For Quick Alerts
ALLOW NOTIFICATIONS  
For Daily Alerts

ಬದಲಾದ ಕಾಲದಲ್ಲಿ ಪ್ಯಾನ್ ಕಾರ್ಡ್ ಎಲ್ಲೆಲ್ಲಿ ಅಗತ್ಯ?

|

ಆಧುನಿಕ ಪದ್ಧತಿಗೆ ಒಗ್ಗಿಕೊಂಡಿರುವ ನಮಗೆ ಹಣದ ಟ್ರಾನ್ಸಾಕ್ಷನ್ ಮಾಡಲು ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್ ಕಾರ್ಡ್) ಅತ್ಯಗತ್ಯ. ನೀವು ಬ್ಯಾಂಕ್ ನಲ್ಲಿ ಹಣ ಡಿಪಾಸಿಟ್ ಮಾಡಲು, ಆದಾಯ ತೆರಿಗೆ ಪಾವತಿ ಮಾಡಲು ಪ್ಯಾನ್ ನಂಬರ್ ಬೇಕಾಗುತ್ತದೆ.

ಬ್ಯಾಂಕ್ ನಲ್ಲಿ 50 ಸಾವಿರ ರು. ಇಡಬೇಕು ಅಂಥಾದರೆ ಪ್ಯಾನ್ ನಂಬರ್ ನಮೂದಿಸುವುದು ಕಡ್ಡಾಯ. ಪ್ಯಾನ್ ನಂಬರ್ ಇಲ್ಲ ಎಂಥಾದರೆ ಬ್ಯಾಂಕ್ ನಿಮ್ಮ ಹೆಸರಿನಲ್ಲಿ ಇಷ್ಟು ಮೊತ್ತದ ಹಣ ಇಟ್ಟುಕೊಳ್ಳುವುದಿಲ್ಲ. ಹಣ ವಿಥ್ ಡ್ರಾ ಮಾಡುವಾಗಲೂ ಇದೇ ನಿಯಮ ಅನ್ವಯವಾಗುತ್ತದೆ.[ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಸಂಖ್ಯೆ ಲಿಂಕ್ ಹೇಗೆ?]

ಬದಲಾದ ಕಾಲದಲ್ಲಿ ಪ್ಯಾನ್ ಕಾರ್ಡ್ ಎಲ್ಲೆಲ್ಲಿ ಅಗತ್ಯ?

ಹಣ ಹೂಡುವಾಗ ಪ್ಯಾನ್ ನಂಬರ್ ನಮೂದು ಮಾಡದಿದ್ದರೆ ಟಿಡಿಎಸ್ ಕಟ್ಟಬೇಕಾಗುತ್ತದೆ. ನೀವು ಇಟ್ಟ ಹಣಕ್ಕೆ 10 ಸಾವಿರ ರು, ಗೂ ಅಧಿಕ ಬಡ್ಡಿ ಬಂದಿದೆ ಎಂಥಾದರೆ, ನೀವು ಪ್ಯಾನ್ ನಂಬರ್ ನೀಡದ ಪಕ್ಷದಲ್ಲಿ ಶೇ. 10 ರಷ್ಟು ಟಿಡಿಎಸ್ ನ್ನು ನೀಡಬೇಕಾಗುತ್ತದೆ. 10 ಸಾವಿರಕ್ಕಿಂತ ಕಡಿಮೆ ಬಡ್ಡಿ ದೊರೆತಿದ್ದರೆ ಟಿಡಿಎಸ್ ಕಟ್ಟಬೇಕಾಗಿಲ್ಲ.[ಆಧಾರ್ ಕಾರ್ಡ್ ಮಾಡಿಸುವುದು ಹೇಗೆ?]

ಪ್ಯಾನ್ ಕಾರ್ಡ್ ಬಳಕೆ?
ಪ್ಯಾನ್ ಕಾರ್ಡ್ ಎಲ್ಲೆಲ್ಲಿ ಬಳಕೆ ಮಾಡಬೇಕಾಗುತ್ತದೆ ಎಂಬುದು ಅಷ್ಟೇ ಮುಖ್ಯವಾಗುತ್ತದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ವೇಳೆ ಪ್ಯಾನ್ ನಂಬರ್ ಇಲ್ಲ ಎಂದಾದಲ್ಲಿ ಕೆಲಸ ಸಾಧ್ಯವಿಲ್ಲ. ಹೆಚ್ಚಿನ ಮೌಲ್ಯದ ಆಸ್ತಿ, ನಿವೇಶನ ಖರೀದಿ ಸಂದರ್ಭದಲ್ಲೂ ಪ್ಯಾನ್ ಕಾರ್ಡ್ ಅತ್ಯಗತ್ಯ. ಕೆಲವೊಮ್ಮೆ ಆಭರಣ ಕೊಳ್ಳುವ ಸಂದರ್ಭದಲ್ಲಿಯೂ ಪ್ಯಾನ್ ಕಾರ್ಡ್ ಕೇಳಲಾಗುತ್ತದೆ.[ಪ್ಯಾನ್ ಕಾರ್ಡ್ ಕಳೆದುಕೊಂಡರೆ ಏನು ಮಾಡಬೇಕು?]

ಬ್ಯಾಂಕ್ ಖಾತೆ ತೆರೆಯಲು, ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡುವ ವೇಳೆಯೂ ಪ್ಯಾನ್ ಕಾರ್ಡ್ ಕೇಳಲಾಗುತ್ತದೆ.(ಗುಡ್ ರಿಟರ್ನ್ಸ್)

ಬ್ಯಾಂಕ್ ಖಾತೆ ಆರಂಭಿಸಲು ಪ್ಯಾನ್ ಕಾರ್ಡ್ ಕಡ್ಡಾಯ.

* 50,000 ರು ಗೂ ಮೇಲ್ಪಟ್ಟ ನಗದನ್ನು ಬ್ಯಾಂಕಿನಲ್ಲಿ ಜಮೆ ಮಾಡಲು
* ಷೇರುಪೇಟೆ ವ್ಯವಹಾರ, ಡಿಮ್ಯಾಡ್ ಹಾಗೂ ಟ್ರೇಡಿಂಗ್ ಖಾತೆ ಆರಂಭಿಸುವಾಗ
* 50,000 ರು ಗೂ ಮೇಲ್ಪಟ್ಟ ಡಿಮ್ಯಾಂಡ್ ಡ್ರಾಫ್ಟ್ ಬಳಸುವಾಗ
* ಚೆಕ್ ಡಿಫಾಸಿಟ್ 50,000 ರು ಮೀರಿದಾಗ
* ಭಾರತದಲ್ಲಿ ಎಲ್ಲೇ ಆದರೂ ಸ್ಥಿರಾಸ್ತಿ ಖರೀದಿಸುವಾಗ
* ಕಾರುಗಳ ಖರೀದಿ ಅಥವಾ ಮಾರಾಟ
* 25,000 ರು ಮೀರಿದ ಪ್ರಯಾಣ ದರ, ನಗದು ಪಾವತಿ ಸಂದರ್ಭದಲ್ಲಿ
* ಆದಾಯ ತೆರಿಗೆ ಇಲಾಖೆಗೆ ಟಿಡಿಎಸ್ ರಿಟರ್ನ್ ಮಾಡುವಾಗ
* ಗೃಹ/ವೈಯಕ್ತಿಕ/ ಇತರೆ ಸಾಲವನ್ನು ಪಡೆಯಲು ಬಯಸಿದಾಗ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ

English summary

How Much Cash An Individual Can Deposit Without PAN Card Number?

Permanent Account Number (PAN) is necessary for a host of transaction, including when you deposit cash at a bank. Cheque deposits may not entail one to write the PAN number, but, for cash deposits it is a must. As per Income Tax department Permanent Account Number (PAN) is mandatory to file income tax return on all categories of taxable income. PAN is essential in many financial transactions as well.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X