For Quick Alerts
ALLOW NOTIFICATIONS  
For Daily Alerts

Q2: ಟಿಸಿಎಎಸ್ vs ಇನ್ಫೋಸಿಸ್ ಯಾವ ಷೇರು ಖರೀದಿಸಲಿ?

By Mahesh
|

ಬೆಂಗಳೂರು, ಅ.15: ದೇಶದ ಅಗ್ರಗಣ್ಯ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಹಾಗೂ ದೇಶದ ನಂ.2 ಸಂಸ್ಥೆ ಇನ್ಫೋಸಿಸ್ ಇತ್ತೀಚೆಗೆ ಎರಡನೇ ತ್ರ್ರೈಮಾಸಿಕ ವರದಿಯನ್ನು ಪ್ರಕಟಿಸಿವೆ. ಅನೇಕ ವಿಭಾಗಗಳಲ್ಲಿ ಟಿಸಿಎಸ್ ಸಂಸ್ಥೆಯನ್ನು ಇನ್ಫೋಸಿಸ್ ಹಿಂದಿಕ್ಕಿದೆ.

ಟಿಸಿಎಸ್ ನ ತ್ರೈಮಾಸಿಕ ದಿಂದ ತ್ರೈಮಾಸಿಕ ಅವಧಿಗೆ ಶೇ 5.8ರಷ್ಟು ಆದಾಯ ಏರಿಕೆ ಕಂಡು 27,165 ಕೋಟಿ ರು ಬಂದಿದೆ. ಡಾಲರ್ ಆದಾಯ ಶೇ 3ರಷ್ಟು ಏರಿಕೆ ಕಂಡು 4156 ಮಿಲಿಯನ್ ಡಾಲರ್ ನಷ್ಟಿದೆ. ಇದಕ್ಕೆ ಹೋಲಿಸಿದರೆ ಇನ್ಫೋಸಿಸ್ ನ ಡಾಲರ್ ಅದಾಯ ಪ್ರಗತಿ ದರ ಶೇ 6ರಷ್ಟಿದೆ. ಅದರೆ, ಲಾಭ ಶೇ 6.5 ರಂತೆ 6,052 ಕೋಟಿ ರು ಹಾಗೂ ಆದಾಯ ಶೇ 6.1ರಂತೆ 27,320 ಕೋಟಿ ರು ನಿರೀಕ್ಷಿಸಲಾಗಿತ್ತು.[ಇನ್ಫಿ ಮುಂದೆ ಮಂಕಾದ ಟಿಸಿಎಸ್ Q2 ಫಲಿತಾಂಶ]

Q2: ಟಿಸಿಎಎಸ್ vs ಇನ್ಫೋಸಿಸ್ ಯಾವ ಷೇರು ಕೊಳ್ಳಲಿ?

ಹೀಗಾಗಿ ಆದಾಯ, ಮಾರ್ಜಿನ್, ಲಾಭದ ವಿಷಯದಲ್ಲಿ ಇನ್ಫೋಸಿಸ್ ಮುಂದಿರುವುದರಿಂದ ಸಹಜವಾಗಿ ವಿಶ್ಲೇಷಕರು ಇನ್ಫೋಸಿಸ್ ಷೇರು ಖರೀದಿಸಲು ಮುಂದಾಗಿರುವವರಿಗೆ 'ಥಮ್ಸ್ ಅಪ್' ಹೇಳಿದ್ದಾರೆ. 2015-16ರಲ್ಲಿ ಡಾಲರ್ ಆದಾಯ ಪ್ರಗತಿ ಹೆಚ್ಚು ಕಡಿಮೆಯಾಗಿರುವುದು ಹೂಡಿಕೆದಾರರನ್ನು ಚಿಂತೆಗೆ ದೂಡಿದೆ. [ಇನ್ಫಿಗೆ ನಿರೀಕ್ಷೆಗೂ ಮೀರಿದ ಲಾಭ, ಭರ್ಜರಿ ಆದಾಯ]

ಆದರೆ, ವಿದೇಶಿ ಬ್ರೋಕರೇಜ್ ಕಂಪನಿಗಳಾದ ನೊಮುರಾ, ಬಾರ್ಕ್ಲೆ ಹಾಗೂ ಮೊರ್ಗನ್ ಸ್ಟ್ಯಾನ್ಲಿ ಸಂಸ್ಥೆಗಳು ಇನ್ಫೋಸಿಸ್ ಗೆ ಜೈಕಾರ ಹಾಕಿವೆ. ಟಿಸಿಎಸ್ ಸಂಸ್ಥೆ ಡಾಲರ್ ಪ್ರಗತಿ ದರ ಇಳಿಕೆಯಾದರೂ ಲ್ಯಾಟಿನ್ ಅಮೆರಿಕದ ಡೀಲಿಂಗ್ ಸುಧಾರಿಸಿದೆ. ಮುಂದಿನ ಎರಡು ತ್ರೈಮಾಸಿಕದಲ್ಲಿ ಆರ್ಥಿಕ ಪ್ರಗತಿ ಸುಸ್ಥಿರವಾಗಿರಿಸಿಕೊಂಡು ಹೊಸ ತಂತ್ರಜ್ಞಾನದತ್ತ ಎರಡು ಕಂಪನಿಗಳು ಚಿತ್ತ ಹರಿಸುವ ಮುನ್ಸೂಚನೆ ನೀಡಿವೆ.

ಟಿಸಿಎಸ್ಇನ್ಫೋಸಿಸ್
ಆದಾಯ ಗಳಿಕೆRs 27,168 croresRs 15,635 crores
ನಿವ್ವಳ ಲಾಭ6055Rs 3398 crores
Dollar Revenue growth in constant currency terms3.90%6.90%
GuidanceDoes not give guidance6.4-8.4 percent
Attrition rate16.20%19.90%
EBIT Margin26.70%25.50%

ಷೇರುಪೇಟೆಯಲ್ಲಿ ಸದ್ದಿಲ್ಲ: ಎರಡನೇ ತ್ರೈಮಾಸಿಕ ವರದಿ ನಂತರ ಇನ್ಫಿ ಷೇರು 1,210 ರು ಗೇರಿದರೂ ಶೇ 8ರಷ್ಟು ಕುಸಿತ ಕಂಡು 1,097ಕ್ಕೆ ಇಳಿದಿತ್ತು. ಟಿಸಿಎಸ್ ಷೇರು ಕೂಡಾ ಶೇ 4.5ರಷ್ಟು ಕುಸಿತ ಕಂಡಿದೆ. ಬ್ರೋಕರೇಜ್ ಸಂಸ್ಥೆಗಳ ಸಮೀಕ್ಷೆಯಂತೆ ಟಿಸಿಎಸ್ ಗಿಂತ ಇನ್ಫೋಸಿಸ್ ಮೇಲೆ ಹೂಡಿಕೆ ಸದ್ಯದ ಮಟ್ಟಿಗೆ ಆರೋಗ್ಯಕರ ಎಂದು ತಿಳಿದು ಬಂದಿದೆ. (ಗುಡ್ ರಿಟರ್ನ್ಸ್.ಇನ್)

English summary

TCS Vs Infosys; Which Stock To Buy After Q2 Numbers?

Two of India's largest Software Services Providers, Tata Consultancy Services and Infosys, have both declared their Q2 numbers. There have places where Infosys has outperformed TCS and places where TCS has beaten Infosys.
Story first published: Thursday, October 15, 2015, 16:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X