For Quick Alerts
ALLOW NOTIFICATIONS  
For Daily Alerts

ತೆರಿಗೆ ಪಾವತಿ ವೇಳೆ ತಪ್ಪಾದರೆ ಮತ್ತೆ ರಿಟರ್ನ್ಸ್ ಸಾಧ್ಯವೇ?

By Mahesh
|

ಆದಾಯ ತೆರಿಗೆ ಪಾವತಿ ಮಾಡಲು ಅನೇಕ ವಿಧಾನಗಳಿದ್ದರೂ ರಿಟರ್ನ್ಸ್ ಫೈಲ್ ಮಾಡುವ ವೇಳೆ ಸ್ವಲ್ಪ ಎಚ್ಚರಿಕೆ ತಪ್ಪಿದ್ದರೂ ಪ್ರಮಾದವಾಗುತ್ತದೆ. ಗೊತ್ತಿಲ್ಲದೆ ತಪ್ಪು ಮಾಹಿತಿ ಹಾಕಿ ಅರ್ಜಿ ತುಂಬಿ ರಿಟರ್ನ್ಸ್ ಸಲ್ಲಿಸಿದ್ದರೆ ಭಯಪಡಬೇಡಿ. ಇಂಥ ಸಂದರ್ಭದಲ್ಲೂ ಮತ್ತೊಮ್ಮೆ ಇ ರಿಟರ್ನ್ಸ್ ಸಲ್ಲಿಸುವ ಅವಕಾಶವನ್ನು ಇಲಾಖೆ ನೀಡುತ್ತದೆ.

ಅದರೆ, ನೆನಪಿಡಿ, ಕೊನೆ ದಿನಾಂಕ (ಈ ಬಾರಿ ಆಗಸ್ಟ್ 31, 2015) ಕ್ಕೂ ಮುನ್ನ ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕಾಗುತ್ತದೆ. ಮತ್ತೆ ಮತ್ತೆ ತಪ್ಪು ಮಾಡಿದರೂ ಚಿಂತೆ ಇಲ್ಲ, ಕೊನೆ ದಿನಾಂಕಕ್ಕೂ ಮೊದಲು ಸರಿಯಾದ ಮಾಹಿತಿಯೊಂದಿಗೆ ರಿಟರ್ನ್ಸ್ ಮರು ಸಲ್ಲಿಕೆ ಮಾಡಬಹುದು. [ರಗಳೆ ಇಲ್ಲದೆ ತೆರಿಗೆ ಮರುಪಾವತಿ ಮಾಡುವ ವಿಧಾನ]

ಒಂದು ವೇಳೆ ಕೊನೆ ದಿನಾಂಕದ ನಂತರ ರಿಟರ್ನ್ಸ್ ಸಲ್ಲಿಕೆ ಮಾಡಲು ಯತ್ನಿಸಿದರೆ, ದಂಡ ಕಟ್ಟಬೇಕಾಗುತ್ತದೆ. ಜೊತೆಗೆ ರಿಟರ್ನ್ಸ್ ಸಲ್ಲಿಕೆ ವಿಧಾನವೂ ಕಷ್ಟಕರವಾಗುತ್ತದೆ. ಈ ವರ್ಷ ಬೇಡ ಮುಂದಿನ ವರ್ಷ ದಂಡ ಸೇರಿಸಿ ಕಟ್ಟುತ್ತೇನೆ ಎಂದರೆ ಲೆಕ್ಕಾಚಾರ ಇನ್ನೂ ಕ್ಲಿಷ್ಟ.

ತೆರಿಗೆ ಪಾವತಿ ವೇಳೆ ತಪ್ಪಾದರೆ ಮತ್ತೆ ರಿಟರ್ನ್ಸ್ ಸಾಧ್ಯವೇ?

ತಪ್ಪು ಮಾಡಬೇಡಿ: ಗೊತ್ತಿದ್ದು ಗೊತ್ತಿದ್ದು ತಪ್ಪು ಮಾಡಿ ಸುಳ್ಳು ಮಾಹಿತಿ ನೀಡಿದರೆ ಆದಾಯ ತೆರಿಗೆ ಇಲಾಖೆಯಿಂದ ಭಾರಿ ಮೊತ್ತದ ದಂಡ (ಮೂರು ಪಟ್ಟು ಅಧಿಕ) ಜೊತೆಗೆ ಸೆರೆಮನೆ ವಾಸ ಕೂಡಾ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಆದಾಯದ ಬಗ್ಗೆ ಅರಿವಿದ್ದು ಅರ್ಜಿ ತುಂಬುವುದು ಗೊತ್ತಿದ್ದರೆ ಸರಿಯಾದ ಮಾಹಿತಿ ನೀಡಿ ರಿಟರ್ನ್ಸ್ ಸಲ್ಲಿಸಿ.[ರಿಫಂಡ್ ಚೆಕ್ ಹಿಂದಕ್ಕೆ ಪಡೆಯುವುದು ಹೇಗೆ?]

ಉದಾಹರಣೆಗೆ 2014-15ರ ಆರ್ಥಿಕ ವರ್ಷ ಐಟಿ ರಿಟರ್ನ್ಸ್ ಪರಿಷ್ಕೃತವಾದ ಮೇಲೂ ಆಗಸ್ಟ್ 31, 2015ರೊಳಗೆ ಕಟ್ಟಬಹುದು. ಕೊನೆ ದಿನಾಂಕ ಮುಗಿದ ಮೇಲೆ ಪ್ರಸಕ್ತ ಆರ್ಥಿಕ ವರ್ಷದ ರಿಟರ್ನ್ಸ್ ಫೈಲ್ (ದಂಡ ಸಹಿತ) ಮಾಡಲು ಬರುವುದಿಲ್ಲ.[ವಿಳಂಬವಾಗಿದ್ದಲ್ಲಿ ತೆರಿಗೆ ರಿಟರ್ನ್ಸ್ ಪಾವತಿ ಹೇಗೆ?]

ಒಂದು ವೇಳೆ ನೀವು ನೀಡಿದ ಮಾಹಿತಿಯಲ್ಲಿ ಲೋಪ ಕಂಡು ಬಂದರೆ, ಉದ್ದೇಶ ಪೂರ್ವಕವಾಗಿ ಕೆಲ ಮಾಹಿತಿ ದೋಷ ಮಾಡಿದ್ದರೆ, ಅಂಕಿ ಅಂಶಗಳನ್ನು ಬಚ್ಚಿಟ್ಟಿದ್ದೀರಿ ಎಂದು ಐಟಿ ಇಲಾಖೆಗೆ ಕಂಡು ಬಂದರೆ ಕಾನೂನಿನ ಪ್ರಕಾರ ಕ್ರಮ ಜರುಗಿಸಲಾಗುತ್ತದೆ.[ಆದಾಯ ತೆರಿಗೆ ಪಾವತಿ ಮಾರ್ಗದರ್ಶಿ]

ಆದ್ದರಿಂದ ಮೊದಲ ಯತ್ನದಲ್ಲೇ ಸರಿಯಾದ ಮಾಹಿತಿ ನೀಡುವುದು ಒಳ್ಳೆಯದು, ಪರಿಷ್ಕೃತ ರಿಟರ್ನ್ಸ್ ದಾಖಲೆಯಲ್ಲಿ ಮೂಲ ದಾಖಲೆಗಿಂತ ಅಧಿಕ ಪ್ರಮಾಣದ ಮೊತ್ತವನ್ನು ದಾಖಲಿಸಿದ್ದರೆ ಐಟಿ ಇಲಾಖೆ ಮಾಫಿ ಮಾಡಬಹುದು ಸಾಧ್ಯತೆ ಇರುತ್ತದೆ. (ಗುಡ್ ರಿಟರ್ನ್ಸ್.ಇನ್)

English summary

How to file a revised Income Tax Return in India if you have made a mistake?

It's highly possible that you could have made a mistake while filing your Income Tax Returns. You can revise your Income Tax Return before the assessment is made and provided you have filed your returns before the due date.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X