For Quick Alerts
ALLOW NOTIFICATIONS  
For Daily Alerts

ಷೇರು ಅಡವಿಟ್ಟು ಸಾಲ ಬೇಡ ಎನ್ನಲು 5 ಕಾರಣ

|

ಹಣದ ಅಗತ್ಯ ಬಿದ್ದಾಗ ಪರ್ಯಾಯ ಮಾರ್ಗಗಳನ್ನು ಹುಡುಕುವುದು ಮಾನವನ ಹುಟ್ಟುಗುಣ. ತುರ್ತು ನಿಧಿಯೂ ದೊರೆಯದಿದ್ದಾಗ ಇದ್ದ ಆಸ್ತಿಯನ್ನು ಅಡವಿಟ್ಟು ಸಾಲ ಪಡೆದುಕೊಳ್ಳಲು ಮುಂದಾಗುತ್ತೇವೆ,

 

ಅಂತೆಯೇ ನಮ್ಮ ಬಳಿ ಇರುವ ಷೇರುಗಳನ್ನು ಅಡವಿಟ್ಟು ಸಾಲ ಪಡೆದುಕೊಳ್ಳೋಣ ಎಂದು ಯೋಚನೆ ಮಾಡುತ್ತೇವೆ. ಆದರೆ ನಿಜಕ್ಕೂ ಷೇರುಗಳ ಆಧಾರದಲ್ಲಿ ಸಾಲ ಪಡೆದುಕೊಳ್ಳುವುದು ಸುರಕ್ಷಿತ ಕ್ರಮವೇ? ನಮಗೆ ಇದು ಮುಂದೆ ತಂದಿಡಬಹುದಾದ ಸಮಸ್ಯೆಗಳು ಏನು? ಎಂಬುದನ್ನು ಅರಿತುಕೊಳ್ಳಬೇಕಾಗುತ್ತದೆ.[ಷೇರು ಮಾರುಕಟ್ಟೆಯಿಂದ ದೂರ ಇರೋದೆ ಒಳ್ಳೆದು, ಯಾಕಂದ್ರೆ....]

 

1. ಬಡ್ಡಿ ದರ ಅತಿಹೆಚ್ಚು
ಉಳಿದ ಸಾಲಗಳಿಗೆ ಹೋಲಿಸಿದರೆ ಇಲ್ಲಿ ಬಡ್ಡಿ ದರ ಅತಿ ಹೆಚ್ಚು. ನೀವು ಶೇ. 16 ರಷ್ಟು ಬಡ್ಡಿ ತೆರಬೇಕಾಗುತ್ತದೆ. ಪರ್ಸನಲ್ ಲೋನ್ ಅನ್ನು ಇದು ಮೀರಿಸುತ್ತದೆ. ಆದರೆ ನೀವು ಹೊಂದಿರುವ ಷೇರು ಮಾತ್ರ ಕಡಿಮೆ ಪ್ರಮಾಣದಲ್ಲಿ ಹಣ ಗಳಿಕೆ ಮಾಡುತ್ತಿರುತ್ತದೆ.

ಷೇರು ಅಡವಿಟ್ಟು ಸಾಲ ಬೇಡ ಎನ್ನಲು 5 ಕಾರಣ

2. ಎಲ್ಲ ಷೇರುಗಳಿಗೆ ಸಾಲ ದೊರೆಯುವುದಿಲ್ಲ
ನಿಮ್ಮ ಬಳಿ ಇರುವ ಷೇರುಗಳು ಬಿ ಗ್ರೂಪ್ ನಲ್ಲಿ ಇದ್ದವಾದರೆ ನಿಮಗೆ ಸಾಲ ದೊರೆಯುವುದಿಲ್ಲ. ಸಾಮಾನ್ಯವಾಗಿ ಬ್ಯಾಂಕ್ ಗಳು ಯಾವ ಯಾವ ಷೇರಿಗೆ ಸಾಲ ನೀಡಿಕೆ ಮಾಡಬಹುದು ಎಂಬ ಪಟ್ಟಿಯನ್ನು ಇಟ್ಟುಕೊಂಡಿರುತ್ತವೆ. ಕೆಲವೊಮ್ಮೆ ನೀfವು ಹೊಂದಿರುವ ಷೇರುಗಳ ಮೌಲ್ಯಕ್ಕಿಂತಲೂ ಕಡಿಮೆ ಮೊತ್ತಕ್ಕೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ.[ಟೆಕ್ನಿಕಲ್ ಮತ್ತು ಫಂಡಮೆಂಟಲ್ ಅನಾಲಿಸಿಸ್ ನಡುವಿನ ವ್ಯತ್ಯಾಸವೇನು?]

3. ಕಡಿಮೆ ಮೌಲ್ಯಕ್ಕೆ ಲೆಕ್ಕ
ನಿಮ್ಮ ಬಳಿ 1 ಲಕ್ಷ ರು. ಮೌಲ್ಯದ ಚಿನ್ನಾಭರಣವಿದೆ ಎಂದಾದರೆ ಸಲೀಸಾಗಿ 70 ಸಾವಿರ ರು. ಸಾಲ ಪಡೆದುಕೊಳ್ಳಬಹುದು. ಅದೇ ನಿಮ್ಮ ಬಳಿ 1 ಲಕ್ಷ ರು. ಮೌಲ್ಯದ ಷೇರುಗಳಿದ್ದರೆ 50 ಸಾವಿರ ಸಾಲ ಪಡೆದುಕೊಳ್ಳುವುದು ಕಷ್ಟಸಾಧ್ಯ.

4. ಷೇರು ಮಾರಾಟ ಸಾಧ್ಯವಿಲ್ಲ
ನೀವು ಅಡವಿಟ್ಟ ಷೇರು ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಗಳಿಕೆ ದಾಖಲು ಮಾಡುತ್ತಿದ್ದರೆ ನೀವು ಸಾಲ ಪಡೆದುಕೊಂಡ ಕಾರಣಕ್ಕೆ ಅದನ್ನು ಮಾರಲು ಸಾಧ್ಯವಿಲ್ಲ. ಒಂದು ವೇಳೆ ಬ್ಯಾಂಕ್ ಖುದ್ದು ಷೇರು ಮಾರಾಟಕ್ಕೆ ಮುಂದಾದರೆ ನಿಮ್ಮ ಬ್ಲ್ಯೂ ಚಿಫ್ ಮೌಲ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ.

5. ಸಕಲ ಉದ್ದೇಶಕ್ಕೆ ಹಣ ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ
ಬ್ಯಾಂಕ್ ಷೇರಿನ ಆಧಾರದಲ್ಲಿ ನೀಡುವ ಸಾಲದ ಹಣ ಬಳಕೆಯ ಮೇಲೆ ಕೆಲ ನಿರ್ಬಂಧ ಹೇರುತ್ತದೆ. ಇದನ್ನು ಸುಲಭವಾಗಿ ಅರ್ಥೈಸಲು ಸಾಧ್ಯವಿಲ್ಲ. ಆದರೆ ಇಲ್ಲಿ ಸಿಗುವ ಸಾಲವನ್ನು ಎಲ್ಲ ಬಗೆಯ ಬಳಕೆಗೆ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂದಷ್ಟೇ ಹೇಳಬಹುದು.

ಕೊನೆ ಮಾತು:
ಷೇರು ಮಾರುಕಟ್ಟೆ ಪ್ರತಿದಿನ ತಲ್ಲಣದಲ್ಲೇ ಮುಂದುವರಿಯುತ್ತಿದೆ. ಇಂಥ ವೇಳೆ ಷೇರು ಅಡವಿಟ್ಟು ಸಾಲ ಪಡೆದುಕೊಳ್ಳುವುದು ಮೂರ್ಖತನ ಎಂದೇ ಹೇಳಬಹುದು. ಪರ್ಯಾಯ ಹಣದ ಮಾರ್ಗಗಳತ್ತ ಚಿತ್ತ ಹರಿಸುವುದು ಉತ್ತಮ.

English summary

5 Reasons To Avoid Taking Loan Against Shares

Loan against shares is yet another option, that one has to take loan against a pledged security. Loans against shares is given against your shares as a collateral. But, they bring along some disadvantages. Here are some reasons, why loan against shares is not the best bet.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X