For Quick Alerts
ALLOW NOTIFICATIONS  
For Daily Alerts

ಬ್ಯಾಂಕಿನ ಬಡ್ಡಿದರ ಇಳಿಕೆ, ಹೂಡಿಕೆಗೆ ಯಾವ ಬ್ಯಾಂಕ್ ಬೆಸ್ಟ್?

By Mahesh
|

ಬೆಂಗಳೂರು, ಸೆ. 08: ಬ್ಯಾಂಕುಗಳಲ್ಲಿ ಠೇವಣಿ (deposit) ಬಡ್ಡಿದರ ಇಳಿಕೆಯಾಗುತ್ತಿದೆ ಶೇ 9.25 ಇದ್ದ ಬಡ್ಡಿದರ ವರ್ಷ ಕಳೆಯುವಷ್ಟರಲ್ಲಿ ಶೇ 8ಕ್ಕೆ ಇಳಿಕೆಯಾಗಿದೆ. ದೇಶದ ಆರ್ಥಿಕ ಪರಿಸ್ಥಿತಿ ಗಮನಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಮ್ಮೆ ಬಡ್ಡಿದರ ಪರಿಷ್ಕರಣೆಗೆ ಮುಂದಾಗಿದೆ.

 

ಹಣದುಬ್ಬರ ಪರಿಸ್ಥಿತಿ ಗಮಿಸಿದರೆ ಬಡ್ಡಿದರದಲ್ಲಿ ಇನ್ನಷ್ಟು ಬದಲಾವಣೆ ನಿರೀಕ್ಷಿಸಬಹುದು. ಅಲ್ಲದೆ ಠೇವಣಿ ಬಡ್ಡಿದರ ಶೇ 8ಕ್ಕಿಂತ ಕೆಳಗೆ ಇಳಿಯುವ ಸುಳಿವು ಸಿಕ್ಕಿದೆ.

 

ಭಾರತದಲ್ಲಿ ಈ ಸಮಯದಲ್ಲಿ ಹೂಡಿಕೆ ಮಾಡಲು ಯಾವ ಬ್ಯಾಂಕ್ ಸೂಕ್ತ, ಹೆಚ್ಚಿನ ರಿಟರ್ನ್ಸ್ ನೀಡುವ ಬ್ಯಾಂಕ್ ಯಾವುದು? 1 ಕೋಟಿ ರು ತನಕದ ಹೂಡಿಕೆ ಹಾಗೂ ಹಿರಿಯ ನಾಗರಿಕರ ಖಾತೆ ಅಲ್ಲದೆ ಹೆಚ್ಚು ರಿಟರ್ನ್ಸ್ ನಿರೀಕ್ಷಿಸಬಹುದು ಎಂಬುದರ ಮಾಹಿತಿ ಇಲ್ಲಿದೆ.

ಬ್ಯಾಂಕಿನ ಬಡ್ಡಿದರ ಇಳಿಕೆ, ಹೂಡಿಕೆಗೆ ಯಾವ ಬ್ಯಾಂಕ್ ಬೆಸ್ಟ್?

ಹಿರಿಯ ನಾಗರಿಕರಿಗೆ ಶೇ 0.50ರಷ್ಟು ರಿಯಾಯಿತಿ ಸಿಗಲಿದೆ.ಸದ್ಯದ ಪರಿಸ್ಥಿತಿಯಲ್ಲಿ ಉತ್ತಮ ಬಡ್ಡಿದರ ನೀಡುತ್ತಿರುವ ಪ್ರಮುಖ ಸಾರ್ವಜನಿಕ ವಲಯ ಹಾಗೂ ಜನಪ್ರಿಯ ಖಾಸಗಿ ವಲಯ ಬ್ಯಾಂಕುಗಳ ವಿವರ ಮುಂದಿದೆ...

* ರತ್ನಾಕರ್ ಬ್ಯಾಂಕ್ 12 ತಿಂಗಳಿಗೆ ಶೇ 8.85
* ಕೇರಳ ಟ್ರಾನ್ಸ್ ಪೋರ್ಟ್ ಡೆವಲಪ್ಮೆಂಟ್ ಫಿನಾನ್ಸ್ ಕಾರ್ಪೊರೇಷನ್ (ಕೆಟಿಡಿಎಫ್ ಸಿ) 12 ತಿಂಗಳಿಗೆ 25 ಲಕ್ಷ ರುಗಿಂತ ಅಧಿಕ ಶೇ 10.
* ಇಂಡಸ್ ಇಂಡ್ ಬ್ಯಾಂಕ್ - 2 ವರ್ಷ 6 ತಿಂಗಳ ಅವಧಿ ಶೇ 8.85
* ಡೆವಲಪ್ಮೆಂಟ್ ಕ್ರೆಡಿಟ್ ಬ್ಯಾಂಕ್ -12 ತಿಂಗಳು- ಶೇ 8.15
* ತಮಿಳುನಾಡು ಮರ್ಚೆಂಟೈಲ್ ಬ್ಯಾಂಕ್ -12 ತಿಂಗಳ ಅವಧಿಗೆ ಶೇ 8.50

10,000 ರು ಗೂ ಅಧಿಕ ಬಡ್ಡಿದರ ರೂಪದಲ್ಲಿ ಪಡೆಯುತ್ತಿದ್ದರೆ ಟಿಡಿಎಸ್ ಶೇ 10 ರಷ್ಟು ತೆರಬೇಕಾಗುತ್ತದೆ. ಪ್ಯಾನ್ ಕಾರ್ಡ್ ನೀಡದಿದ್ದರೆ ಟಿಡಿಎಸ್ ಶೇ 20ರಷ್ಟು ತೆರಬೇಕಾಗುತ್ತದೆ. (ಗುಡ್ ರಿಟರ್ನ್ಸ್ .ಇನ್)

English summary

Five Best Bank Deposits To Invest In India With High Interest Rates

Bank deposit interest rates are falling and have come down from levels of 9.25 per cent prevailing about a year back to the current levels of around 8 per cent. Take a look at some of the best bank deposits to invest in India with high interest rates.
Story first published: Tuesday, September 8, 2015, 18:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X