For Quick Alerts
ALLOW NOTIFICATIONS  
For Daily Alerts

ಹಣ ಪಾವತಿಗೆ ನಿಮ್ಮ ಆಯ್ಕೆ ಯಾವುದು? ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್

|

ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಬಳಕೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತೆ ಇದೆ. ಶಾಪಿಂಗ್ ಮಾಡಿದಾಗ, ಇಂಧನ ತುಂಬಿಸಿದಾಗ ಮತ್ತು ಇತರೆ ಸಂದರ್ಭಗಳಲ್ಲಿ ಬಳಕೆ ಮಾಡುವುದನ್ನು ಕಲಿತುಕೊಂಡಿದ್ದೇವೆ.

ನಿಮ್ಮ ಬ್ಯಾಂಕ್ ನೀಡುವ ಕ್ರೆಡಿಟ್ ಗಳನ್ನು, ವಿಶೇಷ ರಿಯಾಯಿತಿಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಡೆಬಿಟ್ ಕಾರ್ಡ್ ನಲ್ಲಿ ಪಾವತಿ ಮಾಡಿದರೆ ಹಣ ತಕ್ಷಣ ನಿಮ್ಮ ಖಾತೆಯಿಂದ ಕಡಿತವಾಗುತ್ತದೆ. ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದರೆ ಸಾಲದ ಲೆಕ್ಕ ಸೇರಿಕೊಳ್ಳುತ್ತದೆ ಇದು ಸರಳ ಲೆಕ್ಕ.[ಎಟಿಎಂ ಬಳಕೆ ಕಡಿಮೆ ಮಾಡುವುದು ಹೇಗೆ?]

ಹಣ ಪಾವತಿಗೆ ನಿಮ್ಮ ಆಯ್ಕೆ ಯಾವುದು? ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್

ಆದರೆ ಯಾವ, ಯಾವ ಸಂದರ್ಭಗಳಲ್ಲಿ ಯಾವ ಕಾರ್ಡ್ ಬಳಕೆ ಮಾಡಬೇಕು ಎನ್ನುವುದು ನಮಗೆ ತಕ್ಷಣಕ್ಕೆ ಗೊತ್ತಾಗುವುದಿಲ್ಲ. ಅದನ್ನು ಹೇಳಿ ಕೊಡುವವರೂ ಯಾರು ಇಲ್ಲ. ಈ ಕೆಳಗಿನ ಅಂಶಗಳನ್ನು ನೋಡಿದರೆ ನಿಮಗೆ ಒಂದು ಚಿತ್ರಣ ಖಂಡಿತ ದೊರೆಯುತ್ತದೆ.

ಕ್ರೆಡಿಟ್ ಕಾರ್ಡ್ ಬಳಕೆ
ನೀವು 45 ದಿನದ ಗ್ರೇಸ್ ಅವಧಿಯೊಳಗೆ ಹಣ ಪಾವತಿ ಮಾಡಲು ಸಾಧ್ಯವಿದೆ ಎಂದು ಖಾತ್ರಿಯಿದ್ದರೆ ಕ್ರೆಡಿಟ್ ಕಾರ್ಡ್ ಬಳಸುವುದು ಉತ್ತಮ. ನಿಮ್ಮ ಜೀವನ ಶೈಲಿಗೆ ಸರಿ ಹೊಂದುವಂತೆ ನೀತಿ ರೂಪಿಸಿಕೊಳ್ಳುವ ಜವಾಬ್ದಾರಿಯೂ ನಿಮ್ಮದೇ ಆಗಿರುತ್ತದೆ.

ಕ್ರೆಡಿಟ್ ಕಾರ್ಡ್ ಬಳಕೆ ಮಾಡಿಕೊಂಡರೆ ಹೆಚ್ಚಿನ ಡಿಸ್ಕೌಂಟ್, ರಿಯಾಯಿತಿ ಪಡೆಯಲು ಸಾಧ್ಯವಾಗುತ್ತದೆ. ಹೆಚ್ಚು ಮೊತ್ತದ ಖರೀದಿ ಮಾಡಿದಾಗ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದರೆ ರಿವಾರ್ಡ್ ಪಾಯಿಂಟ್ಸ್ ಗಳನ್ನು ಸಹ ಪಡೆದುಕೊಳ್ಳಬಹುದು.[ಎಟಿಎಂನೊಳಗೆ ಕಾರ್ಡ್ ಸಿಕ್ಕೊಂಡ್ರೆ ಏನು ಮಾಡೊದು?]

ಆದರೆ ಇಎಂಐ ಆಧಾರದಲ್ಲಿ ವಸ್ತುಗಳನ್ನು ಖರೀದಿಸುವುದಾದರೆ ಎರಡು ಸಾರಿ ಯೋಚನೆ ಮಾಡಬೇಕಾಗುತ್ತದೆ. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲ ಖರೀದಿ ಅನಿವಾರ್ಯ ಎಂದಾದಲ್ಲಿ ಕ್ರೆಡಿಟ್ ಕಾರ್ಡ್ ನಿಮ್ಮ ನೆರವಿಗೆ ಬರುತ್ತದೆ.

ಯಾವಾಗ ಕ್ರೆಡಿಟ್ ಕಾರ್ಡ್ ಬಳಕೆ ಸಲ್ಲ
ನೀವು ಕೊಳ್ಳುಬಾಕತನಕ್ಕೆ ಬಿದ್ದವರೇ ಆಗಿದ್ದರೆ ಕ್ರಡಿಟ್ ಕಾರ್ಡ್ ಬಳಕೆ ಮಾಡುವ ಪರಿಪಾಠ ಬಿಟ್ಟು ಬಿಡಬೇಕು. ನಂತರ ಇದರ ಕೆಟ್ಟ ಪರಿಣಾಮ ನಿಮ್ಮ ಖಾತೆಯ ಮೇಲಾಗುತ್ತದೆ.

ಕ್ರೆಡಿಟ್ ಕಾರ್ಡ್ ಬಳಸಿ ಹಣ ಡ್ರಾ ಮಾಡುವುದು ಅತಿ ಕೆಟ್ ನಿರ್ಧಾರ. ಸುಮ್ಮನೆ ಹೆಚ್ಚಿ ಬಡ್ಡಿ ತೆರಬೇಕಾಗುತ್ತದೆ. ಅದರೊಂದಿಗೆ ನಿಮ್ಮ ಬಿಲ್ ಪಾವತಿ ನಿರ್ಲಕ್ಷ್ಯ ಮಾಡಿದರೂ ಸಹ ಅವಧಿ ಮುಗಿದ ನಂತರ ದಂಡ ಕಟ್ಟಬೇಕಾಗುತ್ತದೆ ಎಚ್ಚರ.

ಡೆಬಿಟ್ ಕಾರ್ಡ್ ಬಳಕೆ ಯಾವಾಗ?
ನಿರ್ದಿಷ್ಟ ಸಾರಿ ಹಣ ಡ್ರಾ ಮಾಡಿದಾಗ ನಿಮ್ಮ ಡೆಬಿಟ್ ಕಾರ್ಡ್ ಗೆ ಯಾವ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಸಾಮಾನ್ಯವಾಗಿ ಎಲ್ಲರೂ ನಗದು ಡ್ರಾ ಮಾಡಲು ಇದನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಿಮ್ಮ ಕಾರ್ಡ್ ಉಳಿತಾಯ ಖಾತೆಯದ್ದೋ, ಚಾಲ್ತಿ ಖಾತೆಯದ್ದೋ ಎಂಬುದನ್ನು ಲೆಕ್ಕ ಹಾಕಿಕೊಂಡು ಖರೀದಿಗೆ ಮುಂದಾಗಬೇಕಾಗುತ್ತದೆ. ನಿಮ್ಮ ಖಾತಯನ್ನು ಸರಿಯಾಗಿ ನಿರ್ವಹಿಸಲು ಡೆಬಿಟ್ ಕಾರ್ಡ್ ಆಗಾಗ ಎಚ್ಚರಿಕೆ ನೀಡುತ್ತಿರುತ್ತದೆ.(ಗುಡ್ ರಿಟರ್ನ್ಸ್. ಇನ್)

English summary

Credit Card Or Debit Card? Which Card Is Best For Making Payments?

The main feature of a debit card or a credit cards are to facilitate payments. Many individuals do not bother to check, which one to use and when. There are lots of perks and benefits by using the right card at the right time. The basic difference between debit card is that the amount is debited immediately from your account. On the other hand in a credit card, the amount is made payable on the stipulated date.
Story first published: Thursday, January 28, 2016, 17:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X