For Quick Alerts
ALLOW NOTIFICATIONS  
For Daily Alerts

ನೆಟ್ ಬ್ಯಾಂಕಿಂಗ್ ಪಿನ್ ತಪ್ಪಾದ್ರೆ ಏನ್ ಮಾಡ್ಬೇಕು?

|

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿರುವ ನಮಗೆ ಕೆಲವೊಂದು ಸಂದರ್ಭ ನಮ್ಮದೇ ಖಾತೆಯ ಪರ್ಸನಲ್ ಐಡೆಂಟಿಫಿಕೇಶನ್ ಸಂಖ್ಯೆ ಮರೆತು ಹೋಗುತ್ತದೆ ಅಥವಾ ಕನ್ ಪ್ಯೂಶನ್ ಗೆ ಒಳಗಾಗುತ್ತೇವೆ. ಪಾಸ್ ವರ್ಡ್ ಗಳನ್ನು ಮರೆತುಕೊಂಡು ಬಿಡುತ್ತೇವೆ.

ನೀವು ಮೂರು ಸಾರಿ ತಪ್ಪಾದ ಪಿನ್ ನಮೂದು ಮಾಡಿದರೆ ಮುಂದಿನ 24 ಗಂಟೆ ಕಾಲ ಯಾವುದೇ ಬಗೆಯ ವ್ಯವಹಾರ ನಡೆಸಲು ಸಾಧ್ಯವಾಗುವುದಿಲ್ಲ. ಆದರೆ ನಿಮ್ಮ ಐಪಿಐಎನ್ ನಂಬರ್ ನ್ನು ರೀ ಜನರೇಟ್ ಮಾಡಿಕೊಳ್ಳಲು ಸಾಧ್ಯವಿದೆ. ನಿಮ್ಮ ಮೊಬೈಲ್ ಸಂಖ್ಯೆ ಬ್ಯಾಂಕ್ ಖಾತೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರೆ ಸುಲಭವಾಗುತ್ತದೆ.

ನಿಮ್ಮ ಪಿನ್ ರೀ ಜನರೇಟ್ ಮಾಡಿಕೊಳ್ಳುವ ವಿವಿಧ ಮಾರ್ಗಗಳನ್ನು ನೋಡೋಣ[ಖಾತೆ ತೆರೆಯಲು ಯಾವ ಬ್ಯಾಂಕ್ ಉತ್ತಮ? ಇಲ್ಲಿದೆ ಉತ್ತರ]

ನೆಟ್ ಬ್ಯಾಂಕಿಂಗ್ ಪಿನ್ ತಪ್ಪಾದ್ರೆ ಏನ್ ಮಾಡ್ಬೇಕು?

ಓಟಿಪಿ

* ನಿಮ್ಮ ಕಸ್ಟಮರ್ ಐಡಿಯನ್ನು ದಾಖಲು ಮಾಡಬೇಕಾಗುತ್ತದೆ.
* ನಂತರ ಆಗಮಿಸುವ ಆಯ್ಕೆ ಬಳಸಿಕೊಂಡು ಒಟಿಪಿ ಯನ್ನು ಆರಿಸಿಕೊಳ್ಳಿ.

* ನಿಮ್ಮ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ದಾಖಲಿಸಿ

* ಪಾಸ್ ವರ್ಡ್ ಬದಲಾಯಿಸಿ ಪುನಃ ಲಾಗ್ ಇನ್ ಆಗಿ

ಫೋನ್ ಬ್ಯಾಂಕಿಂಗ್ ಅಥವಾ ಎಟಿಎಂ

ಎಟಿಎಂ ಮೂಲಕ ಅಥವಾ ನೋಂದಾವಣೆಯಾಗಿರುವ ಫೋನ್ ಮೂಲಕ ಕರೆ ಮಾಡಿದರೆ ಹೊಸ ಐಪಿಐಎನ್ ಪಡೆದುಕೊಳ್ಳಲು ಸಾಧ್ಯವಿದೆ.

ಶಾಖೆಗೆ ನೇರ ಭೇಟಿ

ಇದೆಲ್ಲಾ ಸಮಸ್ಯೆಗಳು ಎಂದು ಅನಿಸಿದರೆ ನೇರವಾಗಿ ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅನುಮಾನ ಬಗೆಹರಿಸಿಕೊಳ್ಳಬಹುದು.

ಇಸ್ಟಾ ಪಿನ್ ಬಳಕೆ

ನಿಮ್ಮ ನೋಂದಣಿಯಾಗಿರುವ ಡೆಬಿಟ್ ಕಾರ್ಡ್ ಬಳಕೆ ಮಾಡಿಕೊಂಡು ಇಸ್ಟಾ ಪಿನ್ ರಚಿಸಿಕೊಳ್ಳಬಹುದು. ರಚಿಸಿಕೊಳ್ಳುವುದು ಹೇಗೆ ಎಂದು ನೋಡೋಣ[ಮೊಬೈಲ್ ಬ್ಯಾಕಿಂಗ್ : ಸಿಮ್ ಸ್ವಾಪ್ ವಂಚನೆ ಬಗ್ಗೆ ಎಚ್ಚರ!]

* ಇಸ್ಟಾ ಪಿನ್ ಲಿಂಕ್ ಮೇಲೆ ಕ್ಲಿಕ್ ಮಾಡಿ

* ಕಸ್ಟಮರ್ ಐಡಿ ದಾಖಲು ಮಾಡಿ ಕನ್ ಫರ್ಮ್ ನೀಡಿ

* ನಿಮ್ಮ ಕಸ್ಟಮರ್ ಐಡಿಗೆ ಯಾವ ಕಾರ್ಡ್ ಗಳು ಲಿಂಕ್ ಆಗಿದೆ ಎಂಬುದನ್ನು ಇಲ್ಲಿ ಗಮನಿಸಬಹುದು.

* ಲಿಂಕ್ ಆಗಿರುವ ಕಾರ್ಡ್ ಬಗೆಗಿನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು.

* ಪೋಸ್ಟ್ ಕಾರ್ಡ್ ವಿಭಾಗಕ್ಕೆ ತೆರಳಿದರೆ ನಿಮ್ಮ ಎಟಿಎಂ ಕಾರ್ಡ್ ಅವಧಿ ಮುಗಿಯುವ ದಿನಾಂಕ, ಪಿನ್ ಸಹ ನೀಡಬೇಕಾಗುತ್ತದೆ.

* ನಂತರ ನೀವು ನಿಮ್ಮ ಇಂಟರ್ ನೆಟ್ ಬ್ಯಾಂಕಿಂಗ್ ಪಾಸ್ ವರ್ಡ್ ರೀಸೆಟ್ ಗೆ ಮನವಿ ಸಲ್ಲಿಕೆ ಮಾಡಬೇಕಾಗುತ್ತದೆ.

* ಹೊಸ್ ಪಾಸ್ ವರ್ಡ್ ಹಾಕಿ ಕನ್ ಫರ್ಮ್ ನೀಡಿದರೆ ಹೊಸದಾಗಿ ನಿಮ್ಮ ಖಾತೆ ಪ್ರವೇಶಿಸಲು ಸಾಧ್ಯವಾಗುತ್ತದೆ.(ಗುಡ್ ರಿಟರ್ನ್ಸ್.ಇನ್)

English summary

How To Regenerate HDFC Net Banking PIN (IPIN)?

The major disadvantage of having multiple bank accounts is you tend to get confused or forget your net banking Personal Identification Number (IPIN). If you fail to input the correct PIN for 3 times, your card will be blocked for 24 hours. Next day, you have to input the correct PIN. However, one can regenerate the IPIN with the help of registered mobile number, net banking and phone banking.
Story first published: Tuesday, November 24, 2015, 15:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X