For Quick Alerts
ALLOW NOTIFICATIONS  
For Daily Alerts

ರಿಟರ್ನ್ಸ್ ಪಾವತಿ ವಿಳಂಬವಾದರೆ ಏನಾಗುತ್ತದೆ?

|

ಪ್ರತಿವರ್ಷ ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ ಪಾವತಿ ಮಾಡಲೇಬೇಕು. ಕೆಲವೊಮ್ಮೆ ಅವಧಿ ಮುಗಿದರೂ ನಿಮಗೆ ಪಾವತಿ ಮಾಡಲು ಸಾಧ್ಯವಾಗಿರುವುದಿಲ್ಲ. ಆಗ ಯಾವ ಕ್ರಮ ತೆಗೆದುಕೊಳ್ಳಬೇಕು? ಎಂಬುದು ಗೊತ್ತಿರುವುದಿಲ್ಲ.

ಅವಧಿ ಮುಗಿದರೂ ಪಾವತಿ ಮಾಡದೇ ನಂತರ ದಾಖಲಿಸಲು ಹೋದರೆ ಏನಾಗುತ್ತದೆ? ಈ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳು ಯಾವವು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ.[ಆನ್ ಲೈನ್ ನಲ್ಲಿ ಆದಾಯ ತೆರಿಗೆ ತುಂಬಲು ಸರಳ ವಿಧಾನ]

ರಿಟರ್ನ್ಸ್ ಪಾವತಿ ವಿಳಂಬವಾದರೆ ಏನಾಗುತ್ತದೆ?

ಅವಧಿ ಮುಗಿದು ನಂತರ ದಾಖಲಿಸಲು ಹೋದರೆ ಏನಾಗುತ್ತದೆ?
ಬಡ್ಡಿ ನೀಡಬೇಕು
ಅವಧಿ ಮುಗಿದಿದ್ದರೆ ನೀವು ನಿರ್ದಿಷ್ಟ ಪ್ರಮಾಣದ ಬಡ್ಡಿ ನೀಡಬೇಕಾಗುತ್ತದೆ. ತಿಂಗಳಿಗೆ ಶೇ. 1 ರ ದರದಲ್ಲಿ ಬಡ್ಡಿ ತುಂಬಬೇಕಾಗುತ್ತದೆ. ಆಡ್ವಾನ್ಸ್ ಟ್ಯಾಕ್ಸ್ ತುಂಬಿದ್ದವರಿಗೆ ಬಡ್ಡಿಯಿಂದ ವಿನಾಯಿತಿ ನೀಡಲಾಗುತ್ತದೆ.

ನಷ್ಟವನ್ನು ಮುಂದಕ್ಕೆ ಹಾಕಲು ಸಾಧ್ಯವಿಲ್ಲ
ನಿಮ್ಮ ಆದಾಯದ ಮಿತಿ ಹೆಚ್ಚಿದ್ದರೆ ಪ್ರತಿ ತ್ರೈಮಾಸಿಕಕ್ಕೆ ಒಮ್ಮೆ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಆದರೆ ಇಲ್ಲಿ ನೀವು ಈ ತ್ರೈಮಾಸಿಕದ ನಷ್ಟದ ಲೆಕ್ಕವನ್ನು ಮುಂದಿನ ತ್ರೈಮಾಸಿಕದಲ್ಲಿ ತೋರಿಸಲು ಸಾಧ್ಯವಿಲ್ಲ. ಎರಡು ಲಕ್ಷ ರು. ಮೌಲ್ಯದ ಷೇರನ್ನು ಖರೀದಿ ಮಾಡಿ 1.5 ಲಕ್ಷಕ್ಕೆ ಮಾರಾಟ ಮಾಡಿದ್ದೀರಿ ಎಂದಾದರೆ ಅದನ್ನು ನಿರ್ದಿಷ್ಟ ದಿನಾಂಕದ ಒಳಗೆ ಸಲ್ಲಿಕೆ ಮಾಡುವ ದಾಖಲೆಯಲ್ಲೇ ನಮೂದು ಮಾಡಬೇಕು.[ವಿಳಂಬವಾಗಿದ್ದಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಪಾವತಿ ಹೇಗೆ?]

ಅಡ್ವಾನ್ಸ್ ಟ್ಯಾಕ್ಸ್
ನಿಮ್ಮ ಹಣದಿಂದ ಟಿಡಿಎಸ್ ಪಾವತಿಯಾಗದಿದ್ದರೆ ಅಡ್ವಾನ್ಸ್ ಟ್ಯಾಕ್ಸ್ ಕಟ್ಟಬೇಕಾಗುವುದು. ನಿಮ್ಮ ಆದಾಯ ತೆರಿಗೆಯನ್ನು ಲೆಕ್ಕ ಹಾಕಿ ಸಪ್ಟೆಂಬರ್ ಗೆ ಶೇ. 30, ಡಿಸೆಂಬರ್ ಗೆ ಶೇ. 60 ಮತ್ತು ಮಾರ್ಚ್ ಅಂತ್ಯಕ್ಕೆ ಶೇ. 100 ಆದಾಯ ತೆರಿಗೆ ಲೆಕ್ಕಕ್ಕೆ ಅಡ್ವಾನ್ಸ್ ಟ್ಯಾಕ್ಸ್ ಕಟ್ಟಬೇಕಾಗುತ್ತದೆ.

ಆದಾಯ ತೆರಿಗೆ ಮರುಪಾವತಿ ವಿಳಂಬವಾಗಬಹುದು
ವಿಳಂಬವಾಗಿ ಸಲ್ಲಿಕೆ ಮಾಡಿದರೆ ನಿಮಗೆ ಮರುಪಾವತಿಯೂ ವಿಳಂಬವಾಗಬಹುದು. ದೊಡ್ಡ ಪ್ರಮಾಣದ ಸಲ್ಲಿಕೆ ಇದ್ದರೆ ನಿಮ್ಮ ವಾಣಿಜ್ಯ ಸಲಹೆಗಾರರನ್ನು ಒಮ್ಮೆ ಸಂಪರ್ಕ ಮಾಡುವುದು ಒಳಿತು.

ಸರಿದೂಗಿಸುವಿಕೆ
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ವಿಳಂಬ ಮಾಡಿಕೊಂಡಾಗ ಇಂಥ ಸಮಸ್ಯೆಗಳು ಎದುರಾಗುತ್ತವೆ. ಹಿಂದಿನ ಸಲದಲಿಕೆ ಮತ್ತು ಈ ಬಾರಿಯ ಸಲ್ಲಿಕೆ ನಡುವೆ ವ್ಯತ್ಯಾಸಗಳು ಕಂಡುಬಂದರೂ ಬರಬಹುದು. ಇದೆಲ್ಲವನ್ನು ಸರಿದೂಗಿಸಿಕೊಂಡು ಹೋಗಬೇಕಾಗಯತ್ತದೆ.

ಕೊನೆ ಮಾತು
ನಿರ್ದಿಷ್ಟ ದಿನಾಂಕದ ಒಳಗಡೆಯೇ ಪಾವತಿ ಮಾಡಿದರೆ ಯಾವ ತಾಪತ್ರಯಗಳು ಹುಟ್ಟಿಕೊಳ್ಳಲ್ಲ. ಪ್ರತಿ ಬಾರಿಯೂ ವಿಳಂಬವಾಗಿ ದಾಖಲು ಮಾಡಿಕೊಳ್ಳುವುದನ್ನೇ ರೂಢಿ ಮಾಡಿಕೊಳ್ಳುವ ಸಂಭವವೂ ಇದೆ. ಈ ಬಾರಿ ಆಗಸ್ಟ್ 31 ಆದಾಯ ತೆರಿಗೆ ರಿಟರ್ನ್ಸ್ ಪಾವತಿಗೆ ಕೊನೆ ದಿನ ನೆನಪಿನಲ್ಲಿರಲಿ...(ಗುಡ್ ರಿಟರ್ನ್ಸ್.ಇನ್)

English summary

What Happens If You File Your Income Tax Returns Late?

Each year, you need to file your Income Tax Returns on time. The last date for filing income tax returns is July 31. However, sometimes the government extends the same depending on the situation. While it is a good idea to file returns on time many suggest that you should do so much earlier than the July 31, 2015 deadline as you could receive your refund early as well.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X