For Quick Alerts
ALLOW NOTIFICATIONS  
For Daily Alerts

ನಿಲ್ಲಿ...ಪರ್ಸನಲ್ ಲೋನ್ ತೆಗೆದುಕೊಳ್ತಾ ಇದೀರಾ?

|

ಹಣದ ಅಗತ್ಯ ಉಂಟಾಗಿ ಪರ್ಸನಲ್ ಲೋನ್ ತೆಗೆದುಕೊಳ್ಳಲು ಮುಂದಾಗಿದ್ದೀರಾ? ಹಾಗಾದರೆ ಒಂದು ನಿಮಿಷ ತಾಳಿ... ಸುಮ್ಮನೆ ಹೆಚ್ಚಿನ ಬಡ್ಡಿ ತುಂಬುವ ಕೆಲಸ ತಂದುಕೊಳ್ಳಬೇಡಿ.. ಹಾಗಾದರೆ ಹಣದ ಅಗತ್ಯ ಬಗೆಹರಿಸಲು ಪರಿಹಾರ?

ಪರ್ಸನಲ್ ಲೋನ್ ಮಾಡಿ ಹೆಚ್ಚಿನ ಬಡ್ಡಿ ನೀಡಿ ಕೈ ಸುಟ್ಟುಕೊಳ್ಳುವುದಕ್ಕಿಂತ ಬದಲಾಗಿ ಪರ್ಯಾಯ ಮಾರ್ಗಗಳತ್ತ ಒಂದು ನೋಟ ಹರಿಸುವುದು ಒಳಿತು.[ಮನೆ ಕಟ್ತಾ ಇದೀರಾ? ಈ ಗೃಹಸಾಲವೇ ನಿಮಗೆ ಬೆಸ್ಟ್]

ನಿಲ್ಲಿ...ಪರ್ಸನಲ್ ಲೋನ್ ತೆಗೆದುಕೊಳ್ತಾ ಇದೀರಾ?

* ಫಿಕ್ಸೆಡ್ ಡಿಪಾಸಿಟ್ ಆಧಾರದಲ್ಲಿ ಸಾಲ
ನೀವು ಫಿಕ್ಸೆಡ್ ಡಿಪಾಸಿಟ್ ಹೊಂದಿದ್ದರೆ ಅದರ ಆಧಾರದ ಮೇಲೆ ಸಾಲ ಮಾಡುವುದು ಒಳಿತು. ನೀವು ಇಲ್ಲಿ ಸಾಮಾನ್ಯವಾಗಿ ಶೇ. 9 ಬಡ್ಡಿ ದರವನ್ನು ನೀಡಬೇಕಾಗುತ್ತದೆ. ಪರ್ಸನಲ್ ಲೋನ್ ಗೆ ಹೋಲಿಕೆ ಮಾಡಿದರೆ ಇದು ಕಡಿಮೆಯಾಗಿರುತ್ತದೆ.

ಪರ್ಸನಲ್ ಲೋನ್ ಗೆ ಶೇ. 13-24 ರಷ್ಟು ಬಡ್ಡಿ ವಿಧಿಸಬಹುದು. ಶೇ. 13 ಅತಿ ಕನಿಷ್ಠ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಡಿಪಾಸಿಟ್ ನ ಶೇ. 80 ರಷ್ಟನ್ನು ಸಾಲವಾಗಿ ಪಡೆದುಕೊಳ್ಳಲು ಸಾಧ್ಯವಿದೆ.

* ಷೇರು ಅಡವಿಟ್ಟು ಸಾಲ
ಷೇರು ಅಡವಿಟ್ಟು ಸಾಲ ಪಡೆದುಕೊಂಡರೆ 10-11 ಶೇ. ಬಡ್ಡಿ ನೀಡಬೇಕಾಗುತ್ತದೆ. ಬ್ಯಾಂಕಿನಿಂದ ಬ್ಯಾಂಕ್ ಗೆ ಇದು ಬದಲಾಗುತ್ತಿದ್ದು ನೀವು ಹೊಂದಿರುವ ಷೇರು ಯಾವ ಕಂಪನಿಯದ್ದು ಎಂದು ಲೆಕ್ಕ ಹಾಕಲಾಗುತ್ತದೆ.[80 ಸಿ ಬಿಟ್ಟು ತೆರಿಗೆ ವಿನಾಯಿತಿಗೆ 7 ಅತ್ಯುತ್ತಮ ತಂತ್ರಗಳು]

* ಪಿಪಿಎಫ್ ಆಧಾರದಲ್ಲಿ ಸಾಲ
ನಿಮ್ಮ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನ ಮೊತ್ತದ ಆಧಾರದಲ್ಲಿಯೂ ಸಾಲ ಪಡೆದುಕೊಳ್ಳಬಹುದು. ಆದರೆ ನಿಮ್ಮ ಪಿಎಫ್ ಖಾತೆಗೆ ಮೂರು ವರ್ಷ ಆಗಿರಬೇಕು. ಇಲ್ಲಿ ಸಾಮಾನ್ಯವಾಗಿ 10.7 ರಷ್ಟು ಬಡ್ಡಿ ಆಕರಣೆ ಮಾಡಲಾಗುತ್ತದೆ. ಆದರೆ ಕೆಲವೊಂದು ನಿಯಮಾವಳಿಗಳಿವೆ.

* ಚಿನ್ನದ ಸಾಲ
ಇದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಸಾಲದ ಮಾದರಿ. ಅಲ್ಲದೇ ಚಿನ್ನ ಅಡವಿಟ್ಟು ಸಾಲ ಪಡೆದುಕೊಳ್ಳುವ ಪ್ರಕ್ರಿಯೆಯೂ ವೇಗವಾಗಿದೆ.

* ಮನೆ ಮೇಲೆ ಸಾಲ
ನಿಮ್ಮ ಮನೆ ಮೇಲೆ ಬೇರೆ ಬಗೆಯ ಸಾಲಗಳು ಇಲ್ಲದಿದ್ದರೆ ಮನೆ ಪತ್ರದ ಆಧಾರದಲ್ಲ್ಲಿಯೂ ಸಾಲ ಪಡೆದುಕೊಳ್ಳಬಹುದು. ಅಥವಾ ಗೃಹ ಸಾಲ ಎಂದು ಪಡೆದುಕೊಂಡು ತೆರಿಗೆ ವಿನಾಯಿತಿಯನ್ನು ಪಡೆದುಕೊಳ್ಳಬಹುದು.

ಕೊನೆ ಮಾತು: ವೈಯಕ್ತಿಕ ಸಾಲ ಅನೇಕ ಅವಗುಣಗಳನ್ನು ಹೊಂದಿದೆ. ಬಡ್ಡಿ ದರ ಹೆಚ್ಚು, ತುಂಬಬೇಕಾದ ಪ್ರೀಮಿಯಂಗಳು ನಿಮ್ಮ ಅರ್ಥ ವ್ಯವಸ್ಥೆಯನ್ನು ಸಂಪೂರ್ಭವಾಗಿ ಹದಗೆಡಿಸಬಹುದು. ಹಾಗಾಗಿ ಸುಲಭವಾಗಿ ಸಿಗುತ್ತದೆ ಎಂದು ಪರ್ಸನಲ್ ಲೋನ್ ಪಡೆದುಕೊಳ್ಳುವ ಮುನ್ನ ಒಮ್ಮೆ ಪರ್ಯಾಯ ಕ್ರಮಗಳತ್ತ ಚಿತ್ತ ಹರಿಸಿದರೆ ಒಳಿತು. [ಗುಡ್ ರಿಟರ್ನ್ಸ್.ಇನ್]

English summary

5 Types Of Loans That Are Better Than Personal Loans In India

Looking to take a personal loan? Don't! This is because personal loans in India are one of the most expensive loans. They also come with heavy pre-payment charges and also an insurance component, the premium of which has to be borne by the applicant. These loans also could have pre-payment charges that are as high as 4 per cent.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X