For Quick Alerts
ALLOW NOTIFICATIONS  
For Daily Alerts

ಚಿನ್ನ ಖರೀದಿಗೆ ಹೊರಟಿರೆ? ಒಮ್ಮೆ ಓದಿಕೊಂಡು ತೆರಳಿ

|

ಚಿನ್ನದ ಮೇಲಿನ ಹೂಡಿಕೆ ಸಂಬಂಧ ಸದಾ ಚರ್ಚೆಗಳು ನಡೆಯುತ್ತಲೇ ಇರುತ್ತವೆ. 31 ಸಾವಿರಕ್ಕೆ ತಲುಪಿದ್ದ ಚಿನ್ನದ ದರ ದಿಢೀರ್ ಎಂದು 25 ಸಾವಿರಕ್ಕೆ ಕುಸಿದಿದೆ. ಕುಸಿತಕ್ಕೆ ನೈಜ ಕಾರಣಗಳು ಏನು? ಹೂಡಿಕೆ ಮಾಡಲು ಇದು ಸಕಾಲವೇ? ಮಾರುಕಟ್ಟೆಯ ಮೇಲೆ ಇದು ಯಾವ ಪರಿಣಾಮ ಬೀರಲಿದೆ ಅಥವಾ ಬೀರುತ್ತಿದೆ ಎಂಬ ಹಲವಾರು ಅಂಶಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕಾಗುತ್ತದೆ.

ಚಿನ್ನದ ದರ ಐದು ವರ್ಷದ ಕನಿಷ್ಠಕ್ಕೆ ಇಳಿದಿದೆ. ಭಾರತೀಯ ಹೂಡಿಕೆದಾರರು ಚಿನ್ನದ ಖರೀದಿಗೆ ಸಂಬಂಧಿಸಿ ಯಾವ ದೃಷ್ಟಿಕೋನ ಬೆಳೆಸಿಕೊಳ್ಳುತ್ತಿದ್ದಾರೆ ಎಂಬುದು ಅಷ್ಟೇ ಮುಖ್ಯವಾಗುತ್ತದೆ. ಕೆಲ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ ಚಿನ್ನದ ದರದ ಬಗೆಗಿನ ಕಲ್ಪನೆಗಳಿಗೆ ಸ್ಪಷ್ಟತೆ ಸಿಗುತ್ತದೆ.[ಭಾರತದ ಚಿನ್ನದ ದರ ಬದಲಾವಣೆ ಹಿಂದಿನ ರಹಸ್ಯವೇನು?]

ಚಿನ್ನ ಖರೀದಿಗೆ ಹೊರಟಿರೆ? ಒಮ್ಮೆ ಓದಿಕೊಂಡು ತೆರಳಿ

ಅಮೆರಿಕದಲ್ಲಿ ಬಡ್ಡಿ ದರ ಹೆಚ್ಚಳ
ಅಮೆರಿಕದ ಫೆಡರಲ್ ಬ್ಯಾಂಕ್ ತೆಗೆದುಕೊಂಡ ಕ್ರಮಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯ ಚಿನ್ನದ ದರದ ಮೇಲೆ ನೇರ ಪರಿಣಾಮ ಉಂಟುಮಾಡಿದವು. 2008 ರ ನಂತರ ಇದೇ ಮೊದಲ ಬಾರಿಗೆ ಬಡ್ಡಿ ದರದಲ್ಲಿ ಹೆಚ್ಚಳ ಮಾಡಲಾಯಿತು. ಮತ್ತೆ ಸೆಪ್ಟೆಂಬರ್‌ ನಲ್ಲಿ ಬಡ್ಡಿ ದರ ಏರಿಕೆಯಾಗುವ ಲಕ್ಷಣವಿದ್ದು ಚಿನ್ನದ ದರ ಕುಸಿಯಲಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಡಾಲರ್ ಮೌಲ್ಯ
ಅಮೆರಿಕದಲ್ಲಿ ಬಡ್ಡಿ ದರ ಏರಿಕೆಯಾಗಿದ್ದು ಡಾಲರ್ ಮೌಲ್ಯ ಹೆಚ್ಚಳಕ್ಕೆ ನೇರ ಕಾರಣವಾಗಿದೆ. ಇದು ಭಾರತೀಯ ಹೂಡಕೆದಾರರನ್ನು ಚಿನ್ನದ ಕಡೆ ದೂಡುವಂತೆ ಮಾಡುತ್ತಿದೆ.[ನಾಲ್ಕು ಅತ್ಯುತ್ತಮ ಚಿನ್ನ ಉಳಿತಾಯ ಯೋಜನೆಗಳು]

ರುಪಾಯಿ ಮತ್ತು ಚಿನ್ನದ ಸಂಬಂಧ
ರುಪಾಯಿ, ಡಾಲರ್ ಮ್ತು ಚಿನ್ನ ಕೆಲವೊಮ್ಮೆ ಒಂದಕ್ಕೊಂದು ಪೂರಕವಾಗಿ, ಕೆಲವು ಸಲ ವಿರುದ್ಧವಾದ ವರ್ತನೆಯನ್ನು ತೋರಿಸುತ್ತವೆ, ಭಾರತವು ಸದ್ಯ ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿದೆ. ರೂಪಾಯಿ ಕೆಳಕ್ಕೆ ಹೋದರೆ ಚಿನ್ನ ಆಮದು ವೆಚ್ಚ ಜಾಸ್ತಿಯಾಗುತ್ತದೆ, ಮೌಲ್ಯ ಹೆಚ್ಚಾದರೆ ಕಡಿಮೆಯಾಗುತ್ತದೆ. ಹಾಗಾಗಿ ರೂಪಾಯಿ ಮೌಲ್ಯ ಕುಸಿಯಿತು ಎಂದಾದರೆ ಚಿನ್ನದ ದರ ಏರಿಕೆ ಆರಂಭ ಎಂದೇ ಹೇಳಬಹುದು.

ಬಗೆಹರಿದ ಗ್ರೀಸ್ ಬಿಕ್ಕಟ್ಟು
ಚಿನ್ನವನ್ನು ಯಾವಾಗಲೂ ಸುರಕ್ಷಿತ ಹೂಡಿಕೆ ತಾಣ ಎಂದೆ ಪರಿಭಾವಿಸಲಾಗುತ್ತದೆ. ಕೆಲ ದೇಶಗಳಲ್ಲಿ ಸಂಭವಿಸುವ ಆರ್ಥಿಕ ವಿಪ್ಲವಗಳು ನಮ್ಮ ದೇಶದ ಮಾರುಕಟ್ಟೆಯ ಮೇಲೆ ಪರಿಣಾ ಉಂಟುಮಾಡುತ್ತವೆ. ಗ್ರೀಸ್ ನಲ್ಲಿ ಆರ್ಥಿಕ ಗೊಂದಲ ಕಾಣಿಸಿಕೊಂಡಾಗ ಭಾರದ ಷೇರು ಮಾರುಕಟ್ಟೆ ಕೆಳಮುಖವಾಗಿ ಹೊರಟಿತ್ತು. ಆದರೆ ಅಲ್ಲಿ ಈಗ ಸಮಸ್ಯೆ ಬಗೆಹರಿದಿದ್ದು ಗಂಭೀರ ಪರಿಣಾಮ ಉಂಟುಮಾಡುವ ಸಂಗತಿಗಳು ಯಾವುದು ಉಳಿದುಕೊಂಡಿಲ್ಲ.

ಕೊನೆ ಮಾತು: ದರ ಇಳಿದಿದೆ ಎಂದು ಏಕಾಏಕಿ ಚಿನ್ನದ ಮೇಲೆ ದೊಡ್ಡ ಪ್ರಮಾಣದ ಹೂಡಿಕೆ ಮಾಡುವುದು ದಡ್ಡತನವಾಗುತ್ತದೆ, ಶುದ್ಧ ಚಿನ್ನ ಅಥವಾ ಚಿನ್ನದ ಪತ್ರಗಳ ಮೇಲೆ ಹೂಡಿಕೆ ಮಾಡಲು ಇದು ಸಕಾಲ. ಆದರೆ ಹೂಡಿಕೆ ಸಣ್ಣ ಪ್ರಮಾಣದಲ್ಲಿರಲಿ.(ಗುಡ್ ರಿಟರ್ನ್ಸ್.ಇನ್)

English summary

Should You Be Buying Gold In India After Sharp Fall?

For the last 2-3 years, gold as an asset class has given negative returns. Until 2 years back the precious metal in India was quoting at Rs 31,000 and today it is down to Rs 25,000 per 10 grams. Gold in the international markets fell to a 5 year low and when gold falls in the international markets it tends to fall in India as well.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X