For Quick Alerts
ALLOW NOTIFICATIONS  
For Daily Alerts

ವರಿಷ್ಠ ಪಿಂಚಣಿ ವಿಮಾ ಯೋಜನೆ ಗುಣಾವಗುಣಗಳ ಪಟ್ಟಿ

|

ಹಿರಿಯ ನಾಗರಿಕರಿಗೆ ನೀಡುತ್ತಿರುವ ವರಿಷ್ಠ ಪಿಂಚಣಿ ಯೋಜನೆಯನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಈ ಸಾರಿಯ ಬಜೆಟ್ ನಲ್ಲಿ ಕೆಲ ಹೊಸ ಬದಲಾವಣೆಗಳೊಂದಿಗೆ ರೀ ಲಾಂಚ್ ಮಾಡಿದ್ದಾರೆ.

2014 ರ ಆಗಸ್ಟ್ 15 ರಿಂದ ಆರಂಭವಾದ ಯೋಜನೆ 2015 ರ ಆಗಸ್ಟ್ 14 ರವರೆಗಿನ ಸೀಮಿತ ಅವಧಿಯನ್ನು ಹೊಂದಿದ್ದು 60 ವರ್ಷ ಮೇಲ್ಪಟ್ಟವರಿಗೆ ಸೌಲಭ್ಯ ದೊರೆಯಲಿದೆ. ಇ ಯೋಜನೆ ಅನ್ವಯ ಹಿರಿಯ ನಾಗರಿಕರು ತಿಂಗಳ ಲೆಕ್ಕದಲ್ಲಿ ಅಥವಾ ವರ್ಷದ ಆಧಾರದಲ್ಲಿ ಪಿಂಚಣಿಯನ್ನು ಪಡೆಯಬಹುದು.[ಅಟಲ್ ಪಿಂಚಣಿ ಯೋಜನೆ ಮಾಡಿಸುವುದು ಹೇಗೆ?]

ವರಿಷ್ಠ ಪಿಂಚಣಿ ವಿಮಾ ಯೋಜನೆ ಗುಣಾವಗುಣಗಳ ಪಟ್ಟಿ

ಯೋಜನೆ ಗುಣಗಳು
* ತಿಂಗಳು, ತ್ರೈಮಾಸಿಕ, ಅರ್ಧವಾರ್ಷಿಕ ಮತ್ತು ವಾರ್ಷಿಕ ಲೆಕ್ಕದಲ್ಲಿ ಪಿಂಚಣಿ ಪಡೆದುಕೊಳ್ಳಲು ಸಾಧ್ಯವಿದೆ.
* ಪಾಲಿಸಿ ಮಾಡಿಸಿ ಮೂರು ವರ್ಷ ಕಳೆದ ಮೇಲೆ ಸಾಲ ಸವಲತ್ತನ್ನು ಪಡೆದುಕೊಳ್ಳಬಹುದು. ಯೋಜನೆ ಮೊತ್ತದ ಶೇ. 75ನ್ನು ಸಾಲವಾಗಿ ಪಡೆದುಕೊಳ್ಳಬಹುದು.
* ಹಣವನ್ನು ಹಿಂದಕ್ಕೆ ಪಡೆದುಕೊಳ್ಳಲು ಯಾವುದೇ ಕಠಿಣ ನಿಯಮಗಳು ಇಲ್ಲ
* ಕಾಯುವ ಕೆಲಸ ಇಲ್ಲ. ನೀವು ನೋಂದಣಿ ಮಾಡಿದಂತೆ ಅವಧಿಗೆ ತಕ್ಕುದಾಗಿ ಪಿಂಚಣಿ ಖಾತೆ ಸೇರಲಿದೆ.
* ಉಳಿದ ಪಿಂಚಣಿ ಯೋಜನೆಗಳಿಗೆ ಹೋಲಿಸಿದರೆ ಇಲ್ಲಿ ಬಡ್ಡಿ ದರವೂ ಅಧಿಕವಾಗಿದ್ದು, ನಿಮಗೆ ಶೇ. 9.38 ರಷ್ಟು ಬಡ್ಡಿ ನೀಡಲಾಗುತ್ತದೆ.
* ಪಾಲಿಸಿದಾರ ಕೆಲ ಅನಿವಾರ್ಯ ಕಾರಣ, ಅನಾರೋಗ್ಯದಿಂದ ತನ್ನ ಪಿಂಚಣಿ ಯೋಜನೆಯನ್ನು 15 ವರ್ಷಕ್ಕೂ ಮೊದಲೆ ಸರಂಡರ್ ಮಾಡಿದರೆ ಒಟ್ಟು ಮೊತ್ತದ(ಕಂತು ತುಂಬಿದ) ಶೇ. 98 ರಷ್ಟನ್ನು ಒದಗಿಸಿಕೊಡಲಾಗುವುದು.[ಎನ್‌ಪಿಎಸ್ vs ಅಟಲ್ ಪಿಂಚಣಿ, 11 ವ್ಯತ್ಯಾಸಗಳು]

ವರಿಷ್ಠ ಪಿಂಚಣಿ ಯೋಜನೆಯ ಅವಗುಣಗಳು
* ಯೋಜನೆಯಲ್ಲಿ ಅತಿ ಹೆಚ್ಚು ಅಂದರೆ 6,66,665 ರು. ಮೊತ್ತದ ಪಾಲಿಸಿ ಮಾಡಿಸಬಹುದು. ಇದರರ್ಥ ತಿಂಗಳಿಗೆ 5 ಸಾವಿರ ರು. ಪಿಂಚಣಿ ಪಡೆಯಬಹುದು. ಕುಟುಂಬದ ನಿರ್ವಹಣೆಗೆ ಹೋಲಿಸಿದರೆ ಇದು ಅತಿ ಕಡಿಮೆ ಮೊತ್ತ ಎಂದೇ ಭಾವಿಸಬೇಕಾಗುತ್ತದೆ.
* ಯೋಜನೆ ಸೇವಾ ಶುಲ್ಕದ ವ್ಯಾಪ್ತಿಗೆ ಒಳಪಡುತ್ತದೆ.
* ಆದಾಯ ತೆರಿಗೆ ಅಡಿಯಲ್ಲಿ ಯಾವುದೇ ವಿನಾಯಿತಿ ಇಲ್ಲ
* ಪಾಲಿಸಿ ಮಾಡಿಸಿ 15 ವರ್ಷ ಕಳೆದರೆ ಮಾತ್ರ ಪಿಂಚಣಿ ಅರ್ಹತೆ ಸಂಪಾದಿಸಿಕೊಳ್ಳಬಹುದು. ಆದರೆ ಇಲ್ಲಿ 15 ವರ್ಷ ಕಳಿಯಲೇಬೇಕು ಎಂಬ ನಿಯಮ ಮಾಡಲಾಗಿದೆ.
* ಇಷ್ಟೇ ಹಣವನ್ನು ಬೇರೆಡೆ ಹೂಡಿದರೆ ಇಲ್ಲಿ ದೊರೆಯುವುದಕ್ಕಿಂತ ಹೆಚ್ಚಿನ ಬಡ್ಡಿ ಪಡೆದುಕೊಳ್ಳಲು ಸಾಧ್ಯವಿದೆ.(ಗುಡ್ ರಿಟರ್ನ್ಸ್.ಇನ್)

English summary

Varishtha Pension Bima Yojana: Advantages and Disadvantages

Varishtha Pension Bima Yojana was re-launched by Finance Minister Arun Jaitley in the Union Budget 2014-15. The scheme is available a limited period from 15th August 2014 to 14th August 2015 for the benefit of citizens aged 60 years and above. Under this scheme, the senior citizens would get pension on fixed basis either on yearly or monthly basis which will provide social security to senior citizens.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X