For Quick Alerts
ALLOW NOTIFICATIONS  
For Daily Alerts

2005ಕ್ಕಿಂತ ಹಿಂದಿನ ನೋಟು ಗುರುತಿಸುವುದು ಹೇಗೆ?

|

ಭಾರತದ ರಿಸರ್ವ್ ಬ್ಯಾಂಕ್ ಹಳೆ ನೋಟು ಬದಲಾವಣೆಗೆ ಡಿಸೆಂಬರ್ 31 ರವರೆಗೆ ಕಾಲಾವಕಾಶ ನೀಡಿದೆ. 2005 ಕ್ಕಿಂತ ಹಿಂದಿನ ಎಲ್ಲ ಮೌಲ್ಯದ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ತಿಳಿಸಿದೆ. ಆದರೆ 2005 ಕ್ಕಿಂತ ಹಿಂದಿನ ನೋಟು ಯಾವುದು? ನಂತರದ ನೋಟು ಯಾವುದು? ಎಂದು ಗುರುತಿಸುವುದು ಹೇಗೆ ಎಂಬ ಪ್ರಶ್ನೆ ಅನೇಕರಲ್ಲಿ ಇರಬಹುದು. ಅದಕ್ಕೆ ಉತ್ತರ ಇಲ್ಲಿದೆ.

 

ಕೇಂದ್ರ ಸರ್ಕಾರ ಎಲ್ಲ ಕ್ಷೇತ್ರಗಳಲ್ಲೂ ಬದಲಾವಣೆ ಜತೆ ಹಿಡಿತ ಸಾಧಿಸಲು ಮುಂದಾಗುತ್ತಿದೆ. ಅಂಥ ಒಂದು ಕ್ರಮವೇ ನೋಟು ಬದಲಾವಣೆ. ಬದಲಾವಣೆ ಯಾಕಾಗಿ? ಎಲ್ಲಿ ಬದಲಾಯಿಸಿಕೊಳ್ಳಬೇಕು? ಎಂಬುದನ್ನು ತಿಳಿಯಲು ಮುಂದೆ ಓದಿ...[ಹಣ ಬಾರದಿದ್ದರೆ, ಕಾರ್ಡ್ ಸಿಕ್ಕಿಕೊಂಡರೆ ಯಾರು ಹೊಣೆ?]

 
2005ಕ್ಕಿಂತ ಹಿಂದಿನ ನೋಟು ಗುರುತಿಸುವುದು ಹೇಗೆ?

ಹಳೆ ನೋಟು ಗುರುತು ಹೇಗೆ?
ಹಳೆಯ ನೋಟುಗಳ ಹಿಂಬದಿಯಲ್ಲಿ ಹಿಂಬದಿಯಲ್ಲಿ ಇಸವಿ ಮುದ್ರಣ ಆಗಿರುವುದಿಲ್ಲ. 2005ರ ನಂತರದ ನೋಟುಗಳಲ್ಲಿ ನಕಲು ಮಾಡಲು ಸಾಧ್ಯವಾ­ಗ­ದ ಹಲವು ಚಿಹ್ನೆಗಳನ್ನು, ಮೇಲ್ನೋಟಕ್ಕೆ ಕಾಣಿಸ ದಂತಹ ಸಂಕೇತಾಕ್ಷರಗಳನ್ನೂ ಬಳಸ­ಲಾಗಿದೆ. ಇವು ಮೇಲ್ನೋಟಕ್ಕೆ ಕಾಣುವ ವ್ಯತ್ಯಾಸಗಳು.

ಹಳೆ ನೋಟು ಬದಲಾಯಿಸಿಕೊಳ್ಳುವುದಯ ಹೇಗೆ?
ಈಗಾಗಲೇ ಬ್ಯಾಂಕ್ ಗಳು ಆರ್ ಬಿಐ ಆದೇಶದ ಅನ್ವಯ 2005 ಕ್ಕೂ ಹಿಂದಿನ ನೋಟುಗಳ ಚಲಾವಣೆಯನ್ನು ರದ್ದು ಮಾಡಿವೆ. ಎಟಿಎಂ ನಲ್ಲಿಯೂ ಈ ಬಗೆಯ ನೋಟುಗಳನ್ನು ನೀಡಲಾಗುತ್ತಿಲ್ಲ. [ಏನಿದು ಆಡ್ ಆನ್ ಕ್ರೆಡಿಟ್ ಕಾರ್ಡ್? ಬಳಕೆ ಮಾಡೋದು ಹೇಗೆ?]

ಎಲ್ಲ ಖಾಸಗಿ ಮತ್ತು ಸರ್ಕಾರಿ ವಲಯದ ಬ್ಯಾಂಕ್ ಗಳಲ್ಲಿ ಯಾವುದೇ ಶುಲ್ಕವಿಲ್ಲದೇ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು. ಬ್ಯಾಂಕ್ ಗ್ರಾಹಕರಾಗದೇ ಇದ್ದಲ್ಲಿ ಹೆಚ್ಚಿನ ಹಣ ಬದಲಾವಣೆ ಮಾಡುತ್ತೀದ್ದೀರಿ ಎಂದಾದರೆ ಪ್ಯಾನ್ ಕಾರ್ಡ್ ಜತೆಗೆ ಕೊಂಡೊಯ್ಯಬೇಕು. ನಗದಿಗೆ ನಗದನ್ನೇ ಪಡೆದುಕೊಳ್ಳಬಹುದು ಅಥವಾ ಗ್ರಾಹಕರಾಗಿದ್ದಲ್ಲಿ ನಿಮ್ಮ ಖಾತೆಗೂ ಜಮಾ ಮಾಡಲಾಗುತ್ತದೆ.

ಯಾವ ಕಾರಣಕ್ಕೆ ಹಳೆ ನೋಟುಗಳನ್ನು ರದ್ದು ಮಾಡಲಾಗುತ್ತಿದೆ?
ಹಣದ ಚಲಾವಣೆಯಲ್ಲಿರುವ ಗೊಂದಲ, ನಕಲಿ ನೋಟು ಚಲಾವಣೆ, ಕಪ್ಪು ಹಣದ ಹರಿವು ತಡೆ ಎಲ್ಲವನ್ನು ಮುಂದಿಟ್ಟುಕೊಂಡು ನೋಟುಗಳ ಬದಲಾವಣೆಗೆ ಕೇಂದ್ರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದಾಗಿದೆ.(ಗುಡ್ ರಿಟರ್ನ್ಸ್.ಇನ್)

English summary

Pre-2005 Currency Notes: How to Identify?

The Reserve Bank of India has notified that it will withdraw all the currency notes printed before 2005. The RBI issued Mahatma Gandhi series (MG series) 2005 banknotes in the denomination of Rs 10, Rs 20, Rs 50,Rs 00,Rs 500 and Rs 1000.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X