For Quick Alerts
ALLOW NOTIFICATIONS  
For Daily Alerts

ಅಂತಾರಾಷ್ಟ್ರೀಯ ಚಿನ್ನದ ದರ ಗಣನೀಯ ಇಳಿಕೆ: ಹೂಡಿಕೆಗೆ ಸಕಾಲವೇ?

|

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 5 ವರ್ಷಗಳಷ್ಟು ಹಳೆಯ ಮಟ್ಟಕ್ಕೆ ಕುಸಿದಿದೆ. ಅಮೆರಿಕದ ಫೆಡರಲ್ ಬ್ಯಾಂಕ್ ತೆಗೆದುಕೊಂಡ ಹಣಕಾಸು ನೀತಿ ಚಿನ್ನದ ದರದ ಮೇಲೆ ಪರಿಣಾಮ ಬೀರಿದೆ.

ಪ್ರತಿ ಔನ್ಸ್ ಬಂಗಾರದ ದರ 1,106ಕ್ಕೆ ತಗ್ಗಿದ್ದು, 2010ರ ಮಾರ್ಚ್ ನಂತರದ ಅತೀ ಕಡಿಮೆ ಮೊತ್ತವಾಗಿದೆ. ಇದು ಭಾರತದ ನಾಗರಿಕರಿಗೆ ಸಂತಸದ ಸುದ್ದಿಯಾಗಿದ್ದು ದೇಶಿಯ ಮಾರುಕಟ್ಟೆಯಲ್ಲಿ ಸಹ ದರ ಭಾರೀ ಇಳಿಕೆಯಾಗುವ ಸಂಭವವಿದೆ.

ಚಿನ್ನದ ದರ ಗಣನೀಯ ಇಳಿಕೆ: ಹೂಡಿಕೆಗೆ ಸಕಾಲವೇ?


ನಿಮ್ಮ ನಗರದ ಚಿನ್ನದ ಬೆಲೆ ತಿಳಿದುಕೊಳ್ಳಿ

ಗೋಲ್ಡ್ ಪ್ಯೂಚರ್ ಸಹ ಇಳಿಕೆಯಾಗಿದ್ದು 25,007 ಕ್ಕೆ ಇಳಿದಿದೆ. ಇದು ಸಹ 2013 ರ ನಂತರ ಅತೀ ಕಡಿಮೆ ದರವಾಗಿದೆ. ಚಿನ್ನದ ಮೇಲಿನ ಹೂಡಿಕೆಗೆ ಇದು ಸಕಾಲ ಎಂದೇ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಆಭರಣದ ಖರೀದಿಗೂ ಭಾರತೀಯರು ನಿರಾಸಕ್ತಿ ತೋರುತ್ತಿದ್ದರು. ಚಿನ್ನದ ಮೇಲಿನ ಹೂಡಿಕೆಗಿಂತ ಚಿನ್ನದ ಪತ್ರಗಳ ಮೇಲಿನ ಹೂಡಿಕೆಗೆ ಒತ್ತು ನೀಡಲಾಗುತ್ತಿತ್ತು. ದೊಡ್ಡ ಮೊತ್ತದ ಹೂಡಿಕೆಗೆ ಇದು ಸಕಾಲವಲ್ಲದಿದ್ದರೂ ಒಂದಿಷ್ಟು ಹಣವನ್ನು ಶುದ್ಧ ಚಿನ್ನ ಅಥವಾ ಚಿನ್ನದ ಪತ್ರಗಳ ಮೇಲೆ ಹಾಕಲು ಇದು ಸಕಾಲ ಎಂದೇ ಹೇಳಬಹುದು.

ಡಾಲರ್ ಮೌಲ್ಯ ಏರಿಕೆಯಾಗುತ್ತಿದ್ದರೂ ಚಿನ್ನದ ದರದ ಮೇಲೆ ಪರಿಣಾಮ ಬೀರಿಲ್ಲ. ಗ್ರೀಸ್ ನಲ್ಲಿ ಎದ್ದಿದ್ದ ಆರ್ಥಿಕ ಸಂಕಷ್ಟಕ್ಕೂ ತಾರ್ಕಿಕ ಅಂತ್ಯ ಸಿಕ್ಕಿದ್ದು ಕಳೆದ ಎರಡು ವಾರಗಳಿಂದ ಬಾಗಿಲು ಹಾಕಿದ್ದ ಬ್ಯಾಂಕ್ ಗಳು ಬಾಗಿಲು ತೆರೆದಿವೆ. ಇದು ಭಾರತದ ಷೇರು ಮಾರುಕಟ್ಟೆಯ ಸಾಧನೆ ಮೇಲೂ ಪರಿಣಾಮ ಬೀರಿದೆ.(ಗುಡ್ ರಿಟರ್ನ್ಸ್.ಇನ್)

English summary

Gold Prices Fall To 5 Year Low; Good News For Indian

Gold prices plunged to a 5 year low as investors bet on the US Federal Reserve hiking interest rates in its Sept policy. Spot gold in the international market was down to $1,106 an ounce after falling as low $1,089, its lowest since March 2010.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X