For Quick Alerts
ALLOW NOTIFICATIONS  
For Daily Alerts

ಪ್ರಕೃತಿ ಮುನಿಸಿಂದ ಆರ್ಥಿಕ ಸಂಕಷ್ಟ ತಪ್ಪಿಸಿಕೊಳ್ಳಲು 5 ಉಪಾಯ

|

ನಿಸರ್ಗದ ಕೆಂಗಣ್ಣಿಗೆ ಗುರಿಯಾದರೆ ತುತ್ತು ಆಹಾರಕ್ಕೂ ಹೋರಾಟ ಮಾಡಬೇಕಾಗುತ್ತದೆ. ಅದು ನೇಪಾಳದ ಭೂಕಂಪನವಿರಬಹುದು, ಚೆನ್ನೈ ಜಲಪ್ರಳಯವಿರಬಹುದು. ಇಂಥ ಅನೇಕ ಉದಾಹರಣೆಗಳನ್ನು ಕಂಡಿದ್ದೇವೆ. ಹಾಗಾದರೆ ಇಂಥ ಸಂದರ್ಭದಲ್ಲಿಯೂ ನಮ್ಮಹಣಕಾಸು ವ್ಯವಸ್ಥೆಯನ್ನು ಸುಭದ್ರವಾಗಿ ಇಟ್ಟುಕೊಳ್ಳಲು ಸಾಧ್ಯವೇ?

ಹೌದು,,, ಕೊಂಚ ಮುಂದಾಲೋಚನೆ ಮಾಡಿಕೊಂಡರೆ ನಿಸರ್ಗ ವಿಕೋಪದ ಹಾನಿಯಿಂದ ನಿಮ್ಮನ್ನು ನಿಮ್ಮ ಆಸ್ತಿಯನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ.

ಪ್ರವಾಹದಿಂದ ನಿಮ್ಮ ಮನೆಯ ಅಮೂಲ್ಯ ಸಾಮಗ್ರಿಗಳನ್ನು ಕಳೆದುಕೊಂಡಿರುತ್ತೀರಿ, ಕಾಗದ ಪತ್ರಗಳು ನೀರಿಗೆ ಆಹುತಿಯಾಗಿರುತ್ತದೆ. ಅಬ್ಬಾ... ನೆನೆಸಿಕೊಂಡೆ ಭಯವಾಗುತ್ತೆಯಲ್ಲಾ...! ಹಾಗಾದರೆ ಪ್ರವಾಹಕ್ಕೆ ಸಿಲುಕಿದರೂ ಆರ್ಥಿ ಪ್ರವಾಹಕ್ಕೆ ಸಿಲುಕದಂತೆ ನಿಮ್ಮನ್ನು ನೀವು ಕಾಪಾಡಿಕೊಳ್ಳುವುದು ಹೇಗೆ? ಅದಕ್ಕೆ ಉತ್ತರ ಇಲ್ಲಿದೆ.[ಕೆಲಸಕ್ಕೆ ಹೋಗುತ್ತಿರುವ ಮಹಿಳೆಯರು ಇದನ್ನು ಓದಲೇಬೇಕು]

ಪ್ರಕೃತಿ ಮುನಿಸಿಂದ ಆರ್ಥಿಕ ಸಂಕಷ್ಟ ತಪ್ಪಿಸಿಕೊಳ್ಳಲು 5 ಉಪಾಯ

1. ವಿಮಾ ಯೋಜನೆಗಳು
ವಿಮಾ ಯೊಜನೆಗಳ ಮೇಲೆ ಗಮನ ಹರಿಸಿದರೆ ನೀವು ಸಂಕಷ್ಟದಿಂದ ಪಾರಾಗಬಹುದು. ನೀವು ಮಾಡಿಸುತ್ತಿರುವ ಪಾಲಿಸಿ ನೈಸರ್ಗಿಕ ವಿಕೋಪದಿಂದ ರಕ್ಷಣೆ ನೀಡುತ್ತದೆಯೇ ಎಂಬುದನ್ನು ಗಮನವಿಟ್ಟು ನೋಡಿಕೊಂಡಿರಬೇಕಾಗುತ್ತದೆ.

2. ಆಸ್ತಿಗೆ ವಿಮೆಯ ರಕ್ಷಣೆ
ಆಸ್ತಿ ಅಂದರೆ ಇಲ್ಲಿ ಕೇವಲ ಜಮೀನು ಮನೆ ಎಂದು ತಿಳಿದುಕೊಳ್ಳಬಾರದು. ನಿಮ್ಮ ಬೆಲೆಬಾಳುವ ವಸ್ತುಗಳನ್ನು ಇದಕ್ಕೆ ಸೇರಿಸಬಹುದು. ಅದು ಟಿವಿ, ಪ್ರೀಜ್ ಸಹ ಆಗಿರಬಹುದು. ನಿಮ್ಮ ಬೆಲೆಬಾಳುವ ವಸ್ತುಗಳ ಒಂದು ವಿಡಿಯೋ ಮಾಡಿ ಇಟ್ಟುಕೊಳ್ಳುವುದು ಉತ್ತಮ.

3. ಬ್ಯಾಂಕ್ ಲಾಕರ್
ಬ್ಯಾಂಕ್ ಲಾಕರ್ ಸಹಾಯ ಪಡೆದುಕೊಂಡರೂ ನಿಸರ್ಗದ ವಿಕೋಪ ಮತ್ತು ಕಳ್ಳತನದಿಂದಲೂ ಪಾರಾಗಬಹುದು. ಚಿನ್ನ, ವಜ್ರ ಮತ್ತು ಬೆಳ್ಳಿಗೆ ಸಂಬಂಧಿಸಿದ ಆಭರಣಗಳನ್ನು ಬ್ಯಾಂಕ್ ಲಾಕರ್ ನಲ್ಲಿ ಭದ್ರವಾಗಿ ಇಡುವುದು ಉತ್ತಮ.[ನಿಮ್ಮ ಮನೆಯ ಹಿರಿಯ ನಾಗರಿಕರಿಗೆ ಈ ಸುದ್ದಿ ತಿಳಿಸಿ]

4. ಡಿಜಿಟಲ್ ಲಾಕರ್
ನಿಮ್ಮ ಪಾನ್ ಕಾರ್ಡ್,ಆಧಾರ್ ಕಾರ್ಡ್ ಮತ್ತು ಇತರ ದಾಖಲೆಗಳನ್ನು ಡಿಜಿಟಲ್ ಲಾಕರ್ ಮಾದರಿಯಲ್ಲಿ ರಕ್ಷಣೆ ಮಾಡಿ ಇಟ್ಟುಕೊಳ್ಳಬಹುದು. ಎಲೆಕ್ಟ್ರಾನಿಕ್ ಮಾದರಿಯಲ್ಲಿ ನಿಮ್ಮ ದಾಖಲೆಗಳು ಸೇವ್ ಆಗಿರುವುದರಿಂದ ಯಾವ ಮಳೆಗೂ ಹೆದರುವ ಅಗತ್ಯವೇ ಇರುವುದಿಲ್ಲ.

5. ಹಣ
ಮನೆಯಲ್ಲಿ ಸ್ವಲ್ಪ ಪ್ರಮಾಣದ ಹಣ ಕೈಗೆ ಸಿಗುವಂತೆ ಇಟ್ಟುಕೊಳ್ಳುವುದು ಒಳಿತು. ಎಲ್ಲಾ ಸಂದರ್ಭದಲ್ಲೂ ಎಟಿಎಂ ಕಾರ್ಡ್ ನಂಬಿಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಹಣ ಇಟ್ಟುಕೊಳ್ಳಬಹುದು. ಅದು ಆಯಾ ತಿಂಗಳ ಪರಿಸ್ಥಿತಿಗೆ ಅನುಗುಣವಾಗಿ ಮುಂದುವರಿಯುತ್ತದೆ.

ಕೊನೆ ಮಾತು
ತುರ್ತು ನಿಧಿ ರೀತಿಯಲ್ಲಿ ಒಂದಿಷ್ಟು ಹಣವನ್ನು ಇಟ್ಟುಕೊಳ್ಳಬಹುದು. ಪ್ರವಾಹ ಅಥವಾ ಭೂಕಂಪನದಂತ ನೈಸರ್ಗಿಕ ವಿಕೋಪ ಎದುರಾದರೆ ಇಂಥ ಚಿಕ್ಕ ಪುಟ್ಟ ಸಂಗತಿಗಳು ದೊಡ್ಡ ಪ್ರಮಾಣದ ಲಾಭ ನೀಡುವುದರಲ್ಲಿ ಅನುಮಾನವಿಲ್ಲ.

English summary

5 Ways To Be Financially Prepared For Natural Calamities

Act of God cannot be predicted many a times. However, individuals can take certain financial measures to keep the family safe and be financially ready when needed. Individuals are prone to many natural calamities such as floods, earthquake, hurricane etc. Do not wait until you are in that situation and regret being financially prepared to face the disaster.
Story first published: Thursday, December 10, 2015, 17:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X