭಾರತೀಯ ಅಂಚೆ ಇಲಾಖೆ ಇದರ ಅಡಿ ವಿವಿಧ ಯೋಜನೆಗಳನ್ನು ಕೊಡಮಾಡುತ್ತಿದ್ದು ಹೂಡಿಕೆಗೆ ಭದ್ರತೆಯನ್ನು ಒದಗಿಸುತ್ತದೆ. ಅಲ್ಲದೇ ಇದಕ್ಕೆ ಕೇಂದ್ರ ಸರ್ಕಾರದ ಅಭಯವೂ ಇರುತ್ತದೆ.

ಚಿಟ್ ಫಂಡ್ಸ್
ಒಂದಷ್ಟು ಜನ ಗುಂಪಾಗಿ ಹಣ ಹೂಡಿಕೆ ಮಾಡುತ್ತಾರೆ. ಚಿಕ್ಕ ಚಿಕ್ಕ ಅಂಗಡಿ ನಡೆಸುವವರಿಗೆ, ಸಣ್ಣ ಉದ್ದಿಮೆದಾರರಿಗೆ ಈ ಯೋಜನೆ ಹೇಳಿ ಮಾಡಿಸಿದ್ದಾಗಿದೆ. (ಗುಡ್ ರಿಟರ್ನ್ಸ್.ಇನ್)

English summary

Best Ways To Invest Rs 1000-5000 Every Month To Get Higher Return

Individuals who are looking to multiply their returns by investing money on a regular basis should define financial goals and time horizon before investment in any product. Investment differs depending on the risk and tenure of the investment. Higher the risk, larger will be the reward or loss. However, investments considered for the long term will have a lower risk.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X