For Quick Alerts
ALLOW NOTIFICATIONS  
For Daily Alerts

ಅಂಗೈನಲ್ಲಿ ಆನ್‌ಲೈನ್ ಶಾಪಿಂಗ್ ಮಾಡುವವರಿಗೆ 6 ಟಿಪ್ಸ್

|

ಅಂಗೈನಲ್ಲೇ ಶಾಪಿಂಗ್ ಮಾಡುವುದನ್ನು ಇಂದು ಬಹಳಷ್ಟು ಜನ ಕರಗತ ಮಾಡಿಕೊಂಡಿದ್ದಾರೆ. ಆನ್ ಲೈನ್ ಶಾಪಿಂಗ್ ಸುಲಭ ಮತ್ತು ಸರಳವಾಗಿ ಮಾರ್ಪಟ್ಟಿದೆ.

 

ಮೊಬೈಲ್ ಅಪ್ಲಿಕೇಶನ್ ಮತ್ತು ಕಂಪ್ಯೂಟರ್ ಪರದೆ ಬಳಸಿ ಶಾಪಿಂಗ್ ಮಾಡುವಾಗ ಕೆಲ ಎಚ್ಚರಿಕೆ ತಂತ್ರಗಳನ್ನು ಅನುಸರಿಸಬೇಕಾಗುತ್ತದೆ. ಮೊಬೈಲ್ ರೀಚಾರ್ಜ್, ಡಿಟಿಎಚ್ ರೀಚಾರ್ಜ್, ಶಾಪಿಂಗ್ ಎಲ್ಲದಕ್ಕೂ ಕೆಲ ಸರಳ ಸೂತ್ರಗಳಿವೆ.

 

ಬ್ಯಾಂಕ್ ಗಳು ಬಿಡುಗಡೆ ಮಾಡಿರುವ ಅಪ್ಲಿಕೇಶನ್ ಹೊರತುಪಡಿಸಿ ಪೆಟಿಎಮ್ ಸಹ ಜನಪ್ರಿಯವಾಗಿದೆ, ಎಚ್ ಡಿಎಫ್ ಸಿ ಬ್ಯಾಂಕ್ ನ ಪೆಜಿಪ್, ಐಸಿಐಸಿಐ ಬ್ಯಾಂಕ್ ನ ಪಾಕೆಟ್ಸ್ ಎಲ್ಲವೂ ಶಾಪಿಂಗ್ ಗೆ ನೆರವು ನೀಡುತ್ತಿವೆ. ಆದರೆ ಈ ಬಗೆಯ ಶಾಪಿಂಗ್ ಮಾಡುವಾಗ ಕೆಳಗಿನ ಸುರಕ್ಷತಾ ಕ್ರಮ ಅನುಸರಿಸಿದರೆ ಮುಂದೆ ಯಾವ ಅಪಾಉಯಕ್ಕೂ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಕಡಿಮೆ.[ಮೊಬೈಲ್ ಬ್ಯಾಕಿಂಗ್ : ಸಿಮ್ ಸ್ವಾಪ್ ವಂಚನೆ ಬಗ್ಗೆ ಎಚ್ಚರ!]

ಅಂಗೈನಲ್ಲಿ ಆನ್‌ಲೈನ್ ಶಾಪಿಂಗ್ ಮಾಡುವವರಿಗೆ 6 ಟಿಪ್ಸ್

* ವಿಭಿನ್ನ ಪಾಸ್ ವರ್ಡ್ ಬಳಕೆ
ವಿಭಿನ್ನ ಪಾಸ್ ವರ್ಡ್ ಬಳಕೆ ಮಾಡುವುದು ಮೂಲ ತತತ್ವ. ನೆಟ್ ಬ್ಯಾಂಕಿಂಗ್, ಮೊಬೈಲ್ ಅಪಲ್ಇಕೇಶನ್, ಲಾಕ್ ಈ ಬಗೆಯ ಆಯ್ಕೆಗಳಿಗೆ ಬೇರೆ ಬೇರೆ ಪಾಸ್ ವರ್ಡ್ ಬಳಕೆ ಮಾಡುವುದನ್ನು ಕಲಿತುಕೊಳ್ಳಿ.

* ಟ್ರಾನ್ಸಾಕ್ಷನ್ ಲಿಮಿಟ್
ಈ ಬಗೆಯಲ್ಲಿ ಹಣ ರವಾನೆ ಮಾಡುವಾಗ ಟ್ರಾನ್ಸಾಕ್ಷನ್ ಲಿಮಿಟ್ ಬಗ್ಗೆ ಸಹ ಗಮನ ಹರಿಸಬೇಕಾಗುತ್ತದೆ. ಬ್ಯಾಂಕಿಂಗ್ ಅಪ್ಲಿಕೇಶನ್ ಗಳು ಸಹ ಟ್ರಾನ್ಸಾಕ್ಷನ್ ಲಿಮಿಟ್ ಬಗ್ಗೆ ನಿಮಗೆ ಮೊದಲೆ ತಿಳಿವಳಿಕೆ ನೀಡಿರುತ್ತವೆ.[ಬ್ಯಾಂಕ್ ಖಾತೆಯೊಂದಿಗೆ ಮೊಬೈಲ್ ಸಂಖ್ಯೆ ನೋಂದಣಿ ಏಕೆ?]

* ಮೊಬೈಲ್ ಪೇಮೆಂಟ್ ಅಪ್ಲಿಕೇಶನ್ ಗಳು
ನೀವು ಡೌನ್ ಲೋಡ್ ಮಾಡಿಕೊಂಡಿರುವ ಅಪ್ಲಿಕೇಶನ್ ಸರಿಯಾಗಿದೆಯೇ? ಅಥವಾ ನಕಲಿ ಅಪ್ಲಿಕೇಶನ್ ಆಗಿರಬಹುದೇ ಎಂದು ಪರಿಶೀಲನೆ ಮಾಡಿಕೊಳ್ಳುವುದು ಅಷ್ಟೇ ಮುಖ್ಯ. ಡೌನ್ ಲೋಡ್ ಮಾಡಿಕೊಳ್ಳುವ ಮುನ್ನ ರೇಟಿಂಗ್ ಮತ್ತು ಜನರ ರಿವ್ಯೂ ಗಳನ್ನು ಒಮ್ಮೆ ನೋಡುವುದು ಉತ್ತಮ.

* ಸುರಕ್ಷಿತ ಅಂತರ್ಜಾಲ ವ್ಯವಸ್ಥೆ
ಸಾರ್ವಜನಿಕ ಅಂತರ್ಜಾಲ ವ್ಯವಸ್ಥೆ ಅಥವಾ ವೈ ಫೈ ಬಳಕೆ ಮಾಡಿಕೊಂಡು ಹಣ ರವಾನೆ ಮಾಡುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳಿ. ಇಂಟರ್ ನೆಟ್ ಸೆಂಟರ್ ಗಳ ಮೂಲಕ ಹಣ ರವಾನೆ ಮಾಡುವುದನ್ನು ನಿಲ್ಲಿಸಿದರೆ ಒಳಿತು.

* ಸುರಕ್ಷಿತ ಹಣ ರವಾನೆ ತಂತ್ರ
ಬ್ಯಾಂಕಿಂಗ್ ಅಥವಾ ಮೊಬೈಲ್ ಅಪ್ಲಿಕೇಶನ್ ಗಳ ಬಗ್ಗೆ ಗಮನವಿರಲಿ. ಅವು ಎಲ್ಲಿಂದ ಅಂದರೆ HTTPS ನಿಂದ ಲಾಗ್ ಇನ್ ಆಗಿದೆಯೇ ಎಂಬುದನ್ನು ಪರಿಶೀಲನೆ ಮಾಡಿಕೊಳ್ಳಬೇಕು. ಒಂದು ವೇಳೆ HTTP ಆಧಾರದಲ್ಲಿ ಲಾಗ್ ಇನ್ ಆಗಿದ್ದರೆ ಸಮಸ್ಯೆ ಎದುರಾಗಬಹುದು.

* MPIN ಬದಲಾವಣೆ
ನಿಮ್ಮ MPIN ಬದಲಾವಣೆ ಬಗ್ಗೆಯೂ ವಿಶೇಷ ಗಮನ ಇರಬೇಕು. ಮೊಬೈಲ್ ಪರ್ಸನಲ್ ಐಡೆಂಟಿಫಿಕೇಶನ್ ನಂಬರ್ ನ್ನು ಬ್ಯಾಂಕ್ ತನ್ನ ಗ್ರಾಹಕನಿಗೆ ಕಳುಹಿಸಿಕೊಟ್ಟಿರುತ್ತದೆ, ಇದೇ ಆಧಾರದಲ್ಲಿ ಕಾರ್ಯ ನಿರ್ವಹಿಸಿದರೆ ಯಾವ ಅಪಾಯ ಎದುರಾಗುವುದಿಲ್ಲ,

ಕೊನೆ ಮಾತು:
ನಿಮ್ಮ ವಿಳಾಸ ಬದಲಾವಣೆ, ದೂರವಾಣಿ ಸಂಖ್ಯೆ ಬದಲಾವಣೆಯನ್ನು ತಕ್ಷಣಕ್ಕೆ ಬ್ಯಾಂಕ್ ಖಾತೆಯೊಂದಿಗೆ ಸೇರಿಸಿಕೊಳ್ಳಬೇಕು. ಇಲ್ಲವಾದರೆ ಕೆಲ ಮಹತ್ವಪೂರ್ಣ ಸಂದೇಶಗಳು ಕೈ ತಪ್ಪುವ ಸಾಧ್ಯತೆ ಇರುತ್ತದೆ. ಜತೆಗೆ ಸುಲಭ ಸಂವಹನಕ್ಕೂ ಅಡ್ಡಿಯಾಗಬಹುದು. (ಗುಡ್ ರಿಟರ್ನ್ಸ್.ಇನ್)

English summary

6 Tips To Consider When Making Payments Through Mobile

Shopping online is not a tedious thing as there are no more long ques, no carrying cash, no worries of parking etc. Shopping has evolved from retail shops to desktop - now it making way through mobile apps.
Story first published: Wednesday, October 28, 2015, 13:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X