For Quick Alerts
ALLOW NOTIFICATIONS  
For Daily Alerts

ಜಿಎಸ್‌ಟಿ ಬಿಲ್ ಪಾಸಾದರೆ ಯಾವ ಷೇರುಗಳಿಗೆ ಲಾಭ?

|

ಸಂಸತ್ ನ ಚಳಿಗಾಲದ ಅಧಿವೇಶನ ಆರಂಭವಾಗಿದ್ದು ಸರಕು ಮತ್ತು ಸೇವಾ ತೆರಿಗೆ ಬಿಲ್(ಜಿಎಸ್ ಟಿ) ಮಂಡಿಸಲು ಸಿದ್ಧತೆಗಳು ನಡೆದಿವೆ. ದೇಶಾದ್ಯಂತ ಬಿಲ್ ಬಗ್ಗೆ ಚರ್ಚೆ ಸಹ ಆರಂಭವಾಗಿದೆ.

 

ಬಿಲ್ ಗೆ ಸಂಬಂಧಿಸಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಹಲವಾರು ಭಿನ್ನಾಭಿಪ್ರಾಯಗಳು ಇವೆ. ಒಂದು ವೇಳೆ ಈ ಬಿಲ್ ಅಧಿವೇಶನದಲ್ಲಿ ಪಾಸಾದರೆ ಆರ್ಥಿಕ ವಲಯದ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬುದು ಮುಖ್ಯವಾಗುತ್ತದೆ. ಷೇರು ಮಾರುಕಟ್ಟೆಯ ಮೇಲೆ ಬಿಲ್ ಪಾಸಾದ ನಂತರ ಆಗುವ ಪರಿಣಾಮಗಳೇನು? ಯಾವ ಷೇರುಗಳು ಏರಿಕೆ ಹಾದಿ ಹಿಡಿಯಬಹುದು ಎಂಬುದನ್ನು ಗಮನಿಸಬೇಕಾಗುತ್ತದೆ.[ಷೇರು ಅಡವಿಟ್ಟು ಸಾಲ ಬೇಡ ಎನ್ನಲು 5 ಕಾರಣ]

 
ಜಿಎಸ್‌ಟಿ ಬಿಲ್ ಪಾಸಾದರೆ ಯಾವ ಷೇರುಗಳಿಗೆ ಲಾಭ?

ಬ್ರಿಟಾನಿಯಾ
ಬಿಲ್ ಪಾಸಾದರೆ ಬ್ರಿಟಾನಿಯಾ ಷೇರುಗಳು ಏರಿಕೆ ಹಾದಿ ಹಿಡಿಯಬಹುದು. ಕಂಪನಿಯ ಲಾಜಿಸ್ಟಿಕ್ ಸೇವೆಗಳಿಗೆ ಸಂಬಂಧಿಸಿದ ಷೇರುಗಳು ಲಾಭ ಪಡೆದುಕೊಳ್ಳುವ ಸಾಧ್ಯತೆಯಿದೆ.

ಕಜಾರಾ ಸೆರಾಮಿಕ್ಸ್
ಅನ್ ರೆಕೊಗ್ನೈಸ್ಡ್ ಸಕ್ಟರ್ ನ ಕೆಲ ಷೇರುಗಳು ಬಿಲ್ ಪಾಸಾದರೆ ಮಹತ್ವ ಪಡೆದುಕೊಳ್ಳುತ್ತವೆ ಎಂದು ಹೇಳಲಾಗಿದೆ.

ರಿಲಾಕ್ಸೋ
ರಿಲಾಕ್ಸೋ ಸಹ ಏರಿಕೆಯ ಹಾದಿ ಹಿಡಿಯಲಿದೆ. ಬಿಲ್ ಪಾಸಾದರೆ ತೆರಿಗೆಗಳಲ್ಲಿ ಕಂಡುಬರುವ ವ್ಯತ್ಯಾಸ ಕಂಪನಿಗೆ ಲಾಭ ತರಲಿದೆ.

ಗೋದ್ರೇಜ್ ಕನ್ಸೂಮರ್
ವೇರ್ ಹೌಸ್ ಗಳ ಮೇಲಿನ ಶುಲ್ಕ ಕಡಿಮೆಯಾದರೆ ಗೋದ್ರೇಜ್ ಕನ್ಸೂಮರ್ ಗೆ ಸಂಬಂಧಿಸಿದ ಷೇರುಗಳು ಏರಿಕೆ ಸಾಧಿಸಲಿವೆ. ಇದರೊಂದೊಗೆ ಹ್ಯಾವಲ್ಸ್ ಮತ್ತು ಬಜಾಜ್ ಆಟೋ ಸಹ ಏರಿಕೆ ಸಾಧಿಲಿವೆ.[ಪ್ರಥಮ ಗುಟುಕಲ್ಲೇ 'ಕಹಿ'ಯಾದ 'ಕಾಫಿ' ಡೇ ಷೇರುಗಳು]

ಹಿಂದಿನ ಬಾರಿಯ ಅಧಿವೇಶನದಲ್ಲೂ ಜಿಎಸ್ ಟಿ ಬಿಲ್ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. ಇದೀಗ ಮತ್ತೊಮ್ಮೆ ದೇಶದಾದ್ಯಂತ ಚರ್ಚೆ ನಡೆಯುತ್ತಿದ್ದು ಸಂಸತ್ ಕಲಾಪದಲ್ಲಿ ತೆಗೆದುಕೊಳ್ಳುವ ತೀರ್ಮಾನದ ಮೇಲೆ ಮುಂದಿನ ಬೆಳವಣಿಗೆಗಳು ನಿರ್ಧಾರವಾಗಲಿವೆ.(ಗುಡ್ ರಿಟರ್ನ್ಸ್.ಇನ್)

English summary

Shares That could Rally If GST Bill Is Passed In The Winter Session

The Goods and Services Tax (GST) is the most important piece of legislation that markets are awaiting approval. The GST Bill is stuck in the Rajya Sabha and once again there are hopes that this legislation will sail through.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X