For Quick Alerts
ALLOW NOTIFICATIONS  
For Daily Alerts

ಆಧಾರ್ ನಂಬರ್ ಕಂಡುಹಿಡಿಯಲು ಹೆಸರೊಂದಿದ್ರೆ ಸಾಕು

|

ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಮತ್ತು ವಿವಿಧ ದಾಖಲಾತಿ ನೋಂದಣಿಗೆ ಆಧಾರ್ ಕಾರ್ಡ್ ನ್ನು ಮಾನದಂಡವಾಗಿ ಬಳಸಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆಧಾರ್ ನಂಬರ್ ನೋಂದಣಿಯಾಗಿದ್ದರೆ ಆದಾಯ ತೆರಿಗೆ ತುಂಬುವವರು ಐಟಿಆರ್ ವಿ ಕಳುಹಿಸಿಕೊಡಬೇಕಾದ ಅಗತ್ಯವಿಲ್ಲ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ನೀವು ಆಧಾರ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದೀರಿ, ಆದರೆ ಕಾರ್ಡ್ ನಿಮ್ಮ ಕೈ ಸೇರಿಲ್ಲ ಅಥವಾ ನಿಮ್ಮ ಬಳಿಯಿದ್ದ ಆಧಾರ್ ಕಾರ್ಡ್ ಯಾವುದೋ ಕಾರಣದಿಂದ ಕಳೆದುಕೊಂಡಿದ್ದೀರಿ. ಇಂಥ ಸಂದರ್ಭದಲ್ಲಿ ಆಧಾರ್ ಸಂಖ್ಯೆ ಅಗತ್ಯ ಬಿದ್ದರೆ ಏನು ಮಾಡಬೇಕು? ಅದಕ್ಕೆ ಉತ್ತರ ಇಲ್ಲಿದೆ.[ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಸಂಖ್ಯೆ ಲಿಂಕ್ ಹೇಗೆ?]

ಆಧಾರ್ ನಂಬರ್ ಕಂಡುಹಿಡಿಯಲು ಹೆಸರೊಂದಿದ್ರೆ ಸಾಕು

ನಿಮ್ಮ ಹೆಸರಿನ ಆಧಾರದಲ್ಲಿ ಆಧಾರ್ ಕಾರ್ಡ್ ನ ಎಲ್ಲ ದಾಖಲೆಗಳನ್ನು ಪಡೆದುಕೊಳ್ಳುವಂಥ ವ್ಯವಸ್ಥೆಯನ್ನು ಯುಐಡಿ ಪೋರ್ಟಲ್ ಸಿದ್ಧಮಾಡಿ ನೀಡಿದೆ.

* https://resident.uidai.net.in/find-uid-eid ತಾಣಕ್ಕೆ ಭೇಟಿ ನೀಡಿ
* ಆಧಾರ್ ಯುಐಡಿ ಅಥವಾ ಎನ್‌ರೊಲ್ ಮೆಂಟ್ ನಂಬರ್ ಆಯ್ಕೆ ಆಯ್ದುಕೊಳ್ಳಿ
* ನಿಮ್ಮ ಪೂರ್ಣ ಹೆಸರನ್ನು ದಾಖಲು ಮಾಡಿ
* ಮೊಬೈಲ್ ಸಂಖ್ಯೆ ದಾಖಲಿಸಿ
* ಸೆಕ್ಯೂರಿಟಿಗೆ ಸಂಬಂಧಿಸಿದ ಅಂಶಗಳನ್ನು ನೋಂದಣಿ ಮಾಡಿ
* ಒಟಿಪಿ ಆಯ್ಕೆ ಮೇಲೆ ಕ್ಲಿಕ್ ಮಾಡಿ[ಆಧಾರ್ ಕಾರ್ಡ್ ಮಾಡಿಸುವುದು ಹೇಗೆ?]
* ನಿಮ್ಮ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಬರುವುದು
* ನಂತರ ಒಟಿಪಿ ಮೂಲಕ ಪುನರ್ ಪರಿಶೀಲನೆ ಮಾಡಲಾಗುವುದು. ನಂತರ ನಿಮ್ಮ ಮೊಬೈಲ್ ಗೆ ಆಧಾರ್ ಸಂಖ್ಯೆ ಬರುತ್ತದೆ.

ಅಂತರ್ಜಾಲದಿಂದ ಆಧಾರ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳುವುದು ಹೇಗೆ?
ಆಧಾರ್ ಸಂಖ್ಯೆ ನಿಮ್ಮ ಕೈ ಸೇರಿದ ನಂತರ ಆನ್ ಲೈನ್ ನಲ್ಲಿ ಆಧಾರ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳುವುದು ಬಹಳ ಸುಲಭ
* ನಿಮ್ಮ ಎಲ್ಲ ಮಾಹಿತಿ ಅಂದರೆ ಎನ್ ರೋಲ್ ಮೆಂಟ್ ನಂಬರ್, ವಾಸಸ್ಥಳ, ಪಿನ್ ಕೋಡ್ ಎಲ್ಲವನ್ನು ದಾಖಲು ಮಾಡಿ.
* ನಿಮ್ಮ ಬಳಿ ಆಧಾರ್ ಸಂಖ್ಯೆಯಿದ್ದರೆ ಕೆಲಸ ಮತ್ತಷ್ಟು ಸುಲಭ. ಆಧಾರ್ ಆಯ್ಕೆ ಸೆಲೆಕ್ಟ್ ಮಾಡಿ ಕಂಪ್ಯೂಟರ್ ಪರದೆಯ ಮೇಲೆ ಕಾಣುವ ಐ ಹಾವ್ ಆಯ್ಕೆ ಯನ್ನು ಆರಿಸಿಕೊಳ್ಳಿ
* ನಂತರ ನಿಮ್ಮ ನೋಂದಣಿಯಾದ ಮೊಬೈಲ್ ಸಂಖ್ಯೆಗೆ ಒಟಿಪಿಯನ್ನು ಕಳುಹಿಸಿಕೊಡಲಾಗುವುದು.[ಮದುವೆ ಪ್ರಮಾಣ ಪತ್ರ ಪಡೆಯುವುದು ಹೇಗೆ?]
* ನಂತರ ಇದನ್ನು ಬಳಸಿಕೊಂಡು ಆಧಾರ್ ಪ್ರತಿಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಸಾಧ್ಯವಿದೆ. ಇದು ಸಾಮಾನ್ಯವಾಗಿ ಪಿಡಿಎಫ್ ಮಾದರಿಯಲ್ಲಿ ಇರುತ್ತದೆ.

ಕೊನೆ ಮಾತು
ಗ್ಯಾಸ್ ಸಬ್ಸಿಡಿ, ಆದಾಯ ತೆರಿಗೆ ಪಾವತಿ, ಬ್ಯಾಂಕ್ ಸೌಲಭ್ಯ ಎಲ್ಲದಕ್ಕೂ ಆಧಾರ್ ಕಾರ್ಡ್ ನ್ನು ಪರಿಗಣಿಸಲಾಗುತ್ತಿದೆ. ಆನ್ ಲೈನ್ ಮುಖಾಂತರ ಸುಲಭವಾಗಿ ನಿಮ್ಮ ಕಾರ್ಡ್ ಪಡೆದುಕೊಳ್ಳಬಹುದು.(ಗುಡ್ ರಿಟರ್ನ್ಸ್)

English summary

How To Know Aadhaar Number By Name?

Individuals who are already having Aadhaar Card can consider it as a blessing as government is encouraging using of Aadhaar number wherever possible. Recently, the Income Tax Department notified that tax payers need not send ITR V acknowledgment form to CPC Bangalore if tax payers Aadhaar Number is linked to Permanent Account Number (PAN).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X